ಪ್ರಸಂಗಿ
5 ಸತ್ಯ ದೇವರ ಆಲಯಕ್ಕೆ ಹೋದಾಗೆಲ್ಲ ನೀನು ಜಾಗ್ರತೆಯಿಂದ ನಡ್ಕೊ.+ ಮೂರ್ಖರ ತರ ಬಲಿ ಅರ್ಪಿಸೋಕೆ ಹೋಗೋದಕ್ಕಿಂತ+ ಅಲ್ಲಿ ಹೇಳೋದನ್ನ ಕೇಳಿಸ್ಕೊಳ್ಳೋಕೆ ಹೋಗೋದು ಉತ್ತಮ.+ ಯಾಕಂದ್ರೆ ಮೂರ್ಖರಿಗೆ ತಾವು ಮಾಡ್ತಿರೋದು ಕೆಟ್ಟದು ಅಂತ ಗೊತ್ತಿಲ್ಲ.
2 ಸತ್ಯ ದೇವರ ಮುಂದೆ ನೀನು ಬಾಯಿಗೆ ಬಂದಿದ್ದೆಲ್ಲ ಹೇಳಬೇಡ, ದುಡುಕಿ ಮಾತಾಡ್ಲೂಬೇಡ.+ ಯಾಕಂದ್ರೆ ಸತ್ಯ ದೇವರು ಸ್ವರ್ಗದಲ್ಲಿ ಇದ್ದಾನೆ, ಆದ್ರೆ ನೀನು ಭೂಮಿಯಲ್ಲಿ ಇದ್ದೀಯ. ಹಾಗಾಗಿ ನಿನ್ನ ಮಾತು ಮಿತವಾಗಿ ಇರಬೇಕು.+ 3 ತಲೆತುಂಬಾ ಚಿಂತೆ ಇರುವವನಿಗೆ* ನೆಮ್ಮದಿ ಕೆಡಿಸೋ ಕನಸು ಬೀಳುತ್ತೆ.*+ ವಟವಟ ಅಂತ ಮಾತಾಡ್ತಿದ್ರೆ ಮೂರ್ಖತನದಿಂದ ಮಾತಾಡ್ತಿದ್ದಾನೆ ಅಂತ ಗೊತ್ತಾಗುತ್ತೆ.+ 4 ನೀನು ದೇವ್ರಿಗೆ ಹರಕೆ ಹೊತ್ರೆ ಅದನ್ನ ತೀರಿಸೋಕೆ ತಡಮಾಡಬೇಡ.+ ಯಾಕಂದ್ರೆ ಹರಕೆ ತೀರಿಸದ ಮೂರ್ಖರನ್ನ ಆತನು ಇಷ್ಟಪಡಲ್ಲ.+ ನಿನ್ನ ಹರಕೆ ತೀರಿಸು.+ 5 ಹರಕೆ ಹೊತ್ತು ಅದನ್ನ ತೀರಿಸದೇ ಇರೋದಕ್ಕಿಂತ ಹರಕೆ ಮಾಡದೇ ಇರೋದೇ ಒಳ್ಳೇದು.+ 6 ನಿನ್ನ ಬಾಯಿ ನಿನ್ನನ್ನ ಪಾಪಕ್ಕೆ ಸಿಕ್ಕಿಸದ ಹಾಗೆ ನೋಡ್ಕೊ.+ ‘ಬಾಯಿತಪ್ಪಿ ಹೇಳಿಬಿಟ್ಟೆ’ ಅಂತ ದೇವದೂತನ* ಮುಂದೆ ಹೇಳಬೇಡ.+ ನೀನಾಡಿದ ಮಾತುಗಳಿಂದಾಗಿ ಸತ್ಯ ದೇವರಿಗೆ ಕೋಪಬಂದು ನೀನು ಮಾಡಿದ ಕೆಲಸನ್ನೆಲ್ಲ ನಾಶಮಾಡೋ ಪರಿಸ್ಥಿತಿ ಯಾಕೆ ಬರಬೇಕು?+ 7 ತುಂಬ ಚಿಂತೆ ಇರುವವನಿಗೆ* ನೆಮ್ಮದಿ ಕೆಡಿಸೋ ಕನಸುಗಳು ಬೀಳೋ* ಹಾಗೇ+ ತುಂಬ ಮಾತುಗಳನ್ನ ಆಡೋದ್ರಿಂದ ಏನೂ ಪ್ರಯೋಜನ ಇಲ್ಲ. ಹಾಗಾಗಿ ಸತ್ಯ ದೇವರಿಗೆ ಭಯಪಡು.+
8 ನಿನ್ನ ಪ್ರದೇಶದಲ್ಲಿ ದೊಡ್ಡ ಅಧಿಕಾರಿಯೊಬ್ಬ ಬಡವನ ಮೇಲೆ ದಬ್ಬಾಳಿಕೆ ಮಾಡ್ತಿದ್ರೆ, ನೀತಿನ್ಯಾಯ ಮೀರಿ ನಡಿತಿದ್ರೆ ಆಶ್ಚರ್ಯ ಪಡಬೇಡ.+ ಯಾಕಂದ್ರೆ ಅವನಿಗಿಂತ ಮೇಲಿರೋ ಅಧಿಕಾರಿ ಅವನನ್ನ ಗಮನಿಸ್ತಾ ಇರ್ತಾನೆ. ಅವರಿಬ್ರ ಮೇಲೆ ಇನ್ನೂ ದೊಡ್ಡ ಅಧಿಕಾರಿಗಳು ಇದ್ದಾರೆ.
9 ಭೂಮಿಯ ಹುಟ್ಟುವಳಿಯನ್ನ ಎಲ್ರೂ ಪಾಲು ಮಾಡ್ಕೊಳ್ತಾರೆ. ರಾಜನ ಹೊಟ್ಟೆ ತುಂಬೋದು ಕೂಡ ಹೊಲದ ಬೆಳೆಯಿಂದಾನೇ.+
10 ಹಣದ* ವ್ಯಾಮೋಹ ಇರುವವನಿಗೆ ತನ್ನ ಹತ್ರ ಎಷ್ಟೇ ಹಣ ಇದ್ರೂ ತೃಪ್ತಿ ಆಗಲ್ಲ. ಸಂಪತ್ತಿನ ಮೋಹ ಇರುವವನಿಗೆ ಎಷ್ಟೇ ಆದಾಯ ಇದ್ರೂ ತೃಪ್ತಿ ಆಗಲ್ಲ.+ ಇದೂ ವ್ಯರ್ಥ.+
11 ಸೊತ್ತು ಹೆಚ್ಚಾದಾಗ ಅವುಗಳನ್ನ ತಿನ್ನುವವರೂ ಹೆಚ್ಚಾಗ್ತಾರೆ.+ ಅವುಗಳನ್ನ ಕಣ್ಣಿಂದ ನೋಡೋದು ಬಿಟ್ರೆ ಯಜಮಾನನಿಗೆ ಬೇರೆ ಯಾವ ಪ್ರಯೋಜನನೂ ಇಲ್ಲ.+
12 ದುಡಿಯುವವನು ಸ್ವಲ್ಪಾನೇ ಊಟ ಮಾಡ್ಲಿ ಜಾಸ್ತಿನೇ ಮಾಡ್ಲಿ ಹಾಯಾಗಿ ನಿದ್ದೆ ಮಾಡ್ತಾನೆ. ಆದ್ರೆ ಶ್ರೀಮಂತನಿಗೆ ತುಂಬ ಸಂಪತ್ತು ಇರೋದ್ರಿಂದ ನಿದ್ದೆ ಬರಲ್ಲ.
13 ಭೂಮಿ ಮೇಲೆ* ನಾನು ಅತಿ ದುರಂತಕರವಾದ ಒಂದು ವಿಷ್ಯ ನೋಡಿದ್ದೀನಿ. ಅದೇನಂದ್ರೆ ಐಶ್ವರ್ಯ ಕೂಡಿಸಿಟ್ಟವನಿಗೆ ಆ ಐಶ್ವರ್ಯದಿಂದಾನೇ ಹಾನಿಯಾಗುತ್ತೆ. 14 ಅವನು ವ್ಯಾಪಾರದಲ್ಲಿ ತೊಡಗಿ ಕೈ ಸುಟ್ಕೊಂಡು ತನ್ನ ಐಶ್ವರ್ಯನೆಲ್ಲಾ ಕಳ್ಕೊಳ್ತಾನೆ. ಅವನಿಗೊಬ್ಬ ಮಗ ಹುಟ್ಟಿದ್ರೆ ಆ ಮಗನಿಗೆ ಕೊಡೋಕೂ ಅವನ ಹತ್ರ ಏನೂ ಉಳಿದಿರಲ್ಲ.+
15 ಒಬ್ಬನು ತಾಯಿ ಗರ್ಭದಿಂದ ಬರುವಾಗ ಹೇಗೆ ಏನೂ ತಗೊಂಡು ಬರಲ್ವೋ ಹಾಗೇ ಹೋಗುವಾಗ್ಲೂ ಏನೂ ತಗೊಂಡು ಹೋಗಲ್ಲ.+ ಕಷ್ಟಪಟ್ಟು ದುಡಿದ ಆಸ್ತಿಯಲ್ಲಿ ಏನನ್ನೂ ಅವನು ಸತ್ತಾಗ ಹೊತ್ಕೊಂಡು ಹೋಗೋಕೆ ಆಗಲ್ಲ.+
16 ಅತಿ ದುರಂತಕರವಾದ ವಿಷ್ಯ ಇನ್ನೊಂದಿದೆ. ಅದೇನಂದ್ರೆ ಮನುಷ್ಯ ಬಂದ ಹಾಗೇ ಹೋಗಿಬಿಡ್ತಾನೆ. ಅಂದ್ಮೇಲೆ ಗಾಳಿ ಹಿಡಿಯೋಕೆ ತುಂಬ ಕಷ್ಟಪಟ್ಟು ಕೆಲಸ ಮಾಡೋದ್ರಿಂದ ಅವನಿಗೇನು ಪ್ರಯೋಜನ?+ 17 ಅಷ್ಟೇ ಅಲ್ಲ ಪ್ರತಿದಿನಾನೂ ಅವನು ಕತ್ತಲೆಯಲ್ಲಿ, ಬಹಳ ಹತಾಶೆಯಿಂದ, ಕೋಪದಿಂದ, ಕಾಯಿಲೆಯಿಂದ ಊಟ ಮಾಡ್ತಾನೆ.+
18 ನಾನು ನೋಡಿರೋ ಪ್ರಕಾರ ಒಬ್ಬ ಮಾಡಬೇಕಾದ ಒಳ್ಳೇ ಮತ್ತು ಸರಿಯಾದ ವಿಷ್ಯ ಒಂದಿದೆ. ಅದು ಯಾವುದಂದ್ರೆ ಸತ್ಯ ದೇವರು ಅವನಿಗೆ ಕೊಟ್ಟಿರೋ ಕೆಲವೇ ದಿನಗಳ ಬದುಕಲ್ಲಿ ತಿಂದು ಕುಡಿದು ಭೂಮಿ ಮೇಲಿನ ತನ್ನೆಲ್ಲ ಶ್ರಮದ ಕೆಲಸದಲ್ಲಿ ಸಂತೋಷ ಕಾಣೋದೇ.+ ಯಾಕಂದ್ರೆ ಅದೇ ಅವನಿಗೆ ಸಿಗೋ ಪ್ರತಿಫಲ.+ 19 ಅಷ್ಟೇ ಅಲ್ಲ ಸತ್ಯ ದೇವರು ಒಬ್ಬನಿಗೆ ಐಶ್ವರ್ಯವನ್ನೂ ಸ್ವತ್ತನ್ನೂ ಕೊಟ್ಟು+ ಅದನ್ನ ಆನಂದಿಸೋ ಸಾಮರ್ಥ್ಯ ಕೊಟ್ಟಿರುವಾಗ ಅವನು ಅವುಗಳನ್ನ ಸ್ವೀಕರಿಸಿ ತನ್ನ ಶ್ರಮದ ಕೆಲಸದಲ್ಲಿ ಸಂತೋಷ ಕಂಡುಕೊಳ್ಳಬೇಕು. ಇದು ದೇವರ ಉಡುಗೊರೆ.+ 20 ಹೀಗೆ ಸತ್ಯ ದೇವರು ಅವನನ್ನ ಹರ್ಷಾನಂದದಲ್ಲಿ ತಲ್ಲೀನನಾಗಿರೋ ತರ+ ಮಾಡಿರೋದ್ರಿಂದ ಅವನಿಗೆ ತನ್ನ ನಾಲ್ಕು ದಿನದ ಬದುಕಿನ ಕಷ್ಟಗಳು ಗಮನಕ್ಕೇ ಬರಲ್ಲ.