ಯೆಶಾಯ
40 “ನನ್ನ ಜನ್ರನ್ನ ಸಂತೈಸಿ” ಅಂತ ನಿಮ್ಮ ದೇವರು ಹೇಳ್ತಾನೆ.+
2 “ಯೆರೂಸಲೇಮಿನ ಮನಸ್ಸಿಗೆ ಮುದ ನೀಡೋ ತರ ಮಾತಾಡಿ,
ಅದ್ರ ಸಂಕಷ್ಟದ ದಿನಗಳು ಮುಗಿತು ಅಂತ,
ಅದ್ರ ಅಪರಾಧಕ್ಕೆ ತಕ್ಕ ಪರಿಹಾರ ಸಿಕ್ತು ಅಂತ ತಿಳಿಸಿ.+
ಅದ್ರ ಪಾಪಗಳಿಗಾಗಿ ಯೆಹೋವನ ಕೈಯಿಂದ ಅದಕ್ಕೆ ಎರಡು ಪಟ್ಟು ಶಿಕ್ಷೆ ಸಿಕ್ತು.”+
ಮರುಭೂಮಿಯನ್ನ ಹಾದುಹೋಗೋ ಒಂದು ನೇರವಾದ ಹೆದ್ದಾರಿಯನ್ನ ನಮ್ಮ ದೇವರಿಗಾಗಿ ತಯಾರಿ ಮಾಡಿ.+
4 ಎಲ್ಲ ಕಣಿವೆಗಳು ಮುಚ್ಚಲಿ,
ಎಲ್ಲ ಪರ್ವತಗಳು ಮತ್ತು ಬೆಟ್ಟಗಳು ತಗ್ಗಲಿ.
ಒರಟಾದ ನೆಲ ಸಮತಟ್ಟಾಗಲಿ,
ಏರುಪೇರಾದ ನೆಲ ಕಣಿವೆಯ ಬಯಲಾಗಲಿ.+
5 ಯೆಹೋವನ ಮಹಿಮೆ ಎಲ್ರಿಗೂ ಗೊತ್ತಾಗುತ್ತೆ,+
ಮನುಷ್ಯರೆಲ್ಲ ಅದನ್ನ ಒಟ್ಟಾಗಿ ನೋಡ್ತಾರೆ,+
ಯಾಕಂದ್ರೆ ಯೆಹೋವ ಈ ಮಾತನ್ನ ಹೇಳಿದ್ದಾನೆ.”
6 ಕೇಳಿ! ಯಾರೋ ಒಬ್ಬ “ಕೂಗಿ ಹೇಳಿ!” ಅಂತ ಹೇಳ್ತಿದ್ದಾನೆ.
ಮತ್ತೊಬ್ಬ “ಏನಂತ ಕೂಗಿ ಹೇಳಲಿ?” ಅಂತ ಕೇಳ್ತಿದ್ದಾನೆ.
“ಮನುಷ್ಯರೆಲ್ಲ ಹಸಿರು ಹುಲ್ಲಿನ ತರ ಇದ್ದಾರೆ.
ಅವರ ಶಾಶ್ವತ ಪ್ರೀತಿ ಹೊಲದ ಹೂವಿನ ತರ ಇದೆ.+
ನಿಜ, ಜನ್ರು ಬರೀ ಹಸಿರು ಹುಲ್ಲಿಗೆ ಸಮವಾಗಿದ್ದಾರೆ.
ಯೆರೂಸಲೇಮಿಗೆ ಸಿಹಿಸುದ್ದಿ ತರುತ್ತಿರುವವಳೇ,
ಗಟ್ಟಿಯಾದ ಧ್ವನಿಯಲ್ಲಿ ಕೂಗು.
ಹೌದು, ಗಟ್ಟಿಯಾದ ಧ್ವನಿಯಲ್ಲಿ ಕೂಗು, ಹೆದರಬೇಡ.
ಯೆಹೂದದ ಪಟ್ಟಣಗಳಿಗೆ “ಇಗೋ ನಿಮ್ಮ ದೇವರು ಇಲ್ಲಿದ್ದಾನೆ” ಅಂತ ಹೇಳು.+
ನೋಡು! ದೇವರು ಕೊಡೋ ಪ್ರತಿಫಲ ದೇವರ ಹತ್ರನೇ ಇದೆ,
ಆತನು ಕೊಡೋ ಸಂಬಳ ಆತನ ಮುಂದೆನೇ ಇದೆ.+
11 ಆತನು ಕುರುಬನ ತರ ತನ್ನ ಹಿಂಡಿನ ಕಾಳಜಿ ವಹಿಸ್ತಾನೆ.*+
ಆತನು ಎಲ್ಲ ಕುರಿಮರಿಗಳನ್ನ ಒಟ್ಟುಗೂಡಿಸಿ,
ಅವುಗಳನ್ನ ಎತ್ತಿ ತನ್ನ ಎದೆಗೆ ಅಪ್ಪಿಕೊಳ್ತಾನೆ.
ಮರಿ ಹಾಕಿರೋ ಕುರಿಗಳನ್ನ ಮೆಲ್ಲಮೆಲ್ಲನೆ ನಡಿಸ್ತಾನೆ.+
12 ಸಮುದ್ರದ ನೀರನ್ನೆಲ್ಲ ಯಾರು ತಾನೇ ಕೈಯಿಂದ ಅಳತೆ ಮಾಡಿದ್ದಾರೆ?+
ಆಕಾಶವನ್ನ ಯಾರು ತಾನೇ ಗೇಣಿಂದ* ಅಳೆದಿದ್ದಾರೆ?
ಭೂಮಿಯ ಮಣ್ಣನ್ನೆಲ್ಲ ಯಾರು ತಾನೇ ತಮ್ಮ ಮುಷ್ಟಿಯಲ್ಲಿ ಹಿಡ್ಕೊಂಡಿದ್ದಾರೆ?+
ತ್ರಾಸಿನಲ್ಲಿ ಪರ್ವತವನ್ನ, ತಕ್ಕಡಿಯಲ್ಲಿ ಬೆಟ್ಟವನ್ನ ಯಾರು ತಾನೇ ತೂಗಿ ನೋಡಿದ್ದಾರೆ?
13 ಯೆಹೋವನ ಪವಿತ್ರ ಶಕ್ತಿಯನ್ನ ಯಾರು ತಾನೇ ಅಳೆದು ನೋಡಿದ್ದಾರೆ?*
ಯಾರು ತಾನೇ ಆತನಿಗೆ ಸಲಹೆ ಕೊಡೋಕೆ ಆಗುತ್ತೆ?+
14 ತಿಳುವಳಿಕೆಯನ್ನ ಪಡ್ಕೊಳೋಕೆ ಆತನು ಯಾರ ಹತ್ರ ವಿಚಾರಿಸ್ತಾನೆ?
ನ್ಯಾಯದ ದಾರಿ ಯಾವುದು ಅಂತ ಆತನಿಗೆ ಯಾರು ಕಲಿಸ್ತಾರೆ?
ಆತನಿಗೆ ಯಾರು ಜ್ಞಾನ ಕೊಡ್ತಾರೆ?
ನಿಜವಾದ ತಿಳುವಳಿಕೆಯ ದಾರಿಯನ್ನ ಆತನಿಗೆ ಯಾರು ತೋರಿಸ್ತಾರೆ?+
ಇಗೋ! ಆತನು ದ್ವೀಪಗಳನ್ನ ಧೂಳಿನ ಕಣಗಳ ತರ ಮೇಲೆತ್ತುತ್ತಾನೆ.
16 ಲೆಬನೋನಿನ ಎಲ್ಲ ಮರಗಳನ್ನ ಒಟ್ಟುಸೇರಿಸಿದ್ರೂ ಯಜ್ಞವೇದಿಗೆ ಸಾಕಷ್ಟು ಕಟ್ಟಿಗೆ ಸಿಗಲ್ಲ,
ಅಲ್ಲಿರೋ ಕಾಡು ಪ್ರಾಣಿಗಳು ಸರ್ವಾಂಗಹೋಮ ಬಲಿಗೆ ಸಾಕಾಗಲ್ಲ.
17 ಜನಾಂಗಗಳೆಲ್ಲ ಆತನ ಮುಂದೆ ಅಸ್ತಿತ್ವದಲ್ಲೇ ಇಲ್ವೇನೋ ಅನ್ನೋ ತರ ಇರ್ತವೆ,+
ಆತನ ದೃಷ್ಟಿಯಲ್ಲಿ ಅವು ಏನೇನೂ ಅಲ್ಲ, ಬರೀ ಶೂನ್ಯ.+
18 ನೀವು ದೇವ್ರನ್ನ ಯಾರ ಜೊತೆ ಹೋಲಿಸೋಕಾಗುತ್ತೆ?+
ಯಾವ ವಸ್ತು ತಾನೇ ಆತನ ಹೋಲಿಕೆಯಲ್ಲಿದೆ?+
19 ಕರಕುಶಲಗಾರ ಒಂದು ಮೂರ್ತಿಯನ್ನ ಕೆತ್ತುತ್ತಾನೆ,*
ಲೋಹದ ಕೆಲಸಗಾರ ಅದಕ್ಕೆ ಚಿನ್ನದ ತಗಡನ್ನ ಹೊದಿಸ್ತಾನೆ,+
ಆಮೇಲೆ ಅದಕ್ಕಾಗಿ ಬೆಳ್ಳಿಯ ಸರಪಣಿಗಳನ್ನ ಮಾಡ್ತಾನೆ.
20 ಒಬ್ಬ ಮನುಷ್ಯ ಮೂರ್ತಿಯನ್ನ ಮಾಡೋಕೆ ಒಂದು ಮರವನ್ನ,+
ಅದ್ರಲ್ಲೂ ಹಾಳಾಗದ ಮರವನ್ನ ಆಯ್ಕೆಮಾಡ್ಕೊಳ್ತಾನೆ.
ಆಮೇಲೆ ಉರುಳಿ ಬೀಳದ ಒಂದು ಮೂರ್ತಿಯನ್ನ ಕೆತ್ತಿಸೋಕೆ ಅವನು
ಒಬ್ಬ ಕರಕುಶಲಗಾರನಿಗಾಗಿ ಹುಡುಕ್ತಾನೆ.+
21 ಇದು ನಿನಗೆ ಗೊತ್ತಿಲ್ವಾ?
ಇದ್ರ ಬಗ್ಗೆ ನೀನು ಕೇಳಿಸ್ಕೊಂಡಿಲ್ವಾ?
ಮುಂಚೆನೇ ಇದ್ರ ಬಗ್ಗೆ ನಿನಗೆ ಹೇಳಿರಲಿಲ್ವಾ?
ಭೂಮಿಗೆ ಅಡಿಪಾಯ ಹಾಕಿದಾಗಿಂದ ಇದ್ರ ಬಗ್ಗೆ ನಿನಗೆ ತಿಳುವಳಿಕೆ ಇಲ್ವಾ?+
ಆತನು ಆಕಾಶವನ್ನ ಒಂದು ತೆಳುವಾದ ಬಟ್ಟೆ ತರ ಹಾಸಿ,
ವಾಸಿಸೋಕೆ ಒಂದು ಡೇರೆಯನ್ನ ಬಿಚ್ಚಿದ ಹಾಗೆ ಅವುಗಳನ್ನ ಬಿಚ್ಚಿಟ್ಟಿದ್ದಾನೆ.+
23 ಆತನು ಉನ್ನತ ಅಧಿಕಾರಿಗಳನ್ನ ಕೆಳಗಿಳಿಸ್ತಾನೆ,
ಭೂಮಿಯ ನ್ಯಾಯಾಧೀಶರನ್ನ* ನಿಷ್ಪ್ರಯೋಜಕರನ್ನಾಗಿ ಮಾಡ್ತಾನೆ.
24 ಅವರು ಈಗಷ್ಟೆ ನೆಟ್ಟಿರೋ ಗಿಡದ ತರ ಇದ್ದಾರೆ,
ಅವ್ರನ್ನ ಈಗಷ್ಟೆ ಬಿತ್ತಲಾಗಿದೆ,
ಅವ್ರ ಬೇರು ಭೂಮಿಯೊಳಕ್ಕೆ ಇಳಿಯೋ ಮುಂಚೆನೇ
ಅವ್ರನ್ನ ಊದಲಾಯ್ತು, ಅವರು ಒಣಗಿಹೋದ್ರು.
ಗಾಳಿ ಬಂದು ಕೂಳೆಯನ್ನ ತಗೊಂಡು ಹೋಗೋ ತರ ಅವ್ರನ್ನ ತಗೊಂಡು ಹೋಯ್ತು.+
25 ಪವಿತ್ರ ದೇವರು ಹೀಗೆ ಹೇಳ್ತಿದ್ದಾನೆ “ನೀವು ನನ್ನನ್ನ ಯಾರಿಗೆ ಹೋಲಿಸ್ತೀರ?
ನನ್ನನ್ನ ಯಾರಿಗೆ ಸರಿಸಮ ಮಾಡ್ತೀರ?
26 ನಿಮ್ಮ ಕಣ್ಣುಗಳನ್ನ ಮೇಲೆತ್ತಿ, ಆಕಾಶದ ಕಡೆ ನೋಡಿ.
ನಕ್ಷತ್ರಗಳನ್ನ ಸೃಷ್ಟಿ ಮಾಡಿದವರು ಯಾರು?+
ಅವುಗಳಲ್ಲಿ ಒಂದೊಂದನ್ನ ಎಣಿಸಿ ಲೆಕ್ಕಮಾಡಿದವನೇ.
ಆತನು ಅವುಗಳಲ್ಲಿ ಪ್ರತಿಯೊಂದನ್ನ ಹೆಸರಿಡಿದು ಕರಿತಾನೆ.+
ಆತನ ಅಪಾರ ಶಕ್ತಿಯಿಂದಾಗಿ, ಭಯವಿಸ್ಮಯ ಹುಟ್ಟಿಸೋ ಆತನ ಬಲದಿಂದಾಗಿ,+
ಅವುಗಳಲ್ಲಿ ಒಂದೂ ಕಾಣದೆ ಹೋಗಲ್ಲ.
ಇಸ್ರಾಯೇಲೇ, ನೀನು ಯಾಕೆ ಘೋಷಿಸ್ತೀಯ?+
28 ಭೂಮಿ ಮೇಲಿರೋ ಎಲ್ಲವನ್ನ ಸೃಷ್ಟಿಮಾಡಿದ ಯೆಹೋವ ಶಾಶ್ವತವಾಗಿ ದೇವರಾಗಿದ್ದಾನೆ+ ಅಂತ
ನಿನಗೆ ಗೊತ್ತಿಲ್ವಾ? ಅದನ್ನ ನೀನು ಕೇಳಿಸ್ಕೊಂಡಿಲ್ವಾ?
ಆತನು ಯಾವತ್ತೂ ದಣಿಯಲ್ಲ, ಯಾವತ್ತೂ ಬಳಲಿ ಹೋಗಲ್ಲ.+
ದೇವರಿಗಿರೋ ತಿಳುವಳಿಕೆಯ ಆಳವನ್ನ ಯಾರಿಂದಾನೂ ಅಳೆಯೋಕೆ ಆಗಲ್ಲ.*+
30 ಹುಡುಗರು ದಣಿದು ಬಳಲಿ ಹೋಗ್ತಾರೆ,
ಯುವಕರು ಎಡವಿ ಬೀಳ್ತಾರೆ.
31 ಆದ್ರೆ ಯೆಹೋವನಲ್ಲಿ ನಿರೀಕ್ಷೆ ಇಡೋರು ಹೊಸಬಲ ಪಡಿತಾರೆ.
ಹದ್ದಿನ ತರ ರೆಕ್ಕೆಗಳನ್ನ ಚಾಚಿ ಅವರು ಎತ್ರದಲ್ಲಿ ಹಾರ್ತಾರೆ.+
ಅವರು ಓಡಿದ್ರೂ ದಣಿಯಲ್ಲ,
ಅವರು ನಡೆದ್ರೂ ಬಳಲಿ ಹೋಗಲ್ಲ.”+