ತಿಮೊತಿಗೆ ಬರೆದ ಮೊದಲನೇ ಪತ್ರ
5 ವಯಸ್ಸಾದವ್ರ ಜೊತೆ ಒರಟಾಗಿ ಮಾತಾಡಬೇಡ.+ ಅವ್ರನ್ನ ನಿನ್ನ ಅಪ್ಪ ಅಂತ ನೆನಸಿ ಪ್ರೀತಿಯಿಂದ ಮಾತಾಡು. ಯುವಕರನ್ನ ಅಣ್ಣತಮ್ಮಂದಿರ ತರ, 2 ವಯಸ್ಸಾಗಿರೋ ಸ್ತ್ರೀಯರನ್ನ ಅಮ್ಮನ ತರ, ಯುವತಿಯರನ್ನ ಅಕ್ಕತಂಗಿ ತರ ನೆನಸಿ ಪೂರ್ತಿ ಶುದ್ಧಮನಸ್ಸಿಂದ ಅವ್ರ ಜೊತೆ ಮಾತಾಡು.
3 ಯಾರೂ ಇಲ್ಲದ* ವಿಧವೆಯರಿಗೆ ಕಾಳಜಿ ತೋರಿಸು.*+ 4 ಆದ್ರೆ ಒಬ್ಬ ವಿಧವೆಗೆ ಮಕ್ಕಳು, ಮೊಮ್ಮಕ್ಕಳು ಇದ್ರೆ ಮೊದ್ಲು ಅವರು ತಮ್ಮ ಕುಟುಂಬದವ್ರನ್ನ ನೋಡ್ಕೊಳ್ಳಲಿ. ಹೀಗೆ ದೇವರ ಮೇಲೆ ಭಕ್ತಿಯಿದೆ ಅಂತ ತೋರಿಸೋಕೆ ಕಲೀಲಿ.+ ಅವರು ತಮ್ಮ ಅಪ್ಪಅಮ್ಮಗೆ, ಅಜ್ಜಅಜ್ಜಿಗೆ ಮಾಡಬೇಕಾದ ಕರ್ತವ್ಯ ಮಾಡ್ಲಿ.+ ಇದನ್ನ ದೇವರು ಮೆಚ್ತಾನೆ.+ 5 ಯಾರೂ ಇಲ್ಲದ, ಏನೂ ಇಲ್ಲದ* ಒಬ್ಬ ವಿಧವೆ ದೇವರ ಮೇಲೆ ಭರವಸೆ ಇಟ್ಟು+ ಹಗಲೂರಾತ್ರಿ ಅಂಗಲಾಚಿ ಬೇಡ್ತಾ ಪ್ರಾರ್ಥಿಸ್ತಾ ಇರ್ತಾಳೆ.+ 6 ಆದ್ರೆ ತನ್ನ ಆಸೆಗಳನ್ನ* ತೀರಿಸ್ಕೊಳ್ಳೋಕೆ ಮಾತ್ರ ಬಯಸೋ ವಿಧವೆ ಬದುಕಿದ್ರೂ ಸತ್ತ ಹಾಗೆ. 7 ಹಾಗಾಗಿ ಯಾರೂ ಅವ್ರಿಗೆ ಬೆರಳು ತೋರಿಸಿ ಮಾತಾಡದ ಹಾಗೆ ನೀನು ಈ ನಿರ್ದೇಶನಗಳನ್ನ* ಕೊಡ್ತಾ ಇರು. 8 ಯಾರಾದ್ರೂ ತನ್ನವ್ರಿಗೆ, ಅದ್ರಲ್ಲೂ ತನ್ನ ಕುಟುಂಬದವ್ರಿಗೆ ಅಗತ್ಯ ಇರೋದನ್ನ ಕೊಡದಿದ್ರೆ ಅವನು ನಂಬಿಕೆ ಬಿಟ್ಟವನಿಗಿಂತ, ನಂಬಿಕೆ ಇಲ್ಲದವನಿಗಿಂತ ಮೋಸವಾಗಿ ಇದ್ದಾನೆ.+
9 ವಿಧವೆಯರಲ್ಲಿ 60 ವರ್ಷಕ್ಕಿಂತ ಜಾಸ್ತಿ ವಯಸ್ಸಾಗಿರುವವ್ರ ಹೆಸ್ರನ್ನ ಪಟ್ಟಿಯಲ್ಲಿ ಸೇರಿಸಬೇಕು. ಅವಳಿಗೆ ಈ ಮುಂಚೆ ಒಬ್ಬನೇ ಗಂಡ ಇರಬೇಕು.* 10 ಅಷ್ಟೇ ಅಲ್ಲ, ಅವಳಿಗೆ ಒಳ್ಳೇ ಕೆಲಸಗಳನ್ನ ಮಾಡಿರೋ ಸ್ತ್ರೀ ಅನ್ನೋ ಹೆಸ್ರಿರಬೇಕು.+ ಉದಾಹರಣೆಗೆ ಮಕ್ಕಳನ್ನ ಚೆನ್ನಾಗಿ ಬೆಳೆಸಿದವಳು,+ ಬೇರೆಯವ್ರನ್ನ ಸತ್ಕರಿಸಿದವಳು,+ ಪವಿತ್ರ ಜನ್ರ ಕಾಲು ತೊಳೆದವಳು,+ ಕಷ್ಟದಲ್ಲಿ ಇರುವವ್ರಿಗೆ ಸಹಾಯ ಮಾಡಿದವಳು,+ ಈ ತರ ಎಲ್ಲ ಒಳ್ಳೇ ಕೆಲಸ ಮಾಡೋಕೆ ಕಷ್ಟಪಟ್ಟವಳು ಆಗಿರಬೇಕು.
11 ಆದ್ರೆ ಯುವ ವಿಧವೆಯರನ್ನ ಪಟ್ಟಿಯಲ್ಲಿ ಸೇರಿಸಬೇಡ. ಯಾಕಂದ್ರೆ ಕ್ರಿಸ್ತನ ಸೇವೆಗೆ ಅವ್ರ ಲೈಂಗಿಕ ಆಸೆಗಳು ಅಡ್ಡಿ ಬಂದಾಗ ಅವರು ಮದುವೆ ಆಗೋಕೆ ಇಷ್ಟಪಡ್ತಾರೆ. 12 ಅವರು ಮೊದ್ಲು ಹೇಳಿದ ಮಾತಿನ* ಪ್ರಕಾರ ನಡೀದೆ ಇದ್ರೆ ಅವ್ರ ಹೆಸ್ರು ಹಾಳಾಗುತ್ತೆ. 13 ಅಷ್ಟೇ ಅಲ್ಲ, ಕೆಲಸ ಮಾಡ್ದೆ ಸೋಮಾರಿಯಾಗಿ ಅವ್ರ-ಇವ್ರ ಮನೆಗೆ ತಿರುಗ್ತಾ, ಹರಟೆ ಹೊಡೀತಾ ಬೇರೆಯವ್ರ ವಿಷ್ಯದಲ್ಲಿ ತಲೆಹಾಕ್ತಾ+ ಮಾತಾಡಬಾರದ ವಿಷ್ಯಗಳನ್ನೆಲ್ಲ ಮಾತಾಡಬಹುದು. 14 ಹಾಗಾಗಿ ಯುವ ವಿಧವೆಯರು ಮದುವೆಯಾಗಿ+ ಮಕ್ಕಳನ್ನ ಹೆತ್ತು+ ಮನೆಮಂದಿಯನ್ನ ನೋಡ್ಕೊಬೇಕಂತ ಬಯಸ್ತೀನಿ. ಹಾಗೆ ಮಾಡಿದ್ರೆ ಟೀಕಿಸಿ ಮಾತಾಡೋಕೆ ವಿರೋಧಿಗಳಿಗೆ ಅವಕಾಶ ಸಿಗಲ್ಲ. 15 ಹೇಳಬೇಕಂದ್ರೆ ಕೆಲವು ವಿಧವೆಯರು ಈಗಾಗ್ಲೇ ಸತ್ಯ ಬಿಟ್ಟು ಸೈತಾನನ ಹಿಂದೆ ಹೋಗಿದ್ದಾರೆ. 16 ಒಬ್ಬ ಕ್ರೈಸ್ತ ಸ್ತ್ರೀಯ ಕುಟುಂಬದಲ್ಲಿ ವಿಧವೆ ಇದ್ರೆ ಅವಳನ್ನ ಆ ಸ್ತ್ರೀ ನೋಡ್ಕೊಳ್ಳಲಿ. ಇದ್ರಿಂದ ಸಭೆ ಮೇಲೆ ಆ ಭಾರ ಬೀಳಲ್ಲ. ಆಗ ದಿಕ್ಕಿಲ್ಲದ* ಬೇರೆ ವಿಧವೆಯರಿಗೆ ಸಹಾಯ ಮಾಡೋಕೆ ಸಭೆಗೆ ಆಗುತ್ತೆ.+
17 ಸಭೆಯನ್ನ ಚೆನ್ನಾಗಿ ನೋಡ್ಕೊಳ್ಳೋ+ ಅದ್ರಲ್ಲೂ ದೇವರ ಸಂದೇಶದ ಬಗ್ಗೆ ಮಾತಾಡೋದ್ರಲ್ಲಿ, ಕಲಿಸೋದ್ರಲ್ಲಿ ಶ್ರಮ ಹಾಕೋ ಹಿರಿಯರಿಗೆ+ ತುಂಬ ಗೌರವ ಕೊಡಬೇಕು.+ 18 “ಹೋರಿ ಕಣ ತುಳಿವಾಗ ಧಾನ್ಯ ತಿನ್ನುತ್ತೆ ಅಂತ ಅದ್ರ ಬಾಯಿ ಕಟ್ಟಬಾರದು”+ ಮತ್ತು “ಕೆಲಸಗಾರನಿಗೆ ಕೂಲಿ ಸಿಗ್ಲೇಬೇಕು”+ ಅಂತ ವಚನ ಹೇಳುತ್ತೆ. 19 ಯಾರಾದ್ರೂ ಒಬ್ಬ ಹಿರಿಯನ ಮೇಲೆ ಆರೋಪ ಹಾಕಿದ್ರೆ ಎರಡು ಮೂರು ಸಾಕ್ಷಿ ಸಿಗೋ ತನಕ ಅದನ್ನ ನಂಬಬೇಡ.+ 20 ಪಾಪ ಮಾಡ್ತಾ ಇರುವವನನ್ನ+ ಎಲ್ರ* ಮುಂದೆ ತಿದ್ದು.+ ಆಗ ಬೇರೆಯವ್ರಿಗೂ ಎಚ್ಚರಿಕೆ ಸಿಗುತ್ತೆ.* 21 ವಿಚಾರಣೆ ಮಾಡೋ ಮುಂಚೆ ತೀರ್ಮಾನ ಮಾಡದೆ, ಪಕ್ಷಪಾತ ಮಾಡದೆ ನೀನು ಈ ನಿರ್ದೇಶನಗಳನ್ನ ಪಾಲಿಸು.+ ಈ ಆಜ್ಞೆಯನ್ನ ದೇವರ, ಕ್ರಿಸ್ತ ಯೇಸುವಿನ ಮತ್ತು ಆರಿಸ್ಕೊಂಡಿರೋ ದೇವದೂತರ ಮುಂದೆ ನಾನು ಕೊಡ್ತೀನಿ.
22 ಯಾರ ಮೇಲೂ ನಿನ್ನ ಕೈಗಳನ್ನಿಟ್ಟು ಅವಸರದಿಂದ ನೇಮಿಸಬೇಡ.+ ಬೇರೆಯವ್ರ ಪಾಪದಲ್ಲಿ ಪಾಲು ತಗೊಬೇಡ. ನಿನ್ನ ನಡತೆ ಯಾವಾಗ್ಲೂ ಶುದ್ಧವಾಗಿರಲಿ.
23 ಇನ್ಮೇಲೆ ನೀನು ಬರೀ ನೀರು ಕುಡಿಬೇಡ. ಆಗಾಗ ನಿನಗೆ ಹುಷಾರಿಲ್ದೆ ಇರೋದ್ರಿಂದ ನಿನ್ನ ಹೊಟ್ಟೆಗೋಸ್ಕರ ಸ್ವಲ್ಪ ದ್ರಾಕ್ಷಾಮದ್ಯ ಕುಡಿ.
24 ಸ್ವಲ್ಪ ಜನ್ರ ಪಾಪಗಳು ಎಲ್ರಿಗೆ ಗೊತ್ತಾಗುತ್ತೆ ಮತ್ತು ತಕ್ಷಣ ಅವ್ರಿಗೆ ಶಿಕ್ಷೆ ಸಿಗುತ್ತೆ. ಆದ್ರೆ ಸ್ವಲ್ಪ ಜನ್ರ ಪಾಪ ನಿಧಾನವಾಗಿ ಬೆಳಕಿಗೆ ಬರುತ್ತೆ.+ 25 ಅದೇ ರೀತಿ ಒಳ್ಳೇ ಕೆಲಸಗಳೂ ಎಲ್ರಿಗೆ ಗೊತ್ತಾಗುತ್ತೆ,+ ಆದ್ರೆ ಬೇರೆಯವ್ರಿಗೆ ಗೊತ್ತಾಗದಿರೋ ಒಳ್ಳೇ ಕೆಲಸಗಳನ್ನ ಮುಚ್ಚಿಡೋಕೆ ಆಗಲ್ಲ.+