ಕೀರ್ತನೆ
ದಾವೀದನ ಪ್ರಾರ್ಥನೆ.
86 ಯೆಹೋವನೇ, ನನ್ನ ಪ್ರಾರ್ಥನೆಯನ್ನ ಕೇಳಿ* ನನಗೆ ಉತ್ರ ಕೊಡು.
ಯಾಕಂದ್ರೆ ನಾನು ಕಷ್ಟದಲ್ಲಿದ್ದೀನಿ, ನಾನು ಬಡವ.+
2 ನಾನು ನಿಷ್ಠಾವಂತನಾಗಿ ಇರೋದ್ರಿಂದ ನನ್ನ ಪ್ರಾಣವನ್ನ ಕಾದು ಕಾಪಾಡು.+
ನಿನ್ನಲ್ಲಿ ಭರವಸೆ ಇಟ್ಟಿರೋ ನಿನ್ನ ಸೇವಕನನ್ನ ರಕ್ಷಿಸು,
ಯಾಕಂದ್ರೆ ನೀನೇ ನನ್ನ ದೇವರು.+
4 ನಿನ್ನ ಸೇವಕ ಖುಷಿಪಡೋ ಹಾಗೆ ಮಾಡು,
ಯಾಕಂದ್ರೆ ಯೆಹೋವನೇ, ನಾನು ನಿನ್ನ ಕಡೆ ತಿರುಗಿಕೊಳ್ತೀನಿ.
5 ಯೆಹೋವನೇ, ನೀನು ಒಳ್ಳೆಯವನು,+ ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ ಇರ್ತಿಯ,+
ನಿನಗೆ ಮೊರೆಯಿಡೋ ಪ್ರತಿಯೊಬ್ರಿಗೂ ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸ್ತೀಯ.+
9 ಯೆಹೋವನೇ, ನೀನು ಸೃಷ್ಟಿಸಿದ ಎಲ್ಲ ಜನಾಂಗಗಳು
ನಿನ್ನ ಮುಂದೆ ಬಂದು ನಿನಗೆ ಬಗ್ಗಿ ನಮಸ್ಕಾರ ಮಾಡ್ತವೆ,+
ಅವು ನಿನ್ನ ಹೆಸ್ರಿಗೆ ಗೌರವ ತರುತ್ತವೆ.+
11 ಯೆಹೋವನೇ, ನಿನ್ನ ದಾರಿಯನ್ನ ನನಗೆ ಕಲಿಸು.+
ನಾನು ನಿನ್ನ ಸತ್ಯದ ದಾರಿಯಲ್ಲಿ ನಡೀತೀನಿ.+
ನನಗೆ ಒಂದೇ ಮನಸ್ಸನ್ನ* ಕೊಡು, ಆಗ ನಿನ್ನ ಹೆಸ್ರಿಗೆ ಭಯಪಡ್ತೀನಿ.+
12 ನನ್ನ ದೇವರಾದ ಯೆಹೋವನೇ, ಪೂರ್ಣ ಹೃದಯದಿಂದ ನಾನು ನಿನ್ನನ್ನ ಹೊಗಳ್ತೀನಿ,+
ಶಾಶ್ವತವಾಗಿ ನಿನ್ನ ಹೆಸ್ರಿಗೆ ಗೌರವ ಕೊಡ್ತೀನಿ.
13 ಯಾಕಂದ್ರೆ ನನ್ನ ಕಡೆಗಿರೋ ನಿನ್ನ ಶಾಶ್ವತ ಪ್ರೀತಿ ತುಂಬ ದೊಡ್ಡದು,
15 ಆದ್ರೆ ಯೆಹೋವನೇ, ನೀನು ಕರುಣೆ ಇರೋ ದೇವರು, ಕನಿಕರ ಇರೋ* ದೇವರು,
ಥಟ್ಟಂತ ಕೋಪಿಸಿಕೊಳ್ಳಲ್ಲ, ಶಾಶ್ವತ ಪ್ರೀತಿಯನ್ನ ಧಾರಾಳವಾಗಿ ತೋರಿಸ್ತೀಯ, ನಂಬಿಗಸ್ತನು.*+
16 ನನ್ನ ಕಡೆ ತಿರುಗಿ ನನಗೆ ದಯೆ ತೋರಿಸು.+
ನಿನ್ನ ಸೇವಕನಿಗೆ ನಿನ್ನ ಶಕ್ತಿಯನ್ನು ಕೊಡು,+
ನಿನ್ನ ದಾಸಿಯ ಮಗನನ್ನ ರಕ್ಷಿಸು.
ಯಾಕಂದ್ರೆ ಯೆಹೋವನೇ, ನನಗೆ ಸಹಾಯ ಮಾಡೋನೂ ನನ್ನನ್ನ ಸಂತೈಸೋನೂ ನೀನೇ.