ಯೆಶಾಯ
ಫಲಭರಿತವಾದ ಬೆಟ್ಟದ ತಪ್ಪಲಲ್ಲಿ ನನ್ನ ಪ್ರಿಯತಮನಿಗೆ ಒಂದು ದ್ರಾಕ್ಷಿತೋಟ ಇತ್ತು.
2 ಅವನು ಅದ್ರ ನೆಲವನ್ನ ಅಗೆದು ಕಲ್ಲುಗಳನ್ನ ಹೆಕ್ಕಿ ಬಿಸಾಡಿದ.
ಶ್ರೇಷ್ಠವಾದ ಕೆಂಪು ದ್ರಾಕ್ಷಿಯ ಬಳ್ಳಿಗಳನ್ನ ಅದ್ರಲ್ಲಿ ನೆಟ್ಟ,
ಅದ್ರ ಮಧ್ಯ ಒಂದು ಬುರುಜನ್ನ ಕಟ್ಟಿದ,
ದ್ರಾಕ್ಷಾಮದ್ಯ ತಯಾರಿಸೋ ಒಂದು ತೊಟ್ಟಿಯನ್ನ ಅದ್ರಲ್ಲಿ ತೋಡಿದ.+
ಆಮೇಲೆ ಅವನು ಒಳ್ಳೇ ದ್ರಾಕ್ಷಿ ಬೆಳೆಗಾಗಿ ಕಾಯ್ತಾ ಇದ್ದ.
ಆದ್ರೆ ಅದ್ರಲ್ಲಿ ಕಳಪೆ ದ್ರಾಕ್ಷಿ ಬಂತು.+
3 ಹಾಗಾಗಿ ನನ್ನ ಪ್ರಿಯತಮ ಹೀಗಂದ “ಯೆರೂಸಲೇಮಲ್ಲಿ ಇರೋರೇ, ಯೆಹೂದದ ಜನ್ರೇ,
ದಯವಿಟ್ಟು ನನಗೂ ನನ್ನ ದ್ರಾಕ್ಷಿತೋಟಕ್ಕೂ ನ್ಯಾಯತೀರಿಸಿ.+
ಆದ್ರೆ ಯಾಕೆ ಹೀಗಾಯ್ತು? ನಾನು ಒಳ್ಳೇ ದ್ರಾಕ್ಷಿಗಾಗಿ ಕಾಯ್ತಿದ್ದಾಗ,
ಅದ್ರಿಂದ ಯಾಕೆ ಕಳಪೆ ದ್ರಾಕ್ಷಿ ಬಂತು?
5 ನಾನು ನನ್ನ ದ್ರಾಕ್ಷಿತೋಟಕ್ಕೆ ಏನು ಮಾಡ್ತೀನಿ ಅಂತ
ಈಗ ನಿಮಗೆ ಹೇಳ್ತೀನಿ
ನಾನು ಅದ್ರ ಬೇಲಿಯನ್ನ ಕಿತ್ತು ಎಸಿತಿನಿ,
ಅದನ್ನ ಸುಟ್ಟು ಹಾಕಲಾಗುತ್ತೆ.+
ಅದ್ರ ಕಲ್ಲಿನ ಗೋಡೆಯನ್ನ ಕೆಡವಿಹಾಕ್ತೀನಿ,
ಅದನ್ನು ತುಳಿದುಹಾಕಲಾಗುತ್ತೆ.
6 ನಾನು ಅದನ್ನ ಬರಡು ಭೂಮಿಯನ್ನಾಗಿ ಮಾಡ್ತೀನಿ,+
ಅದ್ರ ಕೊಂಬೆಗಳನ್ನ ಕತ್ತರಿಸಲ್ಲ, ಅದ್ರ ಕಳೆಗಳನ್ನ ಕೀಳಲ್ಲ,
ಅದ್ರಲ್ಲಿ ಮುಳ್ಳುಪೊದೆಗಳು ಮತ್ತು ಕಳೆಗಳು ಜಾಸ್ತಿ ಬೆಳಿಯುತ್ತೆ,+
ಅದ್ರ ಮೇಲೆ ಮಳೆ ಸುರಿಸಬಾರದು ಅಂತ ನಾನು ಮೋಡಗಳಿಗೆ ಆಜ್ಞೆ ಕೊಡ್ತೀನಿ.+
7 ನಾನು ಸೈನ್ಯಗಳ ದೇವರಾದ ಯೆಹೋವ. ಇಸ್ರಾಯೇಲ್ ನನ್ನ ದ್ರಾಕ್ಷಿತೋಟ.+
ಯೆಹೂದದ ಗಂಡಸರು ನಾನು ತುಂಬ ಪ್ರೀತಿಸಿದ ದ್ರಾಕ್ಷಿಬಳ್ಳಿಗಳು.
ನಾನು ಅವ್ರಿಂದ ನ್ಯಾಯವನ್ನ ನಿರೀಕ್ಷಿಸ್ತಿದ್ದೆ,+
ಆದ್ರೆ ನೋಡಿ, ಎಲ್ಲ ಕಡೆನೂ ಅನ್ಯಾಯ ತುಂಬಿತ್ತು,
ಅವ್ರು ನೀತಿಯಿಂದ ನಡ್ಕೊಳ್ತಾರೆ ಅಂತ ನಾನು ಯೋಚಿಸಿದ್ದೆ,
ಆದ್ರೆ ಎಲ್ಲಿ ನೋಡಿದ್ರೂ ದುಃಖದ ರೋದನನೇ ಕೇಳಿಸ್ತು.”+
8 ಒಂದು ಮನೆಗೆ ಮತ್ತೊಂದು ಮನೆಯನ್ನ ಸೇರಿಸ್ತಾ ಹೋಗುವವರ ಗತಿಯನ್ನ,+
ಒಂದರ ನಂತ್ರ ಮತ್ತೊಂದು ಹೊಲವನ್ನ ವಶಮಾಡಿಕೊಳ್ತಾ ಹೋಗುವವರ ಗತಿಯನ್ನ ಏನು ಹೇಳಲಿ!+
ಬೇರೆಯವ್ರಿಗೆ ಏನೂ ಉಳಿಯದಂತಾಗೋ ತನಕ ಅವರು ತಮ್ಮ ಹೊಲವನ್ನ ವಿಸ್ತರಿಸ್ತಾ ಹೋಗ್ತಾರೆ!
ಇಡೀ ಪ್ರದೇಶಕ್ಕೆ ಅವರೊಬ್ಬರೇ ಮಾಲೀಕರಾಗಿ ಬಿಡ್ತಾರೆ.
9 ಸೈನ್ಯಗಳ ದೇವರಾದ ಯೆಹೋವ ಮಾಡಿದ ಈ ಪ್ರಮಾಣ ನನ್ನ ಕಿವಿಗೆ ಬಿತ್ತು,
ಚೆನ್ನಾಗಿರೋ, ಅಂದವಾಗಿರೋ ತುಂಬ ಮನೆಗಳು ಹಾಳುಬಿಳುತ್ತೆ,
ಅವನ್ನ ನೋಡಿ ಜನ ಹೆದರಿ ಹೋಗ್ತಾರೆ.
ಅವುಗಳಲ್ಲಿ ಯಾರೂ ವಾಸಿಸಲ್ಲ.+
11 ಮದ್ಯ ಕುಡಿಬೇಕಂತಾನೇ ಬೆಳಿಗ್ಗೆ ಬೇಗ ಏಳುವವರ ಗತಿಯನ್ನ,+
ಅಮಲೇರೋ ತನಕ ತಡರಾತ್ರಿ ತನಕ ಕುಡಿಯುವವರ ಗತಿಯನ್ನ ಏನು ಹೇಳಲಿ!
12 ಅವ್ರ ಔತಣಗಳಲ್ಲಿ ತಂತಿವಾದ್ಯ, ಸ್ವರಮಂಡಲ,
ದಮ್ಮಡಿ, ಕೊಳಲು, ದ್ರಾಕ್ಷಾಮದ್ಯ ಇವೆಲ್ಲ ಇರುತ್ತೆ,
ಆದ್ರೆ ಅವರಿಗೆ ಯೆಹೋವನ ಚಟುವಟಿಕೆಗಳು ಬೇಡ,
ಆತನ ಕೈಕೆಲಸಗಳನ್ನ ಅವರು ನೋಡಲ್ಲ.
13 ನನ್ನ ಜನ ನನ್ನ ಬಗ್ಗೆ ತಿಳ್ಕೊಂಡಿಲ್ಲ,+
ಹಾಗಾಗಿ ಅವ್ರನ್ನ ಬಂದಿಗಳಾಗಿ ಕರ್ಕೊಂಡು ಹೋಗಲಾಗುತ್ತೆ,
ಅವ್ರ ಘನವಂತರು ಹಸಿವಿಂದ ಬಳಲ್ತಾರೆ,+
ಅವ್ರ ಜನ್ರೆಲ್ಲ ಬಾಯಾರಿಕೆಯಿಂದ ದಣಿತಾರೆ.
14 ಹಾಗಾಗಿ ಸಮಾಧಿ* ತನ್ನನ್ನೇ ದೊಡ್ಡದಾಗಿ ಮಾಡ್ಕೊಂಡಿದೆ.
ಯೆರೂಸಲೇಮಿನ ದೊಡ್ಡದೊಡ್ಡ ವ್ಯಕ್ತಿಗಳನ್ನ,* ಗದ್ದಲ ಎಬ್ಬಿಸೋ ಅದ್ರ ಜನಜಂಗುಳಿಯನ್ನ, ಅಲ್ಲಿರೋ ಮೋಜುಗಾರರನ್ನ ಯಾವಾಗ ನುಂಗಲಿ ಅಂತ
ಅದು ತನ್ನ ಬಾಯನ್ನ ಅಗಲ ತೆರೆದಿದೆ.+
15 ಮನುಷ್ಯ ತಲೆ ತಗ್ಗಿಸಬೇಕಾಗುತ್ತೆ,
ಅವನನ್ನ ಅವಮಾನಿಸಲಾಗುತ್ತೆ,
ಗರ್ವಿಷ್ಠರ ತಲೆ ತಗ್ಗಬೇಕಾಗುತ್ತೆ.
16 ಸೈನ್ಯಗಳ ದೇವರಾದ ಯೆಹೋವ ತೀರ್ಪು* ನೀಡಿ ತನ್ನನ್ನೇ ಉನ್ನತಕ್ಕೆ ಏರಿಸ್ಕೊಳ್ತಾನೆ,
ಸತ್ಯವಂತನೂ ಪವಿತ್ರನೂ ಆದ ದೇವರು+ ತನ್ನ ನೀತಿಯ ಮೂಲಕ ತಾನು ಪವಿತ್ರನು ಅಂತ ತೋರಿಸ್ತಾನೆ.+
17 ಕುರಿಮರಿಗಳು ತಮ್ಮ ಸ್ವಂತ ಹುಲ್ಲುಗಾವಲಲ್ಲಿ ಮೇಯೋ ತರ ಆ ಹಾಳುಬಿದ್ದ ಸ್ಥಳದಲ್ಲಿ ಮೇಯ್ತವೆ.
ಒಂದು ಕಾಲದಲ್ಲಿ ದಷ್ಟಪುಷ್ಟ ಪ್ರಾಣಿಗಳು ಹೊಟ್ಟೆ ತುಂಬಿಸ್ಕೊಳ್ತಿದ್ದ ಜಾಗಗಳಲ್ಲಿ ಈಗ ವಿದೇಶಿಯರು ಹೊಟ್ಟೆ ತುಂಬಿಸ್ಕೊಳ್ತಾರೆ.
18 ಕಪಟದ ಹಗ್ಗಗಳಿಂದ ತಮ್ಮ ಅಪರಾಧಗಳನ್ನ,
ಬಂಡಿಯ ಹಗ್ಗಗಳಿಂದ ತಮ್ಮ ಪಾಪಗಳನ್ನ ತಮ್ಮ ಜೊತೆ ಎಳ್ಕೊಂಡು ಹೋಗುವವರ ಗತಿಯನ್ನ ಏನು ಹೇಳಲಿ!
19 “ನಾವು ನೋಡೋಕೆ ಸಾಧ್ಯವಾಗೋ ತರ
ದೇವರು ತನ್ನ ಕೆಲಸವನ್ನ ಬೇಗಬೇಗ ಮಾಡಲಿ,
ನಾವು ಅರ್ಥಮಾಡ್ಕೊಳ್ಳೋಕೆ ಆಗೋ ತರ,
ಇಸ್ರಾಯೇಲ್ಯರ ಪವಿತ್ರ ದೇವರ ಉದ್ದೇಶ* ಬೇಗ ನಿಜ ಆಗಲಿ” ಅಂತ ಹೇಳುವವರ ಗತಿಯನ್ನ ಏನು ಹೇಳಲಿ!+
20 ಒಳ್ಳೇದನ್ನ ಕೆಟ್ಟದ್ದಂತ, ಕೆಟ್ಟದ್ದನ್ನ ಒಳ್ಳೇದಂತ,+
ಕತ್ತಲನ್ನ ಬೆಳಕಂತ, ಬೆಳಕನ್ನ ಕತ್ತಲಂತ,
ಸಿಹಿಯನ್ನ ಕಹಿ ಅಂತ, ಕಹಿಯನ್ನ ಸಿಹಿ ಅಂತ ಹೇಳುವವರ ಗತಿಯನ್ನ ಏನು ಹೇಳಲಿ!
22 ದ್ರಾಕ್ಷಾಮದ್ಯ ಕುಡಿಯೋದ್ರಲ್ಲಿ ಹೆಸರುವಾಸಿ ಆಗಿರುವವರ ಗತಿಯನ್ನ,
ಮದ್ಯವನ್ನ ಮಿಶ್ರಣ ಮಾಡೋದ್ರಲ್ಲಿ ಪಾಂಡಿತ್ಯ ಸಿಕ್ಕಿರುವವರ ಗತಿಯನ್ನ ಏನು ಹೇಳಲಿ!+
23 ಲಂಚ ತಗೊಂಡು ದುಷ್ಟನನ್ನ ಬಿಡುಗಡೆ ಮಾಡುವವರ ಗತಿಯನ್ನ,+
ನೀತಿವಂತರಿಗೆ ನ್ಯಾಯ ಸಿಗದ ಹಾಗೆ ಮಾಡುವವರ ಗತಿಯನ್ನ ಏನು ಹೇಳಲಿ!+
24 ಕೂಳೆಯನ್ನ* ಬೆಂಕಿ ನುಂಗಿಹಾಕೋ ತರ
ಅಗ್ನಿಯ ತಾಪಕ್ಕೆ ಒಣಹುಲ್ಲು ಮುದುರಿ ಹೋಗೋ ತರ,
ಅವ್ರ ಬೇರುಗಳು ಕೊಳೆತು ನಾರುತ್ತೆ,
ಅವ್ರ ಹೂಗಳು ಧೂಳಿನ ತರ ಚೆದರಿಹೋಗುತ್ತೆ,
ಯಾಕಂದ್ರೆ ಅವರು ಸೈನ್ಯಗಳ ದೇವರಾದ ಯೆಹೋವನ ನಿಯಮ ಪುಸ್ತಕವನ್ನ* ಬೇಡ ಅಂದ್ರು,
ಇಸ್ರಾಯೇಲ್ಯರ ಪವಿತ್ರ ದೇವರ ಮಾತಿಗೆ ಗೌರವ ಕೊಡಲಿಲ್ಲ.+
25 ಅದಕ್ಕೇ ಯೆಹೋವನ ಕೋಪ ಆತನ ಜನ್ರ ಮೇಲೆ ಹೊತ್ತಿ ಉರಿಯುತ್ತೆ,
ಆತನು ಅವ್ರ ವಿರುದ್ಧ ತನ್ನ ಕೈ ಎತ್ತಿ ಅವ್ರನ್ನ ಶಿಕ್ಷಿಸ್ತಾನೆ.+
ಬೆಟ್ಟಗಳು ಕಂಪಿಸುತ್ತೆ,
ಅವ್ರ ಶವಗಳು ಬೀದಿಬೀದಿಗಳಲ್ಲಿ ಕಸದ ತರ ಬಿದ್ದಿರುತ್ತೆ,+
ಇಷ್ಟೆಲ್ಲ ಆದ್ರೂ ಆತನ ಕೋಪ ತಣ್ಣಗಾಗಲ್ಲ,
ಅವ್ರನ್ನ ಶಿಕ್ಷಿಸೋಕೆ ಆತನು ತನ್ನ ಕೈ ಎತ್ತುತ್ತಾನೆ.
26 ದೂರದ ಜನಾಂಗದ ಜನ್ರನ್ನ ಕರೆಯೋಕೆ ಆತನು ಧ್ವಜ* ಎತ್ತಿ ನಿಲ್ಲಿಸಿದ್ದಾನೆ,+
ಆತನು ಸೀಟಿ ಹೊಡೆದು ಭೂಮಿಯ ಮೂಲೆಮೂಲೆಯಿಂದ ಆ ಜನ್ರನ್ನ ಕರೆದಿದ್ದಾನೆ,+
ಇಗೋ! ಅವರು ಶರವೇಗದಲ್ಲಿ ಬರ್ತಿದ್ದಾರೆ.+
27 ಅವ್ರಲ್ಲಿ ಯಾರೂ ದಣಿದು ಹೋಗಲಿಲ್ಲ, ಎಡವಿ ಬೀಳಲಿಲ್ಲ,
ಯಾರೂ ತೂಕಡಿಸಲಿಲ್ಲ, ನಿದ್ದೆ ಮಾಡಲೂ ಇಲ್ಲ.
ಸೊಂಟಕ್ಕೆ ಬಿಗಿದಿದ್ದ ಅವರ ಸೊಂಟಪಟ್ಟಿ ಸಡಿಲ ಆಗಲಿಲ್ಲ,
ಅವ್ರ ಚಪ್ಪಲಿಯ ಬಾರುಗಳು ಕಿತ್ತುಹೋಗಲಿಲ್ಲ.
28 ಅವ್ರ ಬಾಣಗಳೆಲ್ಲ ಚೂಪಾಗಿವೆ,
ಅವ್ರ ಬಿಲ್ಲುಗಳೆಲ್ಲ ಬಾಗಿವೆ.*
ಅವ್ರ ಕುದುರೆಗಳ ಗೊರಸುಗಳು ಗಡಸು ಕಲ್ಲುಗಳ ತರ ಗಟ್ಟಿಯಾಗಿವೆ,
ಅವ್ರ ರಥದ ಚಕ್ರಗಳು ಬಿರುಗಾಳಿ ತರ ರಭಸವಾಗಿ ಓಡ್ತವೆ.+
ಅವರು ಗುರ್ರೆನ್ನುತ್ತಾ ತಮ್ಮ ಬೇಟೆಯ ಮೇಲೆ ಬಿದ್ದು ಅದನ್ನ ಹಿಡಿತಾರೆ.
ಅವ್ರ ಕೈಯಿಂದ ಯಾರೂ ಅದನ್ನ ಬಿಡಿಸೋಕಾಗಲ್ಲ.
30 ಸಮುದ್ರ ಭೋರ್ಗರೆಯೋ ತರ ಆ ದಿನ ಅವರು
ತಮ್ಮ ಬೇಟೆಯ ಮೇಲೆ ಗುರುಗುಟ್ಟುತ್ತಾರೆ.+
ಆ ದೇಶವನ್ನ ಯಾರೆಲ್ಲ ನೋಡ್ತಾರೋ
ಅವ್ರೆಲ್ಲರಿಗೂ ಅಂಧಕಾರ ಮತ್ತು ಸಂಕಟ ಬರುತ್ತೆ.
ಮೋಡಗಳು ಕವಿದಿರೋ ಕಾರಣ ಬೆಳಕು ಕೂಡ ಕತ್ತಲಾಗಿಬಿಡುತ್ತೆ.+