ಯೆಶಾಯ
ನಾನು ನಿನ್ನ ಸಂತತಿ ಮೇಲೆ ಪವಿತ್ರ ಶಕ್ತಿಯನ್ನ,+
ನಿನ್ನ ವಂಶದವರ ಮೇಲೆ ನನ್ನ ಆಶೀರ್ವಾದವನ್ನ ಸುರಿಸ್ತೀನಿ.
5 ಒಬ್ಬ “ನಾನು ಯೆಹೋವನಿಗೆ ಸೇರಿದವನು”+ ಅಂತ ಹೇಳ್ತಾನೆ.
ಇನ್ನೊಬ್ಬ ತನಗೆ ತಾನೇ ಯಾಕೋಬ ಅಂತ ಹೆಸ್ರಿಟ್ಕೊಳ್ತಾನೆ,
ಮತ್ತೊಬ್ಬ ತನ್ನ ಕೈ ಮೇಲೆ “ನಾನು ಯೆಹೋವನಿಗೆ ಸೇರಿದವನು” ಅಂತ ಬರೆದ್ಕೊಳ್ತಾನೆ.
ಅವನು ಇಸ್ರಾಯೇಲ್ ಅನ್ನೋ ಹೆಸ್ರನ್ನ ತನ್ನದಾಗಿಸ್ಕೊಳ್ತಾನೆ.’
6 ಸೈನ್ಯಗಳ ದೇವರಾದ ಯೆಹೋವ ಹೀಗೆ ಅಂತಿದ್ದಾನೆ,
ಇಸ್ರಾಯೇಲಿನ ರಾಜನೂ+ ಅವನನ್ನ ಬಿಡಿಸಿದವನೂ+ ಆದ ಯೆಹೋವ ಹೀಗೆ ಹೇಳ್ತಿದ್ದಾನೆ
‘ನಾನೇ ಮೊದಲನೆಯವನು, ನಾನೇ ಕೊನೆಯವನು.+
ನಾನಲ್ಲದೆ ಬೇರೆ ಯಾವ ದೇವರೂ ಇಲ್ಲ.+
ಒಂದುವೇಳೆ ಇದ್ರೆ ಅವನು ಧೈರ್ಯವಾಗಿ ಮಾತಾಡಲಿ, ಬಂದು ಅದ್ರ ಬಗ್ಗೆ ಹೇಳಲಿ, ನನ್ನ ಮುಂದೆ ಅದನ್ನ ನಿರೂಪಿಸಲಿ!+
ಜನ್ರನ್ನ ಅಸ್ತಿತ್ವಕ್ಕೆ ತಂದ ಸಮ್ಯದಿಂದ ನಾನು ಮಾಡ್ತಾ ಬಂದಿರೋ ವಿಷ್ಯಗಳ ಬಗ್ಗೆ ಅವನು ಹೇಳಲಿ,
ಹತ್ರದಲ್ಲೇ ಆಗಲಿರೋ ವಿಷ್ಯಗಳ ಬಗ್ಗೆ,
ಜೊತೆಗೆ ಮುಂದೆ ಭವಿಷ್ಯತ್ತಿನಲ್ಲಿ ಆಗಲಿರೋ ವಿಷ್ಯಗಳ ಬಗ್ಗೆ ತಿಳಿಸಲಿ.
ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಾನು ಈಗಾಗಲೇ ಇದನ್ನ ಹೇಳಿರಲಿಲ್ವಾ? ಇದ್ರ ಬಗ್ಗೆ ಪ್ರಕಟಿಸಿರಲಿಲ್ವಾ?
ನೀವು ನನ್ನ ಸಾಕ್ಷಿಗಳು.+
ನನ್ನನ್ನ ಬಿಟ್ಟು ಬೇರೆ ದೇವರಿದ್ದಾನಾ?
ಇಲ್ಲ, ನನ್ನನ್ನ ಬಿಟ್ಟು ಬೇರೆ ಯಾವ ಬಂಡೆನೂ ನಿಮ್ಮನ್ನ ರಕ್ಷಿಸಲ್ಲ,+ ಅಂಥವರು ಯಾರೂ ನಂಗೊತ್ತಿಲ್ಲ.’”
ಅವು ಸಾಕ್ಷಿ ಹೇಳೋಕ್ಕಾಗಲ್ಲ. ಯಾಕಂದ್ರೆ ಅವು* ಏನೂ ನೋಡಲ್ಲ, ಅವುಗಳಿಗೆ ಏನೂ ಗೊತ್ತಿಲ್ಲ,+
ಹಾಗಾಗಿ ಅವುಗಳನ್ನ ಮಾಡಿದವರು ಅವಮಾನಕ್ಕೆ ಗುರಿಯಾಗ್ತಾರೆ.+
10 ಯಾವುದೇ ಪ್ರಯೋಜನವಿಲ್ಲದ ದೇವರನ್ನ ಯಾರಾದ್ರೂ ರೂಪಿಸ್ತಾರಾ?
ಅಚ್ಚಲ್ಲಿ ಹೊಯ್ದ ನಿಷ್ಪ್ರಯೋಜಕ ಮೂರ್ತಿಯನ್ನ ಯಾರಾದ್ರೂ ತಯಾರು ಮಾಡ್ತಾರಾ?+
11 ಇಗೋ! ಅವನ ಜೊತೆಗಾರರೆಲ್ಲ ಅವಮಾನಕ್ಕೆ ಗುರಿಯಾಗ್ತಾರೆ!+
ಕರಕುಶಲಗಾರರು ಕೇವಲ ಮಾನವರು.
ಅವ್ರೆಲ್ಲ ಸಭೆ ಸೇರಲಿ ಮತ್ತು ಮುಂದೆ ಬರಲಿ.
ಅವ್ರೆಲ್ಲ ಹೆದರಿ ಹೋಗ್ತಾರೆ, ನಾಚಿಕೆಗೆ ಈಡಾಗ್ತಾರೆ.
12 ಕಮ್ಮಾರ ತನ್ನ ಸಲಕರಣೆಗಳನ್ನ ಕೈಗೆತ್ಕೊಳ್ತಾನೆ,
ಕಬ್ಬಿಣವನ್ನ ಕೆಂಡದಲ್ಲಿ ಕಾಯಿಸ್ತಾನೆ,
ತನ್ನೆಲ್ಲ ಶಕ್ತಿಯನ್ನ ಬಳಸಿ ಸುತ್ತಿಗೆಯಿಂದ ಹೊಡೆದು ಅದಕ್ಕೊಂದು ಆಕಾರ ಕೊಡ್ತಾನೆ.+
ಆಮೇಲೆ ಅವನಿಗೆ ಹಸಿವಾಗುತ್ತೆ, ಅವನ ಶಕ್ತಿ ಕುಂದಿಹೋಗುತ್ತೆ,
ನೀರನ್ನ ಕುಡಿದೆ ಇರೋದ್ರಿಂದ ಅವನಿಗೆ ದಣಿವಾಗುತ್ತೆ.
13 ಬಡಗಿಯೊಬ್ಬ ಅಳೆಯೋ ದಾರದಿಂದ ಮರವನ್ನ ಅಳೆದು, ಕೆಂಪು ಸೀಮೆಸುಣ್ಣದಿಂದ ಅದರ ಮೇಲೆ ಒಂದು ನಮೂನೆಯನ್ನ ಮಾಡ್ಕೊಳ್ತಾನೆ.
ಉಳಿಯಿಂದ ಅದನ್ನ ಕೆತ್ತಿ, ಕೈವಾರದಿಂದ ಅದು ಸರಿ ಇದ್ಯಾ ಅಂತ ನೋಡ್ತಿರ್ತಾನೆ.
14 ದೇವದಾರು ಮರ ಕಡಿಯೋ ವ್ಯಕ್ತಿ,
ಒಂದು ವಿಶೇಷ ಮರವನ್ನ ಅಂದ್ರೆ ಒಂದು ಓಕ್ ಮರವನ್ನ ಆರಿಸ್ಕೊಳ್ತಾನೆ,
ಕಾಡಲ್ಲಿರೋ ಬೇರೆ ಮರಗಳ ಮಧ್ಯ ಅದು ಚೆನ್ನಾಗಿ ಬೆಳೆಯೋಕೆ ಬಿಡ್ತಾನೆ.+
ಅವನು ಇನ್ನೊಂದು ಮರವನ್ನೂ* ನೆಡ್ತಾನೆ, ಮಳೆ ನೀರಲ್ಲಿ ಅದು ಚೆನ್ನಾಗಿ ಬೆಳೆಯುತ್ತೆ.
15 ಆಮೇಲೆ ಅದು ಆ ವ್ಯಕ್ತಿಗೆ ಬೆಂಕಿಗಾಗಿ ಒಲೆಯಲ್ಲಿಡೋ ಕಟ್ಟಿಗೆಯಾಗುತ್ತೆ.
ಅದ್ರ ಕೆಲವು ಕಟ್ಟಿಗೆಗಳಿಂದ ಅವನು ಚಳಿಕಾಯಿಸ್ಕೊಳ್ತಾನೆ,
ಬೆಂಕಿ ಹೊತ್ತಿಸಿ, ತನಗಾಗಿ ರೊಟ್ಟಿ ಸುಡ್ತಾನೆ.
ಅವನು ಅದ್ರಿಂದ ಒಂದು ದೇವರನ್ನ ಸಹ ಮಾಡ್ಕೊಳ್ತಾನೆ ಮತ್ತು ಅದನ್ನ ಪೂಜಿಸ್ತಾನೆ.
ಒಂದು ಮೂರ್ತಿ ಕೆತ್ತಿ ಅದಕ್ಕೆ ಬಾಗಿ ನಮಸ್ಕರಿಸ್ತಾನೆ.+
16 ಅವನು ಆ ಮರದ ಅರ್ಧ ಭಾಗವನ್ನ ಸೌದೆಗಾಗಿ ಬಳಸ್ತಾನೆ,
ತಾನು ತಿನ್ನೋ ಮಾಂಸವನ್ನ ಅದ್ರಿಂದ ಸುಟ್ಟು ತಿಂತಾನೆ, ತಿಂದು ತೃಪ್ತನಾಗ್ತಾನೆ.
ಅಷ್ಟೇ ಅಲ್ಲ ಅದ್ರಿಂದ ಚಳಿಕಾಯಿಸ್ಕೊಳ್ತಾ
“ಆಹಾ! ಈ ಬೆಂಕಿ ಎಷ್ಟು ಚೆನ್ನಾಗಿದೆ” ಅಂತಾನೆ.
17 ಉಳಿದ ಅರ್ಧಭಾಗದಿಂದ ಅವನು ತನಗಾಗಿ ಒಂದು ದೇವರನ್ನ ಅಂದ್ರೆ ಒಂದು ಕೆತ್ತಿದ ಮೂರ್ತಿಯನ್ನ ಮಾಡ್ಕೊಳ್ತಾನೆ.
ಅದಕ್ಕೆ ಬಾಗಿ ನಮಸ್ಕರಿಸ್ತಾನೆ, ಅದನ್ನ ಪೂಜಿಸ್ತಾನೆ.
ಅದಕ್ಕೆ ಪ್ರಾರ್ಥಿಸ್ತಾ
“ನನ್ನನ್ನ ಕಾಪಾಡು. ಯಾಕಂದ್ರೆ ನೀನೇ ನನ್ನ ದೇವರು” ಅಂತ ಅದಕ್ಕೆ ಹೇಳ್ತಾನೆ.+
ಅವುಗಳಿಗೆ* ತಿಳುವಳಿಕೆ ಅನ್ನೋದೇ ಇಲ್ಲ.
19 ಅವುಗಳನ್ನ ಮಾಡುವವ್ರಿಗೆ ಜ್ಞಾನವಾಗಲಿ, ತಿಳುವಳಿಕೆಯಾಗಲಿ ಇಲ್ಲ.
ಅವರು ತಮ್ಮ ಮನಸ್ಸಲ್ಲಿ* ಹೀಗೆ ಅಂದ್ಕೊಳ್ಳಲ್ಲ:
“ನಾನು ಅರ್ಧ ಕಟ್ಟಿಗೆಯನ್ನ ಸೌದೆಗಾಗಿ ಬಳಸಿದೆ,
ಅದ್ರ ಕೆಂಡದ ಮೇಲೆನೇ ತಿನ್ನೋಕೆ ರೊಟ್ಟಿಯನ್ನ, ಮಾಂಸವನ್ನ ಸುಟ್ಟೆ.
ಇಷ್ಟೆಲ್ಲ ಮಾಡಿ, ಉಳಿದ ಕಟ್ಟಿಗೆಯಿಂದ ನಾನು ಅಸಹ್ಯವಾದದ್ದನ್ನ ಮಾಡ್ಬೇಕಾ?+
ಅದೇ ಕಟ್ಟಿಗೆಗೆ* ನಾನು ಅಡ್ಡಬೀಳಬೇಕಾ?”
20 ಅವನು ಬೂದಿ ತಿನ್ನುವವನ ತರ ಇದ್ದಾನೆ.
ಮೋಸಹೋದ ಅವನ ಹೃದಯ ಅವನನ್ನ ದಾರಿತಪ್ಪಿಸಿದೆ.
ಅವನು ತನ್ನನ್ನ ತಾನೇ ಕಾಪಾಡ್ಕೊಳ್ಳೋಕಾಗಲ್ಲ,
“ನನ್ನ ಬಲಗೈಯಲ್ಲಿರೋ ವಸ್ತು ನಿಷ್ಪ್ರಯೋಜಕ” ಅಂತ ತನ್ನಲ್ಲಿ ತಾನೇ ಒಪ್ಕೊಳ್ಳೋದೂ ಇಲ್ಲ.
21 “ಯಾಕೋಬನೇ, ಇಸ್ರಾಯೇಲೇ, ಈ ವಿಷ್ಯಗಳನ್ನ ನೆನಪಿಸ್ಕೊ,
ಯಾಕಂದ್ರೆ ನೀನು ನನ್ನ ಸೇವಕ.
ನಾನು ನಿನ್ನನ್ನ ಸೃಷ್ಟಿಸಿದೆ, ನೀನು ನನ್ನ ಸೇವಕ.+
ಇಸ್ರಾಯೇಲೇ, ನಾನು ನಿನ್ನನ್ನ ಮರೆಯಲ್ಲ.+
ನನ್ನ ಹತ್ರ ವಾಪಸ್ ಬಾ. ಯಾಕಂದ್ರೆ ನಾನು ನಿನ್ನನ್ನ ಬಿಡಿಸ್ತೀನಿ.+
23 ಆಕಾಶವೇ, ಹರ್ಷಧ್ವನಿಗೈ,
ಯಾಕಂದ್ರೆ ಯೆಹೋವ ಇದನ್ನ ಮಾಡಿದ್ದಾನೆ!
ಭೂಮಿಯೇ, ಗೆಲುವಿನ ಸಂಭ್ರಮವನ್ನ ಆಚರಿಸು!
ಬೆಟ್ಟಗಳೇ, ಅರಣ್ಯವೇ, ಅದ್ರಲ್ಲಿರೋ ಎಲ್ಲ ಮರಗಳೇ
ಸಂತೋಷದಿಂದ ಜೈಕಾರ ಹಾಕಿ!+
ಯಾಕಂದ್ರೆ ಯೆಹೋವ ಯಾಕೋಬನನ್ನ ಬಿಡಿಸಿದ್ದಾನೆ.
ಇಸ್ರಾಯೇಲಲ್ಲಿ ತನ್ನ ವೈಭವವನ್ನ ತೋರಿಸ್ತಾನೆ.”+
24 ನೀನು ಗರ್ಭದಲ್ಲಿರುವಾಗಲೇ ನಿನ್ನನ್ನ ರೂಪಿಸಿ,
ನಿನ್ನನ್ನ ಬಿಡುಗಡೆ ಮಾಡಿದ ಯೆಹೋವ+ ಹೀಗೆ ಹೇಳ್ತಿದ್ದಾನೆ
“ನಾನು ಯೆಹೋವ, ಎಲ್ಲವನ್ನೂ ಸೃಷ್ಟಿಸಿದವನು.
ಆಗ ನನ್ನ ಜೊತೆ ಯಾರಿದ್ರು?
25 ವ್ಯರ್ಥ ಮಾತುಗಳನ್ನಾಡುವವ್ರ* ಅದ್ಭುತಗಳನ್ನ ನಾನು ನಿಷ್ಫಲಗೊಳಿಸ್ತೀನಿ,
ಕಣಿಹೇಳುವವರು ಮೂರ್ಖರ ಹಾಗೆ ವರ್ತಿಸೋ ತರ ಮಾಡುವವನು ನಾನೇ.+
ವಿವೇಕಿಗಳ ಜ್ಞಾನವನ್ನ ಹುಚ್ಚುತನವನ್ನಾಗಿ ಮಾಡಿ
ಅವ್ರನ್ನ ಅವಮಾನಕ್ಕೆ ಗುರಿ ಮಾಡುವವನು ನಾನೇ.+
ಯೆರೂಸಲೇಮಿನ ಬಗ್ಗೆ ‘ಈ ಪಟ್ಟಣದಲ್ಲಿ ಜನ ವಾಸಿಸ್ತಾರೆ’ ಅಂತ ಹೇಳುವವನು,+
ಯೆಹೂದದ ಪಟ್ಟಣಗಳ ಬಗ್ಗೆ ‘ಅವುಗಳನ್ನ ಮತ್ತೆ ಕಟ್ಟಲಾಗುತ್ತೆ,+
ಅವುಗಳಲ್ಲಿ ಹಾಳಾಗಿ ಹೋದವುಗಳನ್ನ ನಾನು ಮತ್ತೆ ಸ್ಥಾಪಿಸ್ತೀನಿ’ ಅಂತ ಹೇಳುವವನು ನಾನೇ.+
28 ಕೋರೆಷನ+ ಬಗ್ಗೆ ‘ಇವನು ನನ್ನ ಮಂದೆಯನ್ನ ಕಾಯೋ ಕುರುಬ,
ಇವನು ನನ್ನ ಪ್ರತಿಯೊಂದು ಆಸೆಯನ್ನ ನಿಜ ಮಾಡ್ತಾನೆ’ ಅಂತ ಹೇಳುವವನು ನಾನೇ.+
ಯೆರೂಸಲೇಮ್ ಪಟ್ಟಣದ ಬಗ್ಗೆ ‘ಅದನ್ನ ಮತ್ತೆ ಕಟ್ಟಲಾಗುತ್ತೆ’ ಅಂತ ಹೇಳುವವನು
ದೇವಾಲಯದ ಬಗ್ಗೆ ‘ನಿನ್ನ ಅಡಿಪಾಯವನ್ನ ಹಾಕಲಾಗುತ್ತೆ’ ಅಂತ ಹೇಳುವವನು ನಾನೇ.”+