ಇಬ್ರಿಯರಿಗೆ ಬರೆದ ಪತ್ರ
9 ಆ ಮೊದಲ್ನೇ ಒಪ್ಪಂದದಲ್ಲಿ ಪವಿತ್ರ ಸೇವೆ ಹೇಗೆ ಮಾಡಬೇಕು ಅನ್ನೋ ನಿಯಮಗಳಿದ್ವು. ಭೂಮಿಯಲ್ಲಿ ಆರಾಧನೆಗಾಗಿ ಒಂದು ಪವಿತ್ರ ಸ್ಥಳ ಇತ್ತು.+ 2 ಆ ಡೇರೆಯಲ್ಲಿ ಎರಡು ಭಾಗಗಳಿದ್ವು. ಮೊದಲ ಭಾಗದ ಹೆಸ್ರು “ಪವಿತ್ರ ಸ್ಥಳ.”+ ಆ ಭಾಗದಲ್ಲಿ ದೀಪಸ್ತಂಭ,+ ಮೇಜು, ಅರ್ಪಣೆಯ ರೊಟ್ಟಿಗಳು ಇದ್ವು.+ 3 ಎರಡ್ನೇ ಪರದೆ ಹಿಂದೆ+ ಇದ್ದ ಇನ್ನೊಂದು ಭಾಗದ ಹೆಸ್ರು “ಅತಿ ಪವಿತ್ರ ಸ್ಥಳ.”+ 4 ಅದ್ರಲ್ಲಿ ಚಿನ್ನದ ಧೂಪಪಾತ್ರೆ,+ ಒಪ್ಪಂದದ ಮಂಜೂಷ ಇತ್ತು.+ ಆ ಮಂಜೂಷವನ್ನ ಪೂರ್ತಿ ಚಿನ್ನದ ತಗಡಿಂದ ಹೊದಿಸಿದ್ರು.+ ಅದ್ರೊಳಗೆ ಮನ್ನ ಇದ್ದ ಚಿನ್ನದ ಪಾತ್ರೆ,+ ಆರೋನನ ಚಿಗುರಿದ ಕೋಲು+ ಮತ್ತು ಒಪ್ಪಂದದ ಮಾತುಗಳಿದ್ದ ಕಲ್ಲಿನ ಹಲಗೆಗಳು+ ಇದ್ವು. 5 ಮಂಜೂಷದ ಮೇಲೆ ಹೊಳಿತಿದ್ದ ಕೆರೂಬಿಯರನ್ನ ಮಾಡಿದ್ರು.+ ಅವ್ರ ರೆಕ್ಕೆಗಳು ಮುಚ್ಚಳವನ್ನ* ಮುಚ್ಚಿದ್ದವು. ಆದ್ರೆ ಈ ವಿಷ್ಯವನ್ನೆಲ್ಲ ಹೇಳೋಕೆ ಇದು ಸಮಯವಲ್ಲ.
6 ಇವನ್ನೆಲ್ಲ ಮಾಡಿ ಆದ್ಮೇಲೆ ಪುರೋಹಿತ ಪವಿತ್ರ ಸೇವೆ ಮಾಡೋಕೆ ದಿನಾ ಡೇರೆಯ ಮೊದಲ್ನೆ ಭಾಗದ ಒಳಗೆ ಹೋಗ್ತಿದ್ದ.+ 7 ಆದ್ರೆ ಎರಡ್ನೇ ಭಾಗದ ಒಳಗೆ ಮಹಾ ಪುರೋಹಿತ ಮಾತ್ರ ವರ್ಷಕ್ಕೆ ಒಂದು ಸಲ ಹೋಗ್ತಿದ್ದ.+ ಆಗ ಅವನು ರಕ್ತ ತಗೊಂಡು ಹೋಗಬೇಕಿತ್ತು.+ ಆ ರಕ್ತ ತನಗಾಗಿ+ ಮತ್ತು ಜನ್ರು+ ಗೊತ್ತಿಲ್ದೇ ಮಾಡಿದ ಪಾಪಕ್ಕಾಗಿ ಅರ್ಪಿಸ್ತಿದ್ದ. 8 ಈ ತರ, ಮೊದಲ್ನೇ ಡೇರೆ* ಇರೋ ತನಕ ಪವಿತ್ರ ಸ್ಥಳಕ್ಕೆ* ಹೋಗೋ ದಾರಿ ತೆರಿಲಿಲ್ಲ ಅಂತ ಪವಿತ್ರಶಕ್ತಿ ಸ್ಪಷ್ಟವಾಗಿ ತೋರಿಸ್ತು.+ 9 ಆ ಡೇರೆ ನಮ್ಮ ಸಮಯಕ್ಕೆ ಒಂದು ಗುರುತಾಗಿದೆ.*+ ಇದು, ಒಬ್ಬ ವ್ಯಕ್ತಿ ಕೊಡ್ತಿದ್ದ* ಉಡುಗೊರೆ ಮತ್ತು ಬಲಿಗಳು+ ಅವನಿಗೆ ಶುದ್ಧ ಮನಸಾಕ್ಷಿ ಕೊಡಲಿಲ್ಲ ಅನ್ನೋದನ್ನ ತೋರಿಸುತ್ತೆ.+ 10 ಅವು ಕೇವಲ ತಿನ್ನೋ ಕುಡಿಯೋ ವಿಷ್ಯಕ್ಕೆ, ಶುದ್ಧಮಾಡೋ ಬೇರೆ ಬೇರೆ ವಿಧಾನಗಳಿಗೆ* ಸಂಬಂಧಿಸಿವೆ.+ ಅವು ದೇಹಕ್ಕೆ ಸಂಬಂಧಪಟ್ಟ ನಿಯಮಗಳಾಗಿದ್ವು+ ಮತ್ತು ಎಲ್ಲ ಸರಿಮಾಡೋ ಸಮಯದ ತನಕ ಜಾರಿಯಲ್ಲಿದ್ವು.
11 ಆದ್ರೆ ಕ್ರಿಸ್ತ ಆಶೀರ್ವಾದಗಳನ್ನ ತರೋಕೆ ಮಹಾ ಪುರೋಹಿತನಾದ. ಆ ಆಶೀರ್ವಾದಗಳನ್ನ ಈಗಾಗ್ಲೇ ನಾವು ಪಡ್ಕೊಂಡಿದ್ದೀವಿ. ಕೈಯಿಂದ ಕಟ್ಟಿದ ಅಂದ್ರೆ ಈ ಭೂಮಿಯಲ್ಲಿರೋ ಡೇರೆಯೊಳಗೆ ಆತನು ಹೋಗದೆ ಅದಕ್ಕಿಂತ ಅತಿ ಶ್ರೇಷ್ಠವಾದ, ಹೆಚ್ಚು ಪರಿಪೂರ್ಣವಾದ ಡೇರೆಯೊಳಗೆ ಹೋದ. 12 ಆತನು ಆಡು ಹೋರಿಗಳ ರಕ್ತವನ್ನಲ್ಲ, ತನ್ನ ರಕ್ತವನ್ನೇ+ ತಗೊಂಡು ಎಲ್ಲ ಕಾಲಕ್ಕೂ ಸೇರಿಸಿ ಒಂದೇ ಸಲ ಪವಿತ್ರ ಸ್ಥಳದ ಒಳಗೆ ಹೋದ ಮತ್ತು ನಮ್ಮನ್ನ ಶಾಶ್ವತವಾಗಿ ಬಿಡುಗಡೆ ಮಾಡಿದ.+ 13 ಆಡು ಹೋರಿಗಳ ರಕ್ತ+ ಮತ್ತು ಎಳೇ ಹಸುವಿನ* ಬೂದಿ ಅಶುದ್ಧರನ್ನ ಶುದ್ಧ ಮಾಡ್ತಿತ್ತು,+ ಪವಿತ್ರ ಮಾಡ್ತಿತ್ತು. 14 ಹಾಗಾದ್ರೆ ಕ್ರಿಸ್ತನ ರಕ್ತ ಅದಕ್ಕಿಂತ ಜಾಸ್ತಿನೇ ಮಾಡುತ್ತೆ ಅಲ್ವಾ?+ ಆತನು ಯಾವಾಗ್ಲೂ ಇರೋ ಪವಿತ್ರಶಕ್ತಿ ಮೂಲಕ ತನ್ನನ್ನ ಯಾವ ದೋಷನೂ ಇಲ್ಲದ ಬಲಿಯಾಗಿ ದೇವರಿಗೆ ಕೊಟ್ಟ. ಆತನ ರಕ್ತ ನಮ್ಮ ಮನಸ್ಸಾಕ್ಷಿಗಳನ್ನ ಶುದ್ಧಮಾಡುತ್ತೆ ಮತ್ತು ನಾವು ವ್ಯರ್ಥ* ಕೆಲಸಗಳನ್ನ+ ಇನ್ಯಾವತ್ತೂ ಮಾಡಲ್ಲ. ಹಾಗಾಗಿ ಜೀವ ಇರೋ ದೇವ್ರಿಗೆ ಪವಿತ್ರ ಸೇವೆ ಮಾಡೋಕೆ ನಮ್ಮಿಂದ ಆಗುತ್ತೆ.+
15 ಅದಕ್ಕೇ ಕ್ರಿಸ್ತ ಒಂದು ಹೊಸ ಒಪ್ಪಂದಕ್ಕೆ ಮಧ್ಯಸ್ಥನಾಗಿದ್ದಾನೆ.+ ಆತನು ಸತ್ತು ನಮ್ಮೆಲ್ಲರಿಗೋಸ್ಕರ ಬಿಡುಗಡೆ ಬೆಲೆ ಕೊಟ್ಟಿದ್ದಾನೆ.+ ಇದ್ರಿಂದ, ದೇವರು ಯಾರನ್ನೆಲ್ಲ ಕರೆದಿದ್ದಾನೋ ಅವ್ರಿಗೆಲ್ಲ ಹಳೇ ಒಪ್ಪಂದದ ಕೆಳಗೆ ಮಾಡಿದ ಪಾಪಗಳಿಂದ ಬಿಡುಗಡೆ ಸಿಗುತ್ತೆ. ಅಷ್ಟೇ ಅಲ್ಲ, ದೇವರು ಮಾತು ಕೊಟ್ಟ ಶಾಶ್ವತ ಜೀವನನೂ ಅವ್ರಿಗೆ ಸಿಗುತ್ತೆ.+ 16 ಸಾಮಾನ್ಯವಾಗಿ ಒಂದು ಒಪ್ಪಂದ ಆದಾಗ ಒಪ್ಪಂದ ಮಾಡಿದ ವ್ಯಕ್ತಿ ಸಾಯಬೇಕು. 17 ಯಾಕಂದ್ರೆ ಒಪ್ಪಂದ ಮಾಡಿದ ವ್ಯಕ್ತಿ ಜೀವದಿಂದ ಇರೋ ತನಕ ಆ ಒಪ್ಪಂದ ಜಾರಿಗೆ ಬರಲ್ಲ, ಅದು ಅವನು ಸತ್ತಾಗ್ಲೇ ಜಾರಿಗೆ ಬರುತ್ತೆ. 18 ಹಾಗಾಗಿ ಹಳೇ ಒಪ್ಪಂದ ರಕ್ತದಿಂದಾನೇ ಜಾರಿಗೆ ಬಂತು. 19 ಮೋಶೆ ನಿಯಮ ಪುಸ್ತಕದಲ್ಲಿರೋ ಎಲ್ಲ ಆಜ್ಞೆಗಳನ್ನ ಎಲ್ಲ ಜನ್ರಿಗೆ ಓದಿ ಹೇಳಿದ ಮೇಲೆ ನೀರು, ಕೆಂಪು ಉಣ್ಣೆ, ಹಿಸ್ಸೋಪ್ ಕಡ್ಡಿಯ ಜೊತೆ ಆಡು ಹೋರಿಗಳ ರಕ್ತ ತಗೊಂಡು ಒಪ್ಪಂದ ಪುಸ್ತಕದ* ಮೇಲೆ ಮತ್ತು ಎಲ್ಲ ಜನ್ರ ಮೇಲೆ ಚಿಮಿಕಿಸಿದ. 20 “ದೇವರ ಜೊತೆ ಮಾಡಿದ ಒಪ್ಪಂದವನ್ನ ಈ ರಕ್ತ ಜಾರಿಗೆ ತರುತ್ತೆ. ನೀವು ಈ ಒಪ್ಪಂದ ಪಾಲಿಸಬೇಕಂತ ಆತನು ಆಜ್ಞೆ ಕೊಟ್ಟಿದ್ದಾನೆ” ಅಂತ ಹೇಳಿದ.+ 21 ಅಷ್ಟೇ ಅಲ್ಲ ಅವನು ಡೇರೆ ಮೇಲೆ, ಪವಿತ್ರ ಸೇವೆಯಲ್ಲಿ* ಬಳಸೋ ಎಲ್ಲ ಪಾತ್ರೆಗಳ ಮೇಲೆ ಆ ರಕ್ತವನ್ನ ಚಿಮಿಕಿಸಿದ.+ 22 ಹೌದು, ನಿಯಮ ಪುಸ್ತಕದ ಪ್ರಕಾರ ಹೆಚ್ಚುಕಮ್ಮಿ ಎಲ್ಲ ವಿಷ್ಯಗಳು ರಕ್ತದಿಂದ ಶುದ್ಧ ಆಗುತ್ತೆ+ ಮತ್ತು ರಕ್ತ ಸುರಿಸದೆ ಇದ್ರೆ ಕ್ಷಮೆ ಸಿಗಲ್ಲ.+
23 ಹಾಗಾಗಿ ಸ್ವರ್ಗದಲ್ಲಿರೋ ವಿಷ್ಯಗಳನ್ನ ಪ್ರತಿಬಿಂಬಿಸೋದನ್ನ+ ಪ್ರಾಣಿ ಬಲಿ ಕೊಟ್ಟು ಶುದ್ಧ ಮಾಡಬೇಕಿತ್ತು.+ ಆದ್ರೆ ಸ್ವರ್ಗದಲ್ಲಿರೋ ವಿಷ್ಯಗಳನ್ನ ಶುದ್ಧ ಮಾಡೋಕೆ ಆ ಬಲಿಗಳಿಗಿಂತ ಶ್ರೇಷ್ಠ ಬಲಿ ಬೇಕು. 24 ಯಾಕಂದ್ರೆ ಮನುಷ್ಯರು ಕೈಯಿಂದ ಕಟ್ಟಿದ ಪವಿತ್ರ ಸ್ಥಳಕ್ಕೆ ಕ್ರಿಸ್ತ ಹೋಗಲಿಲ್ಲ.+ ಅದು ನಿಜ ಪವಿತ್ರ ಸ್ಥಳದ ನಕಲಾಗಿತ್ತಷ್ಟೇ.+ ಆತನು ಸ್ವರ್ಗಕ್ಕೆ ಹೋದ.+ ನಮಗಾಗಿ ಆತನೀಗ ದೇವರ ಮುಂದೆ ಇದ್ದಾನೆ.+ 25 ಮಹಾ ಪುರೋಹಿತ ಪವಿತ್ರ ಸ್ಥಳದ ಒಳಗೆ ತನ್ನ ರಕ್ತವನ್ನಲ್ಲ, ಪ್ರಾಣಿ ರಕ್ತ ತಗೊಂಡು ಪ್ರತಿ ವರ್ಷ+ ಹೋದ ಹಾಗೆ ಕ್ರಿಸ್ತ ತನ್ನನ್ನೇ ಪದೇ ಪದೇ ಬಲಿಯಾಗಿ ಅರ್ಪಿಸಲಿಲ್ಲ. 26 ಹಾಗೇನಾದ್ರೂ ಆತನು ತನ್ನನ್ನೇ ಪದೇ ಪದೇ ಅರ್ಪಿಸಬೇಕಾಗಿದ್ರೆ ಲೋಕ ಶುರು ಆದಾಗಿಂದ ಆತನು ಎಷ್ಟೋ ಸಲ ಕಷ್ಟ ಪಡಬೇಕಾಗಿತ್ತು. ಆದ್ರೆ ಆತನು ತನ್ನನ್ನ ಬಲಿಯಾಗಿ ಅರ್ಪಿಸಿ ಪಾಪ ತೆಗೆದುಹಾಕೋಕೆ ಲೋಕದಲ್ಲಿ* ಒಂದೇ ಒಂದು ಸಲ ಕಾಣಿಸ್ಕೊಂಡಿದ್ದಾನೆ.+ 27 ಮನುಷ್ಯರಿಗೆ ಸಾವು ಒಂದು ಸಲ ಬರುತ್ತೆ. ಆಮೇಲೆ ಅವ್ರಿಗೆ ತೀರ್ಪು ಆಗುತ್ತೆ. 28 ಅದೇ ತರ ಕ್ರಿಸ್ತ ತುಂಬ ಜನ್ರ ಪಾಪಗಳನ್ನ ಹೊತ್ಕೊಳ್ಳೋಕೆ ಒಂದೇ ಒಂದು ಸಲ ತನ್ನನ್ನ ಅರ್ಪಿಸಿದ.+ ಆತನು ಎರಡ್ನೇ ಸಲ ಬರೋದು ಪಾಪ ತೆಗೆದುಹಾಕೋಕೆ ಅಲ್ಲ, ತನಗೋಸ್ಕರ ಕಾತುರದಿಂದ ಕಾಯ್ತಿರೋ ಜನ್ರನ್ನ ರಕ್ಷಿಸೋಕೆ ಬರ್ತಾನೆ.+