ದಾನಿಯೇಲ
8 ರಾಜ ಬೇಲ್ಶಚ್ಚರ+ ಆಳ್ತಿದ್ದ ಮೂರನೇ ವರ್ಷದಲ್ಲಿ ದಾನಿಯೇಲನಾದ ನಾನು ಇನ್ನೊಂದು ದರ್ಶನ ನೋಡಿದೆ.+ 2 ನಾನು ಏಲಾಮ್+ ಪ್ರಾಂತ್ಯದ ಶೂಷನ್*+ ಅನ್ನೋ ಕೋಟೆಯಲ್ಲಿದ್ದಾಗ* ಈ ದರ್ಶನ ನೋಡಿದೆ. ಈ ದರ್ಶನದಲ್ಲಿ ನಾನು ಊಲಾ ಅನ್ನೋ ತೊರೆ ಹತ್ರ ಇದ್ದೆ. 3 ನಾನು ತಲೆಯೆತ್ತಿ ನೋಡಿದಾಗ ತೊರೆ ಮುಂದೆ ಒಂದು ಟಗರು+ ನಿಂತಿತ್ತು. ಅದಕ್ಕೆ ಎರಡು ಕೊಂಬು+ ಇತ್ತು. ಆ ಕೊಂಬುಗಳು ಉದ್ದವಾಗಿದ್ವು. ಆದ್ರೆ ಒಂದು ಕೊಂಬಿಗಿಂತ ಇನ್ನೊಂದು ಕೊಂಬು ಉದ್ದ ಇತ್ತು. ಹೆಚ್ಚು ಉದ್ದ ಇದ್ದ ಕೊಂಬು ಆಮೇಲೆ ಮೇಲೆ ಬಂತು.+ 4 ಆ ಟಗರು ಪಶ್ಚಿಮ, ಉತ್ತರ, ದಕ್ಷಿಣದ ಕಡೆಗಿದ್ದ ಶತ್ರುಗಳ ಮೇಲೆ ದಾಳಿ ಮಾಡೋದನ್ನ ನಾನು ನೋಡಿದೆ. ಬೇರೆ ಯಾವ ಕ್ರೂರ ಪ್ರಾಣಿಗಳಿಗೂ ಆ ಟಗರಿನ ಮುಂದೆ ನಿಲ್ಲೋಕೆ ಆಗಿರಲಿಲ್ಲ. ಅದ್ರ ಕೈಯಿಂದ* ಕಾಪಾಡೋರು ಯಾರೂ ಇರಲಿಲ್ಲ.+ ಅದು ತನಗೆ ಇಷ್ಟ ಬಂದ ಹಾಗೆ ಮಾಡ್ತಾ ತನ್ನನ್ನೇ ತಾನು ಹೆಚ್ಚಿಸ್ಕೊಂಡಿತು.
5 ನಾನು ನೋಡ್ತಾ ಇದ್ದಾಗ ಒಂದು ಹೋತ+ ಪಶ್ಚಿಮದ ಕಡೆಯಿಂದ ಬರ್ತಾ ಇತ್ತು. ಅದು ನೆಲದ ಮೇಲೆ ಕಾಲಿಡ್ದೆ ಇಡೀ ಭೂಮಿಯಲ್ಲಿ ಪ್ರಯಾಣಿಸ್ತಾ ಇತ್ತು. ಆ ಹೋತದ ಕಣ್ಣುಗಳ ಮಧ್ಯ ಎದ್ದುಕಾಣೋ ಒಂದು ಕೊಂಬಿತ್ತು.+ 6 ಆ ಹೋತ ನೀರಿನ ತೊರೆ ಹತ್ರ ನಾನು ನೋಡಿದ ಆ ಎರಡು ಕೊಂಬಿದ್ದ ಟಗರಿನ ಕಡೆ ಬರ್ತಿತ್ತು. ಅದು ತುಂಬ ಕೋಪದಿಂದ ಟಗರಿನ ಮೇಲೆ ದಾಳಿ ಮಾಡೋಕೆ ಓಡಿ ಬರ್ತಿತ್ತು.
7 ನಾನು ನೋಡ್ತಾ ಇರುವಾಗ ಹೋತ ಟಗರಿನ ಹತ್ರ ಬಂತು. ತುಂಬ ಕೋಪದಿಂದ ಟಗರಿನ ಮೇಲೆ ದಾಳಿ ಮಾಡಿ ಅದ್ರ ಎರಡು ಕೊಂಬನ್ನ ಮುರಿದುಬಿಟ್ಟಿತು. ಟಗರಿಂದ ಏನೂ ಮಾಡಕ್ಕಾಗಲಿಲ್ಲ. ಆ ಹೋತ ಟಗರನ್ನ ನೆಲಕ್ಕೆ ಬೀಳಿಸಿ ಅದನ್ನ ತುಳಿದುಬಿಟ್ಟಿತು. ಹೋತದ ಕೈಯಿಂದ* ಅದನ್ನ ಬಿಡಿಸೋಕೆ ಯಾರೂ ಇರಲಿಲ್ಲ.
8 ಆಮೇಲೆ ಆ ಹೋತ ತನ್ನನ್ನ ತಾನೇ ತುಂಬ ಹೆಚ್ಚಿಸ್ಕೊಂಡಿತು. ಆದ್ರೆ ಅದು ಬಲಿಷ್ಠವಾದ ಕೂಡಲೇ ಅದ್ರ ದೊಡ್ಡ ಕೊಂಬು ಮುರಿದುಹೋಯ್ತು. ಅದ್ರ ಜಾಗದಲ್ಲಿ ಎದ್ದುಕಾಣೋ ನಾಲ್ಕು ಕೊಂಬು ಬಂತು. ಆ ನಾಲ್ಕು ಕೊಂಬುಗಳು ನಾಲ್ಕು ದಿಕ್ಕಿಗೆ ಚಾಚ್ಕೊಂಡಿದ್ವು.+
9 ಆ ನಾಲ್ಕು ಕೊಂಬುಗಳಲ್ಲಿ ಒಂದು ಕೊಂಬಿಗೆ ಇನ್ನೊಂದು ಚಿಕ್ಕ ಕೊಂಬು ಬಂತು. ಅದು ದಕ್ಷಿಣದ ಕಡೆಗೆ, ಪೂರ್ವದ ಕಡೆಗೆ, ಅಂದವಾದ* ದೇಶದ ಕಡೆಗೆ ಬೆಳೀತಾ ತನ್ನ ಶಕ್ತಿ ತೋರಿಸೋಕೆ ಶುರು ಮಾಡಿತು.+ 10 ಅದು ಎಷ್ಟು ಎತ್ರ ಬೆಳೀತು ಅಂದ್ರೆ ಆಕಾಶದ ಸೈನ್ಯವನ್ನ ಕೂಡ ಮುಟ್ಟಿತು. ಅದು ಆ ಸೈನ್ಯದಲ್ಲಿದ್ದ ಕೆಲವನ್ನ, ಕೆಲವು ನಕ್ಷತ್ರಗಳನ್ನ ಭೂಮಿಗೆ ಬೀಳಿಸಿ ಅವುಗಳನ್ನ ತುಳಿದುಬಿಟ್ಟಿತು. 11 ಅದು ಸೇನಾಪತಿಯ ವಿರುದ್ಧ ತನ್ನನ್ನೇ ಹೆಚ್ಚಿಸ್ಕೊಂಡಿತು. ಅವನಿಂದ ಪ್ರತಿದಿನ ಬಲಿಗಳನ್ನ ಕಿತ್ಕೊಳ್ಳಲಾಯ್ತು. ಅಷ್ಟೇ ಅಲ್ಲ ಅವನು ಸ್ಥಿರಪಡಿಸಿದ ಆರಾಧನಾ ಜಾಗವನ್ನ ಬೀಳಿಸಲಾಯ್ತು.+ 12 ಅಪರಾಧದಿಂದಾಗಿ ಪ್ರತಿದಿನ ಬಲಿಗಳ ಜೊತೆ ಒಂದು ಸೈನ್ಯವನ್ನ ಸಹ ಆ ಕೊಂಬಿಗೆ ಒಪ್ಪಿಸಲಾಯ್ತು. ಆ ಕೊಂಬು ಸತ್ಯವನ್ನ ಭೂಮಿಗೆ ಬೀಳಿಸ್ತಾ ಇತ್ತು. ತನಗೆ ಇಷ್ಟ ಬಂದ ಹಾಗೆ ಮಾಡ್ತಾ ಗೆದ್ದಿತು.
13 ಆಮೇಲೆ ಒಬ್ಬ ಪವಿತ್ರನು ಮಾತಾಡ್ತಾ ಇರೋದನ್ನ ನಾನು ಕೇಳಿಸ್ಕೊಂಡೆ. ಅವನಿಗೆ ಇನ್ನೊಬ್ಬ ಪವಿತ್ರನು “ಪ್ರತಿದಿನ ಬಲಿಗಳಿಗೆ ಸಂಬಂಧಿಸಿದ, ನಾಶನವನ್ನ ತರೋ ಅಪರಾಧಗಳಿಗೆ ಸಂಬಂಧಿಸಿದ ಆ ದರ್ಶನ ಎಲ್ಲಿ ತನಕ ಹೀಗೇ ಮುಂದುವರಿಯುತ್ತೆ?+ ಪವಿತ್ರ ಸ್ಥಳವನ್ನ, ಸೈನ್ಯವನ್ನ ಎಷ್ಟರ ತನಕ ಹೀಗೇ ತುಳಿಯಲಾಗುತ್ತೆ?” ಅಂತ ಕೇಳಿದ. 14 ಅದಕ್ಕೆ ಅವನು ನನಗೆ “2,300 ಸಾಯಂಕಾಲಗಳು ಬೆಳಿಗ್ಗೆಗಳು ಕಳೆಯೋ ತನಕ ಹೀಗೇ ಇರುತ್ತೆ. ಆಮೇಲೆ ಪವಿತ್ರ ಸ್ಥಳವನ್ನ ಖಂಡಿತ ಮುಂಚಿನ ತರ ಒಳ್ಳೇ ಸ್ಥಿತಿಗೆ ತರಲಾಗುತ್ತೆ” ಅಂದ.
15 ದಾನಿಯೇಲನಾದ ನಾನು, ಇನ್ನೂ ಈ ದರ್ಶನವನ್ನ ನೋಡ್ತಾ ಇರುವಾಗ್ಲೇ, ಇದು ಏನಂತ ಅರ್ಥ ಮಾಡ್ಕೊಳ್ತಾ ಇರುವಾಗ್ಲೇ ಮನುಷ್ಯನ ತರ ಕಾಣೋ ಒಬ್ಬ ದಿಢೀರಂತ ನನ್ನ ಮುಂದೆ ಬಂದು ನಿಂತ. 16 ಆಮೇಲೆ ಊಲಾದ+ ಮಧ್ಯದಿಂದ ಒಬ್ಬ ಮನುಷ್ಯನ ಧ್ವನಿ ಕೇಳಿಸ್ಕೊಂಡೆ. ಅವನು ಕೂಗಿ “ಗಬ್ರಿಯೇಲನೇ,+ ಅವನು ನೋಡಿದ ವಿಷ್ಯಗಳನ್ನ ಅವನಿಗೆ ಅರ್ಥಮಾಡಿಸು”+ ಅಂದ. 17 ಹಾಗಾಗಿ ಅವನು ನಾನು ನಿಂತಲ್ಲಿಗೆ ಬಂದ. ಅವನು ಬಂದಾಗ ನಾನು ಹೆದರಿ ಅಡ್ಡಬಿದ್ದೆ. ಅವನು ನನಗೆ “ಮನುಷ್ಯಕುಮಾರ, ಈ ದರ್ಶನ ಕಡೇ ಕಾಲದಲ್ಲಿ ನಡಿಯುತ್ತೆ ಅಂತ ನೀನು ಅರ್ಥಮಾಡ್ಕೊ”+ ಅಂದ. 18 ಆದ್ರೆ ಅವನು ಇನ್ನೂ ನನ್ನ ಜೊತೆ ಮಾತಾಡ್ತಾ ಇರುವಾಗ್ಲೇ ನಾನು ನೆಲಕ್ಕೆ ಮುಖಮಾಡಿ ಗಾಢ ನಿದ್ದೆಗೆ ಜಾರಿದೆ. ಹಾಗಾಗಿ ಅವನು ನನ್ನನ್ನ ಮುಟ್ಟಿ, ನಾನು ಮುಂಚೆ ಎಲ್ಲಿ ನಿಂತಿದ್ನೋ ಅಲ್ಲೇ ನನ್ನನ್ನ ನಿಲ್ಲಿಸಿದ.+ 19 ಆಮೇಲೆ ಹೀಗೆ ಹೇಳಿದ: “ದೇವರು ಉಗ್ರವಾಗಿ ಖಂಡಿಸೋ ಸಮಯದ ಕೊನೇಲಿ ಏನಾಗುತ್ತೆ ಅಂತ ನಾನು ನಿನಗೆ ಹೇಳ್ತೀನಿ. ಯಾಕಂದ್ರೆ ಈ ದರ್ಶನ ನಿಶ್ಚಿತವಾಗಿರೋ ಸಮಯಕ್ಕೆ ಸರಿಯಾಗಿ ಅಂತ್ಯಕಾಲದಲ್ಲಿ ಆಗುತ್ತೆ.+
20 ನೀನು ನೋಡಿದ ಆ ಎರಡು ಕೊಂಬಿದ್ದ ಟಗರು ಮೇದ್ಯ ಮತ್ತು ಪರ್ಶಿಯದ ರಾಜರನ್ನ ಸೂಚಿಸುತ್ತೆ.+ 21 ಆ ಹೋತ* ಗ್ರೀಸಿನ ರಾಜನನ್ನ ಸೂಚಿಸುತ್ತೆ.+ ಅದ್ರ ಕಣ್ಣುಗಳ ಮಧ್ಯದಿಂದ ಬಂದಂಥ ಆ ದೊಡ್ಡ ಕೊಂಬು ಗ್ರೀಸಿನ ಮೊದಲ ರಾಜನನ್ನ ಸೂಚಿಸುತ್ತೆ.+ 22 ಮುರಿದು ಹೋದ ಆ ಕೊಂಬು, ಅದ್ರ ಸ್ಥಾನದಲ್ಲಿ ಬಂದಂಥ ಆ ನಾಲ್ಕು ಕೊಂಬುಗಳು+ ಅವನ ದೇಶದಲ್ಲಿ ಎದ್ದೇಳೋ ನಾಲ್ಕು ಸಾಮ್ರಾಜ್ಯಗಳನ್ನ ಸೂಚಿಸುತ್ತೆ. ಆದ್ರೆ ಆ ಸಾಮ್ರಾಜ್ಯಗಳಿಗೆ ಅವನಿಗಿದ್ದಷ್ಟು ಶಕ್ತಿ ಇರಲ್ಲ.
23 ಅವ್ರ ಸಾಮ್ರಾಜ್ಯದ ಕೊನೇ ದಿನಗಳಲ್ಲಿ, ಅವ್ರ ತಪ್ಪುಗಳು ಸಂಪೂರ್ಣ ಆದಾಗ ಭಯಂಕರವಾಗಿ ಕಾಣಿಸೋ ಒಬ್ಬ ರಾಜ ಏಳ್ತಾನೆ. ಅವನು ಕಷ್ಟದ ಪ್ರಶ್ನೆಗಳನ್ನ ಸಹ ಅರ್ಥ ಮಾಡ್ಕೊಳ್ತಾನೆ.* 24 ಅವನು ತುಂಬ ಬಲಶಾಲಿ ಆಗ್ತಾನೆ. ಆದ್ರೆ ತನ್ನ ಸ್ವಂತ ಶಕ್ತಿಯಿಂದಲ್ಲ. ಅವನು ಅದ್ಭುತ ರೀತಿಯಲ್ಲಿ ನಾಶ ತರ್ತಾನೆ. ಅವನು ತನ್ನ ಎಲ್ಲ ಕೆಲಸಗಳಲ್ಲಿ ಯಶಸ್ವಿ ಆಗ್ತಾನೆ. ಅವನು ಬಲಿಷ್ಠರ ಜೊತೆ ಪವಿತ್ರ ಜನ್ರನ್ನ ಸಹ ನಾಶ ಮಾಡ್ತಾನೆ.+ 25 ಅವನು ಯಶಸ್ವಿ ಆಗೋಕೆ ಕುತಂತ್ರದಿಂದ ಇನ್ನೊಬ್ರಿಗೆ ಮೋಸ ಮಾಡ್ತಾನೆ. ಹೃದಯದಲ್ಲಿ ತನ್ನನ್ನೇ ಹೆಚ್ಚಿಸ್ಕೊಳ್ತಾನೆ. ನೆಮ್ಮದಿ ಸಮಯದಲ್ಲಿ* ತುಂಬ ಜನ್ರನ್ನ ನಾಶ ಮಾಡ್ತಾನೆ. ಅವನು ನಾಯಕರ ನಾಯಕನ ವಿರುದ್ಧ ಸಹ ನಿಂತ್ಕೊಳ್ತಾನೆ. ಆದ್ರೆ ಅವನು ಯಾರ ಕೈಯೂ ತಾಗದೆ ಮುರಿದುಬೀಳ್ತಾನೆ.
26 ಸಾಯಂಕಾಲಗಳ, ಬೆಳಿಗ್ಗೆಗಳ ವಿಷ್ಯದ ಬಗ್ಗೆ ದರ್ಶನದಲ್ಲಿ ಏನು ಹೇಳಲಾಯ್ತೋ ಅದು ಸತ್ಯ. ಆದ್ರೆ ನೀನು ಈ ದರ್ಶನವನ್ನ ರಹಸ್ಯವಾಗಿ ಇಡಬೇಕು. ಯಾಕಂದ್ರೆ ಅದು ಇವತ್ತಿಂದ ತುಂಬ ದಿನ ಕಳೆದ ಮೇಲೆ ನಿಜ ಆಗುತ್ತೆ.”+
27 ದಾನಿಯೇಲನಾದ ನಾನು ಸುಸ್ತಾಗಿ ಹೋದೆ. ಸ್ವಲ್ಪ ದಿನ ಹುಷಾರು ಇರಲಿಲ್ಲ.+ ಆಮೇಲೆ ನಾನು ಎದ್ದು ರಾಜನ ಕೆಲಸಗಳನ್ನ ಮಾಡೋಕೆ ಶುರುಮಾಡಿದೆ.+ ಆದ್ರೆ ನಾನು ನೋಡಿದ್ದ ವಿಷ್ಯಗಳು ನನ್ನನ್ನ ಮೂಕನನ್ನಾಗಿ ಮಾಡಿತ್ತು. ಆ ದರ್ಶನವನ್ನ ಅರ್ಥ ಮಾಡ್ಕೊಳ್ಳೋಕೆ ಯಾರಿಗೂ ಆಗಲಿಲ್ಲ.+