ಧರ್ಮೋಪದೇಶಕಾಂಡ
32 “ಆಕಾಶವೇ, ನಾನು ಹೇಳೋದನ್ನ ಕೇಳು,
ಭೂಮಿಯೇ, ನನ್ನ ಮಾತು ಕೇಳು.
2 ನನ್ನ ಬೋಧನೆ ಮೆಲ್ಲಗೆ ಸುರಿಯೋ ಮಳೆ ತರ,
ನನ್ನ ಮಾತು ಹನಿಹನಿಯಾಗಿ ಬೀಳೋ ಮಂಜು ತರ,
ಅದು ಹುಲ್ಲಿನ ಮೇಲೆ ಕೂತ್ಕೊಳ್ಳೋ ತುಂತುರು ತರ,
ಗಿಡಮರಗಳ ಮೇಲೆ ಹೇರಳವಾಗಿ ಸುರಿಯೋ ಮಳೆ ತರ.
3 ನಾನು ಯೆಹೋವನ ಹೆಸ್ರನ್ನ ಸಾರಿಹೇಳ್ತೀನಿ.+
ನಮ್ಮ ದೇವರ ಶ್ರೇಷ್ಠತೆಯನ್ನ ತಿಳಿಸ್ತೀನಿ!+
5 ಕೆಟ್ಟವರ ತರ ನಡ್ಕೊಂಡಿದ್ದು ಅವ್ರೇ,+
ಅವರು ಆತನ ಮಕ್ಕಳಲ್ಲ, ತಪ್ಪೆಲ್ಲಾ ಅವ್ರದ್ದೇ,+
ಅವರು ಅಡ್ಡದಾರಿ ಹಿಡಿದ ವಕ್ರ ಸಂತತಿನೇ!+
ಆತನು ನಿಮ್ಮ ತಂದೆ ತಾನೇ? ಆತನಿಂದಾನೇ ನೀವು ಇವತ್ತು ಇದ್ದೀರ ತಾನೇ?+
ನಿಮ್ಮನ್ನ ಸೃಷ್ಟಿಸಿ ಒಂದು ಜನಾಂಗವಾಗಿ ಮಾಡಿದ್ದು ಆತನೇ ಅಲ್ವಾ?
7 ಹಿಂದಿನ ದಿನಗಳನ್ನ ನೆನಪಿಸ್ಕೊಳ್ಳಿ,
ಹಿಂದಿನ ಪೀಳಿಗೆ ಬಗ್ಗೆ ಯೋಚಿಸಿ,
ನಿಮ್ಮ ತಂದೆನ ಕೇಳಿ, ಅವನು ನಿಮಗೆ ಹೇಳ್ತಾನೆ,+
ಹಿರಿಯರನ್ನ ವಿಚಾರಿಸಿ, ಅವರು ನಿಮಗೆ ವಿವರಿಸ್ತಾರೆ.
11 ಹದ್ದು ತನ್ನ ಮರಿಗಳಿಗೆ ಹಾರೋದನ್ನ ಕಲಿಸೋಕೆ ಅವನ್ನ ಗೂಡಿಂದ ತಳ್ಳಿ,
ಮರಿಗಳ ಪಕ್ಕದಲ್ಲೇ ಹಾರುತ್ತಾ,
ಹೇಗೆ ತನ್ನ ರೆಕ್ಕೆಗಳನ್ನ ಚಾಚಿ ಮರಿಗಳನ್ನ ತಗೊಳ್ಳುತ್ತೋ,
ಹೇಗೆ ತನ್ನ ಗರಿಗಳ ಮೇಲೆ ಅವನ್ನ ಹೊತ್ಕೊಂಡು ಬರುತ್ತೋ+
ಬೇರೆ ಯಾವ ದೇವರೂ ಆತನ ಜೊತೆ ಇರಲಿಲ್ಲ.+
13 ಭೂಮಿಯ ಎತ್ತರ ಜಾಗಗಳು ವಶವಾಗೋ ತರ ಆತನು ಮಾಡಿದ,+
ಹೀಗೆ ಹೊಲದ ಬೆಳೆನ ಉಣ್ಣೋ ಹಾಗೆ ಮಾಡಿದ,+
ಕಡಿದಾದ ಬಂಡೆಯಿಂದ ಜೇನನ್ನೂ
ಗಡಸು ಬಂಡೆಯಿಂದ ಎಣ್ಣೆಯನ್ನೂ ಕೊಟ್ಟು ಸಾಕಿದ,
14 ಹಸುಗಳ ಹಾಲಿಂದ ಬೆಣ್ಣೆ, ಆಡು-ಕುರಿಗಳ ಹಾಲು,
ಕೊಬ್ಬಿದ ಕುರಿಗಳ, ಹೋತಗಳ, ಬಾಷಾನಿನ ಟಗರುಗಳ ಮಾಂಸ,
ಶ್ರೇಷ್ಠವಾದ ಗೋದಿ ಕೊಟ್ಟು ಸಾಕಿದ.+
ಅಷ್ಟೇ ಅಲ್ಲ ಅವನು ಕೆಂಪು ದ್ರಾಕ್ಷಿಯ ಮದ್ಯ ಕುಡಿದ.
15 ಯೆಶುರೂನ* ಚೆನ್ನಾಗಿ ತಿಂದು ಕೊಬ್ಬಿದಾಗ ದಂಗೆ ಎದ್ದು ತನ್ನ ಧಣಿನ ಒದ್ದ.
ಅವನು ಕೊಬ್ಬಿ ದಡಿಯನಾಗಿ ಊದ್ಕೊಂಡ.+
ತನ್ನನ್ನ ಸೃಷ್ಟಿ ಮಾಡಿದ ದೇವರನ್ನೇ ಬಿಟ್ಟುಬಿಟ್ಟ.+
ಬಂಡೆ ತರ ಇದ್ದು ರಕ್ಷಿಸಿದ ದೇವರನ್ನೇ ತಿರಸ್ಕರಿಸಿದ.
17 ಅವರು ದೇವರಿಗಲ್ಲ, ಕೆಟ್ಟ ದೇವದೂತರಿಗೆ ಬಲಿ ಕೊಟ್ರು,+
ಅವ್ರಿಗೂ ಅವ್ರ ಪೂರ್ವಜರಿಗೂ ಗೊತ್ತಿಲ್ಲದ,
ನಿನ್ನೆಮೊನ್ನೆ ಬಂದ ಹೊಸ ಹೊಸ ದೇವರುಗಳಿಗೆ ಬಲಿ ಕೊಟ್ರು.
18 ಅವರು ತಮ್ಮ ಹೆತ್ತ ಅಪ್ಪನ್ನ, ಆಶ್ರಯವಾಗಿದ್ದ ದೇವ್ರನ್ನ ಮರೆತುಬಿಟ್ರು,+
ಅವ್ರನ್ನ ಹುಟ್ಟಿಸಿದ ದೇವರನ್ನೇ ಅವರು ನೆನಪಿಸ್ಕೊಳ್ಳಲಿಲ್ಲ.+
19 ಯೆಹೋವ ಅದನ್ನ ನೋಡಿದ,
ತನ್ನ ಮಕ್ಕಳು ತನಗೆ ಕೋಪ ಬರಿಸಿದ್ರಿಂದ ಅವ್ರನ್ನ ಬಿಟ್ಟುಬಿಟ್ಟ.+
21 ದೇವರು ಅಲ್ಲದ್ದನ್ನ ಆರಾಧಿಸಿ ನನಗೆ ರೋಷ ಬರಿಸಿದ್ರು,*+
ಪ್ರಯೋಜನಕ್ಕೆ ಬಾರದ ಮೂರ್ತಿಗಳನ್ನ ಆರಾಧಿಸಿ ನನ್ನ ಮನನೋಯಿಸಿದ್ರು.+
ಹಾಗಾಗಿ ನಾನೂ ಅವ್ರನ್ನ ಪ್ರಯೋಜನಕ್ಕೆ ಬಾರದ ಜನ್ರಿಂದ ಗಲಿಬಿಲಿ ಮಾಡ್ತೀನಿ,+
ಒಂದು ಮೂರ್ಖ ಜನಾಂಗದಿಂದ ಅವ್ರ ಮನನೋಯಿಸ್ತೀನಿ,+
22 ನನ್ನ ಕೋಪ ಬೆಂಕಿ ತರ ಹೊತ್ತಿ ಉರಿಯುತ್ತೆ,+
ಸಮಾಧಿಯ* ತಳದ ತನಕ ಹೋಗಿ ಉರಿಯುತ್ತೆ,+
ಭೂಮಿನ ಅದ್ರ ಬೆಳೆನ ಸುಟ್ಟುಬಿಡುತ್ತೆ,
ಬೆಟ್ಟಗಳ ಬುಡಕ್ಕೆ ಬೆಂಕಿ ಹತ್ಕೊಳ್ಳುತ್ತೆ.
23 ಅವ್ರ ಮೇಲೆ ಒಂದ್ರ ಮೇಲೊಂದು ಕಷ್ಟ ತರ್ತಿನಿ,
ಅವ್ರ ಮೇಲೆ ನನ್ನ ಬಾಣಗಳನ್ನ ಬಿಡ್ತೀನಿ.
24 ಅವರು ಹಸಿದು ಬಳಲಿ ಬಲಹೀನರಾಗ್ತಾರೆ,+
ವಿಪರೀತ ಜ್ವರ ಬಂದು ಸಾಯ್ತಾರೆ, ಅವ್ರ ವಿನಾಶ ಘೋರವಾಗಿರುತ್ತೆ,+
ಅವ್ರನ್ನ ಕೊಲ್ಲೋಕೆ ಕ್ರೂರ ಪ್ರಾಣಿಗಳನ್ನ+
ನೆಲದಲ್ಲಿ ಹರಿದಾಡೋ ವಿಷಹಾವುಗಳನ್ನ ಕಳಿಸ್ತೀನಿ.
ಹಣ್ಣು ಮುದುಕನಾಗ್ಲಿ ಎಲ್ರಿಗೂ ಅದೇ ಗತಿ ಆಗುತ್ತೆ.+
26 “ಅವ್ರನ್ನ ನಾನು ಚೆಲ್ಲಾಪಿಲ್ಲಿ ಮಾಡ್ತೀನಿ,
ಯಾರೂ ಯಾವತ್ತೂ ಅವ್ರನ್ನ ನೆನಪಿಸ್ಕೊಳ್ಳದ ತರ ಮಾಡ್ತೀನಿ” ಅಂತ ಹೇಳಬೇಕಂತಿದ್ದೆ.
27 ಆದ್ರೆ ಶತ್ರುಗಳು ತಪ್ಪರ್ಥ ಮಾಡ್ಕೊಂಡು,+
“ನಾವು ಗೆದ್ದಿದ್ದು ನಮ್ಮ ಸ್ವಂತ ಬಲದಿಂದಾನೇ,+
ಯೆಹೋವನಿಂದಲ್ಲ” ಅಂತ ಹಂಗಿಸಬಹುದು ಅಂತ ಯೋಚಿಸಿ+ ಹಾಗೆ ಹೇಳಲಿಲ್ಲ.
29 ಅವ್ರಿಗೆ ಬುದ್ಧಿ ಇದ್ದಿದ್ರೆ+ ಇದ್ರ ಬಗ್ಗೆ ಸ್ವಲ್ಪನಾದ್ರೂ ಯೋಚಿಸ್ತಿದ್ರು.+
ನಮಗೆ ಎಂಥ ಗತಿ ಬರಬಹುದು ಅಂತ ಆಲೋಚಿಸ್ತಿದ್ರು.+
30 ಇಸ್ರಾಯೇಲ್ಯರ ಬಂಡೆಯಾಗಿರೋ ಅವ್ರ ದೇವರೇ ಅವ್ರನ್ನ ಮಾರಿಬಿಟ್ಟ,+
ಯೆಹೋವ ಅವ್ರನ್ನ ಶತ್ರುಗಳ ಕೈಗೆ ಒಪ್ಪಿಸಿದ.
ಅದಕ್ಕೇ ಅವ್ರಲ್ಲಿ 1,000 ಜನ್ರನ್ನ ಒಬ್ಬನೇ ಅಟ್ಟಿಸ್ಕೊಂಡು ಹೋಗಕ್ಕಾಯ್ತು,
ಅವ್ರಲ್ಲಿ 10,000 ಜನ್ರನ್ನ ಇಬ್ರೇ ಓಡಿಸಿಬಿಟ್ರು.+
ಅವ್ರ ದ್ರಾಕ್ಷಿ ವಿಷ,
ದ್ರಾಕ್ಷಿಗೊಂಚಲು ಕಹಿ.+
33 ಅವ್ರ ದ್ರಾಕ್ಷಾಮದ್ಯ ಹಾವಿನ ವಿಷ ತರ,
ಅದು ಜೀವ ತೆಗಿಯೋ ನಾಗರಹಾವಿನ ವಿಷ ತರ.
35 ಸೇಡು ತೀರಿಸೋದು, ಪ್ರತೀಕಾರ ಮಾಡೋದು ನನ್ನ ಕೆಲಸ,+
ಸಮಯ ಬಂದಾಗ ಅವರು ಕಾಲು ಜಾರಿ ಬೀಳ್ತಾರೆ,+
ಅವರು ನಾಶವಾಗಿ ಹೋಗೋ ದಿನ ಹತ್ರ ಇದೆ,
ಅವರಿಗಾಗಿ ಕಾಯ್ತಾ ಇರೋ ದುರ್ಗತಿ ಬೇಗ ಬರ್ತಿದೆ.’
36 ಯೆಹೋವ ತನ್ನ ಜನ್ರಿಗೆ ನ್ಯಾಯ ಸಿಗೋ ತರ ಮಾಡ್ತಾನೆ.+
ತನ್ನ ಸೇವಕರ ಶಕ್ತಿ ಕಮ್ಮಿ ಆಗಿರೋದನ್ನ,
ನಿಸ್ಸಹಾಯಕ, ಬಲಹೀನ ಪರಿಸ್ಥಿತಿಯಲ್ಲಿ ಇರೋರನ್ನ
37 ಆಗ ಆತನು ಹೀಗಂತಾನೆ: ‘ಅವ್ರ ದೇವರುಗಳು ಎಲ್ಲಿ?+
ಅವರು ಆಶ್ರಯವನ್ನ ಹುಡುಕಿದ ಆ ಬಂಡೆ ಎಲ್ಲಿ?
ಅವು ಎದ್ದು ಬಂದು ನಿಮಗೆ ಸಹಾಯ ಮಾಡ್ಲಿ,
ಅವು ನಿಮಗೆ ಆಶ್ರಯ ಕೊಡ್ಲಿ.
ಜೀವ ತೆಗೆಯೋದೂ ನಾನೇ, ಜೀವ ಕೊಡೋದೂ ನಾನೇ.+
ಗಾಯ ಮಾಡೋದೂ ನಾನೇ,+ ವಾಸಿ ಮಾಡೋದೂ ನಾನೇ.+
ನನ್ನ ಕೈಯಿಂದ ಯಾರಿಗೂ ಯಾರನ್ನೂ ಬಿಡಿಸಕ್ಕಾಗಲ್ಲ.+
40 ನಾನು ನನ್ನ ಕೈಯೆತ್ತಿ,*
“ಶಾಶ್ವತಕ್ಕೂ ಜೀವಿಸೋ ನನ್ನ ಮೇಲೆ” ಆಣೆ ಇಟ್ಟು,+
41 ಪಳಪಳ ಹೊಳೆಯೋ ನನ್ನ ಕತ್ತಿನ ಚೂಪಾಗಿ ಮಾಡಿ,
ನ್ಯಾಯತೀರ್ಪು ಮಾಡೋಕೆ ಸಿದ್ಧನಾಗಿ,+
ನನ್ನ ಶತ್ರುಗಳಿಗೆ ಸೇಡು ತೀರಿಸ್ತೀನಿ,+
ನನ್ನನ್ನ ದ್ವೇಷಿಸೋರಿಗೆ ಶಿಕ್ಷೆ ಕೊಡ್ತೀನಿ.
42 ನನ್ನ ಕೈಯಿಂದ ಸತ್ತವರ, ಸೆರೆಸಿಕ್ಕವರ ರಕ್ತದಿಂದ
ನನ್ನ ಬಾಣಗಳು ಮತ್ತೇರೋ ತರ ಮಾಡ್ತೀನಿ.
ಶತ್ರುಗಳಲ್ಲಿರುವ ನಾಯಕರ ರುಂಡಗಳನ್ನ ಚೆಂಡಾಡಿ,
ನನ್ನ ಕತ್ತಿ ಅವರ ಮಾಂಸ ತಿನ್ನೋ ತರ ಮಾಡ್ತೀನಿ.’
44 ಹೀಗೆ ಮೋಶೆ ಬಂದು ಈ ಹಾಡಿನ ಪದಗಳನ್ನ ಜನ್ರಿಗೆ ಕೇಳಿಸೋ ಹಾಗೆ ಹೇಳಿದ.+ ಅವನಿಗೆ ನೂನನ ಮಗ ಹೋಷೇಯ*+ ಸಹಾಯ ಮಾಡಿದ. 45 ಮೋಶೆ ಇದನ್ನೆಲ್ಲ ಇಸ್ರಾಯೇಲ್ಯರಿಗೆ ಹೇಳಿ ಮುಗಿಸಿದ ಮೇಲೆ 46 ಅವರಿಗೆ “ನಾನು ಇವತ್ತು ನಿಮಗೆ ಹೇಳಿದ ಎಚ್ಚರಿಕೆ ಮಾತುಗಳನ್ನೆಲ್ಲ ಹೃದಯದಲ್ಲಿ ಇಟ್ಕೊಳ್ಳಿ.+ ಆಗ, ಈ ನಿಯಮ ಪುಸ್ತಕದ ಎಲ್ಲ ನಿಯಮಗಳನ್ನ ಪಾಲಿಸಬೇಕು ಅಂತ ನೀವು ನಿಮ್ಮ ಮಕ್ಕಳಿಗೆ ಹೇಳಕ್ಕಾಗುತ್ತೆ.+ 47 ಇವೆಲ್ಲ ಸುಳ್ಳಲ್ಲ, ಇವುಗಳನ್ನ ಪಾಲಿಸೋದ್ರಿಂದ ನೀವು ಬದುಕಿ ಬಾಳ್ತೀರ.+ ಇವುಗಳ ಪ್ರಕಾರ ನಡೆದ್ರೆ ನೀವು ಯೋರ್ದನ್ ನದಿ ದಾಟಿ ವಶ ಮಾಡ್ಕೊಳ್ಳೋ ದೇಶದಲ್ಲಿ ಹೆಚ್ಚು ವರ್ಷ ಬದುಕ್ತೀರ” ಅಂದ.
48 ಅದೇ ದಿನ ಯೆಹೋವ ಮೋಶೆಗೆ 49 “ನೀನು ಯೆರಿಕೋ ಮುಂದೆ ಇರೋ ಮೋವಾಬ್ ದೇಶದ ಅಬಾರೀಮ್ ಬೆಟ್ಟಕ್ಕೆ+ ಹೋಗು. ಅಲ್ಲಿ ನೆಬೋ ಬೆಟ್ಟ+ ಹತ್ತು. ಅಲ್ಲಿಂದ, ನಾನು ಇಸ್ರಾಯೇಲ್ಯರಿಗೆ ಆಸ್ತಿಯಾಗಿ ಕೊಡೋ ಕಾನಾನ್ ದೇಶನ+ ನೋಡು. 50 ಆ ಬೆಟ್ಟದ ಮೇಲೆ ನೀನು ಸಾಯ್ತೀಯ. ನಿನ್ನ ಅಣ್ಣ ಆರೋನ ಹೋರ್ ಬೆಟ್ಟದ+ ಮೇಲೆ ಸತ್ತಮೇಲೆ ಅವನಿಗೆ ಸಮಾಧಿ ಆದ ಹಾಗೆ ನಿನಗೂ ಸಮಾಧಿ ಆಗುತ್ತೆ. 51 ಯಾಕಂದ್ರೆ ನೀವಿಬ್ರೂ ಚಿನ್ ಕಾಡು ಪ್ರದೇಶದ ಕಾದೇಶಿನಲ್ಲಿದ್ದಾಗ ಮೆರೀಬಾ ನೀರಿನ+ ಹತ್ರ ನನಗೆ ನಂಬಿಗಸ್ತರಾಗಿ ನಡ್ಕೊಳ್ಳಲಿಲ್ಲ. ನೀವು ಇಸ್ರಾಯೇಲ್ಯರ ಮುಂದೆ ನನಗೆ ಗೌರವ ಕೊಡಲಿಲ್ಲ.+ 52 ನಾನು ಇಸ್ರಾಯೇಲ್ಯರಿಗೆ ಕೊಡೋ ದೇಶನ ನೀನು ಈಗ ದೂರದಿಂದ ನೋಡು. ಆದ್ರೆ ಆ ದೇಶಕ್ಕೆ ಹೋಗಬಾರದು”+ ಅಂದನು.