ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಸೆಪ್ಟೆಂಬರ್ 6-12
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 33-34
“ಯಾವಾಗಲೂ ಯೆಹೋವನ ಕೈ ಹಿಡಿದುಕೊಂಡೇ ಇರಿ”
it-2-E ಪುಟ 51
ಯೆಶುರೂನ್
ಇಸ್ರಾಯೇಲ್ಯರನ್ನ ಮೆಚ್ಚಿಕೊಂಡಾಗ ಯೆಹೋವ ದೇವರು ಅವರಿಗೆ ಕೊಟ್ಟ ಬಿರುದು “ಯೆಶುರೂನ್.” ಈ ಪದನ ಗ್ರೀಕ್ ಸೆಪ್ಟ್ಯೂಅಜೆಂಟಿನಲ್ಲಿ “ಪ್ರೀತಿಪಾತ್ರ” ಅಂತ ಭಾಷಾಂತರ ಮಾಡಿದ್ದಾರೆ. ಅದರರ್ಥ ಪ್ರೀತಿ, ಮಮತೆ. ಈ ಬಿರುದು ಇಸ್ರಾಯೇಲ್ಯರು ಯೆಹೋವನ ಜೊತೆ ಮಾಡ್ಕೊಂಡಿದ್ದ ಒಪ್ಪಂದವನ್ನ ಮತ್ತು ನೈತಿಕವಾಗಿ ಶುದ್ಧರಾಗಿರಬೇಕು ಅನ್ನೋದನ್ನ ಅವರಿಗೆ ನೆನಪಿಸ್ತಿತ್ತು. (ಧರ್ಮೋ 33:5, 26; ಯೆಶಾ 44:2)
ಶುದ್ಧ ಆರಾಧನೆ ಪುಟ 120, ಚೌಕ
ನಮ್ಮ ಕಾಲ ಮೇಲೆ ನಿಂತುಕೊಳ್ಳಲು ಸಹಾಯ
ಯೆಹೋವನಿಗೆ ಶಕ್ತಿ ಇರೋದಷ್ಟೇ ಅಲ್ಲ, ತನ್ನ ಜನ್ರಿಗೋಸ್ಕರ ಆ ಶಕ್ತಿಯನ್ನ ಉಪಯೋಗಿಸಬೇಕು ಅಂತ ಇಷ್ಟನೂ ಇದೆ. ಯೆಹೆಜ್ಕೇಲನಿಗಿಂತ ನೂರಾರು ವರ್ಷಗಳ ಹಿಂದೆ ಪ್ರವಾದಿ ಮೋಶೆ ಯೆಹೋವನ ಬಗ್ಗೆ ಏನು ಹೇಳಿದ್ನು ಅಂತ ಸ್ವಲ್ಪ ನೆನಪು ಮಾಡ್ಕೊಳ್ಳಿ. “ದೇವರು ಆಗಿನ ಕಾಲದಿಂದಾನೂ ನಿನ್ನ ಆಶ್ರಯ ಆಗಿದ್ದಾನೆ, ಆತನ ಕೈಗಳು ಯಾವಾಗ್ಲೂ ನಿನಗೆ ಆಧಾರವಾಗಿ ಇರುತ್ತೆ” ಅಂತ ಮೋಶೆ ಬರೆದನು. (ಧರ್ಮೋ. 33:27) ಕಷ್ಟದ ಸಮಯದಲ್ಲಿ ನಾವು ದೇವರನ್ನ ಆಶ್ರಯಿಸೋದಾದ್ರೆ ಆತನ ಕೈಗಳು ನಮಗೆ ಆಧಾರವಾಗಿರುತ್ತೆ. ಆತನು ನಿಧಾನವಾಗಿ ನಮ್ಮನ್ನ ಎತ್ತಿ ನಮ್ಮ ಕಾಲುಗಳ ಮೇಲೆ ನಿಂತುಕೊಳ್ಳೋಕೆ ಸಹಾಯ ಮಾಡ್ತಾನೆ.—ಯೆಹೆ. 37:10.
ಕಾವಲಿನಬುರುಜು11 9/15 ಪುಟ 19 ಪ್ಯಾರ 16
ಕ್ರೈಸ್ತ ಓಟದಲ್ಲಿ ತಾಳಿಕೊಳ್ಳಿರಿ
ಅಬ್ರಹಾಮನಂತೆಯೇ ಮೋಶೆ ಸಹ ತನ್ನ ಜೀವಮಾನದಲ್ಲಿ ವಾಗ್ದತ್ತ ದೇಶದ ಕುರಿತ ವಾಗ್ದಾನ ನೆರವೇರುವುದನ್ನು ಕಣ್ಣಾರೆ ಕಾಣಲಿಲ್ಲ. ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸುವ ಮುಂಚೆ ದೇವರು ಅವನಿಗೆ ಹೀಗಂದನು: “ನಾನು ಇಸ್ರಾಯೇಲ್ಯರಿಗೆ ಕೊಡುವ ದೇಶವನ್ನು ನೀನು ದೂರದಿಂದ ನೋಡಬಹುದೇ ಹೊರತು ಅದರಲ್ಲಿ ಪ್ರವೇಶಿಸಕೂಡದು”!! ಏಕೆ? ಹಿಂದೊಮ್ಮೆ ಮೋಶೆ ಮತ್ತು ಆರೋನ ಇಸ್ರಾಯೇಲ್ಯರ ಪ್ರತಿಭಟನೆಯಿಂದ ಹತಾಶರಾಗಿ “ಚಿನ್ ಅರಣ್ಯದಲ್ಲಿನ ಮೆರೀಬಾ ಕಾದೇಶಿನಲ್ಲಿ ನೀರು ಹೊರಟ ಸ್ಥಳದ ಬಳಿಯಲ್ಲಿ ಇಸ್ರಾಯೇಲ್ಯರ ಮಧ್ಯದಲ್ಲಿ [ದೇವರ] ವಿರೋಧವಾಗಿ ದ್ರೋಹ” ಮಾಡಿದ್ದರು. (ಧರ್ಮೋ. 32:51, 52) ವಾಗ್ದತ್ತ ದೇಶ ಪ್ರವೇಶಿಸಲು ಅನುಮತಿ ದೊರೆಯಲಿಲ್ಲವೆಂದು ಮೋಶೆ ದೇವರ ಬಗ್ಗೆ ಕಹಿಭಾವ ತಾಳಿದನೋ? ಇಲ್ಲ, ಜನರನ್ನು ಹರಸಿ ಕೊನೆಗೆ ಈ ಮಾತುಗಳನ್ನು ನುಡಿದನು: “ಇಸ್ರಾಯೇಲ್ಯರೇ, ನೀವು ಎಷ್ಟೋ ಧನ್ಯರು; ನಿಮ್ಮಷ್ಟು ಭಾಗ್ಯವಂತರು ಯಾರಿದ್ದಾರೆ? ನೀವು ಯೆಹೋವನ ಅನುಗ್ರಹದಿಂದ ಜಯವನ್ನು ಹೊಂದಿದವರು. ಆತನೇ ನಿಮ್ಮನ್ನು ಕಾಯುವ [ಗುರಾಣಿಯೂ] ನಿಮ್ಮ ಗೌರವವನ್ನು ಕಾಪಾಡುವ ಕತ್ತಿಯೂ ಆಗಿದ್ದಾನೆ.”—ಧರ್ಮೋ. 33:29.
ಆಧ್ಯಾತ್ಮಿಕ ಮುತ್ತುಗಳು
it-2-E ಪುಟ 439 ಪ್ಯಾರ 3
ಮೋಶೆ
ಇಸ್ರಾಯೇಲ್ಯರು ಎಲ್ಲಿ ಮೋಶೆಯ ಸಮಾಧಿನ ಪೂಜೆ ಮಾಡ್ತಾ ಸುಳ್ಳಾರಾಧನೆ ಮಾಡಿಬಿಡುತ್ತಾರೋ ಅಂತ ಯೆಹೋವ ದೇವರು ಹೀಗೆ ಮಾಡಿರಬೇಕು. ಇದೇ ಕಾರಣಕ್ಕೆ ಮೋಶೆಯ ದೇಹವನ್ನ ಪಿಶಾಚ ಕೇಳಿರಬೇಕು ಅಂತ ಯೂದನ ಮಾತಿಂದ ನಮ್ಗೆ ಗೊತ್ತಾಗುತ್ತೆ: “ಒಂದು ಸಾರಿ ಪ್ರಧಾನ ದೇವದೂತ ಮೀಕಾಯೇಲನಿಗೆ ಸೈತಾನನ ಜೊತೆ ಮೋಶೆಯ ಶವದ ವಿಷ್ಯದಲ್ಲಿ ವಾದ-ವಿವಾದ ಆಯ್ತು. ಆಗ ಮೀಕಾಯೇಲ ಸೈತಾನನ ವಿರುದ್ಧ ಕೆಟ್ಟದಾಗಿ ಮಾತಾಡಿ ತೀರ್ಪು ಮಾಡೋ ಸಾಹಸಕ್ಕೆ ಕೈಹಾಕಲಿಲ್ಲ. ಬದಲಿಗೆ ‘ಯೆಹೋವನೇ ನಿನಗೆ ತೀರ್ಪು ಮಾಡ್ಲಿ’ ಅಂತ ಹೇಳಿದನು.” (ಯೂದ 9)
ಸೆಪ್ಟೆಂಬರ್ 13-19
ಬೈಬಲಿನಲ್ಲಿರುವ ರತ್ನಗಳು | ಯೆಹೋಶುವ 1-2
“ಯಶಸ್ಸು ಗಳಿಸೋಕೆ ನೀವೇನು ಮಾಡಬೇಕು?”
ಕಾವಲಿನಬುರುಜು13 1/15 ಪುಟ 8 ಪ್ಯಾರ 7
ಧೈರ್ಯದಿಂದಿರು ಯೆಹೋವನು ನಿನ್ನ ಸಂಗಡ ಇದ್ದಾನೆ
ದೇವರ ಚಿತ್ತಕ್ಕನುಸಾರ ನಡೆಯಲು ಬೇಕಾದ ಧೈರ್ಯವನ್ನು ಪಡೆದುಕೊಳ್ಳಲಿಕ್ಕಾಗಿ ನಾವು ಬೈಬಲ್ ಅಧ್ಯಯನ ಮಾಡಿ ಅದನ್ನು ಅನ್ವಯಿಸಬೇಕು. ಅದನ್ನೇ ಮಾಡುವಂತೆ ಯೆಹೋಶುವನಿಗೆ ಯೆಹೋವನು ಹೇಳಿದನು. “ನನ್ನ ಸೇವಕನಾದ ಮೋಶೆ ನಿನಗೆ ಬೋಧಿಸಿದ ಧರ್ಮೋಪದೇಶವನ್ನೆಲ್ಲಾ ಕೈಕೊಂಡು ನಡೆಯುವದರಲ್ಲಿ ಸ್ಥಿರಚಿತ್ತನಾಗಿರು, ಪೂರ್ಣಧೈರ್ಯದಿಂದಿರು. . . . ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ.” (ಯೆಹೋ. 1:7, 8) ಈ ಸಲಹೆಯನ್ನು ಪಾಲಿಸಿದ ಕಾರಣ ಯೆಹೋಶುವ ತನ್ನ ‘ಮಾರ್ಗಗಳಲ್ಲಿ ಸಫಲನಾದನು.’ ನಾವು ಸಹ ಆ ಸಲಹೆ ಪಾಲಿಸುವುದಾದರೆ ದೇವರ ಸೇವೆಯಲ್ಲಿ ಸಾಫಲ್ಯ ಪಡೆಯುವೆವು, ಧೈರ್ಯಶಾಲಿಗಳಾಗುವೆವು.
ಕಾವಲಿನಬುರುಜು13 1/15 ಪುಟ 11 ಪ್ಯಾರ 20
ಧೈರ್ಯದಿಂದಿರು ಯೆಹೋವನು ನಿನ್ನ ಸಂಗಡ ಇದ್ದಾನೆ
ಈ ದುಷ್ಟ ಲೋಕದಲ್ಲಿ ಸಂಕಷ್ಟಗಳನ್ನು ಎದುರಿಸುತ್ತಾ ದೇವರ ಚಿತ್ತದಂತೆ ನಡೆಯುವುದು ಒಂದು ಸವಾಲೇ. ಆದರೂ ನಾವದನ್ನು ಮಾಡಬಲ್ಲೆವು. ಏಕೆಂದರೆ, ನಾವು ಒಬ್ಬಂಟಿಗರಲ್ಲ. ದೇವರು ನಮ್ಮ ಸಂಗಡ ಇದ್ದಾನೆ. ಸಭೆಯ ಶಿರಸ್ಸಾಗಿರುವ ಯೇಸುವೂ ನಮ್ಮೊಂದಿಗಿದ್ದಾನೆ. ಲೋಕದಾದ್ಯಂತ ನಮ್ಮೊಂದಿಗೆ 70 ಲಕ್ಷಕ್ಕಿಂತ ಹೆಚ್ಚು ಸಹೋದರ ಸಹೋದರಿಯರಿದ್ದಾರೆ. ಅವರೆಲ್ಲರ ಜೊತೆಸೇರಿ ನಂಬಿಕೆಯನ್ನು ತೋರಿಸುತ್ತಾ ಇರೋಣ. ಸುವಾರ್ತೆಯನ್ನು ಸಾರುತ್ತಾ ಇರೋಣ. ಹಾಗೆ ಮಾಡುವಾಗ 2013 ರ ವರ್ಷವಚನದ ಮಾತುಗಳನ್ನು ಯಾವಾಗಲೂ ಮನಸ್ಸಿನಲ್ಲಿಡೋಣ: ‘ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇದ್ದಾನೆ.’—ಯೆಹೋ. 1:9.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು04 12/1 ಪುಟ 9 ಪ್ಯಾರ 1
ಯೆಹೋಶುವ ಪುಸ್ತಕದ ಮುಖ್ಯಾಂಶಗಳು
2:4, 5—ಗೂಢಚಾರರನ್ನು ಹುಡುಕಿಕೊಂಡು ಬಂದ ಅರಸನ ಆಳುಗಳಿಗೆ ರಾಹಾಬಳು ತಪ್ಪು ಮಾಹಿತಿಯನ್ನು ಕೊಟ್ಟದ್ದೇಕೆ? ರಾಹಾಬಳು ತನ್ನ ಜೀವವನ್ನು ಅಪಾಯಕ್ಕೊಡ್ಡಿ ಆ ಗೂಢಚಾರರನ್ನು ಕಾಪಾಡಿದಳು, ಏಕೆಂದರೆ ಅವಳು ಯೆಹೋವನಲ್ಲಿ ನಂಬಿಕೆಯನ್ನು ಬೆಳೆಸಿಕೊಂಡಿದ್ದಳು. ಆದುದರಿಂದ, ದೇವಜನರಿಗೆ ತೊಂದರೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದ್ದ ಪುರುಷರಿಗೆ ಗೂಢಚಾರರ ಆಗುಹೋಗುಗಳ ಕುರಿತಾದ ಮಾಹಿತಿಯನ್ನು ತಿಳಿಯಪಡಿಸುವ ಹಂಗಿಗೆ ಅವಳು ಒಳಗಾಗಿಲ್ಲ. (ಮತ್ತಾಯ 7:6; 21:23-27; ಯೋಹಾನ 7:3-10) ವಾಸ್ತವದಲ್ಲಿ, ರಾಹಾಬಳು ಅರಸನ ಗುಪ್ತದೂತರನ್ನು ತಪ್ಪಾಗಿ ಮಾರ್ಗದರ್ಶಿಸುವ ಕೃತ್ಯವನ್ನೂ ಒಳಗೊಂಡು ಇನ್ನಿತರ ‘ಕ್ರಿಯೆಗಳಿಂದ ನೀತಿವಂತಳೆಂದು ನಿರ್ಣಯಿಸಲ್ಪಟ್ಟಳು.’—ಯಾಕೋಬ 2:24-26.
ಸೆಪ್ಟೆಂಬರ್ 20-26
ಬೈಬಲಿನಲ್ಲಿರುವ ರತ್ನಗಳು | ಯೆಹೋಶುವ 3-5
“ನಂಬಿಕೆಯಿಂದ ಮಾಡೋ ಕೆಲಸಗಳನ್ನ ಯೆಹೋವ ಆಶೀರ್ವದಿಸ್ತಾನೆ”
it-2-E ಪುಟ 105
ಯೋರ್ದನ್
ಗಲಿಲಾಯ ಸಮುದ್ರದ ಕೆಳಗೆ ಹರಿತಿದ್ದ ಯೋರ್ದನ್ ನದಿ ಸುಮಾರು 3-10 ಅಡಿ ಆಳ (1-3 ಮೀ.) ಮತ್ತು 90-100 ಅಡಿ ಅಗಲ (27-30 ಮೀ.) ಇತ್ತು. ಅದ್ರಲ್ಲೂ ವಸಂತ ಕಾಲದಲ್ಲಿ ಈ ನದಿಯ ಆಳ, ಅಗಲ ಇನ್ನೂ ಜಾಸ್ತಿ ಆಗ್ತಿತ್ತು. ದಡದಲ್ಲೂ ತುಂಬಿ ಹರಿತಿತ್ತು. (ಯೆಹೋ 3:15) ಇಂಥ ಸಮಯದಲ್ಲಿ ಇಸ್ರಾಯೇಲ್ಯರು ಅದರಲ್ಲೂ ಹೆಂಗಸರು, ಮಕ್ಕಳು ಯೋರ್ದನ್ ನದಿ ದಾಟುವುದು ತುಂಬ ಕಷ್ಟ ಆಗ್ತಿತ್ತು. ಯೆರಿಕೋ ಹತ್ತಿರ ಅಂತೂ ತುಂಬ ಅಪಾಯ ಇತ್ತು. ಅಲ್ಲಿ ಎಷ್ಟು ಜೋರಾಗಿ ನೀರು ಹರಿಯುತ್ತೆ ಅಂದ್ರೆ ಇವತ್ತಿಗೂ ಅಲ್ಲಿ ಸ್ನಾನ ಮಾಡೋಕೆ ಹೋದ ಎಷ್ಟೋ ಜನ ಕೊಚ್ಚಿಕೊಂಡು ಹೋಗಿದ್ದಾರೆ. ಆದ್ರೆ ಇಸ್ರಾಯೇಲ್ಯರ ಕಾಲದಲ್ಲಿ ಯೆಹೋವ ದೇವರು ಹರಿತ್ತಿದ್ದ ನೀರನ್ನ ಅದ್ಭುತವಾಗಿ ನಿಲ್ಲಿಸಿದ್ರು ಮತ್ತು ಒಣಗಿರೋ ನೆಲದ ಮೇಲೆ ಜನ ನಡ್ಕೊಂಡು ಹೋಗೋ ತರ ಮಾಡಿದ್ರು. (ಯೆಹೋ 3:14-17)
ಕಾವಲಿನಬುರುಜು13 9/15 ಪುಟ 16 ಪ್ಯಾರ 17
ಯೆಹೋವನ ಮರುಜ್ಞಾಪನಗಳಲ್ಲಿ ನಿಮ್ಮ ಹೃದಯ ಉಲ್ಲಾಸಿಸಲಿ
ಯೆಹೋವನಲ್ಲಿ ಭರವಸೆಯನ್ನು ಬೆಳೆಸಲು ನಮಗೆ ನಂಬಿಕೆಯ ಕ್ರಿಯೆಗಳು ಯಾವ ರೀತಿಯಲ್ಲಿ ಸಹಾಯಮಾಡುತ್ತವೆ? ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿದ ವೃತ್ತಾಂತವನ್ನು ಪರಿಗಣಿಸಿ. ಒಡಂಬಡಿಕೆಯ ಮಂಜೂಷವನ್ನು ಹೊತ್ತಿದ್ದ ಯಾಜಕರು ನೇರವಾಗಿ ಯೊರ್ದನ್ ನದಿಗಿಳಿಯಬೇಕೆಂದು ಯೆಹೋವನು ಆಜ್ಞಾಪಿಸಿದ್ದನು. ಆದರೂ ಜನರು ನದಿಯ ಹತ್ತಿರ ಹೋದಾಗ ವಸಂತ ಋತುವಿನ ಮಳೆಯಿಂದಾಗಿ ನದಿಯ ನೀರು ನೆರೆಯ ಮಟ್ಟಕ್ಕೆ ಏರಿತ್ತು. ಇಸ್ರಾಯೇಲ್ಯರು ಏನು ಮಾಡಿದರು? ನದೀತೀರದಲ್ಲಿ ಡೇರೆಗಳನ್ನು ಹಾಕಿ ನೆರೆಯ ನೀರು ಇಳಿಯುವ ತನಕ ವಾರಗಟ್ಟಲೆ ಅಥವಾ ಅದಕ್ಕೂ ಹೆಚ್ಚು ಕಾಲ ಕಾದರೋ? ಇಲ್ಲ. ಅವರು ಯೆಹೋವನಲ್ಲಿ ಪೂರ್ಣ ಭರವಸೆಯಿಟ್ಟು ಆತನು ಹೇಳಿದ್ದಂತೆಯೇ ಮಾಡಿದರು. ಫಲಿತಾಂಶ? ವೃತ್ತಾಂತ ಹೀಗೆ ಹೇಳುತ್ತದೆ: “ಯಾಜಕರು ಯೊರ್ದನಿಗೆ ಬಂದು ನೀರಿನಲ್ಲಿ ತಮ್ಮ ಕಾಲುಗಳನ್ನು ಅದ್ದುತ್ತಲೇ ಸುಗ್ಗೀ ಕಾಲದಲ್ಲೆಲ್ಲಾ ದಡಮೀರಿ ಹರಿಯುವ ಯೊರ್ದನ್ ಹೊಳೆಯ ನೀರು ನಿಂತುಹೋಯಿತು. . . . ಯಾಜಕರು ಯೊರ್ದನಿನ ಮಧ್ಯದಲ್ಲಿ ಒಣನೆಲದ ಮೇಲೆ ನಿಂತಿದ್ದರು. ಅಷ್ಟರಲ್ಲಿ ಇಸ್ರಾಯೇಲ್ಯರೆಲ್ಲರೂ ಒಣನೆಲದ ಮೇಲೆ ನಡೆದುಹೋದರು.” (ಯೆಹೋ. 3:12-17) ರಭಸದಿಂದ ಹರಿಯುವ ನೀರು ನಿಂತದ್ದನ್ನು ನೋಡಿ ಇಸ್ರಾಯೇಲ್ಯರು ಎಷ್ಟು ರೋಮಾಂಚನಗೊಂಡಿರಬೇಕು ಎಂದು ಊಹಿಸಿ! ಹೌದು, ಇಸ್ರಾಯೇಲ್ಯರು ಯೆಹೋವನ ನಿರ್ದೇಶನದಂತೆಯೇ ನಡೆದದ್ದರಿಂದ ಆತನಲ್ಲಿ ಅವರ ನಂಬಿಕೆ ಬಲಗೊಂಡಿತು.
ಕಾವಲಿನಬುರುಜು13 9/15 ಪುಟ 16 ಪ್ಯಾರ 18
ಯೆಹೋವನ ಮರುಜ್ಞಾಪನಗಳಲ್ಲಿ ನಿಮ್ಮ ಹೃದಯ ಉಲ್ಲಾಸಿಸಲಿ
ಯೆಹೋವನು ಇಂದು ತನ್ನ ಜನರ ಪರವಾಗಿ ಅಂಥ ಅದ್ಭುತಗಳನ್ನು ಮಾಡುವುದಿಲ್ಲ ಎನ್ನುವುದೇನೋ ನಿಜ. ಆದರೆ ಆತನು ಅವರ ನಂಬಿಕೆಯ ಕ್ರಿಯೆಗಳನ್ನು ಆಶೀರ್ವದಿಸುತ್ತಾನೆ. ರಾಜ್ಯ ಸಂದೇಶವನ್ನು ಲೋಕವ್ಯಾಪಕವಾಗಿ ಸಾರುವ ಕೆಲಸವನ್ನು ಮುಂದುವರಿಸಲು ದೇವರ ಕ್ರಿಯಾಶೀಲ ಶಕ್ತಿ ಅವರನ್ನು ಬಲಪಡಿಸುತ್ತದೆ. ಯೆಹೋವನ ಅಗ್ರಗಣ್ಯ ಸಾಕ್ಷಿಯಾದ ಪುನರುತ್ಥಿತ ಕ್ರಿಸ್ತ ಯೇಸು ಸಹ ಈ ಪ್ರಮುಖ ಕೆಲಸದಲ್ಲಿ ಶಿಷ್ಯರಿಗೆ ಬೆಂಬಲವಾಗಿದ್ದಾನೆ. ಆತನು ಹೀಗೆ ಆಶ್ವಾಸನೆ ಕೊಟ್ಟಿದ್ದಾನೆ: “ಆದುದರಿಂದ ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾ. 28:19, 20) ನಾಚಿಕೆ ಸ್ವಭಾವವಿದ್ದ ಅಥವಾ ಧೈರ್ಯದ ಕೊರತೆಯಿದ್ದ ಅನೇಕ ಸಾಕ್ಷಿಗಳು ತಮಗೆ ಕ್ಷೇತ್ರ ಸೇವೆಯಲ್ಲಿ ಅಪರಿಚಿತರೊಂದಿಗೆ ಮಾತಾಡಲು ದೇವರ ಪವಿತ್ರಾತ್ಮವು ಧೈರ್ಯ ಕೊಟ್ಟಿದೆ ಎನ್ನುತ್ತಾರೆ.—ಕೀರ್ತನೆ 119:46; 2 ಕೊರಿಂಥ 4:7 ಓದಿ.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು04 12/1 ಪುಟ 9 ಪ್ಯಾರ 1
ಯೆಹೋಶುವ ಪುಸ್ತಕದ ಮುಖ್ಯಾಂಶಗಳು
5:14, 15—“ಯೆಹೋವನ ಸೇನಾಪತಿಯು” ಯಾರು? ವಾಗ್ದತ್ತ ದೇಶದ ವಶಪಡಿಸಿಕೊಳ್ಳುವಿಕೆಯು ಆರಂಭವಾದಾಗ ಯೆಹೋಶುವನನ್ನು ಬಲಪಡಿಸಲು ಬಂದ ಸೇನಾಪತಿಯು, “ವಾಕ್ಯ” ಅಂದರೆ ತನ್ನ ಮಾನವಪೂರ್ವ ಅಸ್ತಿತ್ವದಲ್ಲಿದ್ದ ಯೇಸು ಕ್ರಿಸ್ತನೇ ಆಗಿದ್ದನೆಂಬುದು ಸಂಭವನೀಯ. (ಯೋಹಾನ 1:1; ದಾನಿಯೇಲ 10:13) ಇಂದು ದೇವಜನರು ಆಧ್ಯಾತ್ಮಿಕ ಯುದ್ಧದಲ್ಲಿ ಭಾಗವಹಿಸುವಾಗ ಮಹಿಮಾಯುತ ಯೇಸು ಕ್ರಿಸ್ತನು ಅವರೊಂದಿಗಿದ್ದಾನೆ ಎಂಬ ಆಶ್ವಾಸನೆಯನ್ನು ನಾವು ಹೊಂದಿರುವುದು ಎಷ್ಟು ಬಲದಾಯಕವಾದದ್ದಾಗಿದೆ!
ಸೆಪ್ಟೆಂಬರ್ 27–ಅಕ್ಟೋಬರ್ 3
ಬೈಬಲಿನಲ್ಲಿರುವ ರತ್ನಗಳು | ಯೆಹೋಶುವ 6-7
“ಅಯೋಗ್ಯ ವಿಷಯಗಳಿಂದ ದೂರ ಇರಿ”
ಕಾವಲಿನಬುರುಜು10 4/15 ಪುಟ 20 ಪ್ಯಾರ 5
ನಿಷ್ಪ್ರಯೋಜಕ ವಿಷಯಗಳ ಮೇಲೆ ಕಣ್ಣಿಡಬೇಡಿ!
ಶತಮಾನಗಳ ನಂತರ ಇಸ್ರಾಯೇಲ್ಯನಾದ ಆಕಾನನ ಕಣ್ಣುಗಳು ಅವನನ್ನು ವಂಚಿಸಿ ಸೆರೆಹಿಡಿದ ಪಟ್ಟಣವಾದ ಯೆರಿಕೋವಿನ ವಸ್ತುಗಳನ್ನು ಕದ್ದುಕೊಳ್ಳುವಂತೆ ಪ್ರೇರಿಸಿದವು. ಯೆಹೋವನ ಭಂಡಾರಕ್ಕೆ ನೀಡಬೇಕಾಗಿದ್ದ ವಿಷಯಗಳ ಹೊರತು ಆ ಪಟ್ಟಣದಲ್ಲಿದ್ದ ಬೇರೆಲ್ಲಾ ವಸ್ತುಗಳನ್ನು ನಾಶಪಡಿಸಬೇಕೆಂದು ದೇವರು ಆಜ್ಞಾಪಿಸಿದ್ದನು. ‘ಶಾಪಕ್ಕೆ ಈಡಾದ [ಕೆಲವು ವಸ್ತುಗಳನ್ನು ಪಟ್ಟಣದಿಂದ] ತೆಗೆದುಕೊಳ್ಳದಂತೆ ಬಹು ಎಚ್ಚರಿಕೆಯಾಗಿರಿ’ (NIBV) ಎಂದು ಇಸ್ರಾಯೇಲ್ಯರಿಗೆ ಹೇಳಲಾಗಿತ್ತು. ಆಕಾನನು ಅವಿಧೇಯನಾದಾಗ ಇಸ್ರಾಯೇಲ್ಯ ಜನರು ಆಯಿ ಪಟ್ಟಣದಲ್ಲಿ ಸೋಲನ್ನಪ್ಪಿದರು. ಅವರಲ್ಲಿ ಹಲವಾರು ಮಂದಿ ಕೊಲ್ಲಲ್ಪಟ್ಟರು ಸಹ. ಆಕಾನನು ತನ್ನ ತಪ್ಪು ಬಯಲಾಗುವ ತನಕ ಕಳ್ಳತನವನ್ನು ಒಪ್ಪಿಕೊಳ್ಳಲಿಲ್ಲ. ಕೊನೆಗೆ ಅವನಂದದ್ದು: ‘ಅವನ್ನು ಕಂಡು ಆಶೆಯಿಂದ ತೆಗೆದುಕೊಂಡೆನು.’ ಕಣ್ಣಿನಾಶೆಯು ಆಕಾನನನ್ನು ನಾಶನಕ್ಕೆ ನಡಿಸಿತು. ಅವನೊಂದಿಗೆ ‘ಅವನಿಗಿದ್ದದ್ದೆಲ್ಲವೂ’ ನಾಶವಾಯಿತು. (ಯೆಹೋ. 6:18, 19; 7:1-26) ಆಕಾನನು ತನಗೆ ನಿಷೇಧಿತವಾದ ವಸ್ತುಗಳ ಮೇಲೆ ಮನಸ್ಸಿಟ್ಟನು.
ಕಾವಲಿನಬುರುಜು97 8/15 ಪುಟ 28 ಪ್ಯಾರ 2
ಕೆಟ್ಟ ವಿಷಯವನ್ನು ಏಕೆ ವರದಿಸಬೇಕು?
ತಪ್ಪುಕೃತ್ಯವನ್ನು ವರದಿಸುವುದಕ್ಕಾಗಿರುವ ಒಂದು ಕಾರಣವು ಯಾವುದೆಂದರೆ, ಅದು ಸಭೆಯ ಶುದ್ಧತೆಯನ್ನು ಕಾಪಾಡುವ ಕಾರ್ಯಮಾಡುತ್ತದೆ. ಯೆಹೋವನು ಪರಿಶುದ್ಧನೂ ಪವಿತ್ರನೂ ಆದ ಒಬ್ಬ ದೇವರಾಗಿದ್ದಾನೆ. ತನ್ನನ್ನು ಆರಾಧಿಸುವವರೆಲ್ಲರೂ ಆತ್ಮಿಕವಾಗಿ ಮತ್ತು ನೈತಿಕವಾಗಿ ಶುದ್ಧರಾಗಿರುವಂತೆ ಆತನು ಕೇಳಿಕೊಳ್ಳುತ್ತಾನೆ. ಆತನ ಪ್ರೇರಿತ ವಾಕ್ಯವು ಬುದ್ಧಿವಾದ ನೀಡುವುದು: “ನೀವು ಮುಂಚೆ ಅಜ್ಞಾನಿಗಳಾಗಿದ್ದಾಗ ನಿಮಗಿದ್ದ ದುರಾಶೆಗಳನ್ನು ಅನುಸರಿಸಿ ನಡೆಯುವವರಾಗಿರದೆ ನಿಮ್ಮನ್ನು ಕರೆದಾತನು ಪರಿಶುದ್ಧನಾಗಿರುವ ಪ್ರಕಾರವೇ ನೀವೂ ವಿಧೇಯರಿಗೆ ತಕ್ಕಂತೆ ನಿಮ್ಮ ಎಲ್ಲಾ ನಡವಳಿಕೆಯಲ್ಲಿ ಪರಿಶುದ್ಧರಾಗಿರಿ. ನಾನು ಪರಿಶುದ್ಧನಾಗಿರುವದರಿಂದ ನೀವೂ ಪರಿಶುದ್ಧರಾಗಿರಬೇಕು ಎಂದು ಬರೆದದೆಯಲ್ಲಾ.” (1 ಪೇತ್ರ 1:14-16) ಅಶುದ್ಧತೆ ಅಥವಾ ತಪ್ಪುಕೃತ್ಯವನ್ನು ರೂಢಿಯಾಗಿ ಮಾಡುವ ವ್ಯಕ್ತಿಗಳನ್ನು ತಿದ್ದಲು ಅಥವಾ ಅವರನ್ನು ತೆಗೆದುಹಾಕಲು ಕ್ರಿಯೆ ಕೈಕೊಳ್ಳದಿರುವಲ್ಲಿ, ಅಂತಹವರು ಇಡೀ ಸಭೆಯ ಮೇಲೆ ಕಳಂಕವನ್ನೂ ಯೆಹೋವನ ಅಪ್ರಸನ್ನತೆಯನ್ನೂ ತರಬಲ್ಲರು.—ಯೆಹೋಶುವ 7ನೆಯ ಅಧ್ಯಾಯವನ್ನು ಹೋಲಿಸಿರಿ.
ಕಾವಲಿನಬುರುಜು10 4/15 ಪುಟ 21 ಪ್ಯಾರ 8
ನಿಷ್ಪ್ರಯೋಜಕ ವಿಷಯಗಳ ಮೇಲೆ ಕಣ್ಣಿಡಬೇಡಿ!
ನಿಜ ಕ್ರೈಸ್ತರು ಕಣ್ಣಿನಾಶೆ ಮತ್ತು ಶರೀರದಾಶೆಯಿಂದ ವಿಮುಕ್ತರಲ್ಲ. ಆದುದರಿಂದ ನಾವೇನನ್ನು ನೋಡುತ್ತೇವೋ ಮತ್ತು ಯಾವುದನ್ನು ಬಯಸುತ್ತೇವೋ ಆ ಸಂಬಂಧದಲ್ಲಿ ಸ್ವಶಿಸ್ತನ್ನು ಅಭ್ಯಾಸಿಸುವಂತೆ ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುತ್ತದೆ. (1 ಕೊರಿಂ. 9:25, 27; 1 ಯೋಹಾನ 2:15-17 ಓದಿ.) ನೀತಿವಂತನಾದ ಯೋಬನು ನೋಡುವುದು ಮತ್ತು ಆಶಿಸುವುದರ ನಡುವಣ ಬಲವಾದ ಕೊಂಡಿಯನ್ನು ಗ್ರಹಿಸಿಕೊಂಡವರಲ್ಲಿ ಒಬ್ಬನು. ಅವನು ಹೇಳಿದ್ದು: “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ, ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು?” (ಯೋಬ 31:1) ಯೋಬನು ಪರಸ್ತ್ರೀಯನ್ನು ಅನೈತಿಕ ರೀತಿಯಲ್ಲಿ ಸ್ಪರ್ಶಿಸಲು ನಿರಾಕರಿಸಿದ್ದು ಮಾತ್ರವಲ್ಲ ಅಂಥ ಒಂದು ವಿಚಾರವನ್ನು ಮನಸ್ಸಿಗೆ ತಂದುಕೊಳ್ಳಲು ಸಹ ಅನುಮತಿಸಿರಲಿಲ್ಲ. ನಮ್ಮ ಮನಸ್ಸು ಅನೈತಿಕ ಯೋಚನೆಗಳಿಂದ ಕೂಡಿರದೆ ಶುದ್ಧವಾಗಿರಬೇಕು ಎಂಬುದನ್ನು ಒತ್ತಿಹೇಳಲು ಯೇಸು ಅಂದದ್ದು: “ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.”—ಮತ್ತಾ. 5:28.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು15 11/15 ಪುಟ 13 ಪ್ಯಾರ 2-3
ವಾಚಕರಿಂದ ಪ್ರಶ್ನೆಗಳು
ಪುರಾತನ ಕಾಲಗಳಲ್ಲಿ ದಾಳಿಕೋರರು ಕೋಟೆಕೊತ್ತಲಿನ ನಗರಗಳನ್ನು ಸುತ್ತುವರಿಯುತ್ತಿದ್ದದ್ದು ಸಾಮಾನ್ಯ ವಿಷಯವಾಗಿತ್ತು. ಈ ಮುತ್ತಿಗೆ ಎಷ್ಟೇ ದೀರ್ಘ ಸಮಯದ ವರೆಗೆ ಇದ್ದರೂ ವಿಜಯಿ ಸೈನ್ಯವು ಪಟ್ಟಣದ ಐಶ್ವರ್ಯ ಮತ್ತು ಅಲ್ಲಿ ಉಳಿದಿರುವ ಆಹಾರದ ಸರಬರಾಜುಗಳನ್ನು ದೋಚಿಕೊಳ್ಳುತ್ತಿತ್ತು. ಆದರೆ ಯೆರಿಕೋವಿನ ಅವಶೇಷಗಳಲ್ಲಿ ಭೂ ಅಗೆತಶಾಸ್ತ್ರಜ್ಞರಿಗೆ ತುಂಬ ದೊಡ್ಡ ಮೊತ್ತದ ಧಾನ್ಯ ಸರಬರಾಜು ಸಿಕ್ಕಿತು. ಈ ವಿಷಯದ ಬಗ್ಗೆ ಬಿಬ್ಲಿಕಲ್ ಆರ್ಕಿಯಾಲಜಿ ರಿವ್ಯೂ ಎಂಬ ಪುಸ್ತಕ ಹೇಳಿದ್ದು: “ಮಣ್ಣಿನ ಪಾತ್ರೆಗಳನ್ನು ಬಿಟ್ಟು ಅಲ್ಲಿ ಹೇರಳವಾಗಿ ಸಿಕ್ಕಿದ್ದು ಧಾನ್ಯಗಳು. . . . ಪ್ಯಾಲೆಸ್ಟೀನಿನ ಭೂ ಅಗೆತಶಾಸ್ತ್ರದ ದಾಖಲೆಗಳಲ್ಲಿ ಇದೊಂದು ಅಪೂರ್ವ ವಿಷಯ. . . . ಹೆಚ್ಚೆಂದರೆ ಒಂದು ಅಥವಾ ಎರಡು ಹೂಜಿ ಧಾನ್ಯ ಸಿಕ್ಕಿದ್ದು ಇದೆ. ಆದರೆ ಇಷ್ಟೊಂದು ಮೊತ್ತದ ಧಾನ್ಯ ಸಿಕ್ಕಿರುವುದು ಅಪೂರ್ವ.”
ಬೈಬಲಿನ ವೃತ್ತಾಂತಕ್ಕನುಸಾರ ಇಸ್ರಾಯೇಲ್ಯರು ಯೆರಿಕೋವಿನ ಧಾನ್ಯವನ್ನು ದೋಚಿಕೊಂಡು ಹೋಗಲಿಲ್ಲ. ಇದಕ್ಕೆ ಒಳ್ಳೇ ಕಾರಣವಿತ್ತು. ಹಾಗೆ ಮಾಡಬಾರದೆಂದು ಯೆಹೋವನೇ ಆಜ್ಞೆ ಕೊಟ್ಟಿದ್ದನು. (ಯೆಹೋ. 6:17, 18) ಇಸ್ರಾಯೇಲ್ಯರು ವಸಂತಕಾಲದಲ್ಲಿ, ಅಂದರೆ ಕೊಯ್ಲಿನ ಕಾಲ ಮುಗಿದ ನಂತರ ಯೆರಿಕೋವಿನ ಮೇಲೆ ಆಕ್ರಮಣ ಮಾಡಿದರು. ಆಗ ಧಾನ್ಯದ ಸರಬರಾಜು ತುಂಬ ಹೇರಳವಾಗಿತ್ತು. (ಯೆಹೋ. 3:15-17; 5:10) ಯೆರಿಕೋವಿನಲ್ಲಿ ಅಷ್ಟೊಂದು ಧಾನ್ಯ ಉಳಿದಿತ್ತು ಎಂಬ ಸಂಗತಿ, ಇಸ್ರಾಯೇಲ್ಯರು ದೀರ್ಘ ಸಮಯದ ವರೆಗೆ ಮುತ್ತಿಗೆ ಹಾಕಿರಲಿಲ್ಲವೆಂದು ತೋರಿಸುತ್ತದೆ. ಇದನ್ನೇ ಬೈಬಲ್ನಲ್ಲಿ ವರ್ಣಿಸಲಾಗಿದೆ.
ಅಕ್ಟೋಬರ್ 4-10
ಬೈಬಲಿನಲ್ಲಿರುವ ರತ್ನಗಳು | ಯೆಹೋಶುವ 8-9
“ಗಿಬ್ಯೋನ್ಯರಿಂದ ಕಲಿಯೋ ಪಾಠಗಳು”
it-1-E ಪುಟ 930-931
ಗಿಬ್ಯೋನ್
ಯೆಹೋಶುವನ ಕಾಲದಲ್ಲಿ. ನಾಶಮಾಡಬೇಕು ಅಂತ ಯೆಹೋವ ಹೇಳಿದ ಕಾನಾನ್ಯರ ಏಳು ದೇಶಗಳಲ್ಲಿ ಗಿಬ್ಯೋನ್ (ಅಮೋರಿಯರು) ಕೂಡ ಒಂದು. (ಧರ್ಮೋ 7:1, 2; ಯೆಹೋ 9:3-7) ಆದ್ರೆ ಗಿಬ್ಯೋನ್ಯರು ಬೇರೆ ಕಾನಾನ್ಯರ ತರ ಇರಲಿಲ್ಲ. ಅವರ ಹತ್ರ ದೊಡ್ಡ ಸೈನ್ಯ, ಭದ್ರ ಕೋಟೆಗಳು ಇದ್ರೂ ತಾವು ಇಸ್ರಾಯೇಲ್ಯರನ್ನ ಜಯಿಸೋಕೆ ಆಗಲ್ಲ ಅಂತ ಅವರಿಗೆ ಅರ್ಥ ಆಯ್ತು. ಯಾಕಂದ್ರೆ ಯೆಹೋವ ಇಸ್ರಾಯೇಲ್ಯರ ಪರವಾಗಿ ಹೋರಾಡ್ತಿದ್ದಾನೆ ಅಂತ ಅವರಿಗೆ ಗೊತ್ತಿತ್ತು. ಅದಕ್ಕೆ ಇಸ್ರಾಯೇಲ್ಯರು ಯೆರಿಕೋ ಮತ್ತು ಆಯಿ ಪಟ್ಟಣಗಳನ್ನ ನಾಶ ಮಾಡಿದ ಮೇಲೆ ಗಿಬ್ಯೋನ್ಯರು ಯೆಹೋಶುವನ ಹತ್ರ ಶಾಂತಿ ಒಪ್ಪಂದ ಮಾಡಿಕೊಳ್ಳೋಕೆ ಕೆಲವು ಗಂಡಸ್ರನ್ನ ಕಳಿಸಿದ್ರು. ಈ ಗಂಡಸ್ರು ತಾವು ದೂರ ದೇಶದಿಂದ ಬಂದಿದ್ದೀವಿ ಅಂತ ತೋರಿಸಿಕೊಳ್ಳೋಕೆ ಹರಿದುಹೋಗಿರೋ ಬಟ್ಟೆ, ಸವೆದುಹೋಗಿರೋ ಚಪ್ಪಲಿ ಹಾಕೊಂಡಿದ್ರು. ಅವರ ಹತ್ರ ತೇಪೆ ಹಾಕಿರೋ ದ್ರಾಕ್ಷಾಮದ್ಯದ ಚರ್ಮದ ಬುದ್ದಲಿ, ಹರಿದುಹೋಗಿರೋ ಗೋಣಿಚೀಲ, ಒಣಗಿ ಚೂರು ಚೂರು ಆಗಿರೋ ರೊಟ್ಟಿ ತುಂಡುಗಳಿತ್ತು. ಹೀಗೆ ತಾವು ಕಾನಾನ್ಯರಲ್ಲ, ಯೆಹೋವ ನಾಶಮಾಡಬೇಕು ಅಂತ ಹೇಳಿರೋ ದೇಶದವರಲ್ಲ ಅಂತ ತೋರಿಸಿಕೊಟ್ರು. ಈಜಿಪ್ಟ್ ದೇಶದವರನ್ನ, ಅಮೋರಿಯರ ರಾಜರಾದ ಸಿಹೋನ್ ಮತ್ತು ಓಗನನ್ನ ಯೆಹೋವ ದೇವರೇ ಸೋಲಿಸಿದ್ದು ಅಂತ ಅವರು ಒಪ್ಪಿಕೊಂಡ್ರು. ಆದ್ರೆ ಅವರು ಯೆರಿಕೋ ಬಗ್ಗೆ ಆಗಲಿ, ಆಯಿ ಪಟ್ಟಣದ ಬಗ್ಗೆ ಆಗಲಿ ಮಾತೇ ಎತ್ತಲಿಲ್ಲ. ಯಾಕಂದ್ರೆ ಈ ವಿಷಯ ದೂರ ದೇಶಕ್ಕೆ ಇಷ್ಟು ಬೇಗ ತಲುಪಿರಲ್ಲ ಅಂತ ಅವರಿಗೆ ಗೊತ್ತಿತ್ತು. ಹೀಗೆ ಬುದ್ಧಿವಂತಿಕೆ ತೋರಿಸಿದ್ರು.—ಯೆಹೋ 9:3-15.
ಕಾವಲಿನಬುರುಜು11 11/15 ಪುಟ 8 ಪ್ಯಾರ 14
ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳಬೇಡಿ
ಅಪರಿಪೂರ್ಣರಾಗಿರುವ ಕಾರಣ ಅನುಭವಸ್ಥ ಹಿರಿಯರು ಸೇರಿದಂತೆ ನಾವೆಲ್ಲರೂ ನಿರ್ಣಯಗಳನ್ನು ಮಾಡುವಾಗ ಮಾರ್ಗದರ್ಶನೆಗಾಗಿ ಯೆಹೋವನೆಡೆಗೆ ನೋಡಲು ತಪ್ಪಬಾರದು. ಮೋಶೆಯ ಉತ್ತರಾಧಿಕಾರಿ ಯೆಹೋಶುವ ಮತ್ತು ಇಸ್ರಾಯೇಲಿನ ಹಿರೀಪುರುಷರ ಉದಾಹರಣೆ ಗಮನಿಸಿ. ಗಿಬ್ಯೋನ್ಯರು ಸಂಧಾನದ ಉದ್ದೇಶದಿಂದ ಅವರ ಬಳಿಗೆ ವೇಷ ಮರೆಸಿ ಬಂದರು. ದೂರ ದೇಶದಿಂದ ಬಂದವರೋ ಎಂಬಂತೆ ನಟಿಸಿದರು. ಯೆಹೋಶುವ ಮತ್ತು ಇತರ ಹಿರೀಪುರುಷರು ಆಗ ಯೆಹೋವನನ್ನು ವಿಚಾರಿಸುವ ಬದಲು ಅವರೊಂದಿಗೆ ಒಡಂಬಡಿಕೆ ಮಾಡಿಕೊಂಡರು. ಆ ಒಡಂಬಡಿಕೆಯನ್ನೇನೋ ಯೆಹೋವನು ಬೆಂಬಲಿಸಿದನು ನಿಜ. ಹಾಗಿದ್ದರೂ ತನ್ನ ಮಾರ್ಗದರ್ಶನವನ್ನು ಕೋರದೆ ಹೋದ ಅವರ ಆ ವಿಷಯವನ್ನು ಬೈಬಲಿನಲ್ಲಿ ದಾಖಲಿಸಿದನು. ಏಕೆ? ನಾವು ಪಾಠ ಕಲಿಯಬೇಕೆಂದಲ್ಲವೇ?—ಯೆಹೋ. 9:3-6, 14, 15.
ಕಾವಲಿನಬುರುಜು04 10/15 ಪುಟ 18 ಪ್ಯಾರ 14
“ಈ ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡು”
ಆ ಪ್ರತಿನಿಧಿಗಳು ಹೇಳಿದ್ದು: “ನಿನ್ನ ಸೇವಕರಾದ ನಾವು ನಿಮ್ಮ ದೇವರಾದ ಯೆಹೋವನ ನಾಮ ಮಹತ್ತಿನ ನಿಮಿತ್ತ ಬಹುದೂರದೇಶದಿಂದ ಬಂದಿದ್ದೇವೆ.” (ಓರೆ ಅಕ್ಷರಗಳು ನಮ್ಮವು.) (ಯೆಹೋಶುವ 9:3-9) ಅವರ ಬಟ್ಟೆಗಳು ಮತ್ತು ಒಣರೊಟ್ಟಿ ಚೂರುಗಳು, ಅವರು ಬಹುದೂರದೇಶದಿಂದ ಬಂದಿದ್ದಾರೆಂಬುದನ್ನು ದೃಢಪಡಿಸುವಂತೆ ತೋರಿತು, ಆದರೆ ವಾಸ್ತವದಲ್ಲಿ ಗಿಲ್ಗಾಲಿನಿಂದ ಗಿಬ್ಯೋನ್ 30 ಕಿಲೊಮೀಟರುಗಳಷ್ಟು ದೂರದಲ್ಲಿತ್ತಷ್ಟೆ. ಇದಕ್ಕೆ ಒಡಂಬಟ್ಟ ಯೆಹೋಶುವನು ಹಾಗೂ ಅವನ ಸಮೂಹಪ್ರಧಾನರು ಗಿಬ್ಯೋನ್ ಹಾಗೂ ಗಿಬ್ಯೋನಿಗೆ ಸಂಬಂಧಿಸಿದ ಊರುಗಳವರೊಂದಿಗೆ ಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಂಡರು. ಗಿಬ್ಯೋನ್ಯರ ಯುಕ್ತಿಯು ಕೇವಲ ಸಂಹಾರವನ್ನು ತಪ್ಪಿಸಿಕೊಳ್ಳುವುದಾಗಿತ್ತೋ? ಇದಕ್ಕೆ ವ್ಯತಿರಿಕ್ತವಾಗಿ, ಇಸ್ರಾಯೇಲ್ಯರ ದೇವರ ಅನುಗ್ರಹವನ್ನು ಪಡೆಯುವ ಬಯಕೆಯನ್ನು ಇದು ಪ್ರತಿಬಿಂಬಿಸಿತು. ಯೆಹೋವನು ಗಿಬ್ಯೋನ್ಯರನ್ನು ಸ್ವೀಕರಿಸಿದನು ಮತ್ತು ಅವರು ‘ಯೆಹೋವನ ಯಜ್ಞವೇದಿಗೋಸ್ಕರ ಕಟ್ಟಿಗೆ ಒಡೆಯುವವರಾಗಿಯೂ ನೀರು ತರುವವರಾಗಿಯೂ’ ನೇಮಿಸಲ್ಪಟ್ಟರು; ಅವರು ಯಜ್ಞವೇದಿಗೆ ಬೇಕಾಗಿರುವ ಕಟ್ಟಿಗೆಯನ್ನು ಒದಗಿಸುವವರೋಪಾದಿ ಕೆಲಸಮಾಡುತ್ತಿದ್ದರು. (ಯೆಹೋಶುವ 9:11-27) ಗಿಬ್ಯೋನ್ಯರು ಯೆಹೋವನ ಸೇವೆಯಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡುವುದರಲ್ಲಿ ಮನಃಪೂರ್ವಕತೆಯನ್ನು ತೋರಿಸುತ್ತಾ ಮುಂದುವರಿದರು. ಅವರಲ್ಲಿ ಕೆಲವರು, ಬಾಬೆಲಿನಿಂದ ಹಿಂದಿರುಗಿ ಪುನರ್ನಿರ್ಮಿಸಲ್ಪಟ್ಟ ದೇವಾಲಯದಲ್ಲಿ ಸೇವೆಮಾಡುತ್ತಿದ್ದ ದೇವಸ್ಥಾನದಾಸರಲ್ಲಿ (ನಿಥಿನಿಮ್) ಇದ್ದಿರಲೂಬಹುದು. (ಎಜ್ರ 2:1, 2, 43-54; 8:20) ದೇವರೊಂದಿಗೆ ಸಮಾಧಾನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವ ಮೂಲಕ ಮತ್ತು ಆತನ ಸೇವೆಯಲ್ಲಿ ತೀರ ಚಿಕ್ಕಪುಟ್ಟ ನೇಮಕಗಳನ್ನು ನಿರ್ವಹಿಸಲು ಮನಃಪೂರ್ವಕವಾಗಿ ಸಿದ್ಧರಿರುವ ಮೂಲಕ ನಾವು ಅವರ ಮನೋಭಾವವನ್ನು ಅನುಕರಿಸಬಲ್ಲೆವು.
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 1030
ನೇತುಹಾಕುವುದು
ದೇವರು ಕೊಟ್ಟ ನಿಯಮದ ಪ್ರಕಾರ ಇಸ್ರಾಯೇಲ್ಯರು ಕೆಲವು ಅಪರಾಧಿಗಳನ್ನ ಸಾಯಿಸೋದು ಮಾತ್ರ ಅಲ್ಲ, ಅವರ ಶವವನ್ನ ಕಂಬಕ್ಕೆ ನೇತು ಹಾಕ್ತಿದ್ರು. ಈ ತರ ನೇತುಹಾಕೋದು ಆ ವ್ಯಕ್ತಿ ಮೇಲೆ ದೇವರ ಶಾಪ ಇದೆ ಅಂತ ತೋರಿಸ್ತಿತ್ತು. ಅಷ್ಟೇ ಅಲ್ಲ, ಅದನ್ನ ನೋಡುವವರಿಗೆ ಅದೊಂದು ಎಚ್ಚರಿಕೆ ಆಗಿತ್ತು.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
it-1-E ಪುಟ 520
ಒಪ್ಪಂದ
“ಒಪ್ಪಂದ” ಅನ್ನೋದಕ್ಕೆ ಇರೋ ಹೀಬ್ರು ಪದದ ಅರ್ಥ “ಕರಾರು” ಅಥವಾ “ಅಗ್ರಿಮೆಂಟ್.” ಇಬ್ರು ಅಥವಾ ಅದಕ್ಕಿಂತ ತುಂಬ ಜನ ಕಾನೂನುಬದ್ಧವಾಗಿ ಮಾಡೋ ಅಗ್ರಿಮೆಂಟ್ ಅನ್ನು ಒಪ್ಪಂದ ಅಂತ ಕರೀತಾರೆ. ಅದರಲ್ಲಿ ಅವರು ಏನು ಮಾಡ್ತಾರೆ, ಏನು ಮಾಡಲ್ಲ ಅಂತ ಹೇಳ್ತಾರೆ.
it-1-E ಪುಟ 525 ಪ್ಯಾರ 1
ಒಪ್ಪಂದ
ಯೆಹೋಶುವ ಮತ್ತು ಇಸ್ರಾಯೇಲಿನ ಪ್ರಧಾನರು ‘ಗಿಬ್ಯೋನ್ಯರನ್ನ ನಾಶಮಾಡಲ್ಲ, ಅವರ ಮೇಲೆ ಯುದ್ಧಕ್ಕೆ ಹೋಗಲ್ಲ’ ಅಂತ ಅವರ ಜೊತೆ ಒಪ್ಪಂದ ಮಾಡಿಕೊಂಡ್ರು. ಗಿಬ್ಯೋನ್ಯರು ಕಾನಾನ್ಯರಾಗಿದ್ರಿಂದ ಯೆಹೋವ ದೇವರ ಶಾಪ ಅವರ ಮೇಲಿತ್ತು ಮತ್ತು ಇಸ್ರಾಯೇಲ್ಯರು ಅವರನ್ನ ನಾಶಮಾಡಬೇಕಿತ್ತು. ಆದ್ರೆ ಅವರು ಈಗಾಗಲೇ ಒಪ್ಪಂದ ಮಾಡಿಕೊಂಡಿದ್ರಿಂದ ನಾಶ ಮಾಡೋ ಹಾಗಿರಲಿಲ್ಲ. ಆದ್ರೆ ಗಿಬ್ಯೋನ್ಯರ ಮೇಲೆ ಯೆಹೋವ ದೇವರ ಶಾಪ ಇನ್ನೂ ಹಾಗೇ ಇತ್ತು. ಹಾಗಾಗಿ ಅವರು ಇಸ್ರಾಯೇಲ್ಯರಿಗೆ ದಾಸರಾಗಿದ್ದು ಸೌದೆ ಕೂಡಿಸೋ ಕೆಲಸ ಮತ್ತು ನೀರು ತುಂಬಿಸೋ ಕೆಲಸ ಮಾಡಬೇಕಿತ್ತು. (ಯೆಹೋ 9:15, 16, 23-27)
ಅಕ್ಟೋಬರ್ 11-17
ಬೈಬಲಿನಲ್ಲಿರುವ ರತ್ನಗಳು | ಯೆಹೋಶುವ 10-11
“ಇಸ್ರಾಯೇಲ್ಯರಿಗೋಸ್ಕರ ಯೆಹೋವ ಹೋರಾಡಿದನು”
it-1-E ಪುಟ 50
ಅದೋನೀಚೆದೆಕ
ಇಸ್ರಾಯೇಲ್ಯರು ಕಾನಾನ್ ದೇಶನ ವಶಮಾಡಿಕೊಳ್ಳೋ ಸಮಯದಲ್ಲಿ ಇವನು ಯೆರೂಸಲೇಮಿನ ರಾಜನಾಗಿದ್ದ. ಗಿಬ್ಯೋನ್ಯರು ಯೆಹೋಶುವನ ಹತ್ರ ಶಾಂತಿ-ಒಪ್ಪಂದ ಮಾಡಿಕೊಂಡ್ರು ಅಂತ ಅದೋನೀಚೆದೆಕನಿಗೆ ಗೊತ್ತಾದಾಗ ಬೇರೆ ರಾಜ್ಯಗಳೂ ಇಸ್ರಾಯೇಲ್ಯರಿಗೆ ಶರಣಾಗಬಹುದು ಅಂತ ಭಯಪಟ್ಟ. ಅದಕ್ಕೇ ಅವನು ಬೇರೆ ನಾಲ್ಕು ರಾಜರ ಜೊತೆ ಸೇರಿಕೊಂಡು ಗಿಬ್ಯೋನ್ಯರ ಮೇಲೆ ಯುದ್ಧಕ್ಕೆ ಬಂದ.
it-1-E ಪುಟ 1020
ಆಲಿಕಲ್ಲು
ಯೆಹೋವ ಆಲಿಕಲ್ಲು ಮಳೆ ಸುರಿಸಿದ್ರು. ಯೆಹೋವ ದೇವರು ತನ್ನ ಉದ್ದೇಶ ಪೂರೈಸೋಕೆ ಮತ್ತು ಮಹಾಶಕ್ತಿ ತೋರಿಸೋಕೆ ಕೆಲವೊಮ್ಮೆ ಆಲಿಕಲ್ಲು ಮಳೆಯನ್ನ ಸುರಿಸಿದ್ದಾರೆ. (ಕೀರ್ತ 148:1, 8; ಯೆಶಾ 30:30; ವಿಮೋ 9:18-26; ಕೀರ್ತ 78:47, 48; 105:32, 33) ಅಮೋರಿಯರ ಐದು ರಾಜರು ಗಿಬ್ಯೋನ್ಯರ ವಿರುದ್ಧ ಯುದ್ಧಕ್ಕೆ ಬಂದಾಗ ಇಸ್ರಾಯೇಲ್ಯರು ಗಿಬ್ಯೋನ್ಯರಿಗೆ ಸಹಾಯಮಾಡಿದ್ರು. ಆ ಸಮಯದಲ್ಲಿ ಯೆಹೋವ ಒಂದು ದೊಡ್ಡ ಆಲಿಕಲ್ಲು ಮಳೆ ತಂದು ಅಮೋರಿಯರನ್ನ ಸಾಯಿಸಿದ್ರು. ಯುದ್ಧದಲ್ಲಿ ಇಸ್ರಾಯೇಲ್ಯರ ಕೈಯಿಂದ ಸತ್ತವರಿಗಿಂತ ಆಲಿಕಲ್ಲು ಮಳೆಯಿಂದ ಸತ್ತವರ ಸಂಖ್ಯೆನೆ ಜಾಸ್ತಿ ಇತ್ತು.—ಯೆಹೋ 10:3-7, 11.
ಕಾವಲಿನಬುರುಜು04 12/1 ಪುಟ 11 ಪ್ಯಾರ 1
ಯೆಹೋಶುವ ಪುಸ್ತಕದ ಮುಖ್ಯಾಂಶಗಳು
10:13—ಇಂಥ ಚಮತ್ಕಾರವು ಹೇಗೆ ಸಾಧ್ಯವಾಯಿತು? ಭೂಪರಲೋಕಗಳ ಸೃಷ್ಟಿಕರ್ತನಾಗಿರುವ “ಯೆಹೋವನಿಗೆ ಅಸಾಧ್ಯವಾದದ್ದುಂಟೋ?” (ಆದಿಕಾಂಡ 18:14) ತನಗೆ ಇಷ್ಟಬಂದಲ್ಲಿ, ಭೂಮಿಯಿಂದ ವೀಕ್ಷಿಸುವವರಿಗೆ ಸೂರ್ಯಚಂದ್ರರು ನಿಶ್ಚಲರಾಗಿ ಕಂಡುಬರಸಾಧ್ಯವಾಗುವಂತೆ ಭೂಮಿಯ ಚಲನೆಯನ್ನು ಯೆಹೋವನು ನಿಯಂತ್ರಿಸಬಲ್ಲನು. ಅಥವಾ ಭೂಮಿಯ ಮತ್ತು ಚಂದ್ರನ ಚಲನೆಯು ಎಂದಿನಂತೆ ಮುಂದುವರಿಸುವ ಹಾಗೆ ಅನುಮತಿಸಿ, ಅದೇ ಸಮಯದಲ್ಲಿ ಸೂರ್ಯ ಮತ್ತು ಚಂದ್ರರ ಬೆಳಕು ಪ್ರಕಾಶಿಸುತ್ತಾ ಇರುವಂತೆ ಬೆಳಕಿನ ಮೂಲಗಳ ಕಿರಣಗಳನ್ನು ಆತನು ವಕ್ರೀಕರಿಸಬಲ್ಲನು. ವಿಷಯವು ಏನೇ ಇರಲಿ, ಮಾನವ ಇತಿಹಾಸದಲ್ಲಿ “ಬೇರೆ ಯಾವ ದಿವಸವೂ ಈ ದಿವಸದಷ್ಟು ಮಹತ್ವಭರಿತವಾಗಿ” ಕಂಡುಬಂದಿಲ್ಲ.—ಯೆಹೋಶುವ 10:14, NW.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು09 3/15 ಪುಟ 32 ಪ್ಯಾರ 5
ವಾಚಕರಿಂದ ಪ್ರಶ್ನೆಗಳು
ಕೆಲವೊಂದು ಗ್ರಂಥಗಳನ್ನು ಬೈಬಲ್ನಲ್ಲಿ ಉಲ್ಲೇಖಿಸಲಾಗಿದೆ ಮತ್ತು ಅವುಗಳನ್ನು ಬೈಬಲ್ ಬರಹಗಾರರು ಬಳಸಿದ್ದಾರೆ ಎಂದಮಾತ್ರಕ್ಕೆ ನಾವು ಅವುಗಳನ್ನು ದೇವಪ್ರೇರಿತವೆಂದು ಎಣಿಸಬಾರದು. ಯೆಹೋವ ದೇವರು ‘ತನ್ನ ಮಾತುಗಳಿರುವ’ ಎಲ್ಲ ಬರಹಗಳನ್ನು ಸಂರಕ್ಷಿಸಿಟ್ಟಿದ್ದಾನೆ ಮತ್ತು ಅವು ‘ಸದಾಕಾಲವೂ ಇರುವವು.’ (ಯೆಶಾ. 40:8) ಹೌದು, ನಮ್ಮ ಬಳಿಯಿರುವ ಬೈಬಲಿನ 66 ಪುಸ್ತಕಗಳಲ್ಲಿ ಯಾವ ಪುಸ್ತಕಗಳು ಸೇರಿರಬೇಕೆಂದು ದೇವರು ಆರಿಸಿದ್ದಾನೋ ಅವುಗಳಲ್ಲಿ ನಾವು ‘ಪ್ರವೀಣರಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧರಾಗುವಂತೆ’ ಬೇಕಾಗಿರುವುದೆಲ್ಲವೂ ಇದೆ.—2 ತಿಮೊ. 3:16, 17.
ಅಕ್ಟೋಬರ್ 18-24
ಬೈಬಲಿನಲ್ಲಿರುವ ರತ್ನಗಳು | ಯೆಹೋಶುವ 12-14
“ಯೆಹೋವ ಹೇಳಿದ್ದನ್ನ ಪೂರ್ಣ ಹೃದಯದಿಂದ ಮಾಡಿ”
ಕಾವಲಿನಬುರುಜು04 12/1 ಪುಟ 12 ಪ್ಯಾರ 2
ಯೆಹೋಶುವ ಪುಸ್ತಕದ ಮುಖ್ಯಾಂಶಗಳು
14:10-13. ಕಾಲೇಬನು 85 ವರ್ಷದವನಾಗಿದ್ದರೂ, ಹೆಬ್ರೋನ್ ಸೀಮೆಯಿಂದ ಜನರನ್ನು ಹೊರಗಟ್ಟುವ ಕಷ್ಟಕರ ನೇಮಕವನ್ನು ಕೇಳಿಕೊಂಡನು. ಆ ಕ್ಷೇತ್ರದಲ್ಲಿ ಅಸಾಮಾನ್ಯ ಗಾತ್ರದ ಉನ್ನತ ಪುರುಷ (ಅನಾಕಿಮ)ರು ವಾಸಿಸುತ್ತಿದ್ದರು. ಯೆಹೋವನ ಸಹಾಯದಿಂದ ಅನುಭವಸ್ಥ ಯುದ್ಧವೀರರು ಈ ಕೆಲಸದಲ್ಲಿ ಸಫಲರಾದರು ಮತ್ತು ಹೆಬ್ರೋನ್ ಪಟ್ಟಣವು ಒಂದು ಆಶ್ರಯನಗರವಾಗಿ ಪರಿಣಮಿಸಿತು. (ಯೆಹೋಶುವ 15:13-19; 21:11-13) ಕಷ್ಟಕರವಾದ ದೇವಪ್ರಭುತ್ವಾತ್ಮಕ ನೇಮಕಗಳನ್ನು ಸ್ವೀಕರಿಸಲು ಹಿಂಜರಿಯದಿರುವಂತೆ ಕಾಲೇಬನ ಉದಾಹರಣೆಯು ನಮ್ಮನ್ನು ಉತ್ತೇಜಿಸುತ್ತದೆ.
ಕಾವಲಿನಬುರುಜು06 10/1 ಪುಟ 19 ಪ್ಯಾರ 11
ನಂಬಿಕೆ ಮತ್ತು ದೇವಭಯದ ಮೂಲಕ ಧೈರ್ಯದಿಂದಿರುವುದು
ಇಂತಹ ನಂಬಿಕೆ ಜಡವಾದದ್ದಲ್ಲ. ಸತ್ಯಕ್ಕನುಗುಣವಾಗಿ ನಾವು ಜೀವಿಸುವಾಗ, ಅದರ ಪ್ರಯೋಜನಗಳನ್ನು ‘ಸವಿಯುವಾಗ,’ ನಮ್ಮ ಪ್ರಾರ್ಥನೆಗಳಿಗೆ ದೊರೆಯುವ ಉತ್ತರಗಳನ್ನು ‘ನೋಡುವಾಗ’ ಮತ್ತು ಇತರ ವಿಧಗಳಲ್ಲಿ, ನಮ್ಮ ಜೀವನದಲ್ಲಿ ಯೆಹೋವನ ನಿರ್ದೇಶನವನ್ನು ಅರಿಯುವಾಗ ಆ ನಂಬಿಕೆ ಬೆಳೆಯುತ್ತಾ ಹೋಗುತ್ತದೆ. (ಕೀರ್ತನೆ 34:8; 1 ಯೋಹಾನ 5:14, 15) ಯೆಹೋಶುವ ಮತ್ತು ಕಾಲೇಬರು ಯೆಹೋವನ ಒಳ್ಳೆತನವನ್ನು ಸವಿದುನೋಡಿದಾಗ ಅವರ ನಂಬಿಕೆ ಆಳವಾಯಿತೆಂದು ನಮಗೆ ಖಾತರಿಯಿರಸಾಧ್ಯವಿದೆ. (ಯೆಹೋಶುವ 23:14) ಈ ವಿಷಯಗಳನ್ನು ಪರಿಗಣಿಸಿರಿ: ದೇವರು ವಾಗ್ದಾನಿಸಿದ್ದಂತೆ, ಅವರು ಆ 40 ವರುಷಗಳ ಅರಣ್ಯ ಪ್ರಯಾಣದಲ್ಲಿ ಬದುಕಿ ಉಳಿದರು. (ಅರಣ್ಯಕಾಂಡ 14:27-30; 32:11, 12) ಕಾನಾನನ್ನು ಆರು ವರುಷಗಳಲ್ಲಿ ಜಯಿಸುವ ಸಮಯದಲ್ಲಿ ಅವರು ಕ್ರಿಯಾಶೀಲ ಪಾತ್ರವಹಿಸಿದರು. ಅಂತಿಮವಾಗಿ ಅವರು ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯವನ್ನು ಅನುಭವಿಸಿದರು ಮಾತ್ರವಲ್ಲ, ಅವರಿಗೆ ತಮ್ಮದೇ ಆದ ಬಾಧ್ಯತೆಗಳೂ ದೊರೆತವು. ನಂಬಿಕೆ ಮತ್ತು ಧೈರ್ಯದಿಂದ ತನ್ನನ್ನು ಸೇವಿಸುವವರಿಗೆ ಯೆಹೋವನು ಎಂತಹ ಪ್ರತಿಫಲವನ್ನು ಕೊಡುತ್ತಾನೆ!—ಯೆಹೋಶುವ 14:6, 9-14; 19:49, 50; 24:29.
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 902-903
ಗೆಬಾಲ್
“ಗೆಬಾಲ್ಯರ ಪ್ರದೇಶ” ಮತ್ತು ಇನ್ನೂ ಅನೇಕ ಪ್ರದೇಶಗಳನ್ನ ಇಸ್ರಾಯೇಲ್ಯರು ವಶಮಾಡಿಕೊಳ್ಳಬೇಕು ಅಂತ ಯೆಹೋವ ಹೇಳಿದ್ರು. (ಯೆಹೋ 13:1-5) ಆದ್ರೆ ಕೆಲವು ವಿಮರ್ಶಕರು, ‘ಇಸ್ರಾಯೇಲ್ಯರು ಗೆಬಾಲ್ ಪ್ರದೇಶನ ವಶ ಮಾಡಿಕೊಂಡಿರೋಕೆ ಸಾಧ್ಯ ಇಲ್ಲ. ಯಾಕಂದ್ರೆ ಗೆಬಾಲ್ ಪ್ರದೇಶ ಇಸ್ರಾಯೇಲ್ ದೇಶದ ಉತ್ತರ ದಿಕ್ಕಲ್ಲಿತ್ತು (ಅಂದ್ರೆ ದಾನ್ ಪ್ರದೇಶದ ಉತ್ತರಕ್ಕೆ ಸುಮಾರು 100 ಕಿ.ಮೀ ಅಥವಾ 60 ಮೈಲಿ ದೂರದಲ್ಲಿತ್ತು.) ಅಂತ ಹೇಳ್ತಾರೆ.’ ಮೊದಮೊದಲು ಹೀಬ್ರು ಮೂಲಪ್ರತಿಯಲ್ಲಿ ಈ ಪ್ರದೇಶದ ಬಗ್ಗೆ ಇರೋ ಈ ವಚನದಲ್ಲಿ “ಲೆಬನೋನಿನ ನಂತರ ಇರುವ ದೇಶ” ಅಥವಾ ‘ಗೆಬಾಲ್ಯರ ಗಡಿಯ ತನಕ’ ಅಂತ ಇದ್ದಿರಬಹುದು. ಆದ್ರೆ ಆಮೇಲೆ ಅದು ಅಳಿಸಿಹೋಗಿದೆ ಅಂತ ಕೆಲವು ವಿದ್ವಾಂಸರು ಹೇಳ್ತಾರೆ. ಅದೇನೇ ಆಗಿರಲಿ, ನಾವು ಒಂದು ವಿಷ್ಯ ನೆನಪಿಡಬೇಕು. ಯೆಹೋಶುವ 13:2-7 ರಲ್ಲಿ ಯೆಹೋವ ಮಾತುಕೊಟ್ಟಿರೋ ಹಾಗೆ ನಡಿಬೇಕಂದ್ರೆ ಇಸ್ರಾಯೇಲ್ಯರು ಯೆಹೋವನಿಗೆ ವಿಧೇಯತೆ ತೋರಿಸಬೇಕಿತ್ತು. ಒಂದುವೇಳೆ ಇಸ್ರಾಯೇಲ್ಯರು ಗೆಬಾಲ್ ಪ್ರದೇಶನ ವಶಮಾಡಿಕೊಂಡಿಲ್ಲ ಅಂದ್ರೆ ಅದಕ್ಕೆ ಕಾರಣ ಅವರು ತೋರಿಸಿದ ಅವಿಧೇಯತೆನೇ.—ಯೆಹೋ 23:12, 13 ಹೋಲಿಸಿ.
ಅಕ್ಟೋಬರ್ 25-31
ಬೈಬಲಿನಲ್ಲಿರುವ ರತ್ನಗಳು | ಯೆಹೋಶುವ 15-17
“ನಿಮ್ಮ ಆಸ್ತಿ ಕಾಪಾಡಿಕೊಳ್ಳಿ”
it-1-E ಪುಟ 1083 ಪ್ಯಾರ 3
ಹೆಬ್ರೋನ್
ಯೆಹೋವ ಹೇಳಿದ ಹಾಗೆ ಇಸ್ರಾಯೇಲ್ಯರು ಹೆಬ್ರೋನ್ ಅನ್ನು ವಶಮಾಡಿಕೊಂಡ್ರು. ಆಮೇಲೆ ಅವರು ಆ ಪ್ರದೇಶ ಕಾಯೋಕೆ ಸೈನಿಕರನ್ನ ಇಡಲಿಲ್ಲ ಅಂತ ಕಾಣುತ್ತೆ. ಬಹುಶಃ ಇಸ್ರಾಯೇಲ್ಯರು ಬೇರೆಲ್ಲೋ ಯುದ್ಧ ಮಾಡುವಾಗ ಅನಾಕ್ಯರು ಹೆಬ್ರೋನ್ ಪಟ್ಟಣವನ್ನ ಮತ್ತೆ ವಶಮಾಡಿಕೊಂಡ್ರು. ಆದ್ರೆ ಮುಂಚೆನೇ ಹೆಬ್ರೋನ್ ಪಟ್ಟಣವನ್ನ ಕಾಲೇಬನಿಗೆ ಆಸ್ತಿಯಾಗಿ ಕೊಟ್ಟಿದ್ರಿಂದ ಅವನು (ಅಥವಾ ಕಾಲೇಬನ ಕೆಳಗಿದ್ದ ಯೆಹೂದ ವಂಶದವರು) ಅಲ್ಲಿದ್ದವರನ್ನ ಓಡಿಸಿ ಪುನಃ ಅದನ್ನ ವಶಮಾಡಿಕೊಳ್ಳಬೇಕಿತ್ತು. (ಯೆಹೋ 11:21-23; 14:12-15; 15:13, 14; ನ್ಯಾಯ 1:10)
it-1-E ಪುಟ 848
ಗುಲಾಮಗಿರಿ
ಕಾನಾನ್ ದೇಶಕ್ಕೆ ಹೋದಮೇಲೆ ಇಸ್ರಾಯೇಲ್ಯರು ಯೆಹೋವನ ಮಾತನ್ನ ಕೇಳಲಿಲ್ಲ. ಅವರು ಕಾನಾನ್ಯರನ್ನ ದೇಶದಿಂದ ಓಡಿಸಬೇಕಿತ್ತು ಮತ್ತು ಅವರನ್ನ ನಾಶಮಾಡಬೇಕಿತ್ತು. ಆದ್ರೆ ಅದನ್ನ ಬಿಟ್ಟು ಕಾನಾನ್ಯರನ್ನ ತಮ್ಮ ಸೇವಕರಾಗಿ ಮಾಡಿಕೊಂಡ್ರು. ಇದರ ಪರಿಣಾಮ? ಇಸ್ರಾಯೇಲ್ಯರು ಯೆಹೋವನನ್ನ ಬಿಟ್ಟು ಸುಳ್ಳು ದೇವರುಗಳನ್ನ ಆರಾಧಿಸೋಕೆ ಶುರುಮಾಡಿದ್ರು. (ಯೆಹೋ 16:10; ನ್ಯಾಯ 1:28; 2:3, 11, 12)
it-1-E ಪುಟ 402 ಪ್ಯಾರ 3
ಕಾನಾನ್
ಕಾನಾನ್ಯರನ್ನ ಇಸ್ರಾಯೇಲ್ಯರು ನಾಶ ಮಾಡಿದ ಮೇಲೆ ತುಂಬ ಜನ ಬದುಕುಳಿದರು. ಆದ್ರೂ “ಯೆಹೋವ ಇಸ್ರಾಯೇಲ್ಯರ ಪೂರ್ವಜರಿಗೆ ಕೊಡ್ತೀನಿ ಅಂತ ಮಾತು ಕೊಟ್ಟಿದ್ದ ಇಡೀ ದೇಶನ ಇಸ್ರಾಯೇಲ್ಯರಿಗೆ ಕೊಟ್ಟನು . . . ಅವ್ರಿಗೆ ಸಂಪೂರ್ಣ ಸಮಾಧಾನ ಕೊಟ್ಟನು . . . ಯೆಹೋವ ಇಸ್ರಾಯೇಲ್ಯರಿಗೆ ಕೊಟ್ಟ ಎಲ್ಲ ಮಾತು ನಿಜ ಆಯ್ತು, ಆತನ ಒಂದು ಮಾತೂ ತಪ್ಪಲಿಲ್ಲ. ಎಲ್ಲ ನಿಜ ಆಯ್ತು” ಅಂತ ಹೇಳಬಹುದು. (ಯೆಹೋ 21:43-45) ಯಾಕಂದ್ರೆ ಶತ್ರುಗಳಿಗೆ ಇಸ್ರಾಯೇಲ್ಯರಂದ್ರೆ ತುಂಬ ಭಯ ಇದ್ದಿದ್ರಿಂದ ಯಾರೂ ಯುದ್ಧಕ್ಕೆ ಬರ್ತಿರಲಿಲ್ಲ. ಕಾನಾನ್ಯರ ಹತ್ರ ಕಬ್ಬಿಣದ ಕುಡುಗೋಲಿನ ಚಕ್ರಗಳಿರೋ ಯುದ್ಧ ರಥಗಳಿವೆ ಅಂತ ಇಸ್ರಾಯೇಲ್ಯರು ಭಯ ಪಟ್ಟುಕೊಂಡಿದ್ರು. ಆದ್ರೆ ಇಸ್ರಾಯೇಲ್ಯರು ಯುದ್ಧವನ್ನ ಗೆದ್ದೇ ಗೆಲ್ಲುತ್ತಾರೆ ಅಂತ ಯೆಹೋವ ದೇವರು ಮಾತುಕೊಟ್ಟಿದ್ದರು. (ಯೆಹೋ 17:16-18; ನ್ಯಾಯ 4:13) ಆದ್ರೂ ಇಸ್ರಾಯೇಲ್ಯರು ಕೆಲವು ಯುದ್ಧಗಳಲ್ಲಿ ಸೋತುಹೋದ್ರು. ಅದಕ್ಕೆ ಕಾರಣ ಯೆಹೋವ ದೇವರು ಸಹಾಯ ಮಾಡದೇ ಇದ್ದಿದ್ದಲ್ಲ, ಅವರು ಯೆಹೋವ ದೇವರ ಮಾತು ಕೇಳದೇ ಇದ್ದಿದ್ದು ಅಂತ ಬೈಬಲಿಂದ ಗೊತ್ತಾಗುತ್ತೆ.—ಅರ 14:44, 45; ಯೆಹೋ 7:1-12.
ಆಧ್ಯಾತ್ಮಿಕ ಮುತ್ತುಗಳು
ನಿಮಗೆ ತಿಳಿದಿತ್ತೋ?
ಪುರಾತನ ಇಸ್ರಾಯೇಲ್ ಬೈಬಲ್ ಹೇಳಿರುವಷ್ಟರ ಮಟ್ಟಿಗೆ ಕಾಡುಪ್ರದೇಶವಾಗಿತ್ತಾ?
ವಾಗ್ದತ್ತ ದೇಶದ ಕೆಲವೊಂದು ಪ್ರದೇಶಗಳು ಕಾಡುಮಯವಾಗಿದ್ದವು ಎನ್ನುತ್ತದೆ ಬೈಬಲ್. ಅಲ್ಲಿ ಮರಗಳು ‘ಹೇರಳವಾಗಿದ್ದವು’ ಎಂದೂ ತಿಳಿಸುತ್ತದೆ. (1 ಅರ. 10:27; ಯೆಹೋ. 17:15, 18) ಆದರೆ ಆ ಪ್ರದೇಶದ ಹೆಚ್ಚಿನ ಭಾಗಗಳಲ್ಲಿ ಇಂದು ಮರಗಳೇ ಇಲ್ಲದ ಸ್ಥಿತಿ ನೋಡಿ ಒಂದು ಕಾಲದಲ್ಲಿ ನಿಜವಾಗಲೂ ಮರಗಳು ಇದ್ದವಾ ಎಂದು ಸಂದೇಹವಾದಿಗಳು ಪ್ರಶ್ನೆ ಮಾಡಬಹುದು.
ಬೈಬಲ್ ಕಾಲದ ಇಸ್ರೇಲ್ನಲ್ಲಿ ಜೀವನ (ಇಂಗ್ಲಿಷ್) ಎಂಬ ಪುಸ್ತಕ ಹೀಗೆ ವರ್ಣಿಸುತ್ತದೆ: “ಈಗ ಇರುವುದಕ್ಕಿಂತ ಹೆಚ್ಚು ಕಾಡುಗಳು ಪುರಾತನ ಇಸ್ರಾಯೇಲಿನಲ್ಲಿದ್ದವು.” ಮುಖ್ಯವಾಗಿ ಆ್ಯಲೆಪ್ಪೊ ಪೈನ್ (ಪೈನಸ್ ಹಾಲೆಪೆನ್ಸಿಸ್), ನಿತ್ಯ ಹಸಿರು ಓಕ್ ಮರ (ಕ್ವೆರ್ಕಸ್ ಕ್ಯಾಲಿಪ್ರಿನೊಸ್), ಮತ್ತು ಟೆರಬಿಂತ್ (ಪಿಸ್ಟೆಸಿಯ ಪ್ಯಾಲೆಸ್ಟಿನಾ) ಎಂಬ ಮರಗಳಿಂದ ಎತ್ತರದ ಪರ್ವತ ಪ್ರದೇಶಗಳು ತುಂಬಿರುತ್ತಿತ್ತು. ಇಳಿಕಲಿನಲ್ಲಿದ್ದ ಮಧ್ಯಪ್ರಾಂತ್ಯದ ಪರ್ವತ ಶ್ರೇಣಿ ಮತ್ತು ಮೆಡಿಟರೇನಿಯನ್ ಕರಾವಳಿಯ ನಡುವಿನ ಅಡಿಗುಡ್ಡದ ಪ್ರದೇಶಗಳಲ್ಲಿ ಸಿಕಮೋರ್ ಅಂಜೂರದ ಮರ (ಫಿಗ್ ಸಿಕಮೋರ್) ಮರಗಳೂ ಹೇರಳವಾಗಿರುತ್ತಿದ್ದವು.
ಬೈಬಲಿನ ಗಿಡಗಳು (ಇಂಗ್ಲಿಷ್) ಎಂಬ ಪುಸ್ತಕ ಹೇಳುವುದೇನೆಂದರೆ ಇಸ್ರಾಯೇಲಿನ ಕೆಲವು ಪ್ರದೇಶಗಳಲ್ಲಿ ಈಗ ಮರಗಳೇ ಇಲ್ಲ ಎಂದು. ಇದಕ್ಕೆ ಕಾರಣವೇನು? ಇದು ಕಾಲಕ್ರಮೇಣವಾಗಿ ನಡೆದ ವಿಷಯ ಎಂದು ವಿವರಿಸುತ್ತಾ ಆ ಪುಸ್ತಕ ಹೀಗನ್ನುತ್ತದೆ: “ಕಟ್ಟಡ ನಿರ್ಮಾಣಕ್ಕಾಗಿ ವಸ್ತುಗಳನ್ನು ಮತ್ತು ಉರುವಲನ್ನು ಪಡೆಯಲು, ಸಾಗುವಳಿ ಮತ್ತು ಹುಲ್ಲುಗಾವಲು ಪ್ರದೇಶವನ್ನು ವಿಸ್ತರಿಸಲು ಮಾನವನು ನೈಸರ್ಗಿಕವಾಗಿ ಬೆಳೆದ ಗಿಡಮರಗಳನ್ನು ಪದೇಪದೇ ಕಡಿದುಹಾಕಿದ್ದೇ ಇದಕ್ಕೆಲ್ಲ ಕಾರಣ.”