ಯೆಶಾಯ
25 ಯೆಹೋವನೇ, ನೀನು ನನ್ನ ದೇವರು.
ನಾನು ನಿನ್ನನ್ನ ಗೌರವಿಸ್ತೀನಿ, ನಿನ್ನ ಹೆಸ್ರನ್ನ ಹೊಗಳ್ತೀನಿ,
ಯಾಕಂದ್ರೆ ನೀನು ಅದ್ಭುತ ಕೆಲಸಗಳನ್ನ ಮಾಡಿದ್ದೀಯ,+
ಆ ಕೆಲಸಗಳನ್ನ ಮಾಡಬೇಕಂತ ನೀನು ಪುರಾತನ ಕಾಲದಲ್ಲೇ ಯೋಜನೆ ಮಾಡ್ಕೊಂಡಿದ್ದೆ.+
ಅವನ್ನ ನಿಜ ಮಾಡಿ ನೀನು ನಂಬಿಗಸ್ತನು,+ ಭರವಸೆಗೆ ಯೋಗ್ಯನು ಅಂತ ತೋರಿಸ್ಕೊಟ್ಟೆ.
2 ನೀನು ಪಟ್ಟಣವನ್ನ ಕಲ್ಲಿನ ರಾಶಿಯನ್ನಾಗಿ ಮಾಡ್ದೆ,
ಭದ್ರಕೋಟೆಯನ್ನ ಹಾಳುಮಾಡ್ದೆ.
ವಿದೇಶಿಯರ ಪಟ್ಟಣ ಇನ್ಮುಂದೆ ಪಟ್ಟಣವಾಗಿ ಉಳಿಯಲ್ಲ,
ಅದನ್ನ ಮುಂದೆಂದೂ ಮತ್ತೆ ಕಟ್ಟಲ್ಲ.
4 ಬಿರುಗಾಳಿಯ ಮಳೆ ಗೋಡೆ ಮೇಲೆ ಸುರಿಯೋ ತರ ಕ್ರೂರ ಜನ್ರ ಕೋಪ ಎದುರಾದಾಗ
ನೀನು ದೀನರಿಗೆ ಭದ್ರಕೋಟೆ ಆದೆ,
ಕಡು ಕಷ್ಟದಲ್ಲಿರೋ ಬಡವರಿಗೆ ನೀನು ಭದ್ರಕೋಟೆ ಆದೆ,+
ಬಿರುಗಾಳಿಯ ಮಳೆಯಿಂದ ತಪ್ಪಿಸ್ಕೊಳ್ಳೋಕೆ ಒಂದು ಆಶ್ರಯ ಆದೆ,
ಸೂರ್ಯನ ಶಾಖದಿಂದ ತಪ್ಪಿಸ್ಕೊಳ್ಳೋಕೆ ಒಂದು ನೆರಳಾದೆ.+
5 ಬತ್ತಿ ಹೋದ ಪ್ರದೇಶದ ಕಾವನ್ನ ಆರಿಸೋ ತರ
ಅಪರಿಚಿತರ ಕೋಲಾಹಲವನ್ನ ಅಡಗಿಸ್ತೀಯ.
ಮೋಡದ ನೆರಳು ಸೆಕೆಯನ್ನ ಕಮ್ಮಿ ಮಾಡೋ ತರ,
ಕ್ರೂರ ಜನರ ಗೀತೆಯನ್ನ ನಿಶಬ್ದಗೊಳಿಸ್ತೀಯ.
6 ಈ ಬೆಟ್ಟದಲ್ಲಿ+ ಸೈನ್ಯಗಳ ದೇವರಾದ ಯೆಹೋವ ಎಲ್ಲ ಜನಾಂಗಗಳಿಗಾಗಿ,
ರುಚಿಯಾದ ಆಹಾರ ಪದಾರ್ಥಗಳ ಔತಣವನ್ನ,+
ಅತ್ಯುತ್ತಮ ದ್ರಾಕ್ಷಾಮದ್ಯದ* ಔತಣವನ್ನ ಮಾಡಿಸ್ತಾನೆ,
ಒಳ್ಳೇ ಗುಣಮಟ್ಟದ ಮಾಂಸವನ್ನ,*
ಸೋಸಿದ ಶ್ರೇಷ್ಠ ದ್ರಾಕ್ಷಾಮದ್ಯವನ್ನ ಏರ್ಪಡಿಸ್ತಾನೆ.
7 ಈ ಬೆಟ್ಟದಲ್ಲಿ ಜನಾಂಗಗಳ ಜನ್ರ ಮೇಲೆ ಮುಚ್ಚಲಾಗಿರೋ ಮುಸುಕನ್ನ,
ಜನಾಂಗಗಳನ್ನೆಲ್ಲ ಸುತ್ತುವರಿದಿರೋ ಬಟ್ಟೆಯನ್ನ ಆತನು ನಿಜವಾಗ್ಲೂ ತೆಗೆದುಬಿಡ್ತಾನೆ.*
ಆತನು ತನ್ನ ಜನ್ರ ಮೇಲಿರೋ ಆರೋಪವನ್ನ ಭೂಮಿಯಿಂದ ತೆಗೆದುಹಾಕ್ತಾನೆ,
ಯಾಕಂದ್ರೆ ಈ ಮಾತನ್ನ ಸ್ವತಃ ಯೆಹೋವನೇ ಹೇಳಿದ್ದಾನೆ.
ಈತನೇ ಯೆಹೋವ!
ಈತನಲ್ಲೇ ನಾವು ನಿರೀಕ್ಷೆ ಇಟ್ಟಿದ್ದೀವಿ.
ಸಂಭ್ರಮಿಸೋಣ, ಉಲ್ಲಾಸಿಸೋಣ. ಯಾಕಂದ್ರೆ ಈತನು ನಮ್ಮನ್ನ ರಕ್ಷಿಸ್ತಿದ್ದಾನೆ.”+
10 ಯೆಹೋವನ ಕೈ ಈ ಬೆಟ್ಟದ ಮೇಲೆ ಇರುತ್ತೆ,+
ಒಣಹುಲ್ಲನ್ನ ತಿಪ್ಪೆ ರಾಶಿಯಲ್ಲಿ ತುಳಿಯೋ ತರ+
ಮೋವಾಬನ್ನ ಅದ್ರ ಸ್ಥಳದಲ್ಲೇ ತುಳಿದು ಹಾಕಲಾಗುತ್ತೆ.
11 ಈಜುಗಾರ ಈಜೋಕೆ ತನ್ನ ಕೈ ಹೊಡೆಯೋ ತರ,
ಆತನು ತನ್ನ ಕೈ ಚಾಚಿ ಮೋವಾಬನ್ನ ಹೊಡಿತಾನೆ,
ಆತನು ತನ್ನ ಕೈಯನ್ನ ಹೇಗೆ ನಿಪುಣತೆಯಿಂದ ಆಡಿಸ್ತಾನಂದ್ರೆ
ಅದ್ರ ಅಹಂಕಾರವನ್ನ ತಗ್ಗಿಸಿಬಿಡ್ತಾನೆ.+
12 ನಿನ್ನ ದೊಡ್ಡದೊಡ್ಡ ರಕ್ಷಣೆಯ ಗೋಡೆಗಳ ಜೊತೆ ಭದ್ರಕೋಟೆ ಇರೋ ಪಟ್ಟಣವನ್ನ
ಆತನು ಕೆಳಗೆ ಉರುಳಿಸ್ತಾನೆ,
ಅದನ್ನ ನೆಲಸಮ ಮಾಡಿ, ಮಣ್ಣಲ್ಲಿ ಮಣ್ಣಾಗೋ ತರ ಮಾಡ್ತಾನೆ.