ಯೋಹಾನನಿಗೆ ಕೊಟ್ಟ ಪ್ರಕಟನೆ
7 ಆಮೇಲೆ ನಾಲ್ಕು ದೇವದೂತರು ಭೂಮಿಯ ನಾಲ್ಕು ಮೂಲೆಗಳಲ್ಲಿ ನಿಂತಿರೋದನ್ನ ನಾನು ನೋಡ್ದೆ. ಅವರು ಭೂಮಿಯ ನಾಲ್ಕು ಗಾಳಿಗಳನ್ನ ಗಟ್ಟಿಯಾಗಿ ಹಿಡ್ಕೊಂಡಿದ್ರು. ಯಾಕಂದ್ರೆ ಭೂಮಿ ಮೇಲಾಗಲಿ ಸಮುದ್ರದ ಮೇಲಾಗಲಿ ಮರದ ಮೇಲಾಗಲಿ ಯಾವ ಗಾಳಿನೂ ಬೀಸದೆ ಇರೋ ತರ ಅವರು ತಡೆದಿದ್ರು. 2 ಆಗ ಪೂರ್ವದಿಂದ ಇನ್ನೊಬ್ಬ ದೇವದೂತ ಮೇಲೆ ಬರೋದನ್ನ ನಾನು ನೋಡ್ದೆ. ಅವನು ಜೀವ ಇರೋ ದೇವರ ಮುದ್ರೆಯನ್ನ ಹಿಡ್ಕೊಂಡಿದ್ದ. ಭೂಮಿಯನ್ನ ಸಮುದ್ರವನ್ನ ಹಾನಿಮಾಡೋಕೆ ಅನುಮತಿ ಸಿಕ್ಕಿದ್ದ ನಾಲ್ಕು ದೇವದೂತರಿಗೆ ಈ ದೇವದೂತ ಜೋರಾಗಿ ಹೀಗಂದ: 3 “ನಮ್ಮ ದೇವರ ಸೇವಕರ ಹಣೆ ಮೇಲೆ ಮುದ್ರೆ ಒತ್ತೋ+ ತನಕ ಭೂಮಿಗಾಗಲಿ, ಸಮುದ್ರಕ್ಕಾಗಲಿ, ಮರಗಳಿಗಾಗಲಿ ಹಾನಿ ಮಾಡಬೇಡಿ.”+
4 ಮುದ್ರೆ ಒತ್ತಿಸ್ಕೊಂಡವ್ರ ಸಂಖ್ಯೆ ಎಷ್ಟು ಅಂತ ನಾನು ಕೇಳಿಸ್ಕೊಂಡೆ. ಅವ್ರ ಸಂಖ್ಯೆ 1,44,000.+ ಅವ್ರೆಲ್ಲ ಇಸ್ರಾಯೇಲಿನ ಬೇರೆಬೇರೆ ಕುಲದವರಾಗಿದ್ರು:+
5 ಯೆಹೂದ ಕುಲದಿಂದ ಮುದ್ರೆ ಒತ್ತಿಸ್ಕೊಂಡವ್ರ ಸಂಖ್ಯೆ 12,000.
ರೂಬೇನ್ ಕುಲದಿಂದ 12,000.
ಗಾದ್ ಕುಲದಿಂದ 12,000.
6 ಅಶೇರ್ ಕುಲದಿಂದ 12,000.
ನಫ್ತಾಲಿ ಕುಲದಿಂದ 12,000.
ಮನಸ್ಸೆ+ ಕುಲದಿಂದ 12,000.
7 ಸಿಮೆಯೋನ್ ಕುಲದಿಂದ 12,000.
ಲೇವಿ ಕುಲದಿಂದ 12,000.
ಇಸ್ಸಾಕಾರ್ ಕುಲದಿಂದ 12,000.
8 ಜೆಬುಲೂನ್ ಕುಲದಿಂದ 12,000.
ಯೋಸೇಫ್ ಕುಲದಿಂದ 12,000.
ಬೆನ್ಯಾಮೀನ್ ಕುಲದಿಂದ 12,000.
9 ಆಮೇಲೆ ನಾನು ನೋಡಿದಾಗ ಯಾರಿಂದಾನೂ ಲೆಕ್ಕಮಾಡೋಕೆ ಆಗದಷ್ಟು ಜನ್ರ ಒಂದು ದೊಡ್ಡ ಗುಂಪು ಕಾಣಿಸ್ತು. ಅವರು ಬೇರೆಬೇರೆ ದೇಶ, ಕುಲ, ಜಾತಿ, ಭಾಷೆಯಿಂದ ಬಂದಿದ್ರು.+ ಅವರು ಬಿಳಿ ಬಟ್ಟೆ ಹಾಕೊಂಡು ಸಿಂಹಾಸನದ ಮುಂದೆ, ಕುರಿಮರಿಯ ಮುಂದೆ ನಿಂತಿದ್ರು.+ ಅವರು ಕೈಯಲ್ಲಿ ಖರ್ಜೂರದ ಗರಿಗಳನ್ನ ಹಿಡ್ಕೊಂಡಿದ್ರು.+ 10 ಅವರು ಗಟ್ಟಿಯಾಗಿ “ಸಿಂಹಾಸನದ ಮೇಲೆ ಕೂತಿರೋ ನಮ್ಮ ದೇವರಿಂದ,+ ಕುರಿಮರಿಯಿಂದ+ ನಮಗೆ ರಕ್ಷಣೆ ಸಿಗುತ್ತೆ” ಅಂತ ಕೂಗ್ತಿದ್ರು.
11 ಆ ಸಿಂಹಾಸನದ ಸುತ್ತ, ಹಿರಿಯರ+ ಸುತ್ತ ನಾಲ್ಕು ಜೀವಿಗಳ ಸುತ್ತ ಎಲ್ಲ ದೇವದೂತರು ನಿಂತಿದ್ರು. ಅವರು ಸಿಂಹಾಸನದ ಮುಂದೆ ಅಡ್ಡಬಿದ್ದು ದೇವರನ್ನ ಆರಾಧಿಸ್ತಾ ಹೀಗೆ ಹೇಳಿದ್ರು: 12 “ಆಮೆನ್! ನಮ್ಮ ದೇವರಿಗೆ ಯಾವಾಗ್ಲೂ ಸ್ತುತಿ, ಮಹಿಮೆ, ವಿವೇಕ, ಕೃತಜ್ಞತೆ, ಗೌರವ, ಶಕ್ತಿ, ಬಲ ಸಿಗ್ತಾ ಇರಲಿ.+ ಆಮೆನ್.”
13 ಆಗ ಆ ಹಿರಿಯರಲ್ಲಿ ಒಬ್ಬ “ಈ ಬಿಳಿ ಬಟ್ಟೆ+ ಹಾಕೊಂಡ ಜನ ಯಾರು? ಇವರು ಎಲ್ಲಿಂದ ಬಂದ್ರು?” ಅಂತ ನನಗೆ ಕೇಳಿದ. 14 ಆಗ ತಕ್ಷಣ ನಾನು “ಸ್ವಾಮಿ, ಅವರು ಯಾರಂತ ನಿನಗೇ ಗೊತ್ತು” ಅಂದೆ. ಆಗ ಆ ಹಿರಿಯ ಹೀಗೆ ಹೇಳಿದ: “ಇವರು ಮಹಾ ಸಂಕಟವನ್ನ+ ಪಾರಾಗಿ ಬಂದಿದ್ದಾರೆ. ತಮ್ಮ ಬಟ್ಟೆಗಳನ್ನ ಕುರಿಮರಿಯ ರಕ್ತದಲ್ಲಿ ಒಗೆದು ಬೆಳ್ಳಗೆ ಮಾಡ್ಕೊಂಡಿದ್ದಾರೆ.+ 15 ಅದಕ್ಕೇ ಇವರು ದೇವರ ಸಿಂಹಾಸನದ ಮುಂದೆ ಇದ್ದಾರೆ. ದೇವರ ಆಲಯದಲ್ಲಿ ಹಗಲೂರಾತ್ರಿ ಆತನ ಪವಿತ್ರ ಸೇವೆ ಮಾಡ್ತಿದ್ದಾರೆ. ಸಿಂಹಾಸನದ+ ಮೇಲೆ ಕೂತಿರೋ ದೇವರು ಅವ್ರನ್ನ ಕಾಪಾಡ್ತಾನೆ.*+ 16 ಇನ್ಮೇಲೆ ಅವ್ರಿಗೆ ಹಸಿವಾಗಲ್ಲ, ಬಾಯಾರಿಕೆ ಆಗಲ್ಲ. ಬಿಸಿಲಾಗಲಿ, ಬಿಸಿ ಗಾಳಿಯಾಗಲಿ ಅವ್ರಿಗೆ ತಟ್ಟಲ್ಲ.+ 17 ಯಾಕಂದ್ರೆ ಸಿಂಹಾಸನದ ಹತ್ರ* ಇರೋ ಕುರಿಮರಿ+ ಕುರುಬನ ತರ ಅವ್ರನ್ನ ನೋಡ್ಕೊತಾನೆ.+ ಜೀವಜಲದ*+ ಹತ್ರ ಅವ್ರನ್ನ ಕರ್ಕೊಂಡು ಹೋಗ್ತಾನೆ. ದೇವರು ಅವ್ರ ಕಣ್ಣೀರನ್ನ ಒರಸಿಬಿಡ್ತಾನೆ.”+