ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫೆರೆನ್ಸ್ಗಳು
ಜುಲೈ 5-11
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 11–12
“ಯೆಹೋವ ಇಷ್ಟಪಡೋ ಆರಾಧನೆ”
it-2-E ಪುಟ 1007 ಪ್ಯಾರ 4
ಪ್ರಾಣ
ಪೂರ್ಣ ಪ್ರಾಣದಿಂದ ಸೇವೆ ಮಾಡೋದು. “ಪ್ರಾಣ” ಅಂದ್ರೆ ಒಬ್ಬ ಪೂರ್ತಿ ಮನುಷ್ಯ ಅಂತ ಅರ್ಥ. ಆದರೂ ಕೆಲವು ಬೈಬಲ್ ವಚನಗಳಲ್ಲಿ ದೇವರನ್ನ ಪೂರ್ಣ ಹೃದಯದಿಂದ ಮತ್ತು ಪೂರ್ಣ ಪ್ರಾಣದಿಂದ ಹುಡುಕಬೇಕು, ಪ್ರೀತಿಸಬೇಕು, ಸೇವೆ ಮಾಡಬೇಕು ಅಂತ ಹೇಳುತ್ತೆ. (ಧರ್ಮೋ 4:29; 11:13, 18) ಧರ್ಮೋಪದೇಶಕಾಂಡ 6:5 ರಲ್ಲಿ “ನಿಮ್ಮ ದೇವರಾದ ಯೆಹೋವನನ್ನ ನೀವು ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಶಕ್ತಿಯಿಂದ ಪ್ರೀತಿಸಬೇಕು” ಅಂತ ಹೇಳುತ್ತೆ. ಒಬ್ಬ ವ್ಯಕ್ತಿ ಪೂರ್ಣ ಪ್ರಾಣದಿಂದ ಪೂರ್ಣ ಶಕ್ತಿಯಿಂದಷ್ಟೇ ಅಲ್ಲ, “ಪೂರ್ಣ ಮನಸ್ಸಿಂದ” ದೇವರ ಸೇವೆ ಮಾಡಬೇಕು ಅಂತ ಯೇಸು ಹೇಳಿದನು. (ಮಾರ್ಕ 12:30; ಲೂಕ 10:27) ಪ್ರಾಣ ಅಂದ್ರೆ ಇಡೀ ಮನುಷ್ಯ ಅನ್ನೋ ಅರ್ಥ ಇದೆ ಅಂದ್ಮೇಲೆ ಪ್ರಾಣದ ಜೊತೆ ಬೇರೆದನ್ನೆಲ್ಲ ಯಾಕೆ ಬಿಡಿಸಿ ಬಿಡಿಸಿ ಹೇಳಿದ್ರು? ಇದನ್ನ ಅರ್ಥ ಮಾಡ್ಕೊಳಕ್ಕೆ ಒಂದು ಉದಾಹರಣೆ ನೋಡಿ. ಒಬ್ಬ ವ್ಯಕ್ತಿ ತನ್ನ ಪ್ರಾಣವನ್ನ ಅಂದ್ರೆ ತನ್ನನ್ನೇ ಇನ್ನೊಬ್ಬ ವ್ಯಕ್ತಿಗೆ ದಾಸನಾಗಿ ಮಾರಿಕೊಂಡಿದ್ದಾನೆ ಅಂದ್ಕೊಳ್ಳಿ. ಆ ದಾಸನಿಗೆ ತನ್ನ ಯಜಮಾನನನ್ನ ಮೆಚ್ಚಿಸಬೇಕು ಅನ್ನೋ ಆಸೆ ಇಲ್ಲದೇ ಇದ್ರೆ ಅವನು ತನ್ನ ಪೂರ್ಣ ಪ್ರಾಣವನ್ನ ಮಾರಿಕೊಂಡಿರೋದಾದ್ರೂ ಪೂರ್ಣ ಮನಸ್ಸಿಂದ ಕೆಲಸ ಮಾಡಕ್ಕಾಗಲ್ಲ. ಆಗ ಅವನು ಸಂಪೂರ್ಣ ಶಕ್ತಿಯಿಂದ ಪೂರ್ತಿ ಗಮನ ಕೊಟ್ಟು ತನ್ನ ಯಜಮಾನ ಕೊಟ್ಟ ಕೆಲಸನ ಮಾಡಕ್ಕಾಗಲ್ಲ. (ಎಫೆ 6:5; ಕೊಲೊ 3:22 ಹೋಲಿಸಿ.) ಹಾಗಾಗಿ “ಪೂರ್ಣ ಪ್ರಾಣದಿಂದ” ದೇವರ ಸೇವೆ ಮಾಡೋದು ಅಂದ್ರೆ ಅದರಲ್ಲಿ ನಮ್ಮ ಇಡೀ ದೇಹ, ನಮ್ಮ ಸಂಪೂರ್ಣ ಶಕ್ತಿ, ನಮ್ಮ ಸಂಪೂರ್ಣ ಗಮನ ಮತ್ತು ನಮ್ಮ ಆಸೆ ಎಲ್ಲ ಒಳಗೂಡಿರುತ್ತೆ. ಅದಕ್ಕೆ ಪೂರ್ಣ ಪ್ರಾಣದಿಂದ, ಪೂರ್ಣ ಹೃದಯದಿಂದ, ಪೂರ್ಣ ಶಕ್ತಿಯಿಂದ, ಪೂರ್ಣ ಮನಸ್ಸಿಂದ ದೇವರ ಸೇವೆ ಮಾಡಿ ಅಂತ ಬಿಡಿಸಿ ಬಿಡಿಸಿ ಹೇಳಿದ್ದಾರೆ.—ಮತ್ತಾ 5:28-30; ಲೂಕ 21:34-36; ಎಫೆ 6:6-9; ಫಿಲಿ 3:19; ಕೊಲೊ 3:23, 24 ಹೋಲಿಸಿ.
it-1-E ಪುಟ 84 ಪ್ಯಾರ 3
ಯಜ್ಞವೇದಿ
ಯೆಹೋವ ದೇವರು ಇಸ್ರಾಯೇಲ್ಯರಿಗೆ ನೀವು ಸುಳ್ಳುದೇವರುಗಳ ಯಜ್ಞವೇದಿಗಳನ್ನ ನಾಶ ಮಾಡಬೇಕು, ಅವರ ವಿಗ್ರಹಸ್ತಂಭಗಳನ್ನ, ಪೂಜಾಕಂಬಗಳನ್ನ ಚೂರುಚೂರು ಮಾಡಬೇಕು ಅಂತ ಹೇಳಿದ್ರು. (ವಿಮೋ 34:13; ಧರ್ಮೋ 7:5, 6; 12:1-3) ಅಷ್ಟೇ ಅಲ್ಲ, ಕಾನಾನ್ಯರ ತರ ತಮ್ಮ ಮಕ್ಕಳನ್ನ ಸುಳ್ಳುದೇವರುಗಳಿಗೆ ಬೆಂಕಿಯಲ್ಲಿ ಬಲಿ ಕೊಡಬಾರದು ಅಂತನೂ ಹೇಳಿದ್ರು. (ಧರ್ಮೋ 12:30, 31; 16:21) ಇಸ್ರಾಯೇಲ್ಯರು ಸಿಕ್ಕಸಿಕ್ಕಲ್ಲಿ ಯಜ್ಞವೇದಿಗಳನ್ನ ಕಟ್ಟಬಾರದಿತ್ತು. ಯೆಹೋವ ಹೇಳಿದ ಕಡೆನೇ ಒಂದೇ ಒಂದು ಯಜ್ಞವೇದಿಯನ್ನ ಕಟ್ಟಬೇಕಿತ್ತು. (ಧರ್ಮೋ 12:2-6, 13, 14, 27; ಬಾಬೆಲಿನವರು ಇಷ್ಟಾರ್ ದೇವತೆಗೆ ಅಂತಾನೇ 180 ಯಜ್ಞವೇದಿಗಳನ್ನ ಕಟ್ಟಿಸಿದ್ರು.)
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 925-926
ಗೆರಿಜ್ಜೀಮ್ ಬೆಟ್ಟ
ಮೋಶೆ ಹೇಳಿದ ತರಾನೇ ಇಸ್ರಾಯೇಲಿನ ಎಲ್ಲಾ ಕುಲದವರು ಕಾನಾನಿಗೆ ಬಂದಮೇಲೆ ಗೆರಿಜ್ಜೀಮ್ ಮತ್ತು ಏಬಾಲ್ ಬೆಟ್ಟದ ಹತ್ರ ಸೇರಿಬಂದ್ರು. ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಯೋಸೇಫ್, ಮತ್ತು ಬೆನ್ಯಾಮೀನ್ ಕುಲದವರು ಗೆರಿಜ್ಜೀಮ್ ಬೆಟ್ಟದ ಮುಂದೆ ನಿಂತುಕೊಂಡರು. ಇನ್ನೂ ಆರು ಕುಲದವರು ಏಬಾಲ್ ಬೆಟ್ಟದ ಮುಂದೆ ನಿಂತಿದ್ರು, ಒಪ್ಪಂದದ ಮಂಜೂಷ ಹೊತ್ಕೊಂಡಿದ್ದ ಲೇವಿಯರು ಕಣಿವೆಯಲ್ಲಿ ನಿಂತಿದ್ರು. ಇಸ್ರಾಯೇಲ್ಯರು ಯೆಹೋವನ ಆಜ್ಞೆಗಳನ್ನ ಪಾಲಿಸಿದ್ರೆ ಅವರಿಗೆ ಆಶೀರ್ವಾದ ಸಿಗುತ್ತೆ, ಇಲ್ಲಾಂದ್ರೆ ಅವರ ಮೇಲೆ ಶಾಪ ಬರುತ್ತೆ ಅಂತ ಓದಿ ಹೇಳಲಾಯ್ತು. (ಧರ್ಮೋ 11:29, 30; 27:11-13; ಯೆಹೋ 8:28-35)
ಜುಲೈ 12-18
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 13–15
“ಯೆಹೋವ ಬಡವರಿಗೆ ಕರುಣೆ ತೋರಿಸ್ತಾನೆ”
it-2-E ಪುಟ 1110 ಪ್ಯಾರ 3
ಹತ್ತನೇ ಒಂದು ಭಾಗ
ಇಸ್ರಾಯೇಲ್ಯರು ಪ್ರತಿ ವರ್ಷ ಲೇವಿಯರಿಗಂತ ಹತ್ತನೇ ಒಂದು ಭಾಗವನ್ನ ಸಾಮಾನ್ಯವಾಗಿ ತೆಗೆದಿಡುತ್ತಿದ್ದರು. ಅದರ ಜೊತೆ ಇನ್ನೂ ಒಂದು ಹತ್ತನೇ ಒಂದು ಭಾಗವನ್ನ ಅವರು ತೆಗೆದಿಡಬೇಕಿತ್ತು. ಇಸ್ರಾಯೇಲಿನ ಎಲ್ಲಾ ಕುಟುಂಬಗಳಿಗೂ ಯೆರೂಸಲೇಮಿಗೆ ಹಬ್ಬಕ್ಕೆ ಹೋದಾಗ ಇದ್ರಿಂದ ಸಹಾಯ ಆಗ್ತಿತ್ತು. ತುಂಬ ದೂರದಿಂದ ಯೆರೂಸಲೇಮಿಗೆ ಬರುವವರಿಗೆ ಹತ್ತನೇ ಒಂದು ಭಾಗವನ್ನ (ಪ್ರಾಣಿ ಅಥವಾ ಧಾನ್ಯ) ತರೋಕೆ ಕಷ್ಟ ಆಗ್ತಿತ್ತು. ಆಗ ಅವರು ಅದನ್ನ ಮಾರಿಬಿಟ್ಟು ಹಣ ತಗೊಂಡು ಬರಬಹುದಿತ್ತು. ಹೀಗೆ ಯೆರೂಸಲೇಮಲ್ಲಿ ದೇವರ ಆರಾಧನೆಗೆ ಅವರು ಸೇರಿಬಂದಾಗ ಊಟಕ್ಕೆ, ಖರ್ಚಿಗೆ ಆ ದುಡ್ಡನ್ನ ಬಳಸಬಹುದಿತ್ತು. (ಧರ್ಮೋ 12:4-7, 11, 17, 18; 14:22-27) ಆದ್ರೆ ಪ್ರತಿ ಮೂರು ವರ್ಷದ ಮತ್ತು ಆರು ವರ್ಷದ ಕೊನೆಯಲ್ಲಿ ಅವರು ತೆಗೆದಿಡುತ್ತಿದ್ದ ಆ ಹತ್ತನೇ ಒಂದು ಭಾಗವನ್ನ ಅವರಿಗೋಸ್ಕರ ಉಪಯೋಗಿಸೋ ಹಾಗಿರಲಿಲ್ಲ. ಅದನ್ನ ಲೇವಿಯರಿಗೆ, ವಿದೇಶಿಯರಿಗೆ, ವಿಧವೆಯರಿಗೆ ಮತ್ತು ಅನಾಥರಿಗೋಸ್ಕರ ಕೊಡಬೇಕಿತ್ತು.—ಧರ್ಮೋ 14:28, 29; 26:12.
it-2-E ಪುಟ 833
ಸಬ್ಬತ್ ವರ್ಷ
ಸಬ್ಬತ್ ವರ್ಷದಲ್ಲಿ ಸಾಲ ಮನ್ನಾ ಮಾಡಬೇಕು ಅನ್ನೋ ನಿಯಮ ಇತ್ತು. ಇಸ್ರಾಯೇಲ್ಯರು ಇನ್ನೊಬ್ಬರ ಸಾಲವನ್ನ ಮನ್ನಾ ಮಾಡಿದ್ರೆ ಯೆಹೋವ ದೇವರ ಹೆಸರಿಗೆ ಗೌರವ ಕೊಟ್ಟ ಹಾಗೆ ಆಗ್ತಿತ್ತು. ಈಗಿನ ಕೆಲವು ಪಂಡಿತರು ಹೀಗೆ ಹೇಳ್ತಾರೆ: ‘ಸಾಲ ಮನ್ನಾ ಆಗ್ತಿರಲಿಲ್ಲ, ಆದ್ರೆ ಅದನ್ನ ತೀರಿಸಲೇಬೇಕು ಅಂತ ಸಾಲ ಕೊಟ್ಟೋರು ಇಸ್ರಾಯೇಲ್ಯರನ್ನ ಒತ್ತಾಯ ಮಾಡಬಾರದಿತ್ತು.’ ಯಾಕಂದ್ರೆ, ಸಬ್ಬತ್ ವರ್ಷದಲ್ಲಿ ಇಸ್ರಾಯೇಲಿನ ರೈತರು ಏನೂ ಬೆಳೆಯದೇ ಇರೋದ್ರಿಂದ ಅವರಿಗೆ ಆದಾಯ ಬರುತ್ತಿರಲಿಲ್ಲ. ಆದ್ರೆ ವಿದೇಶಿಯರಿಗೆ ಇದ್ರಿಂದ ವಿನಾಯಿತಿ ಇರಲಿಲ್ಲ, ಅವರು ಸಾಲ ತೀರಿಸಲೇಬೇಕಿತ್ತು. (ಧರ್ಮೋ 15:1-3) ‘ಬಡವರಿಗೆ ಕೊಟ್ಟ ಸಾಲವನ್ನ ದಾನ ಅಂತ ಪರಿಗಣಿಸಿ ಮನ್ನಾ ಮಾಡಬಹುದಿತ್ತು. ಆದ್ರೆ ವ್ಯಾಪಾರಕ್ಕಾಗಿ ಕೊಟ್ಟ ಸಾಲವನ್ನ ಮನ್ನಾ ಮಾಡೋ ಹಾಗಿರಲಿಲ್ಲ’ ಅಂತ ಕೆಲವು ರಬ್ಬಿಗಳು ಹೇಳ್ತಾರೆ.
it-2-E ಪುಟ 978 ಪ್ಯಾರ 6
ಗುಲಾಮ
ಗುಲಾಮ ಮತ್ತು ಯಜಮಾನನಿಗೆ ಸಂಬಂಧಪಟ್ಟ ನಿಯಮಗಳು. ಇಸ್ರಾಯೇಲ್ಯರು ಅವರ ಹತ್ರ ಇದ್ದ ವಿದೇಶೀ ಗುಲಾಮರನ್ನ ಎಷ್ಟು ವರ್ಷ ಬೇಕಾದ್ರೂ ಇಟ್ಟುಕೊಳ್ಳಬಹುದಿತ್ತು. ಆ ವಿದೇಶಿಯರಲ್ಲಿ ಒಬ್ಬ ವ್ಯಕ್ತಿ ಗುಲಾಮನಾಗಿ ಸೇವೆ ಮಾಡಿದ್ದಾನೆ ಅಂದ್ರೆ ಅವನಾದ ಮೇಲೆ ಅವನ ಮಗನೂ ಗುಲಾಮನಾಗಿ ಅಲ್ಲಿ ಸೇವೆ ಮಾಡಬಹುದಿತ್ತು. (ಯಾಜ 25:44-46) ಆದ್ರೆ ಇಬ್ರಿಯ ಗುಲಾಮರಿಗೆ ಹೀಗಿರುತ್ತಿರಲಿಲ್ಲ. ಅವರನ್ನ ಏಳನೇ ವರ್ಷ ಅಥವಾ ಜೂಬಿಲಿ ವರ್ಷದಲ್ಲಿ ಬಿಡುಗಡೆ ಮಾಡಬೇಕಿತ್ತು. ಅವರನ್ನ ಗುಲಾಮರ ತರ ನಡೆಸಿಕೊಳ್ಳದೆ ಕೂಲಿ ಕೆಲಸಗಾರರ ತರ ನೋಡಬೇಕಿತ್ತು. (ವಿಮೋ 21:2; ಯಾಜ 25:10; ಧರ್ಮೋ 15:12) ಆದ್ರೆ ಅವನನ್ನ ಬಿಡುಗಡೆ ಮಾಡುವಾಗ ಅವನನ್ನ ಬರಿಗೈಯಲ್ಲಿ ಕಳಿಸೋ ಹಾಗಿರಲಿಲ್ಲ. ಅವನಿಗೆ ಉಡುಗೊರೆಗಳನ್ನ ಕೊಟ್ಟು ಕಳಿಸಬೇಕಿತ್ತು. ಇದ್ರಿಂದ ಅವನು ಸ್ವತಂತ್ರವಾಗಿ ಒಂದು ಹೊಸ ಜೀವನ ಶುರು ಮಾಡೋಕೆ ಅವನಿಗೆ ಸುಲಭ ಆಗ್ತಿತ್ತು. (ಧರ್ಮೋ 15:13-15)
ಆಧ್ಯಾತ್ಮಿಕ ಮುತ್ತುಗಳು
ವಾಚಕರಿಂದ ಪ್ರಶ್ನೆಗಳು
ವಿಮೋಚನಕಾಂಡ 23:19 ರಲ್ಲಿರುವ, “ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು” ಎಂಬ ನಿಷೇಧದಿಂದ ನಾವೇನನ್ನು ಕಲಿಯಸಾಧ್ಯವಿದೆ?
ಮೋಶೆಯ ಧರ್ಮಶಾಸ್ತ್ರದಲ್ಲಿರುವ ಈ ಆಜ್ಞೆಯು, ಬೈಬಲಿನಲ್ಲಿ ಮೂರು ಸಲ ಕಂಡುಬರುತ್ತದೆ. ಇದು, ಯಾವುದು ಸರಿ ಎಂಬುದರ ಕುರಿತಾದ ಯೆಹೋವನ ದೃಷ್ಟಿಕೋನ, ಆತನ ಕರುಣೆ ಮತ್ತು ಆತನ ಕೋಮಲಭಾವವನ್ನು ಅರ್ಥಮಾಡಿಕೊಳ್ಳುವಂತೆ ನಮಗೆ ಸಹಾಯಮಾಡಬಲ್ಲದು. ಆತನು ಸುಳ್ಳಾರಾಧನೆಯನ್ನು ಹೇಸುತ್ತಾನೆಂಬುದನ್ನು ಸಹ ಅದು ಎತ್ತಿತೋರಿಸುತ್ತದೆ.—ವಿಮೋಚನಕಾಂಡ 34:26; ಧರ್ಮೋಪದೇಶಕಾಂಡ 14:21.
ಒಂದು ಆಡುಮರಿ ಇಲ್ಲವೆ ಬೇರಾವುದೇ ಪ್ರಾಣಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸುವುದು, ಯೆಹೋವನು ಪ್ರಕೃತಿಯಲ್ಲಿ ಸ್ಥಾಪಿಸಿರುವ ಏರ್ಪಾಡಿಗೆ ವಿರುದ್ಧವಾದದ್ದಾಗಿರುವುದು. ತಾಯಿಯ ಹಾಲು ಮರಿಗೆ ಪೋಷಣೆಕೊಟ್ಟು ಅದು ಬೆಳೆಯಲಿಕ್ಕೆ ಸಹಾಯಮಾಡುವಂತೆ ದೇವರು ಒದಗಿಸಿದ್ದನು. ಆದರೆ ಆ ಮರಿಯನ್ನು ಅದೇ ತಾಯಿಯ ಹಾಲಿನಲ್ಲಿ ಬೇಯಿಸುವುದು, ಒಬ್ಬ ವಿದ್ವಾಂಸನ ಮಾತುಗಳಲ್ಲಿ ಹೇಳುವುದಾದರೆ, “ತಾಯಿ ಮತ್ತು ಮರಿಯ ನಡುವೆ ದೇವರು ಸ್ಥಾಪಿಸಿರುವ ಮತ್ತು ಪವಿತ್ರೀಕರಿಸಿರುವಂಥ ಸಂಬಂಧವನ್ನು ತಿರಸ್ಕಾರಮಾಡುವುದು” ಆಗಿರುತ್ತಿತ್ತು.
ಅಲ್ಲದೆ, ಒಂದು ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸುವುದು, ಮಳೆಬರಿಸಲಿಕ್ಕಾಗಿ ಮಾಡಲಾಗುತ್ತಿದ್ದ ಒಂದು ವಿಧರ್ಮಿ ಸಂಸ್ಕಾರವಿಧಿ ಆಗಿದ್ದಿರಬಹುದೆಂದು ಕೆಲವರು ಸೂಚಿಸುತ್ತಾರೆ. ಇದು ಸತ್ಯವಾಗಿರುವಲ್ಲಿ, ಈ ನಿಷೇಧವು ಇಸ್ರಾಯೇಲ್ಯರನ್ನು ಅವರ ಸುತ್ತಲಿದ್ದ ಜನಾಂಗಗಳ ಮೂರ್ಖ ಹಾಗೂ ಕಠೋರವಾದ ಧಾರ್ಮಿಕ ರೂಢಿಗಳಿಂದ ಸಂರಕ್ಷಿಸಿದ್ದಿರಬಹುದು. ಮೋಶೆಯ ಧರ್ಮಶಾಸ್ತ್ರವು ಇಸ್ರಾಯೇಲ್ಯರು ಆ ಜನಾಂಗಗಳ ಆಚಾರಗಳನ್ನು ಅನುಸರಿಸುವುದನ್ನು ನಿರ್ದಿಷ್ಟವಾಗಿ ನಿಷೇಧಿಸಿತ್ತು.—ಯಾಜಕಕಾಂಡ 20:23.
ಕೊನೆಯದಾಗಿ, ನಾವು ಈ ನಿಯಮದಲ್ಲಿ ಯೆಹೋವನ ಕೋಮಲ ಕರುಣೆಯನ್ನು ನೋಡಬಲ್ಲೆವು. ವಾಸ್ತವದಲ್ಲಿ ಧರ್ಮಶಾಸ್ತ್ರದಲ್ಲಿ, ಪ್ರಾಣಿಗಳ ಮೇಲಿನ ಕ್ರೌರ್ಯದ ವಿರುದ್ಧ ತದ್ರೀತಿಯ ಹಲವಾರು ಆಜ್ಞೆಗಳಿದ್ದವು ಮತ್ತು ಇವು ಪ್ರಕೃತಿಯ ನಿಯಮಕ್ಕೆ ವಿರುದ್ಧವಾಗಿ ಕಾರ್ಯವೆಸಗದಂತೆ ರಕ್ಷೆಗಳಾಗಿದ್ದವು. ದೃಷ್ಟಾಂತಕ್ಕಾಗಿ, ಒಂದು ಪ್ರಾಣಿಯನ್ನು ಅದರ ತಾಯಿಯೊಂದಿಗೆ ಅದು ಕಡಿಮೆಪಕ್ಷ ಏಳು ದಿನಗಳ ವರೆಗೆ ಇದ್ದ ನಂತರವೇ ಯಜ್ಞವಾಗಿ ಅರ್ಪಿಸಬಹುದಿತ್ತು, ಮರಿ ಹಾಗೂ ತಾಯಿಯನ್ನು ಒಂದೇ ದಿನದಲ್ಲಿ ವಧಿಸುವುದು, ಮತ್ತು ಒಂದು ಗೂಡಿನಿಂದ ತಾಯಿ ಪಕ್ಷಿ ಹಾಗೂ ಅದರ ಮೊಟ್ಟೆಗಳು ಇಲ್ಲವೆ ಸಂತಾನ ಇವೆರಡನ್ನೂ ಎತ್ತಿಕೊಳ್ಳುವುದನ್ನು ನಿಷೇಧಿಸುವ ಆಜ್ಞೆಗಳು ಧರ್ಮಶಾಸ್ತ್ರದಲ್ಲಿದ್ದವು.—ಯಾಜಕಕಾಂಡ 22:27, 28; ಧರ್ಮೋಪದೇಶಕಾಂಡ 22:6, 7.
ಸ್ಪಷ್ಟವಾಗಿಯೇ, ಮೋಶೆಯ ಧರ್ಮಶಾಸ್ತ್ರವು ಕೇವಲ ಅಪ್ಪಣೆಗಳು ಮತ್ತು ನಿಷೇಧಾಜ್ಞೆಗಳ ಒಂದು ಜಟಿಲವಾದ ಕಟ್ಟು ಆಗಿರಲಿಲ್ಲ. ಬೇರೆ ವಿಷಯಗಳಲ್ಲದೆ, ಅದರಲ್ಲಿನ ಮೂಲತತ್ತ್ವಗಳು ನಮ್ಮಲ್ಲಿ ಯೆಹೋವನ ಅದ್ಭುತವಾದ ಗುಣಗಳನ್ನು ನಿಜವಾಗಿಯೂ ಪ್ರತಿಬಿಂಬಿಸುವ ಉನ್ನತವಾದ ನೈತಿಕ ಅರಿವನ್ನು ಹುಟ್ಟಿಸಲು ಸಹಾಯಮಾಡುತ್ತವೆ.—ಕೀರ್ತನೆ 19:7-11.
ಜುಲೈ 19-25
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 16–18
“ನ್ಯಾಯವಾಗಿ ತೀರ್ಪು ಮಾಡೋಕೆ ಸಲಹೆಗಳು”
it-1-E ಪುಟ 343 ಪ್ಯಾರ 5
ಕುರುಡುತನ
ಭ್ರಷ್ಟಾಚಾರದಿಂದ ಅನ್ಯಾಯ ಮಾಡೋದು ಒಂದು ತರದ ಕುರುಡುತನ. ಲಂಚ ತಗೊಬಾರದು, ಗಿಫ್ಟ್ ತಗೊಬಾರದು, ಯಾರನ್ನಾದ್ರು ನೋಡಿದಾಗ ಅವನು ಸರಿ, ಇವನು ತಪ್ಪು ಅಂತ ಮುಂಚೆನೇ ತೀರ್ಮಾನ ಮಾಡಿಬಿಡಬಾರದು ಅಂತ ನಿಯಮ ಪುಸ್ತಕ ಎಚ್ಚರಿಕೆ ಕೊಟ್ಟಿತ್ತು. “ಯಾಕಂದ್ರೆ ಲಂಚ ವಿವೇಕಿಯ ಕಣ್ಣುಗಳನ್ನ ಕುರುಡು ಮಾಡುತ್ತೆ.” (ಧರ್ಮೋ 16:19) ಇದ್ರಿಂದ ನ್ಯಾಯಾಧೀಶ ತೀರ್ಪು ಕೊಡುವಾಗ ಭೇದಭಾವ ಮಾಡಿಬಿಡ್ತಾನೆ, ಸರಿಯಾದ ತೀರ್ಪು ಕೊಡೋಕೆ ಆಗಲ್ಲ. ಒಬ್ಬ ನ್ಯಾಯಾಧೀಶನಿಗೆ ಎಷ್ಟೇ ಜಾಣತನ ಇದ್ರೂ ಅವನು ಎಷ್ಟೇ ಪ್ರಾಮಾಣಿಕವಾಗಿದ್ರೂ ಅವನು ಲಂಚ ಅಥವಾ ಗಿಫ್ಟ್ ತಗೊಂಡ್ರೆ ಅವನು ಭ್ರಷ್ಟನಾಗಿಬಿಡ್ತಾನೆ. ಬರೀ ಲಂಚ ಮಾತ್ರ ಅಲ್ಲ ಅವನಲ್ಲಿರೋ ಭಾವನೆಗಳೂ ಅವನನ್ನ ಕುರುಡು ಮಾಡಿಬಿಡುತ್ತೆ. ಅದಕ್ಕೆ ನಿಯಮ ಪುಸ್ತಕ “ಒಬ್ಬ ವ್ಯಕ್ತಿ ಬಡವ ಅನ್ನೋ ಕಾರಣಕ್ಕೆ ಅವನಿಗೆ ದಯೆತೋರಿಸಿ ಅವನ ಪರವಾಗಿ ತೀರ್ಪು ಕೊಡಬಾರದು ಅಥವಾ ಶ್ರೀಮಂತ ಅನ್ನೋ ಕಾರಣಕ್ಕೆ ಅವನ ಪರವಹಿಸಿ ತೀರ್ಪು ಕೊಡಬಾರದು” ಅಂತ ಹೇಳಿತ್ತು. (ಯಾಜ 19:15)
it-2-E ಪುಟ 511 ಪ್ಯಾರ 7
ಸಂಖ್ಯೆ
ಎರಡು. ಬೈಬಲಲ್ಲಿ ಎರಡು ಅನ್ನೋ ಸಂಖ್ಯೆ ಹೆಚ್ಚಾಗಿ ಬಳಕೆ ಆಗಿರೋದು ನ್ಯಾಯವಿಚಾರಣೆಯ ವಿಷಯ ಬಂದಾಗ. ಒಂದು ಕೇಸ್ ನಡಿಯುವಾಗ ಅದರಲ್ಲಿ ಒಬ್ಬನ ಸಾಕ್ಷಿಗಿಂತ ಇಬ್ಬರ ಸಾಕ್ಷಿನೇ ಯಾವಾಗ್ಲೂ ನಿಲ್ಲೋದು. ಒಂದು ಆರೋಪ ಸಾಬೀತಾಗಬೇಕು ಅಂದ್ರೆ ಇಬ್ಬರು ಅಥವಾ ಮೂವರು ಸಾಕ್ಷಿಗಳು ಬೇಕಾಗುತ್ತಾರೆ. ಈಗಿನ ಕ್ರೈಸ್ತ ಸಭೆಯಲ್ಲೂ ಇದನ್ನೇ ಪಾಲಿಸ್ತಾರೆ. (ಧರ್ಮೋ 17:6; 19:15; ಮತ್ತಾ 18:16; 2ಕೊರಿಂ 13:1; 1ತಿಮೊ 5:19; ಇಬ್ರಿ 10:28)
it-2-E ಪುಟ 685 ಪ್ಯಾರ 6
ಪುರೋಹಿತ
ಒಂದು ಕೇಸಿಗೆ ನ್ಯಾಯತೀರ್ಪು ಕೊಡೋಕೆ ನ್ಯಾಯಾಧೀಶರಿಗೆ ಕಷ್ಟ ಆದ್ರೆ ಅವರು ಪುರೋಹಿತರ ಹತ್ರ ಹೋಗಬೇಕಿತ್ತು. ಆ ಪುರೋಹಿತರು ಆ ಕೇಸನ್ನ ಬಗೆಹರಿಸೋಕೆ ಅವರಿಗೆ ಸಹಾಯ ಮಾಡ್ತಿದ್ರು. (ಧರ್ಮೋ 17:8, 9)
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 787
ಬಹಿಷ್ಕಾರ
ಒಬ್ಬ ವ್ಯಕ್ತಿ ಅಪರಾಧಿ ಅಂತ ಸಾಬೀತು ಆದಮೇಲೆ ಅವನನ್ನ ಸಾಯಿಸೋಕೆ ಸಾಕ್ಷಿ ಹೇಳಿದವರೇ ಮೊದಲು ಕಲ್ಲೆಸಿಬೇಕಿತ್ತು. (ಧರ್ಮೋ 17:7) ಯಾಕಂದ್ರೆ ದೇವರ ನಿಯಮವನ್ನ ಪಾಲಿಸೋ ವಿಷಯದಲ್ಲಿ ಮತ್ತು ಇಡೀ ಇಸ್ರಾಯೇಲ್ ಸಭೆಯನ್ನ ಶುದ್ಧವಾಗಿಡೋ ವಿಷಯದಲ್ಲಿ ಅವನಿಗೆ ಎಷ್ಟು ಹುರುಪಿದೆ ಅಂತ ಇದು ತೋರಿಸಿ ಕೊಡುತ್ತಿತ್ತು. ಅಷ್ಟೇ ಅಲ್ಲ, ಸಾಕ್ಷಿ ಹೇಳುವವನು ಹಿಂದೆ ಮುಂದೆ ಯೋಚನೆ ಮಾಡದೇ ಸಾಕ್ಷಿ ಹೇಳಬಾರದು ಮತ್ತು ಬೇಕುಬೇಕಂತ ಸುಳ್ಳು ಸಾಕ್ಷಿ ಹೇಳಬಾರದು ಅಂತ ಯೆಹೋವ ದೇವರು ಈ ತರ ನಿಯಮ ಕೊಟ್ಟಿದ್ರು.
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
it-1-E ಪುಟ 519 ಪ್ಯಾರ 4
ಕ್ರೈಸ್ತ ಸಭೆ. ಕ್ರೈಸ್ತ ಸಭೆಯಲ್ಲಿ ತೀರ್ಪು ಕೊಡೋಕೆ ಸರ್ಕಾರ ಯಾರನ್ನೂ ನೇಮಿಸಿಲ್ಲ. ಆದ್ರೂ ಸಭೆಯಲ್ಲಿ ಯಾರಾದ್ರೂ ಬೈಬಲ್ ತತ್ವಗಳಿಗೆ ವಿರುದ್ಧವಾಗಿ ನಡಕೊಂಡ್ರೆ ಅವರಿಗೆ ಶಿಸ್ತು ಕೊಡಲಾಗುತ್ತೆ ಮತ್ತು ಕೆಲವೊಮ್ಮೆ ಬಹಿಷ್ಕಾರನೂ ಮಾಡಲಾಗುತ್ತೆ. ಹಾಗಾಗಿ ಅಪೊಸ್ತಲ ಪೌಲ ಹೇಳಿದ ಹಾಗೆ ಸಭೆಯಲ್ಲಿರೋ ಮೇಲ್ವಿಚಾರಕರು ಸಭೆ ಒಳಗೆ ತೀರ್ಪು ಕೊಡ್ತಾರೆ. (1ಕೊರಿಂ 5:12, 13) ಯೆಹೋವನ ಜೊತೆ ಸಹೋದರ-ಸಹೋದರಿಯರ ಸಂಬಂಧ ಹೇಗಿದೆ ಅಂತ ಸಭೆಯಲ್ಲಿರೋ ಹಿರಿಯರು ಗಮನಿಸ್ತಾ ಇರಬೇಕು ಮತ್ತು ಯಾರಾದ್ರೂ ತಪ್ಪು ದಾರಿ ಹಿಡಿದ್ರೆ ಅವರಿಗೆ ಬುದ್ಧಿ ಹೇಳಿ ತಿದ್ದಬೇಕು ಅಂತ ಪೌಲ ಮತ್ತು ಪೇತ್ರ ಸಭೆಗಳಿಗೆ ಮತ್ತು ಮೇಲ್ವಿಚಾರಕರಿಗೆ ಪತ್ರ ಬರೆದರು. (2ತಿಮೊ 4:2; 1ಪೇತ್ರ 5:1, 2; ಹೋಲಿಸಿ ಗಲಾ 6:1.) ಸಭೆಯಲ್ಲಿ ತಮ್ಮದೇ ಗುಂಪುಗಳನ್ನ ಕಟ್ಟಿಕೊಳ್ಳುವವರಿಗೆ ಒಂದು ಸಲ, ಎರಡು ಸಲ ಬುದ್ಧಿ ಹೇಳಬೇಕು. ಕೇಳಲಿಲ್ಲಾಂದ್ರೆ ಕ್ರಮ ತಗೊಳ್ಳಬೇಕು. (ತೀತ 3:10, 11) ಪಾಪ ಮಾಡ್ತಾನೇ ಇರುವವರಿಗೆ ಬಹಿಷ್ಕಾರ ಹಾಕಬೇಕು. ಇದ್ರಿಂದ ದೊಡ್ಡ ದೊಡ್ಡ ತಪ್ಪುಗಳಿಗೆ ಸಭೆಯಲ್ಲಿ ಅನುಮತಿ ಇಲ್ಲ ಅಂತ ತಪ್ಪು ಮಾಡಿದವರಿಗೆ ಗೊತ್ತಾಗುತ್ತೆ. (1ತಿಮೊ 1:20) ಸಭೆಯಲ್ಲಿ ಇಂಥದ್ದು ಏನಾದ್ರೂ ನಡೆದ್ರೆ ಮೇಲ್ವಿಚಾರಕರು ನ್ಯಾಯತೀರ್ಪು ಮಾಡೋಕೆ ಸೇರಿಬರಬೇಕು ಅಂತ ಪೌಲ ಹೇಳಿದ್ದಾನೆ. (1ಕೊರಿಂ 5:1-5; 6:1-5) ಅವರು ಮೊದಲೇ ಮನಸ್ಸಲ್ಲಿ ತೀರ್ಮಾನ ಮಾಡಿಕೊಂಡು ವಿಚಾರಣೆ ನಡೆಸಬಾರದು. ಎರಡು ಅಥವಾ ಮೂರು ಸಾಕ್ಷಿಗಳಿದ್ರೆ ಮಾತ್ರ ಆ ಆರೋಪವನ್ನು ನಂಬಬೇಕು. ಪಕ್ಷಪಾತ ಮಾಡದೆ ತೀರ್ಪು ಕೊಡಬೇಕು.—1ತಿಮೊ 5:19, 21.
ಜುಲೈ 26–ಆಗಸ್ಟ್ 1
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 19–21
“ಮನುಷ್ಯನ ಜೀವ ಯೆಹೋವನಿಗೆ ಅಮೂಲ್ಯ”
ಕಾವಲಿನಬುರುಜು17.11 ಪುಟ 14 ಪ್ಯಾರ 4
ಯೆಹೋವನ ನ್ಯಾಯ ಮತ್ತು ಕರುಣೆಯನ್ನು ಅನುಕರಿಸಿ
4 ಇಸ್ರಾಯೇಲಿನಲ್ಲಿದ್ದ ಆರು ಆಶ್ರಯನಗರಗಳಿಗೆ ಸುಲಭವಾಗಿ ತಲುಪಲು ಏರ್ಪಾಡುಗಳನ್ನು ಮಾಡಲಾಗಿತ್ತು. ಇಸ್ರಾಯೇಲ್ಯರು ಯೊರ್ದನ್ ಹೊಳೆಯ ಒಂದು ಕಡೆ ಮೂರು ಮತ್ತು ಇನ್ನೊಂದು ಕಡೆ ಮೂರು ಪಟ್ಟಣಗಳನ್ನು ಆರಿಸುವಂತೆ ಯೆಹೋವನು ಹೇಳಿದನು. ಯಾಕೆ? ಕೈತಪ್ಪಿ ಕೊಂದವನು ಇವುಗಳಲ್ಲಿ ಒಂದು ನಗರಕ್ಕೆ ಸುಲಭವಾಗಿ ಮತ್ತು ಬೇಗನೆ ಹೋಗಿ ಮುಟ್ಟಲು ಸಾಧ್ಯವಾಗುತ್ತಿತ್ತು. (ಅರ. 35:11-14) ಈ ನಗರಗಳಿಗೆ ಹೋಗುವ ದಾರಿಯನ್ನು ಸಹ ಒಳ್ಳೇ ಸ್ಥಿತಿಯಲ್ಲಿ ಇಡುತ್ತಿದ್ದರು. (ಧರ್ಮೋ. 19:3) ಯೆಹೂದ್ಯರ ಪುಸ್ತಕಗಳಿಗನುಸಾರ, ಕೈತಪ್ಪಿ ಕೊಂದವನಿಗೆ ಈ ನಗರಗಳನ್ನು ಕಂಡುಕೊಳ್ಳಲು ಸಹಾಯವಾಗುವ ಸೂಚನಾ ಫಲಕಗಳು ದಾರಿಬದಿಗಳಲ್ಲಿ ಇದ್ದವು. ಇಸ್ರಾಯೇಲಿನಲ್ಲಿ ಈ ಆಶ್ರಯನಗರಗಳು ಇದ್ದದರಿಂದ, ಕೈತಪ್ಪಿ ಕೊಂದವನು ಅನ್ಯದೇಶಕ್ಕೆ ಹೋಗಿ ಸಂರಕ್ಷಣೆ ಪಡೆಯುವ ಆವಶ್ಯಕತೆ ಇರಲಿಲ್ಲ. ಅನ್ಯದೇಶಕ್ಕೆ ಹೋದರೆ ಅವನು ಸುಳ್ಳು ದೇವರುಗಳನ್ನು ಆರಾಧಿಸುವ ಪ್ರಲೋಭನೆಗೆ ಒಳಗಾಗುವ ಸಾಧ್ಯತೆಯಿತ್ತು.
ಕಾವಲಿನಬುರುಜು17.11 ಪುಟ 15 ಪ್ಯಾರ 9
ಯೆಹೋವನ ನ್ಯಾಯ ಮತ್ತು ಕರುಣೆಯನ್ನು ಅನುಕರಿಸಿ
9 ಇಸ್ರಾಯೇಲ್ಯರು ನಿರಪರಾಧಿಯ ರಕ್ತವನ್ನು ಸುರಿಸಿ ರಕ್ತಾಪರಾಧ ತಂದುಕೊಳ್ಳಬಾರದು ಎಂಬ ಮುಖ್ಯ ಕಾರಣಕ್ಕೆ ಆಶ್ರಯನಗರಗಳ ಏರ್ಪಾಡನ್ನು ಮಾಡಲಾಯಿತು. (ಧರ್ಮೋ. 19:10) ಯೆಹೋವನ ದೃಷ್ಟಿಯಲ್ಲಿ ಜೀವ ತುಂಬ ಅಮೂಲ್ಯ ಆಗಿರುವುದರಿಂದ “ನಿರ್ದೋಷರಕ್ತವನ್ನು ಸುರಿಸುವ” ವ್ಯಕ್ತಿಯನ್ನು ದ್ವೇಷಿಸುತ್ತಾನೆ. (ಜ್ಞಾನೋ. 6:16, 17) ದೇವರು ನ್ಯಾಯವಂತನೂ ಪವಿತ್ರನೂ ಆಗಿರುವುದರಿಂದ, ಅಪ್ಪಿತಪ್ಪಿ ಒಬ್ಬರ ಕೊಲೆಯಾದರೂ ಅದನ್ನು ಅಲಕ್ಷಿಸುತ್ತಿರಲಿಲ್ಲ. ಕೈತಪ್ಪಿ ಒಬ್ಬನ ಕೊಲೆ ಮಾಡಿದ ವ್ಯಕ್ತಿಗೆ ಕರುಣೆ ದೊರೆಯುತ್ತಿತ್ತು ನಿಜ. ಆದರೆ ಮೊದಲು ಅವನು ನಡೆದ ಸಂಗತಿಯನ್ನು ಹಿರಿಯರ ಮುಂದೆ ಹೇಳಿಕೊಳ್ಳಬೇಕಿತ್ತು. ಈ ಕೊಲೆ ಆಕಸ್ಮಿಕವಾಗಿ ಆಯಿತೆಂದು ಹಿರಿಯರು ತೀರ್ಮಾನಿಸಿದರೆ, ಅವನು ಮಹಾಯಾಜಕ ತೀರಿಹೋಗುವ ತನಕ ಆಶ್ರಯನಗರದಲ್ಲೇ ಇರಬೇಕಾಗಿತ್ತು. ಅವನು ಜೀವನಪೂರ್ತಿ ಆಶ್ರಯನಗರದಲ್ಲೇ ಇರಬೇಕಾದ ಪರಿಸ್ಥಿತಿಯೂ ಬರಬಹುದಿತ್ತು. ಜೀವ ಪವಿತ್ರ ಎಂದು ಅರ್ಥಮಾಡಿಕೊಳ್ಳಲು ಈ ಏರ್ಪಾಡು ಇಸ್ರಾಯೇಲ್ಯರಿಗೆ ಸಹಾಯ ಮಾಡಿತು. ಜೀವದಾತನನ್ನು ಗೌರವಿಸಲಿಕ್ಕಾಗಿ ಇಸ್ರಾಯೇಲ್ಯರು ಬೇರೆಯವರ ಜೀವಕ್ಕೆ ಯಾವುದೇ ವಿಧದಲ್ಲಿ ಅಪಾಯ ತರದಿರಲು ತುಂಬ ಪ್ರಯತ್ನ ಮಾಡಬೇಕಿತ್ತು.
it-1-E ಪುಟ 344
ರಕ್ತ
ಒಬ್ಬ ವ್ಯಕ್ತಿ ಇನ್ನೊಬ್ಬನನ್ನ ದ್ವೇಷಿಸಿದ್ರೆ, ಸಾಯಲಿ ಅಂತ ಆಸೆ ಪಟ್ಟರೆ, ಹೆಸರು ಹಾಳು ಮಾಡಿದ್ರೆ, ಅವನ ವಿರುದ್ಧ ಸುಳ್ಳು ಸಾಕ್ಷಿ ಹೇಳಿ ಅವನ ಜೀವಕ್ಕೆ ಅಪಾಯ ತಂದರೆ ಅದು ಕೊಲೆ ಮಾಡಿದ್ದಕ್ಕೆ ಸಮ.—ಯಾಜ 19:16; ಧರ್ಮೋ 19:18-21; 1ಯೋಹಾ 3:15.
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 518 ಪ್ಯಾರ 1
ಕೋರ್ಟ್
ನ್ಯಾಯಾಧೀಶರು ಪಟ್ಟಣದ ಬಾಗಿಲ ಹತ್ರ ಇದ್ದ ಖಾಲಿ ಜಾಗದಲ್ಲಿ ಯಾವಾಗ್ಲೂ ಕೂತುಕೊಳ್ಳುತ್ತಿದ್ರು. ಯಾಕಂದ್ರೆ ಪಟ್ಟಣದ ಬಾಗಿಲಿಂದಾನೇ ಜನ ಹೋಗ್ತಾ ಬರ್ತಾ ಇದ್ದಿದ್ರಿಂದ ಆಸ್ತಿ ಮಾರಾಟದಂಥ ಸಿವಿಲ್ ಕೇಸುಗಳಿಗೆ ಸಾಕ್ಷಿಗಳು ಸುಲಭವಾಗಿ ಸಿಕ್ತಿದ್ರು. ನ್ಯಾಯಾಧೀಶರು ಜನರಿಗೆ ಕಾಣೋ ತರ ಕೂತುಕೊಳ್ತಾ ಇದ್ದಿದ್ರಿಂದ ಅವರು ಜನರಿಗೆ ಅನ್ಯಾಯವಾಗಿ ತೀರ್ಪು ಕೊಡೋಕೆ ಅವಕಾಶನೇ ಇರುತ್ತಿರಲಿಲ್ಲ.
ಆಗಸ್ಟ್ 2-8
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 22–23
“ಯೆಹೋವ ಪ್ರಾಣಿಗಳ ಕಾಳಜಿ ವಹಿಸ್ತಾನೆ”
it-1-E ಪುಟ 375-376
ಹೊರೆ
ಒಬ್ಬ ಇಸ್ರಾಯೇಲ್ಯ ರಸ್ತೆಯಲ್ಲಿ ನಡ್ಕೊಂಡು ಹೋಗ್ತಿರುವಾಗ ಒಂದು ಕತ್ತೆ ಹೊರೆ ಕೆಳಗೆ ಬಿದ್ದುಬಿಟ್ಟಿರೋದನ್ನ ನೋಡ್ತಾನೆ ಅಂತ ಅಂದ್ಕೊಳ್ಳಿ. ಆ ಕತ್ತೆಯ ಯಜಮಾನನಿಗೆ ಇವನನ್ನ ಕಂಡ್ರೆ ಆಗಲ್ಲ. ಆಗ ಆ ಇಸ್ರಾಯೇಲ್ಯ ಏನು ಮಾಡಬೇಕು? ಅವನು ಆ ಕತ್ತೆಯನ್ನ ಎತ್ತೋಕೆ ಸಹಾಯ ಮಾಡಬೇಕು. ನೋಡಿನೂ ನೋಡದ ಹಾಗೆ ಹೋಗಬಾರದು. (ವಿಮೋ 23:5)
it-1-E ಪುಟ 621 ಪ್ಯಾರ 1
ಧರ್ಮೋಪದೇಶಕಾಂಡ
ಒಂದು ಹಕ್ಕಿ ತನ್ನ ಮರಿಗಳೊಂದಿಗೆ ಗೂಡಲ್ಲಿ ಇರೋದನ್ನ ಯಾರಾದ್ರೂ ನೋಡಿದ್ರೆ ತಾಯಿ ಹಕ್ಕಿನ ಹಿಡಿಯಬಾರದಿತ್ತು. ಯಾಕಂದ್ರೆ ಅದು ತನ್ನ ಮರಿಗಳನ್ನ ಕಾಪಾಡೋಕೆ ಕೂತಿರುತ್ತಿತ್ತು. ಆದ್ರೆ ಮರಿ ಹಕ್ಕಿಗಳನ್ನ ಹಿಡಿಯಬಹುದಿತ್ತು. ಇದ್ರಿಂದ ಆ ತಾಯಿ ಹಕ್ಕಿಗೆ ಪುನಃ ಮೊಟ್ಟೆಗಳನ್ನಿಟ್ಟು ಮರಿಗಳನ್ನ ಮಾಡಿಕೊಳ್ಳೋ ಅವಕಾಶ ಕೊಟ್ಟ ಹಾಗೆ ಆಗ್ತಿತ್ತು. (ಧರ್ಮೋ 22:6, 7)
ಕಾವಲಿನಬುರುಜು03 10/15 ಪುಟ 32 ಪ್ಯಾರ 1-2
“ಕ್ರಿಸ್ತನಂಬಿಕೆಯಿಲ್ಲದವರೊಂದಿಗೆ ಸೇರಿ ಇಜ್ಜೋಡಾಗಬೇಡಿರಿ”
ಇಲ್ಲಿರುವ ಚಿತ್ರದಲ್ಲಿ ನೀವು ನೋಡಸಾಧ್ಯವಿರುವಂತೆ, ಒಟ್ಟಿಗೆ ಉಳುತ್ತಿರುವಂಥ ಈ ಒಂಟೆ ಹಾಗೂ ಎತ್ತಿಗೆ ತುಂಬ ಕಷ್ಟವಾಗುತ್ತಿರುವಂತೆ ತೋರುತ್ತದೆ. ಒಂದು ನೊಗವು, ಒಂದೇ ಆಕಾರದ ಹಾಗೂ ಸಮಾನ ಬಲವುಳ್ಳ ಎರಡು ಪ್ರಾಣಿಗಳಿಗೋಸ್ಕರ ಸಿದ್ಧಗೊಳಿಸಲ್ಪಟ್ಟಿರುತ್ತದೆ. ಆದರೆ ಈ ಎರಡು ಪ್ರಾಣಿಗಳನ್ನು ಜೊತೆಯಾಗಿ ಒಟ್ಟುಗೂಡಿಸಿರುವ ನೊಗವು, ಇವೆರಡೂ ಕಷ್ಟಪಡುವಂತೆ ಮಾಡುತ್ತದೆ. ಇಂಥ ಭಾರವನ್ನೆಳೆಯುವ ಪಶುಗಳ ಹಿತಕ್ಷೇಮದ ಕುರಿತು ಚಿಂತಿಸುವಾತನಾಗಿದ್ದ ದೇವರು ಇಸ್ರಾಯೇಲ್ಯರಿಗೆ ಹೇಳಿದ್ದು: “ಎತ್ತನ್ನೂ ಕತ್ತೆಯನ್ನೂ ಜೊತೆಮಾಡಿ ನೇಗಿಲಿಗೆ ಕಟ್ಟಬಾರದು.” (ಧರ್ಮೋಪದೇಶಕಾಂಡ 22:10) ಒಂದು ಎತ್ತು ಹಾಗೂ ಒಂದು ಒಂಟೆಯ ವಿಷಯದಲ್ಲೂ ಇದೇ ತತ್ತ್ವವು ಅನ್ವಯವಾಗುತ್ತಿತ್ತು.
ಸಾಮಾನ್ಯವಾಗಿ ಒಬ್ಬ ರೈತನು ತನ್ನ ಪ್ರಾಣಿಗಳ ಮೇಲೆ ಈ ರೀತಿಯ ತೊಂದರೆಯನ್ನು ಬರಗೊಡಿಸುತ್ತಿರಲಿಲ್ಲ. ಆದರೆ ಅವನ ಬಳಿ ಎರಡು ಎತ್ತುಗಳು ಇಲ್ಲದಿರುವಲ್ಲಿ, ತನ್ನ ಬಳಿ ಲಭ್ಯವಿರುವ ಎರಡು ಪ್ರಾಣಿಗಳನ್ನೇ ಅವನು ನೊಗಕ್ಕೆ ಕಟ್ಟುವ ಸಾಧ್ಯತೆಯಿತ್ತು. ಈ ಚಿತ್ರದಲ್ಲಿರುವ 19ನೆಯ ಶತಮಾನದ ರೈತನು ಇದನ್ನೇ ಮಾಡಲು ನಿರ್ಧರಿಸಿದನು ಎಂಬುದು ಸುಸ್ಪಷ್ಟ. ಅವುಗಳ ಆಕಾರ ಹಾಗೂ ತೂಕಗಳಲ್ಲಿ ಭಿನ್ನತೆಯಿರುವುದರಿಂದ, ಬಲಹೀನವಾಗಿರುವ ಪ್ರಾಣಿಯು ಇನ್ನೊಂದು ಪ್ರಾಣಿಯೊಂದಿಗೆ ಹೆಜ್ಜೆಹಾಕುತ್ತಾ ಮುಂದುವರಿಯಲು ಬಹಳ ಶ್ರಮಿಸಬೇಕಾಗುತ್ತದೆ ಮತ್ತು ಬಲಿಷ್ಠ ಪ್ರಾಣಿಯು ಅತ್ಯಧಿಕ ಹೊರೆಯನ್ನು ಹೊರಬೇಕಾಗುತ್ತದೆ.
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 600
ಸಾಲ, ಸಾಲಗಾರ
ಒಬ್ಬ ಇಸ್ರಾಯೇಲ್ಯ ತುಂಬ ಕಷ್ಟ ಇದ್ದಾಗ ಮಾತ್ರನೇ ಸಾಲ ತಗೊಬೇಕಿತ್ತು. ಯಾಕಂದ್ರೆ ಸಾಲ ಮಾಡಿರುವವನು ಸಾಲಕೊಟ್ಟವನ ಸೇವಕ ಆಗ್ತಾನೆ. ಅದಕ್ಕೆ ಆಗಿನ ಕಾಲದಲ್ಲಿ ಸಾಲ ತಗೊಳ್ತಾ ಇದ್ದಿದ್ದು ತುಂಬ ಅಪರೂಪ. (ಜ್ಞಾನೋ 22:7) ಇಸ್ರಾಯೇಲ್ಯರು ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡಬೇಕು, ಅವರಿಗೆ ಉದಾರತೆ ತೋರಿಸಬೇಕು ಅಂತ ಯೆಹೋವ ದೇವರು ಹೇಳಿದ್ರು. ಅವರ ಹತ್ರ ಬಡ್ಡಿ ತಗೊಂಡು ಅವರ ಬಡತನವನ್ನ ದುರುಪಯೋಗಿಸಿಕೊಂಡು ಲಾಭ ಮಾಡ್ಕೊಬಾರದಿತ್ತು. (ವಿಮೋ 22:25; ಧರ್ಮೋ 15:7, 8; ಕೀರ್ತ 37:26; 112:5) ಆದ್ರೆ ವಿದೇಶಿಯರಿಂದ ಬಡ್ಡಿ ತಗೊಬಹುದಿತ್ತು. (ಧರ್ಮೋ 23:20) ಈ ನಿಯಮ ಬಡತನದಿಂದಾಗಿ ಸಾಲ ತಗೊಂಡವರಿಗಲ್ಲ, ವ್ಯಾಪಾರಕ್ಕಾಗಿ ಸಾಲ ತಗೊಂಡವರಿಗೆ ಮಾತ್ರ ಅನ್ವಯ ಆಗ್ತಿತ್ತು ಅಂತಾರೆ ಯೆಹೂದಿ ಪಂಡಿತರು. ಯಾಕಂದ್ರೆ ವಿದೇಶಿಯರು ವ್ಯಾಪಾರ ಮಾಡೋಕೆ ಅಂತಾನೇ ಸ್ವಲ್ಪ ಸಮಯಕ್ಕಾಗಿ ಇಸ್ರಾಯೇಲಿಗೆ ಬರುತ್ತಿದ್ರು. ಅದಕ್ಕೆ ಅವರ ಹತ್ರ ಬಡ್ಡಿ ತಗೊಳ್ತಿದ್ರು. ಅಷ್ಟೇ ಅಲ್ಲ, ಆ ವಿದೇಶಿಯರೇ ಕೆಲವರಿಗೆ ಸಾಲ ಕೊಟ್ಟು ಅವ್ರಿಂದ ಬಡ್ಡಿ ತಗೊಳ್ತಿದ್ರು.
ಆಗಸ್ಟ್ 9-15
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 24–26
“ಯೆಹೋವ ಸ್ತ್ರೀಯರನ್ನ ಗೌರವಿಸ್ತಾನೆ”
it-2-E ಪುಟ 1196 ಪ್ಯಾರ 4
ಸ್ತ್ರೀ
ಹೊಸದಾಗಿ ಮದುವೆಯಾದವನು ಒಂದು ವರ್ಷ ಸೈನ್ಯದಲ್ಲಿ ಕೆಲಸ ಮಾಡಬಾರದಾಗಿತ್ತು. ಯಾಕೆ? ಯಾಕಂದ್ರೆ ಆ ವರ್ಷದಲ್ಲಿ ಮಗು ಮಾಡಿಕೊಳ್ಳೋಕೆ ಅವಕಾಶ ಇತ್ತು. ಒಂದು ವರ್ಷದ ನಂತರ ಗಂಡ ಸೈನ್ಯಕ್ಕೆ ವಾಪಸ್ ಹೋದಾಗ ಮಗು ಇರೋದ್ರಿಂದ ‘ಗಂಡ ಜೊತೆಗೆ ಇಲ್ಲವಲ್ಲಾ’ ಅನ್ನೋ ದುಃಖವನ್ನ ಹೆಂಡ್ತಿ ಮರೆಯೋಕಾಗ್ತಿತ್ತು. ಒಂದುವೇಳೆ ಅವನು ಯುದ್ಧದಲ್ಲಿ ಸತ್ತುಹೋದರೂ ಅವಳಿಗೆ ‘ನನಗ್ಯಾರು ದಿಕ್ಕಿಲ್ಲವಲ್ಲಾ’ ಅನ್ನೋ ಕೊರಗು ಇರುತ್ತಿರಲಿಲ್ಲ.—ಧರ್ಮೋ 20:7; 24:5.
it-1-E ಪುಟ 963 ಪ್ಯಾರ 2
ಹಕ್ಕಲಾಯುವುದು
“ಇಲ್ಲಿ ತನಕ ದೇವರು ನೀತಿವಂತನ ಕೈಬಿಟ್ಟಿರೋದನ್ನಾಗಲಿ, ನೀತಿವಂತನ ಮಕ್ಕಳು ಊಟಕ್ಕಾಗಿ ಭಿಕ್ಷೆ ಬೇಡೋದನ್ನಾಗಲಿ ನಾನು ನೋಡಿಲ್ಲ” ಅಂತ ದಾವೀದ ಹೇಳಿದ. (ಕೀರ್ತ 37:25) ಬಡವರು ಹಕ್ಕಲಾಯಬಹುದು ಅನ್ನೋ ನಿಯಮವನ್ನು ಯೆಹೋವ ದೇವರು ಕೊಟ್ಟಿದ್ದರು. ಇದರಿಂದ ಬಡವರು ಮತ್ತು ಅವರ ಮಕ್ಕಳು ಊಟಕ್ಕಾಗಿ ಭಿಕ್ಷೆ ಬೇಡುವುದು ತಪ್ಪುತ್ತಿತ್ತು. ಅದ್ರ ಬದಲಿಗೆ ಅವರು ಕಷ್ಟಪಟ್ಟು ದುಡಿದು ಹೊಟ್ಟೆ ತುಂಬಿಸಿಕೊಳ್ಳಬೇಕು ಅನ್ನೋದೇ ದೇವರ ಉದ್ದೇಶವಾಗಿತ್ತು.
ಕಾವಲಿನಬುರುಜು11-E 3/1 ಪುಟ 23
ನಿಮಗೆ ಗೊತ್ತಿತ್ತಾ?
ಇಸ್ರಾಯೇಲ್ ಕಾಲದಲ್ಲಿ ಒಬ್ಬ ವ್ಯಕ್ತಿ ಮಕ್ಕಳಿಲ್ಲದೆ ಸತ್ತು ಹೋದರೆ ಅವನ ಅಣ್ಣ ಅಥವಾ ತಮ್ಮ ಅವನ ಹೆಂಡತಿಯನ್ನ ಮದುವೆಯಾಗಿ ಅವಳಿಗೆ ಮಕ್ಕಳು ಕೊಟ್ಟು ಅವನ ವಂಶವನ್ನು ಬೆಳೆಸಬೇಕಿತ್ತು. (ಆದಿಕಾಂಡ 38:8) ಹೀಗೆ ಮೈದುನ ಕರ್ತವ್ಯವನ್ನ ಪೂರೈಸಬೇಕು ಅನ್ನೋ ನಿಯಮವನ್ನ ದೇವರು ಮುಂದಕ್ಕೆ ಇಸ್ರಾಯೇಲ್ಯರಿಗೆ ಕೊಟ್ಟರು. (ಧರ್ಮೋಪದೇಶಕಾಂಡ 25:5, 6) ಒಂದುವೇಳೆ ಆ ವ್ಯಕ್ತಿಗೆ ಅಣ್ಣತಮ್ಮ ಯಾರೂ ಇಲ್ಲ ಅಂದ್ರೆ ಅಥವಾ ಅವರೆಲ್ಲ ಸತ್ತುಹೋಗಿದ್ದರೆ ಆ ವ್ಯಕ್ತಿಯ ಹತ್ತಿರದ ಸಂಬಂಧಿಕರು ಆ ವಿಧವೆಯನ್ನು ಮದುವೆಯಾಗಬಹುದಿತ್ತು. ಇದನ್ನೇ ನಾವು ರೂತ್ ಮತ್ತು ಬೋವಜನ ವಿಷಯದಲ್ಲಿ ನೋಡಬಹುದು.—ರೂತ್ 1:3, 4; 2:19, 20; 4:1-6.
ಯೇಸುವಿನ ಕಾಲದಲ್ಲೂ ಮೈದುನ ತನ್ನ ಅತ್ತಿಗೆಯನ್ನು ಮದುವೆಯಾಗಿ ವಂಶ ಬೆಳೆಸುವ ಪದ್ಧತಿ ಇತ್ತು ಅಂತ ಮಾರ್ಕ 12:20-22 ರಲ್ಲಿ ಇರೋ ಸದ್ದುಕಾಯರ ಮಾತುಗಳಿಂದ ಗೊತ್ತಾಗುತ್ತದೆ. ಆಗಿನ ಕಾಲದಲ್ಲಿ ಹೆಂಡತಿಗೆ ಅವಳ ಗಂಡನ ಆಸ್ತಿಯನ್ನು ಪಡಕೊಳ್ಳೋ ಹಕ್ಕು ಇರಲಿಲ್ಲ. ಆದರೆ ಈ ಪದ್ಧತಿಯಿಂದ ಅವಳಿಗೆ ಸಹಾಯ ಆಗ್ತಿತ್ತು. ಈ ಪದ್ಧತಿ ಇರೋದ್ರಿಂದ ಆ ವ್ಯಕ್ತಿಯ ವಂಶ ಬೆಳೆಯುತ್ತಿತ್ತು. ಅಷ್ಟೇ ಅಲ್ಲ, ಆಸ್ತಿ ಆ ಕುಟುಂಬದಲ್ಲೇ ಉಳೀತಿತ್ತು. ಇದ್ರಿಂದ ಆ ವಿಧವೆಗೆ ಬದುಕೋಕೆ ದಾರಿನೂ ಆಗ್ತಿತ್ತು. ಇನ್ನೂ ಒಂದು ವಿಷಯ ಏನೆಂದರೆ ಮೈದುನನಿಂದ ಹುಟ್ಟಿದ ಮಗುವಿಗೆ ಆ ಸತ್ತುಹೋದವನ ಆಸ್ತಿ ಸೇರ್ತಿತ್ತು ಅಂತ ಒಂದನೇ ಶತಮಾನದ ಯೆಹೂದಿ ಇತಿಹಾಸಗಾರ ಫ್ಲೇವಿಯಸ್ ಜೋಸೀಫಸ್ ಹೇಳ್ತಾರೆ.
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 640 ಪ್ಯಾರ 5
ವಿವಾಹ ವಿಚ್ಛೇದನ
ವಿಚ್ಛೇದನ ಪತ್ರ. ಒಬ್ಬ ವ್ಯಕ್ತಿ ತನ್ನ ಹೆಂಡತಿಗೆ ವಿಚ್ಛೇದನ ಕೊಡಬೇಕಂದ್ರೆ “ಅವನು ವಿಚ್ಛೇದನ ಪತ್ರ ಬರೆದು ಕೊಟ್ಟು ಅವಳನ್ನ ಮನೆಯಿಂದ ಕಳಿಸಿಬಿಡಬೇಕು” ಅಂತ ಮೋಶೆಯ ನಿಯಮ ಪುಸ್ತಕ ಹೇಳಿತ್ತು. (ಧರ್ಮೋ 24:1) ಕಾನೂನಿನ ಪ್ರಕಾರ ಗಂಡ ಮೊದ್ಲು ಅಧಿಕಾರಿಗಳ ಹತ್ರ ಹೋಗಿ ಮಾತಾಡಬೇಕಿತ್ತು. ಆ ಅಧಿಕಾರಿಗಳು ಗಂಡ-ಹೆಂಡತಿ ಹತ್ರ ಮಾತಾಡಿ ಮೊದಲು ರಾಜಿ ಮಾಡೋಕೆ ಆಗುತ್ತಾ ಅಂತ ನೋಡುತ್ತಿದ್ದರು. ಗಂಡ ವಿಚ್ಛೇದನ ಪತ್ರ ಬರೆಯುವುದರಿಂದ ಹಿಡಿದು ಕಾನೂನಿನ ಪ್ರಕಾರ ಎಲ್ಲಾ ವಿಷಯಗಳನ್ನು ಮಾಡೋಕೆ ತುಂಬಾ ಸಮಯ ಹಿಡಿತಿತ್ತು. ಆ ಸಮಯದಲ್ಲಿ ಅವನಿಗೆ ನಿರ್ಧಾರ ಬದಲಾಯಿಸೋ ಅವಕಾಶ ಇತ್ತು. ಈ ಕಾನೂನಿನ ಕ್ರಮಗಳನ್ನೆಲ್ಲ ಪಾಲಿಸೋದ್ರಿಂದ ಅವನು ದುಡುಕಿ ತೀರ್ಮಾನ ಮಾಡದ ತರ ತಡೆಯುತ್ತಿತ್ತು. ಒಂದು ಬಲವಾದ ಕಾರಣ ಇದ್ರೆ ಮಾತ್ರ ವಿಚ್ಛೇದನ ಕೊಡೋಕೆ ಆಗ್ತಿತ್ತು. ಸಣ್ಣಪುಟ್ಟ ಕಾರಣಕ್ಕೆ ವಿಚ್ಛೇದನ ಕೊಡೋ ಅವಕಾಶ ಇರಲಿಲ್ಲ. ಆದ್ರೆ ಈ ನಿಯಮವನ್ನು ಇಸ್ರಾಯೇಲ್ಯರು ಬರ್ತಾ ಬರ್ತಾ ತುಂಬಾ ದುರುಪಯೋಗಿಸಿದರು. ಅವರು ಚಿಕ್ಕಪುಟ್ಟ ವಿಷಯಗಳಿಗೆಲ್ಲ ವಿಚ್ಛೇದನ ಕೊಡೋಕೆ ಶುರುಮಾಡಿದ್ರು.
ಆಗಸ್ಟ್ 16-22
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 27–28
“ನಿಮ್ಮ ಮೇಲೆ ಆಶೀರ್ವಾದಗಳ ಸುರಿಮಳೆ ಸುರಿಯುತ್ತೆ”
ಕಾವಲಿನಬುರುಜು10 12/15 ಪುಟ 19 ಪ್ಯಾರ 18
ಕ್ರಿಸ್ತನ ಮೂಲಕ ಆಶೀರ್ವಾದಗಳನ್ನು ಪಡೆಯಿರಿ!
18 ಏನೆಂದರೆ ದೇವರ ವಾಕ್ಯದಲ್ಲಿ ಹೇಳಿರುವುದನ್ನು ಮತ್ತು ಆತನು ಒದಗಿಸುವ ಆಧ್ಯಾತ್ಮಿಕ ಆಹಾರವನ್ನು ಹೃತ್ಪೂರ್ವಕವಾಗಿ ಸ್ವೀಕರಿಸುವುದಾಗಿದೆ. (ಮತ್ತಾ. 24:45) ದೇವರಿಗೂ ಆತನ ಪುತ್ರನಿಗೂ ವಿಧೇಯರಾಗುವ ಅರ್ಥವೂ ಅದಕ್ಕಿದೆ. ಯೇಸು ಅಂದದ್ದು: “ನನ್ನನ್ನು ‘ಕರ್ತನೇ, ಕರ್ತನೇ’ ಎಂದು ಹೇಳುವ ಪ್ರತಿಯೊಬ್ಬನೂ ಸ್ವರ್ಗದ ರಾಜ್ಯವನ್ನು ಪ್ರವೇಶಿಸುವುದಿಲ್ಲ; ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ಪ್ರವೇಶಿಸುವನು.” (ಮತ್ತಾ. 7:21) ದೇವರಿಗೆ ಕಿವಿಗೊಡುವುದು ಅಂದರೆ ಆತನು ಮಾಡಿರುವ ಏರ್ಪಾಡಿಗೆ ನಮ್ಮನ್ನು ಸಿದ್ಧಮನಸ್ಸಿನಿಂದ ಅಧೀನಪಡಿಸಿಕೊಳ್ಳುವುದೂ ಆಗಿದೆ. ಆ ಏರ್ಪಾಡೇ ‘ಮನುಷ್ಯರಲ್ಲಿ ದಾನಗಳಾಗಿರುವ’ ನೇಮಿತ ಹಿರಿಯರಿರುವ ಕ್ರೈಸ್ತ ಸಭೆ.—ಎಫೆ. 4:8.
ಕಾವಲಿನಬುರುಜು01 9/15 ಪುಟ 10 ಪ್ಯಾರ 2
ಯೆಹೋವನ ಆಶೀರ್ವಾದವು ನಿಮಗೆ ಪ್ರಾಪ್ತವಾಗುವುದೋ?
2 ಧರ್ಮೋಪದೇಶಕಾಂಡ 28:2 ರಲ್ಲಿ “ಕಿವಿಗೊಟ್ಟು ನಡೆದರೆ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಕ್ರಿಯಾಪದವು ಮುಂದುವರಿಯುತ್ತಿರುವ ಕ್ರಿಯೆಯನ್ನು ಸೂಚಿಸುತ್ತದೆ. ಯೆಹೋವನ ಜನರು ಕೆಲವೊಮ್ಮೆ ಮಾತ್ರ ಆತನಿಗೆ ಕಿವಿಗೊಡಬೇಕೆಂದಲ್ಲ, ಬದಲಾಗಿ ಕಿವಿಗೊಡುತ್ತಿರುವುದನ್ನು ಅವರ ಜೀವನ ರೀತಿಯಾಗಿ ಮಾಡಿಕೊಳ್ಳಬೇಕೆಂಬುದು ಇದರರ್ಥ. ಆಗ ಮಾತ್ರ ದೈವಿಕ ಆಶೀರ್ವಾದಗಳು ಅವರಿಗೆ ಪ್ರಾಪ್ತವಾಗುವವು. “ಪ್ರಾಪ್ತವಾಗುವವು” ಎಂದು ಭಾಷಾಂತರವಾಗಿರುವ ಹೀಬ್ರು ಕ್ರಿಯಾಪದವು ಬೇಟೆಯಲ್ಲಿ ಉಪಯೋಗಿಸುವ ಪದವಾಗಿದ್ದು, ಅದು ಅನೇಕವೇಳೆ “ಹಿಡಿಯುವುದು” ಅಥವಾ “ಮುಟ್ಟುವುದು” ಎಂಬ ಅರ್ಥವನ್ನು ಕೊಡುತ್ತದೆ.
ಕಾವಲಿನಬುರುಜು10 9/15 ಪುಟ 8 ಪ್ಯಾರ 4
ಶ್ರದ್ಧಾಪೂರ್ವಕವಾಗಿ ಯೆಹೋವನ ಆಶೀರ್ವಾದವನ್ನು ಹುಡುಕಿರಿ
4 ಇಸ್ರಾಯೇಲ್ಯರು ಯಾವ ಮನೋಭಾವದಿಂದ ವಿಧೇಯರಾಗಿರಬೇಕಿತ್ತು? ಯೆಹೋವನ ಜನರು ಆತನನ್ನು ‘ಹರ್ಷಾನಂದದಿಂದ’ ಸೇವಿಸದೇ ಇದ್ದಲ್ಲಿ ಆತನ ಮೆಚ್ಚಿಕೆಯನ್ನು ಪಡೆಯಲಾರರು ಎಂದು ಧರ್ಮಶಾಸ್ತ್ರವು ತಿಳಿಸಿತ್ತು. (ಧರ್ಮೋಪದೇಶಕಾಂಡ 28:45-47 ಓದಿ.) ನಿರ್ದಿಷ್ಟ ಆಜ್ಞೆಗಳಿಗೆ ಬರೇ ಯಾಂತ್ರಿಕ ವಿಧೇಯತೆಯನ್ನು ಯೆಹೋವನು ಮೆಚ್ಚುವುದಿಲ್ಲ. ಪ್ರಾಣಿಗಳೂ ದೆವ್ವಗಳೂ ಅಂಥ ಯಾಂತ್ರಿಕ ವಿಧೇಯತೆಯನ್ನು ತೋರಿಸಬಲ್ಲವಲ್ಲಾ. (ಮಾರ್ಕ 1:27; ಯಾಕೋ. 3:3) ದೇವರಿಗೆ ನಾವು ತೋರಿಸುವ ನಿಜ ವಿಧೇಯತೆಯು ಪ್ರೀತಿಯ ಒಂದು ಅಭಿವ್ಯಕ್ತಿ. ಅದು ಹರ್ಷಾನಂದದಿಂದ ತೋರಿಸಲ್ಪಡುತ್ತದೆ. ಆ ಹರ್ಷಾನಂದವು ಯೆಹೋವನ ಆಜ್ಞೆಗಳು ಭಾರವಾದವುಗಳಲ್ಲ ಮತ್ತು “ತನ್ನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ [ಆತನು] ಪ್ರತಿಫಲವನ್ನು ಕೊಡುವವನಾಗುತ್ತಾನೆ” ಎಂಬ ನಂಬಿಕೆಯಿಂದ ಉದ್ಭವಿಸುತ್ತದೆ.—ಇಬ್ರಿ. 11:6; 1 ಯೋಹಾ. 5:3.
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 360
ಗಡಿ
ಜಮೀನಿರೋ ಒಬ್ಬ ವ್ಯಕ್ತಿಗೆ ಅವನು ಬೆಳೆಯುವ ಬೆಳೆನೇ ಅವನಿಗೆ ಊಟ. ಅಂತದ್ರಲ್ಲಿ ಅವನ ಜಮೀನಿನ ಗಡಿಯನ್ನು ಸರಿಸಿದರೆ ಅವನ ಹೊಟ್ಟೆ ಮೇಲೆ ಹೊಡೆದ ಹಾಗೆ ಆಗ್ತಿತ್ತು. ಇದು ಕಳ್ಳತನಕ್ಕೆ ಸಮ. (ಯೋಬ 24:2)
ಆಗಸ್ಟ್ 23-29
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 29–30
“ಯೆಹೋವನ ಆರಾಧನೆ ಮಾಡೋದು ಅಷ್ಟು ಕಷ್ಟ ಅಲ್ಲ”
ಕಾವಲಿನಬುರುಜು10 7/1 ಪುಟ 27 ಪ್ಯಾರ 2
ಯೆಹೋವನು ಆಯ್ಕೆಯನ್ನು ನಮಗೆ ಬಿಟ್ಟಿದ್ದಾನೆ
ದೇವರು ನಮ್ಮಿಂದ ಕೇಳಿಕೊಳ್ಳುವ ವಿಷಯಗಳನ್ನು ತಿಳಿದುಕೊಂಡು ಅದರಂತೆ ನಡೆಯುವುದು ತುಂಬ ಕಷ್ಟಕರವೋ? “ನಾನು ಈಗ ನಿಮಗೆ ಬೋಧಿಸಿದ ಧರ್ಮೋಪದೇಶವು ನಿಮಗೆ ಗ್ರಹಿಸುವದಕ್ಕೆ ಕಷ್ಟವಾದದ್ದೂ ಅಲ್ಲ, ಹೊಂದುವದಕ್ಕೆ ಅಸಾಧ್ಯವಾದದ್ದೂ ಅಲ್ಲ” ಎಂದು ಮೋಶೆ ಹೇಳಿದನು. (ವಚನ 11) ಯೆಹೋವನೆಂದೂ ನಮ್ಮ ಕೈಲಾಗದ್ದನ್ನು ಮಾಡಲು ಹೇಳುವುದಿಲ್ಲ. ಆತನು ನಮ್ಮಿಂದ ಕೇಳಿಕೊಳ್ಳುವ ವಿಷಯಗಳು ಅತಿರೇಕದ್ದೂ ಅಲ್ಲ, ಮಾಡಲು ಅಸಾಧ್ಯವಾದದ್ದೂ ಅಲ್ಲ. ಅಲ್ಲದೆ ಆ ವಿಷಯಗಳನ್ನು ಸುಲಭವಾಗಿ ತಿಳಿದುಕೊಳ್ಳಬಲ್ಲೆವು. ಅದಕ್ಕಾಗಿ ನಾವು “ಮೇಲಣ ಲೋಕವನ್ನು ಏರಿ” ಹೋಗಬೇಕಾಗಿಲ್ಲ ಅಥವಾ “ಸಮುದ್ರದ ಆಚೆ” ಪ್ರಯಾಣಿಸಬೇಕಾಗಿಲ್ಲ. (ವಚನಗಳು 12, 13) ನಾವು ಹೇಗೆ ಜೀವಿಸಬೇಕೆಂಬದನ್ನು ಬೈಬಲ್ ಸರಳವಾಗಿ ತಿಳಿಸಿಕೊಡುತ್ತದೆ.—ಮೀಕ 6:8.
ಇದೇ ಸಂಚಿಕೆಯ ಪುಟ 16ರಲ್ಲಿರುವ “ದೇವರ ಸಮೀಪಕ್ಕೆ ಬನ್ನಿರಿ—ಯೆಹೋವನು ನಮ್ಮಿಂದ ಏನು ಕೇಳಿಕೊಳ್ಳುತ್ತಾನೆ?” ಲೇಖನ ನೋಡಿ.
ಕಾವಲಿನಬುರುಜು10 7/1 ಪುಟ 27 ಪ್ಯಾರ 1
ಯೆಹೋವನು ಆಯ್ಕೆಯನ್ನು ನಮಗೆ ಬಿಟ್ಟಿದ್ದಾನೆ
“ಯೆಹೋವನಿಗೆ ನಾನು ನಂಬಿಗಸ್ತಳಾಗಿ ಉಳಿಯಲಿಕ್ಕಿಲ್ಲ ಎಂಬ ಭಯ ನನ್ನನ್ನು ವಿನಾ ಕಾರಣ ಕಾಡುತ್ತಿತ್ತು” ಎಂದು ಒಬ್ಬಾಕೆ ಕ್ರೈಸ್ತ ಸ್ತ್ರೀ ಹೇಳಿದಳು. ಬಾಲ್ಯದ ಕಹಿ ಅನುಭವಗಳಿಂದಾಗಿ, ತಾನು ಏನೇ ಮಾಡಿದರೂ ಸೋಲು ಕಟ್ಟಿಟ್ಟ ಬುತ್ತಿ ಎಂಬ ಅನಿಸಿಕೆ ಅವಳನ್ನು ಆವರಿಸಿತ್ತು. ಅವಳು ನೆನಸಿದಂತೆ, ನಾವು ಪರಿಸ್ಥಿತಿಯ ಕೈಗೊಂಬೆಯಾಗಿ ಏನೂ ಮಾಡಲಾಗದಷ್ಟು ಅಸಹಾಯಕರೋ? ಖಂಡಿತ ಇಲ್ಲ. ಯೆಹೋವ ದೇವರು ನಮಗೆ ಇಚ್ಛಾಸ್ವಾತಂತ್ರ್ಯ ಎಂಬ ವರ ಕೊಟ್ಟಿದ್ದಾನೆ. ಆದ್ದರಿಂದ ಹೇಗೆ ಬದುಕಬೇಕೆಂಬ ಆಯ್ಕೆಯನ್ನು ನಾವೇ ಮಾಡಬಹುದು. ಆದರೆ ಸರಿಯಾದ ಆಯ್ಕೆಗಳನ್ನೇ ಮಾಡಬೇಕೆಂಬುದು ಯೆಹೋವನ ಇಚ್ಛೆ. ಅದನ್ನು ಮಾಡುವುದು ಹೇಗೆಂದು ಆತನ ವಾಕ್ಯವಾದ ಬೈಬಲ್ ತಿಳಿಸುತ್ತದೆ. ಆ ಬಗ್ಗೆ ಬೈಬಲಿನ ಧರ್ಮೋಪದೇಶಕಾಂಡ ಪುಸ್ತಕದ 30 ನೇ ಅಧ್ಯಾಯದಲ್ಲಿ ದೇವಭಕ್ತ ಮೋಶೆ ಹೇಳಿರುವ ಮಾತುಗಳನ್ನು ನಾವೀಗ ಪರಿಗಣಿಸೋಣ.
ಕಾವಲಿನಬುರುಜು10 7/1 ಪುಟ 27 ಪ್ಯಾರ 4
ಯೆಹೋವನು ಆಯ್ಕೆಯನ್ನು ನಮಗೆ ಬಿಟ್ಟಿದ್ದಾನೆ
ನಾವು ಯಾವ ಆಯ್ಕೆ ಮಾಡುತ್ತೇವೆಂಬ ವಿಷಯದಲ್ಲಿ ಯೆಹೋವನಿಗೆ ಆಸಕ್ತಿಯಿದೆಯೋ? ಖಂಡಿತ ಇದೆ! “ಜೀವವನ್ನೇ ಆದುಕೊಳ್ಳಿರಿ” ಎಂದನು ಮೋಶೆ ದೇವಪ್ರೇರಣೆಯಿಂದ. (ವಚನ 19) ಆದರೆ ನಾವು ಜೀವವನ್ನು ಆದುಕೊಳ್ಳುವುದು ಹೇಗೆ? ಮೋಶೆ ಹೇಳಿದ್ದು: “ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ, ಆತನನ್ನು ಹೊಂದಿಕೊಂಡೇ ಇರ್ರಿ.” (ವಚನ 20) ನಾವು ಯೆಹೋವನನ್ನು ಪ್ರೀತಿಸುವುದಾದರೆ ಆತನ ಮಾತಿಗೆ ವಿಧೇಯರಾಗುವ ಮನಸ್ಸು ನಮಗಿರುತ್ತದೆ ಮತ್ತು ಏನೇ ಕಷ್ಟ ಬಂದರೂ ಆತನಿಗೆ ನಿಷ್ಠರಾಗಿರುತ್ತೇವೆ. ಹೀಗೆ ನಾವು ಜೀವವನ್ನು ಆದುಕೊಳ್ಳುತ್ತೇವೆ. ಇದು ಈಗ ಅತ್ಯುತ್ತಮವಾದ ಜೀವನ ರೀತಿಯಾಗಿದೆ. ಅದರೊಂದಿಗೆ ಭವಿಷ್ಯತ್ತಿನಲ್ಲಿ ದೇವರು ತರಲಿರುವ ಹೊಸ ಲೋಕದಲ್ಲಿ ಶಾಶ್ವತ ಜೀವನದ ಪ್ರತೀಕ್ಷೆಯೂ ಸೇರಿದೆ.—2 ಪೇತ್ರ 3:11-13; 1 ಯೋಹಾನ 5:3.
ಆಧ್ಯಾತ್ಮಿಕ ಮುತ್ತುಗಳು
it-1-E ಪುಟ 665 ಪ್ಯಾರ 3
ಕಿವಿ
ಕೆಲವು ಇಸ್ರಾಯೇಲ್ಯರಿಗೆ ಕಿವಿ ಕೇಳುತ್ತಿರಲಿಲ್ಲ. ಯಾಕಂದ್ರೆ ಅವರ ಕಿವಿಯನ್ನು ಯೆಹೋವ ದೇವರು ತೆರೆದಿರಲಿಲ್ಲ. ಇದರ ಅರ್ಥ ಏನು? ಅವರು ಯೆಹೋವ ದೇವರನ್ನು ಮೆಚ್ಚಿಸದೇ ಇದ್ದಿದ್ರಿಂದ, ದೇವರ ಮಾತನ್ನು ಕೇಳದೇ ಇದ್ದಿದ್ರಿಂದ ದೇವರು ಅವರ ಕಿವಿಯನ್ನು ಮಂದ ಆಗೋಕೆ ಬಿಟ್ಟುಬಿಟ್ಟನು. ಅಂದ್ರೆ ಆ ವ್ಯಕ್ತಿಗೆ ಯೆಹೋವ ದೇವರು ಹೇಳೋ ಯಾವ ವಿಷಯವನ್ನೂ ಅರ್ಥ ಮಾಡಿಕೊಳ್ಳೋಕೆ ಆಗುತ್ತಿರಲಿಲ್ಲ. ಆದರೆ ಯಾರಿಗೆಲ್ಲ ಯೆಹೋವ ದೇವರನ್ನ ಮೆಚ್ಚಿಸಬೇಕು ಅನ್ನೋ ಆಸೆ ಇತ್ತೋ ಅವರ ಕಿವಿಯನ್ನು ದೇವರು ತೆರೆಯುತ್ತಿದ್ದನು ಅಂದ್ರೆ ವಿಷಯಗಳನ್ನು ಅರ್ಥ ಮಾಡಿಸುತ್ತಿದ್ದನು. (ಧರ್ಮೋ 29:4; ರೋಮ 11:8)
ಆಗಸ್ಟ್ 30–ಸೆಪ್ಟೆಂಬರ್ 5
ಬೈಬಲಿನಲ್ಲಿರುವ ರತ್ನಗಳು | ಧರ್ಮೋಪದೇಶಕಾಂಡ 31–32
“ಮೋಶೆ ಬರೆದ ಹಾಡಿಂದ ನಮಗಿರೋ ಪಾಠ”
ಕಾವಲಿನಬುರುಜು20.06 ಪುಟ 10 ಪ್ಯಾರ 8-9
“ನಿನ್ನ ನಾಮದಲ್ಲಿ ಭಯಭಕ್ತಿಯಿಂದಿರುವಂತೆ ಏಕಮನಸ್ಸನ್ನು ಅನುಗ್ರಹಿಸು”
8 ಇಸ್ರಾಯೇಲ್ಯರು ಇನ್ನೇನು ಕಾನಾನ್ ದೇಶವನ್ನು ಪ್ರವೇಶಿಸಲಿದ್ದರು. ಆಗ ಯೆಹೋವನು ಮೋಶೆಗೆ ಒಂದು ಪದ್ಯವನ್ನು ಹೇಳಿಕೊಟ್ಟನು. (ಧರ್ಮೋ. 31:19) ಅದನ್ನು ಮೋಶೆ ಇಸ್ರಾಯೇಲ್ಯರಿಗೆ ಕಲಿಸಬೇಕಿತ್ತು. (ಧರ್ಮೋಪದೇಶಕಾಂಡ 32:3 ಓದಿ.) ವಚನ 3 ರ ಬಗ್ಗೆ ಧ್ಯಾನಿಸುವಾಗ ಯೆಹೋವನ ಬಗ್ಗೆ ಒಂದು ವಿಷ್ಯ ಗೊತ್ತಾಗುತ್ತೆ. ಏನಂದ್ರೆ ತನ್ನ ಹೆಸ್ರು ಪವಿತ್ರ ಅದನ್ನು ಯಾರೂ ಉಚ್ಚರಿಸಬಾರದು, ಅದನ್ನು ಬಚ್ಚಿಡಬೇಕು ಅಂತ ಆತನಿಗೆ ಇಷ್ಟವಿಲ್ಲ. ಎಲ್ಲರೂ ತನ್ನ ಹೆಸ್ರನ್ನು ತಿಳುಕೊಳ್ಳಬೇಕು ಅನ್ನೋದೇ ಆತನ ಆಸೆ! ಯೆಹೋವನ ಬಗ್ಗೆ, ಆತನ ಮಹಾನ್ ಹೆಸ್ರಿನ ಬಗ್ಗೆ ಕಲಿತದ್ದು ಇಸ್ರಾಯೇಲ್ಯರಿಗೆ ಸಿಕ್ಕ ಒಂದು ಸುಯೋಗವೇ ಆಗಿತ್ತು. ಮೋಶೆ ಅವ್ರಿಗೆ ಕಲಿಸಿದ್ದು ಹೇಗಿತ್ತೆಂದ್ರೆ ಹದವಾದ ಮಳೆ ಸಸಿಗಳನ್ನು ಪೋಷಿಸಿ ಚೈತನ್ಯ ಕೊಡುವಂಥ ರೀತಿಯಲ್ಲಿತ್ತು. (ಧರ್ಮೋ. 32:2) ಅವನು ಕಲಿಸಿದ್ದು ಅವ್ರ ನಂಬಿಕೆಯನ್ನು ಬಲಪಡಿಸಿ ಚೈತನ್ಯ ಕೊಡ್ತು. ನಾವು ಮೋಶೆ ತರ ಜನ್ರಿಗೆ ಹೇಗೆ ಕಲಿಸಬಹುದು?
9 ಮನೆ-ಮನೆ ಸೇವೆ ಮಾಡ್ವಾಗ ಅಥ್ವಾ ಸಾರ್ವಜನಿಕ ಸ್ಥಳದಲ್ಲಿ ಸೇವೆ ಮಾಡ್ವಾಗ ದೇವ್ರ ಹೆಸ್ರು ಯೆಹೋವ ಅಂತ ಬೈಬಲಿಂದ ತೋರಿಸ್ಬಹುದು. ನಮ್ಮ ಸುಂದರ ಪ್ರಕಾಶನಗಳನ್ನು, ಮನಮುಟ್ಟುವಂಥ ವಿಡಿಯೋಗಳನ್ನು ಮತ್ತು ನಮ್ಮ ವೆಬ್ಸೈಟ್ನಲ್ಲಿರೋ ಮಾಹಿತಿಯನ್ನೂ ತೋರಿಸ್ಬಹುದು. ಕೆಲ್ಸದ ಸ್ಥಳದಲ್ಲಿ, ಶಾಲೆಯಲ್ಲಿ ಅಥವಾ ಪ್ರಯಾಣಿಸುವಾಗ ಯೆಹೋವನ ಬಗ್ಗೆ, ಆತನ ಗುಣಗಳ ಬಗ್ಗೆ ಮಾತಾಡೋಕೆ ನಮ್ಗೆ ಅವಕಾಶಗಳು ಸಿಗುತ್ತವೆ. ಜನ್ರಿಗೆ, ಯೆಹೋವ ಇಡೀ ಮಾನವಕುಲಕ್ಕಾಗಿ ಏನೆಲ್ಲಾ ಮಾಡಲಿದ್ದಾನೆ ಅನ್ನೋದನ್ನೂ ತಿಳಿಸ್ಬಹುದು. ಆಗ ಅವ್ರು ಯೆಹೋವ ತುಂಬ ಪ್ರೀತಿ ಮಾಡೋ ದೇವ್ರು ಅಂತ ಅರ್ಥ ಮಾಡ್ಕೋತಾರೆ. ನಾವು ಯೆಹೋವನ ಬಗ್ಗೆ ಸತ್ಯ ತಿಳಿಸ್ವಾಗ ಆತನ ಹೆಸ್ರಿನ ಪವಿತ್ರೀಕರಣಕ್ಕೆ ನಾವೂ ಕೈಜೋಡಿಸಿದಂತೆ ಆಗುತ್ತೆ. ದೇವ್ರ ಬಗ್ಗೆ ಜನ್ರು ನಂಬಿದ್ದ ವಿಷ್ಯಗಳು ಸುಳ್ಳು ಅಂತ ಅರ್ಥಮಾಡಿಕೊಳ್ಳಲು ನಾವು ಸಹಾಯ ಮಾಡಿದಂತೆ ಆಗುತ್ತೆ. ನಾವು ಬೈಬಲಿಂದ ಕಲಿಸೋ ವಿಷ್ಯಗಳು ಜನ್ರ ನಂಬಿಕೆಯನ್ನು ಬಲಪಡಿಸಿ ಚೈತನ್ಯ ಕೊಡುತ್ತವೆ.—ಯೆಶಾ. 65:13, 14.
ಕಾವಲಿನಬುರುಜು09 5/1-E ಪುಟ 14 ಪ್ಯಾರ 4
ಬೈಬಲಿನಲ್ಲಿರೋ ಉದಾಹರಣೆಗಳನ್ನು ಅರ್ಥ ಮಾಡಿಕೊಂಡಿದ್ದೀರಾ?
ಬೈಬಲಲ್ಲಿ ಯೆಹೋವ ದೇವರನ್ನು ಎಷ್ಟೋ ಸಲ ನಿರ್ಜೀವ ವಸ್ತುಗಳಿಗೆ ಹೋಲಿಸಿ ಮಾತಾಡಲಾಗಿದೆ. ಯೆಹೋವ ದೇವರು “ಇಸ್ರಾಯೇಲ್ಯರ ಬಂಡೆ,” “ಕಡಿದಾದ ಬಂಡೆ,” “ಭದ್ರಕೋಟೆ” ಅಂತ ಬೈಬಲ್ ಹೇಳುತ್ತೆ. (2 ಸಮುವೇಲ 23:3; ಕೀರ್ತನೆ 18:2; ಧರ್ಮೋಪದೇಶಕಾಂಡ 32:4) ಇದರ ಅರ್ಥವೇನು? ಒಂದು ದೊಡ್ಡ ಬಂಡೆಯ ಆಶ್ರಯದಲ್ಲಿ ನಾವು ಸುರಕ್ಷಿತವಾಗಿ ಇರೋ ತರ ಯೆಹೋವ ದೇವರ ಆಶ್ರಯದಲ್ಲಿ ಸುರಕ್ಷಿತವಾಗಿ ಇರುತ್ತೀವಿ, ಯಾವ ಭಯನೂ ಇರಲ್ಲ.
ಕಾವಲಿನಬುರುಜು01 10/1 ಪುಟ 9 ಪ್ಯಾರ 7
ನಿಮ್ಮ ಮಕ್ಕಳನ್ನು ತರಬೇತುಗೊಳಿಸುವಾಗ ಯೆಹೋವನನ್ನು ಅನುಕರಿಸಿರಿ
7 ಇಸ್ರಾಯೇಲ್ಯರೊಂದಿಗೆ ವ್ಯವಹರಿಸಿದಾಗ ಯೆಹೋವನು ತೋರಿಸಿದ ಪ್ರೀತಿಯನ್ನು ಮನಸ್ಸಿಗೆ ತಂದುಕೊಳ್ಳಿರಿ. ಹೊಸ ಇಸ್ರಾಯೇಲ್ ಜನಾಂಗಕ್ಕಾಗಿ ಯೆಹೋವನಿಗಿದ್ದ ಪ್ರೀತಿಯನ್ನು ವರ್ಣಿಸಲಿಕ್ಕಾಗಿ ಮೋಶೆಯು ಒಂದು ಹೃದಯಸ್ಪರ್ಶಿ ಹೋಲಿಕೆಯನ್ನು ಉಪಯೋಗಿಸಿದನು. ನಾವು ಓದುವುದು: ‘ಹದ್ದು ತನ್ನ ಮರಿಗಳನ್ನು ಗೂಡಿನೊಳಗಿಂದ ಹೊರಡಿಸಿ ಅವುಗಳ ಬಳಿಯಲ್ಲಿ ಹಾರಾಡುವಂತೆ ಯೆಹೋವನು ತನ್ನ ರೆಕ್ಕೆಗಳನ್ನು ಚಾಚಿ ಇಸ್ರಾಯೇಲ್ಯರನ್ನು ಆತುಕೊಂಡು . . . ಯೆಹೋವನೊಬ್ಬನೇ ಅವರನ್ನು ನಡಿಸಿಕೊಂಡು ಬಂದನು.’ (ಧರ್ಮೋಪದೇಶಕಾಂಡ 32:9, 11, 12) ತಾಯಿಹದ್ದು ತನ್ನ ಚಿಕ್ಕ ಮರಿಗಳಿಗೆ ಹಾರಾಡಲು ಕಲಿಸಲಿಕ್ಕಾಗಿ, ‘ಗೂಡಿನೊಳಗಿಂದ ಹೊರಡಿಸುತ್ತದೆ,’ ರೆಕ್ಕೆಬಡಿಯುತ್ತಾ ಮೇಲಕ್ಕೂ ಕೆಳಕ್ಕೂ ಚಲಿಸಿ ಮರಿಗಳನ್ನು ಹಾರಾಡಲು ಪ್ರಚೋದಿಸುತ್ತದೆ. ಕೊನೆಗೆ ಒಂದು ಚಿಕ್ಕ ಮರಿಯು, ಹೆಚ್ಚಾಗಿ ಬೆಟ್ಟದ ಕಡಿದಾದ ತುದಿಯಲ್ಲಿರುವ ಗೂಡಿನೊಳಗಿಂದ ತಲೆಕೆಳಗಾಗಿ ಧುಮುಕುವಾಗ, ತಾಯಿಯು ರೆಕ್ಕೆಗಳನ್ನು ಚಾಚಿ ಆ ಮರಿಯ ‘ಬಳಿಯಲ್ಲೇ ಹಾರಾಡುತ್ತಿರುತ್ತದೆ.’ ಒಂದುವೇಳೆ ಆ ಮರಿಯು ನೆಲಕ್ಕೆ ಬೀಳಬಹುದು ಎಂದು ತೋರಿದರೆ, ಫಕ್ಕನೆ ತಾಯಿಹದ್ದು ಮರಿಯ ಕೆಳಕ್ಕೆರಗಿ ರೆಕ್ಕೆಯ ಗರಿಗಳಿಂದ ಅದನ್ನೆತ್ತುತ್ತದೆ. ನವಜನಿತ ಇಸ್ರಾಯೇಲ್ ಜನಾಂಗವನ್ನು ಯೆಹೋವನು ಇದೇ ರೀತಿ ಪ್ರೀತಿಯಿಂದ ಪರಾಮರಿಕೆ ಮಾಡಿದನು. (ಕೀರ್ತನೆ 78:5-7) ಅವರ ಮೇಲೆ ಎಚ್ಚರಿಕೆಯ ಕಾವಲನ್ನಿಟ್ಟು, ಅವರ ಸಂಕಷ್ಟದ ಸಮಯದಲ್ಲೆಲ್ಲಾ ಅವರನ್ನು ರಕ್ಷಿಸಲು ಸಿದ್ಧನಾಗಿ ನಿಂತನು.
ಆಧ್ಯಾತ್ಮಿಕ ಮುತ್ತುಗಳು
ಕಾವಲಿನಬುರುಜು04 9/15 ಪುಟ 27 ಪ್ಯಾರ 11
ಧರ್ಮೋಪದೇಶಕಾಂಡ ಪುಸ್ತಕದ ಮುಖ್ಯಾಂಶಗಳು
31:12. ಸಭಾ ಕೂಟಗಳಲ್ಲಿ ಮಕ್ಕಳು ದೊಡ್ಡವರೊಂದಿಗೆ ಕುಳಿತುಕೊಳ್ಳಬೇಕು ಮತ್ತು ಕಿವಿಗೊಡಲು ಹಾಗೂ ಕಲಿಯಲು ಪ್ರಯತ್ನಿಸಬೇಕು.