ಪುಸ್ತಕ
2 “ಚೀಯೋನಿನಲ್ಲಿ ಕೊಂಬೂದಿ!+
ನನ್ನ ಪವಿತ್ರ ಬೆಟ್ಟದಲ್ಲಿ ಯುದ್ಧ ಘೋಷಿಸಿ.
2 ಅದು ಕತ್ತಲೆಯ ದಿನ, ಅದು ಮಬ್ಬಿನ ದಿನ,+
ಮೋಡಗಳು, ಕಾರ್ಮೋಡಗಳು ತುಂಬಿರೋ ದಿನ,+
ಸೂರ್ಯೋದಯದ ಮಸುಕು ಮಸುಕಾದ ಬೆಳಕು ಬೆಟ್ಟಗಳ ಮೇಲೆ ಹರಡ್ತಿರೋ ತರ ಆ ದಿನ ಇರುತ್ತೆ.
ಬಲಿಷ್ಠವಾದ ಒಂದು ದೊಡ್ಡ ಸೈನ್ಯ ಬರ್ತಿದೆ!+
ಅಂಥ ಒಂದು ಸೈನ್ಯ ಹಿಂದೆ ಯಾವತ್ತೂ ಬರಲಿಲ್ಲ, ಮುಂದೆ ಯಾವತ್ತೂ ಬರಲ್ಲ,
ಎಷ್ಟೇ ತಲೆಮಾರು ಉರುಳಿದ್ರೂ ಅಂಥ ಸೈನ್ಯ ಬರಲ್ಲ.
3 ಅದ್ರ ಮುಂದಿರೋ ಎಲ್ಲವನ್ನ ಬೆಂಕಿ ಸುಟ್ಟುಬಿಡುತ್ತೆ,
ಅದ್ರ ಹಿಂದಿರೋ ಎಲ್ಲವನ್ನ ಜ್ವಾಲೆ ಸುಟ್ಟುಬಿಡುತ್ತೆ.+
4 ಅವು ಕುದುರೆಗಳ ತರ ಕಾಣಿಸುತ್ತೆ,
ಯುದ್ಧ ಕುದುರೆಗಳ ತರ ಓಡುತ್ತೆ.+
5 ಅವು ಬೆಟ್ಟಗಳ ಮೇಲೆ ಜಿಗಿದು ಬರೋ ಶಬ್ದ ರಥಗಳ ಶಬ್ದದ ತರ ಇದೆ,+
ಧಗಧಗ ಉರಿಯೋ ಬೆಂಕಿ ಒಣ ಹುಲ್ಲನ್ನ ಸುಡುವಾಗ ಬರೋ ಚಟಪಟ ಶಬ್ದದ ತರ ಇದೆ.
ಅವು ವ್ಯವಸ್ಥಿತವಾಗಿ ಯುದ್ಧಕ್ಕೆ ಹೋಗೋ ವೀರರ ತರ ಇವೆ.+
6 ಅವುಗಳಿಂದಾಗಿ ಜನಾಂಗಗಳು ತುಂಬ ಸಂಕಟ ಪಡುತ್ತೆ.
ಅವ್ರ ಮುಖಗಳು ಭಯದಿಂದ ಕಳೆಗುಂದುತ್ತೆ.
7 ಅವು ವೀರ ಸೈನಿಕರ ತರ ದಾಳಿ ಮಾಡುತ್ತೆ,
ಸೈನಿಕರ ತರ ಗೋಡೆ ಹತ್ತುತ್ತೆ,
ಪ್ರತಿಯೊಂದು ತನ್ನ ಸಾಲಲ್ಲೇ ನಡೆಯುತ್ತೆ,
ತಮ್ಮ ದಾರಿ ಬಿಟ್ಟು ಆಚೀಚೆ ಹೋಗಲ್ಲ.
8 ಅವು ಒಂದನ್ನೊಂದು ನೂಕಲ್ಲ,
ಪ್ರತಿಯೊಂದು ತನ್ನ ಸಾಲಲ್ಲೇ ಮುಂದೆ ಹೋಗುತ್ತೆ.
ಆಯುಧಗಳು* ಕೆಲವನ್ನ ಕೆಡವಿ ಹಾಕಿದ್ರೂ,
ಉಳಿದವು ಸಾಲುಗಳನ್ನ ಬಿಟ್ಟು ಚದರಲ್ಲ.
9 ಅವು ಪಟ್ಟಣದೊಳಗೆ ನುಗ್ಗುತ್ತೆ, ಗೋಡೆ ಮೇಲೆ ಓಡುತ್ತೆ.
ಮನೆಗಳ ಮೇಲೆ ಹತ್ತುತ್ತೆ, ಕಳ್ಳರ ತರ ಕಿಟಕಿಗಳಿಂದ ಒಳಗೆ ನುಗ್ಗುತ್ತೆ.
10 ಅವುಗಳು ಬಂದಾಗ ನೆಲ ಕಂಪಿಸುತ್ತೆ, ಆಕಾಶ ನಡುಗುತ್ತೆ.
ಸೂರ್ಯ ಚಂದ್ರ ಕಪ್ಪಾಗಿವೆ,+
ನಕ್ಷತ್ರಗಳು ಹೊಳಪನ್ನ ಕಳ್ಕೊಂಡಿವೆ.
ತನ್ನ ಮಾತನ್ನ ನೆರವೇರಿಸೋ ದೇವರಿಗೆ ತುಂಬ ಶಕ್ತಿ ಇದೆ,
ಯೆಹೋವನ ದಿನ ಮಹಾ ದಿನ, ಅತಿ ಭಯವಿಸ್ಮಯಕಾರಿ ಆಗಿದೆ.+
ಅದನ್ನ ತಾಳ್ಕೊಳ್ಳುವವರು ಯಾರು?”+
12 ಯೆಹೋವ ಹೇಳೋದು ಏನಂದ್ರೆ “ಈಗಲಾದ್ರೂ ನೀವು ಪೂರ್ಣ ಹೃದಯದಿಂದ ನನ್ನ ಹತ್ರ ವಾಪಸ್ ಬನ್ನಿ,+
ಉಪವಾಸ ಮಾಡ್ತಾ,+ ಅಳ್ತಾ, ಗೋಳಾಡ್ತಾ ನನ್ನ ಹತ್ರ ಬನ್ನಿ.
13 ನಿಮ್ಮ ಬಟ್ಟೆಗಳನ್ನಲ್ಲ,+ ಹೃದಯಗಳನ್ನ ಹರ್ಕೊಂಡು+
ನಿಮ್ಮ ದೇವರಾದ ಯೆಹೋವನ ಹತ್ರ ವಾಪಸ್ ಬನ್ನಿ,
ಯಾಕಂದ್ರೆ ಆತನು ಕನಿಕರ ಮತ್ತು ಕರುಣೆ ಇರೋ ದೇವರು,
ಆತನು ತಟ್ಟನೆ ಕೋಪ ಮಾಡ್ಕೊಳ್ಳಲ್ಲ,+ ಶಾಶ್ವತ ಪ್ರೀತಿಯನ್ನ ಧಾರಾಳವಾಗಿ ತೋರಿಸ್ತಾನೆ,+
ಆತನು ತನ್ನ ಮನಸ್ಸನ್ನ ಬದಲಾಯಿಸ್ಕೊಂಡು,* ತಾನು ತರಬೇಕಂತಿದ್ದ ನಾಶವನ್ನ ತರದೇ ಇರ್ತಾನೆ.
14 ಯಾರಿಗೆ ಗೊತ್ತು? ಆತನು ತನ್ನ ನಿರ್ಣಯದ ಬಗ್ಗೆ ಮತ್ತೆ ಯೋಚಿಸಿ ಮನಸ್ಸು ಬದಲಾಯಿಸಬಹುದು,+
ನೀವು ನಿಮ್ಮ ದೇವರಾದ ಯೆಹೋವನಿಗೆ ಧಾನ್ಯ ಅರ್ಪಣೆ ಮತ್ತು ಪಾನ ಅರ್ಪಣೆಯನ್ನ ಕೊಡೋಕೆ ಆತನು ನಿಮಗೆ ಆಶೀರ್ವಾದ ಮಾಡ್ಲೂ ಬಹುದು.
15 ಚೀಯೋನಲ್ಲಿ ಕೊಂಬೂದಿ!
ಉಪವಾಸ ದಿನವನ್ನ ಪ್ರಕಟಿಸಿ,
ವಿಶೇಷ ಕೂಟಕ್ಕಾಗಿ ಸೇರಿಬರೋಕೆ ಕರೆಕೊಡಿ.+
16 ಜನ್ರನ್ನ ಒಟ್ಟು ಸೇರಿಸಿ, ಸಭೆಯನ್ನ ಪವಿತ್ರ ಮಾಡಿ.+
ವೃದ್ಧರನ್ನೂ* ಮಕ್ಕಳನ್ನೂ ಹಾಲು ಕುಡಿಯೋ ಕೂಸುಗಳನ್ನೂ ಒಟ್ಟುಗೂಡಿಸಿ.+
ಮದುಮಗನೂ ಮದುಮಗಳೂ ಒಳ ಕೋಣೆಯಿಂದ ಹೊರಗೆ ಬರಲಿ.
17 ಯೆಹೋವನ ಸೇವೆಮಾಡೋ ಪುರೋಹಿತರು ದ್ವಾರಮಂಟಪ ಮತ್ತು ಯಜ್ಞವೇದಿ ಮಧ್ಯ ನಿಂತು ಅತ್ತು ಬೇಡ್ತಾ,+
‘ಯೆಹೋವನೇ, ನಿನ್ನ ಜನ್ರಿಗೆ ದಯೆ ತೋರಿಸಪ್ಪಾ,
ನಿನ್ನ ಆಸ್ತಿಯಾಗಿರೋ ಇಸ್ರಾಯೇಲ್ಯರ ಮೇಲೆ ಬೇರೆ ಜನಾಂಗಗಳು ಆಳ್ವಿಕೆ ಮಾಡೋ ತರ ಬಿಟ್ಟು ನಿನ್ನ ಜನ್ರನ್ನ ಅವಮಾನಕ್ಕೆ ಗುರಿಮಾಡಬೇಡ.
“ಅವ್ರ ದೇವರು ಎಲ್ಲಿ?” ಅಂತ ಹೇಳೋ ಅವಕಾಶವನ್ನ ಆ ಜನಾಂಗಗಳಿಗೆ ಕೊಡಬೇಡ’ ಅನ್ನಲಿ.+
19 ಯೆಹೋವ ತನ್ನ ಜನ್ರಿಗೆ ಹೀಗೆ ಹೇಳ್ತಾನೆ:
‘ನಾನು ನಿಮಗೆ ಧಾನ್ಯ, ಹೊಸ ದ್ರಾಕ್ಷಾಮದ್ಯ, ಎಣ್ಣೆ ಕೊಡ್ತೀನಿ,
ನೀವು ಅವುಗಳಿಂದ ಸಂತೃಪ್ತರಾಗ್ತೀರ,+
ಇನ್ಮುಂದೆ ನೀವು ಬೇರೆ ಜನಾಂಗಗಳ ಮಧ್ಯ ಅವಮಾನಕ್ಕೆ ಗುರಿಯಾಗೋಕೆ ನಾನು ಬಿಡಲ್ಲ.+
20 ಉತ್ತರ ದಿಕ್ಕಿಂದ ಬರುವವನನ್ನ ನಾನು ನಿಮ್ಮಿಂದ ದೂರ ಓಡಿಸಿ ಬಿಡ್ತೀನಿ,
ಅವನನ್ನ ಒಣಗಿ ಹೋಗಿರೋ ನಿರ್ಜನವಾದ ಬಂಜರುಪ್ರದೇಶಕ್ಕೆ ಅಟ್ಟಿಬಿಡ್ತೀನಿ.
ಅವನ ಮುಂಭಾಗದ ಸೈನ್ಯವನ್ನ ಪೂರ್ವದ ಸಮುದ್ರಕ್ಕೆ* ಎಸೆದು ಬಿಡ್ತೀನಿ,
ಅವನ ಹಿಂಭಾಗದ ಸೈನ್ಯವನ್ನ ಪಶ್ಚಿಮ ಸಮುದ್ರಕ್ಕೆ* ಎಸೆದು ಬಿಡ್ತೀನಿ.
ಅವನ ಹೆಣದ ಗಬ್ಬುನಾತ ದೇಶದಲ್ಲೆಲ್ಲ ಹರಡುತ್ತೆ,+
ಯಾಕಂದ್ರೆ ದೇವರು ಮಹತ್ಕಾರ್ಯಗಳನ್ನ ಮಾಡ್ತಾನೆ.’
21 ದೇಶವೇ, ಭಯಪಡಬೇಡ. ಹರ್ಷಿಸು, ಉಲ್ಲಾಸಿಸು.
ಯಾಕಂದ್ರೆ ಯೆಹೋವ ಮಹತ್ಕಾರ್ಯಗಳನ್ನ ಮಾಡ್ತಾನೆ.
22 ಪ್ರಾಣಿಗಳೇ, ಹೆದರಬೇಡಿ,
ಕಾಡಿನ ಹುಲ್ಲುಗಾವಲುಗಳು ಹಚ್ಚಹಸಿರಾಗಿ ಕಂಗೊಳಿಸುತ್ತೆ,+
ಮರಗಳು ಹಣ್ಣು ಬಿಡುತ್ತೆ,+
ಅಂಜೂರದ ಮರ, ದ್ರಾಕ್ಷಿಬಳ್ಳಿ ಸಮೃದ್ಧ ಫಲ ಕೊಡುತ್ತೆ.+
23 ಚೀಯೋನಿನ ಜನ್ರೇ, ನಿಮ್ಮ ದೇವರಾದ ಯೆಹೋವನಲ್ಲಿ ಹರ್ಷಿಸಿ, ಉಲ್ಲಾಸಿಸಿ,+
ಆತನು ನಿಮಗೆ ಶರತ್ಕಾಲದ ಮಳೆಯನ್ನ ಬೇಕಾಗುವಷ್ಟೇ ಕೊಡ್ತಾನೆ,
ಧಾರಾಕಾರವಾಗಿ ಮಳೆ ಸುರಿಸ್ತಾನೆ,
ಮುಂಚಿನ ತರಾನೇ ನಿಮಗೆ ಶರತ್ಕಾಲದ ಮಳೆಯನ್ನೂ ವಸಂತಕಾಲದ ಮಳೆಯನ್ನೂ ಕೊಡ್ತಾನೆ.+
24 ಕಣಗಳಲ್ಲಿ ಧಾನ್ಯ ರಾಶಿರಾಶಿ ಆಗಿರುತ್ತೆ,
ತೊಟ್ಟಿಗಳಲ್ಲಿ ದ್ರಾಕ್ಷಾಮದ್ಯನೂ ಗಾಣಗಳಲ್ಲಿ ಎಣ್ಣೆನೂ ತುಂಬಿತುಳುಕುತ್ತೆ.+
25 ನಾನು ನಿಮ್ಮ ಮಧ್ಯ ಕಳಿಸಿದ ದೊಡ್ಡ ಸೈನ್ಯ
ಅಂದ್ರೆ ಹಿಂಡು ಹಿಂಡಾಗಿರೋ ಮಿಡತೆಗಳು, ರೆಕ್ಕೆ ಬೆಳೆದಿರದ ಮಿಡತೆಗಳು, ವಿನಾಶಕಾರಿ ಮಿಡತೆಗಳು, ಹೊಟ್ಟೆಬಾಕ ಮಿಡತೆಗಳು ಇಷ್ಟು ವರ್ಷ ಏನೆಲ್ಲ ತಿಂದು ಹಾಕಿದ್ವೋ+
ಅದನ್ನೆಲ್ಲ ನಾನು ನಿಮಗೆ ವಾಪಸ್ ಕೊಡ್ತೀನಿ.
26 ನಿಮಗೆ ಬೇಕಾದಷ್ಟು ಆಹಾರ ಸಿಗೋದು ಖಂಡಿತ,+
ನೀವು ನಿಮ್ಮ ದೇವರಾದ ಯೆಹೋವನ ಹೆಸ್ರನ್ನ ಹೊಗಳ್ತೀರ,+
ನಿಮಗೋಸ್ಕರ ಆತನು ಅದ್ಭುತಗಳನ್ನ ಮಾಡಿದ್ದಾನೆ,
ನನ್ನ ಜನ್ರು ಇನ್ನು ಯಾವತ್ತೂ ಅವಮಾನಕ್ಕೆ ಗುರಿ ಆಗಲ್ಲ.+
27 ನಾನು ಇಸ್ರಾಯೇಲಿನ ಮಧ್ಯ ಇದ್ದೀನಿ ಅಂತಾನೂ+
ನಾನೇ ನಿಮ್ಮ ದೇವರಾದ ಯೆಹೋವ+ ಅಂತಾನೂ
ನನ್ನನ್ನ ಬಿಟ್ಟು ಬೇರೆ ದೇವರಿಲ್ಲ ಅಂತಾನೂ
ನೀವು ತಿಳ್ಕೊಬೇಕಾಗುತ್ತೆ!
ನನ್ನ ಜನ್ರು ಇನ್ನು ಯಾವತ್ತೂ ಅವಮಾನಕ್ಕೆ ಗುರಿ ಆಗಲ್ಲ.
28 ಆಮೇಲೆ ನಾನು ಎಲ್ಲ ರೀತಿಯ ಜನ್ರ ಮೇಲೆ ನನ್ನ ಪವಿತ್ರಶಕ್ತಿ ಸುರಿಸ್ತೀನಿ,+
ನಿಮ್ಮ ಮಕ್ಕಳು ಭವಿಷ್ಯವಾಣಿ ಹೇಳ್ತಾರೆ,
ನಿಮ್ಮ ವೃದ್ಧರಿಗೆ ಕನಸುಗಳು ಬೀಳುತ್ತೆ,
ನಿಮ್ಮ ಯುವಕರು ದರ್ಶನಗಳನ್ನ ನೋಡ್ತಾರೆ.+
29 ಆ ದಿನಗಳಲ್ಲಿ ನಾನು ನನ್ನ ದಾಸದಾಸಿಯರ ಮೇಲೂ
ನನ್ನ ಪವಿತ್ರಶಕ್ತಿ ಸುರಿಸ್ತೀನಿ.