ಕೊರಿಂಥದವರಿಗೆ ಬರೆದ ಮೊದಲನೇ ಪತ್ರ
8 ಈಗ ಮೂರ್ತಿಗಳಿಗೆ ಅರ್ಪಿಸಿದ ಪ್ರಸಾದದ ಬಗ್ಗೆ ಮಾತಾಡ್ತೀನಿ.+ ಇದ್ರ ಬಗ್ಗೆ ನಮಗೆಲ್ರಿಗೂ ಸ್ವಲ್ಪ ಜ್ಞಾನ ಇದೆ.+ ಸಾಮಾನ್ಯವಾಗಿ ಜ್ಞಾನ ಗರ್ವದಿಂದ ಉಬ್ಬೋ ತರ ಮಾಡುತ್ತೆ, ಆದ್ರೆ ಪ್ರೀತಿ ಬಲಪಡಿಸುತ್ತೆ.+ 2 ಒಂದು ವಿಷ್ಯದ ಬಗ್ಗೆ ತುಂಬ ಚೆನ್ನಾಗಿ ಗೊತ್ತು ಅಂತ ಒಬ್ಬ ಅಂದ್ಕೊಂಡ್ರೂ ಅದ್ರ ಬಗ್ಗೆ ಅವನಿಗೆ ಪೂರ್ತಿ ಗೊತ್ತಿರಲ್ಲ. 3 ಆದ್ರೆ ಒಬ್ಬನು ದೇವರನ್ನ ಪ್ರೀತಿಸಿದ್ರೆ ದೇವರಿಗೆ ಅವನ ಬಗ್ಗೆ ಗೊತ್ತಿರುತ್ತೆ.
4 ಮೂರ್ತಿಗಳಿಗೆ ಅರ್ಪಿಸಿದ ಪ್ರಸಾದದ ಬಗ್ಗೆ ಈಗ ಹೇಳ್ತೀನಿ. ಮೂರ್ತಿ ಏನೂ ಅಲ್ಲ,+ ದೇವರು ಒಬ್ಬನೇ, ಆತನನ್ನ ಬಿಟ್ಟು ಬೇರೆ ದೇವರಿಲ್ಲ+ ಅಂತ ನಮಗೆ ಗೊತ್ತು. 5 ಸ್ವರ್ಗ ಮತ್ತು ಭೂಮಿಯಲ್ಲಿ ಎಷ್ಟೋ ದೇವರುಗಳು ಇದ್ದಾರೆ ಅಂತ ಜನ ಹೇಳ್ತಾರೆ.+ ಹಾಗಾದ್ರೆ ಜನ್ರಿಗೆ ತುಂಬ ದೇವರು, ಪ್ರಭುಗಳು ಇದ್ದಾರೆ. 6 ಆದ್ರೆ ನಮಗೆ ಒಬ್ಬನೇ ದೇವರು.+ ಆತನು ನಮ್ಮ ತಂದೆ.+ ಆತನು ಎಲ್ಲವನ್ನ ಸೃಷ್ಟಿ ಮಾಡಿದನು. ನಾವು ಆತನಿಗಾಗಿ ಇದ್ದೀವಿ.+ ನಮಗೆ ಒಬ್ಬನೇ ಪ್ರಭು, ಆತನು ಯೇಸು ಕ್ರಿಸ್ತ. ಆತನ ಮೂಲಕ ಎಲ್ಲ ಸೃಷ್ಟಿ ಆಯ್ತು,+ ಆತನ ಮೂಲಕ ನಾವೂ ಸೃಷ್ಟಿ ಆದ್ವಿ.
7 ಆದ್ರೆ ಈ ಜ್ಞಾನ ಎಲ್ರಲ್ಲಿ ಇಲ್ಲ.+ ಕೆಲವರು ಮುಂಚೆ ಮೂರ್ತಿಯನ್ನ ಆರಾಧಿಸ್ತಾ ಇದ್ದದ್ರಿಂದ ಮೂರ್ತಿಗೆ ಅರ್ಪಿಸಿದ ಪ್ರಸಾದವನ್ನ ತಿನ್ನುವಾಗ ಅದನ್ನ ಮೂರ್ತಿಪೂಜೆ ಅಂತ ನೆನಸ್ತಾರೆ.+ ಅವ್ರ ಮನಸ್ಸಾಕ್ಷಿ ಸೂಕ್ಷ್ಮವಾಗಿ ಇರೋದ್ರಿಂದ ಅದು ಚುಚ್ಚುತ್ತಾ ಇರುತ್ತೆ.*+ 8 ನಾವು ಏನು ತಿಂತೀವೋ ಅದು ನಮ್ಮನ್ನ ದೇವರಿಗೆ ಆಪ್ತರಾಗಿ ಮಾಡಲ್ಲ.+ ನಾವು ತಿನ್ನದೇ ಇದ್ರೆ ನಮಗೇನೂ ನಷ್ಟ ಇಲ್ಲ, ತಿಂದ್ರೆ ಏನೂ ಲಾಭ ಇಲ್ಲ.+ 9 ಆಯ್ಕೆ ಮಾಡೋಕೆ ನಿಮಗಿರೋ ಸ್ವಾತಂತ್ರ್ಯ ಸೂಕ್ಷ್ಮ ಮನಸ್ಸಾಕ್ಷಿ ಇರುವವ್ರನ್ನ ಎಡವಿಸೋ ಕಲ್ಲಿನ ತರ ಆಗದ ಹಾಗೆ ನೋಡ್ಕೊಳ್ಳಿ.+ 10 ಜ್ಞಾನವಿರೋ ನೀವು ಮೂರ್ತಿಗಳ ದೇವಸ್ಥಾನದಲ್ಲಿ ಊಟ ಮಾಡ್ತಾ ಇರೋದನ್ನ ಸೂಕ್ಷ್ಮ ಮನಸ್ಸಾಕ್ಷಿ ಇರೋ ಒಬ್ಬ ಸಹೋದರ ನೋಡಿದ್ರೆ, ಮೂರ್ತಿಗಳಿಗೆ ಅರ್ಪಿಸಿದ ಪ್ರಸಾದವನ್ನೂ ತಿನ್ನುವಷ್ಟು ಧೈರ್ಯ ಮಾಡಬಹುದಲ್ವಾ? 11 ಹೀಗೆ ಯಾರಿಗಾಗಿ ಕ್ರಿಸ್ತನು ಸತ್ತನೋ ಆ ನಿನ್ನ ಸಹೋದರನ ನಂಬಿಕೆ ನಿನ್ನ ಜ್ಞಾನದಿಂದಾಗಿ ಹಾಳಾಗುತ್ತೆ.+ 12 ಈ ರೀತಿ ನೀವು ನಿಮ್ಮ ಸಹೋದರರ ವಿರುದ್ಧ ಪಾಪಮಾಡಿ ಅವ್ರ ಸೂಕ್ಷ್ಮ ಮನಸ್ಸಾಕ್ಷಿಯನ್ನ ಗಾಯ ಮಾಡಿಸೋದು+ ಕ್ರಿಸ್ತನ ವಿರುದ್ಧ ಮಾಡೋ ಪಾಪವಾಗಿದೆ. 13 ಹಾಗಾಗಿ ನಾನು ತಿನ್ನೋ ಮಾಂಸದಿಂದ ನನ್ನ ಸಹೋದರನ ನಂಬಿಕೆ ಹಾಳಾಗುತ್ತೆ ಅಂದ್ರೆ ನನ್ನ ಸಹೋದರನನ್ನ ಎಡವಿಸದೇ ಇರೋಕೆ ನಾನು ಯಾವತ್ತೂ ಮಾಂಸ ತಿನ್ನಲ್ಲ.+