ಕೀರ್ತನೆ
ದಾವೀದನ ಕೀರ್ತನೆ.
א [ಆಲೆಫ್]
ב [ಬೆತ್]
4 ಯೆಹೋವನಲ್ಲಿ ತುಂಬ ಆನಂದ ಕಂಡ್ಕೊ,
ಆತನು ನಿನ್ನ ಹೃದಯದ ಆಸೆಗಳನ್ನ ನೆರವೇರಿಸ್ತಾನೆ.
ג [ಗಿಮೆಲ್]
5 ನಿನ್ನ ಜೀವನದ ಚಿಂತೆಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು,*+
ಆತನ ಮೇಲೆ ಭರವಸೆ ಇಡು, ಆತನೇ ನಿನ್ನ ಪರವಾಗಿ ಹೆಜ್ಜೆ ತಗೊತಾನೆ.+
6 ಆತನು ನಿನ್ನ ನೀತಿಯನ್ನ ಬೆಳಕಿನ ಹಾಗೆ,
ನಿನ್ನ ನ್ಯಾಯವನ್ನ ಮಧ್ಯಾಹ್ನದ ಸೂರ್ಯನ ಹಾಗೆ ಹೊಳಿಯೋ ತರ ಮಾಡ್ತಾನೆ.
ד [ಡಾಲತ್]
ಕುತಂತ್ರದಿಂದ ಗೆಲ್ಲುವವನನ್ನ ನೋಡಿ
ನಿನ್ನ ನೆಮ್ಮದಿ ಕಳ್ಕೊಬೇಡ.+
ה [ಹೆ]
8 ಕೋಪವನ್ನ ಬಿಟ್ಟುಬಿಡು, ಕ್ರೋಧವನ್ನ ತೊರೆದುಬಿಡು.+
ನೆಮ್ಮದಿಯನ್ನ ಹಾಳುಮಾಡ್ಕೊಬೇಡ, ಕೆಟ್ಟಕೆಲಸಕ್ಕೆ ಕೈಹಾಕಬೇಡ.
ו [ವಾವ್]
10 ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ.+
ಅವರಿದ್ದ ಜಾಗದಲ್ಲಿ ಅವ್ರನ್ನ ಹುಡುಕಿದ್ರೂ,
ಅವರು ನಿನಗೆ ಸಿಗೋದೇ ಇಲ್ಲ.+
ז [ಜಯಿನ್]
12 ಕೆಟ್ಟವನು ನೀತಿವಂತನ ವಿರುದ್ಧ ಕುತಂತ್ರ ಹೆಣೆಯುತ್ತಾನೆ,+
ಅವನನ್ನ ನೋಡಿ ಹಲ್ಲು ಕಡಿತಾನೆ.
13 ಆದ್ರೆ ಕೆಟ್ಟವನನ್ನ ನೋಡಿ ಯೆಹೋವ ನಗ್ತಾನೆ,
ಯಾಕಂದ್ರೆ ದುಷ್ಟ ನಾಶವಾಗಿ ಹೋಗ್ತಾನೆ ಅಂತ ಆತನಿಗೆ ಗೊತ್ತು.+
ח [ಹೆತ್]
14 ಕುಗ್ಗಿಹೋದವರನ್ನ ಕೆಡವೋಕೆ, ಬಡವರನ್ನ ಬೀಳಿಸೋಕೆ,
ಸರಿಯಾದ ದಾರಿಯಲ್ಲಿ ನಡೆಯೋರನ್ನ ನಾಶಮಾಡೋಕೆ,
ಕೆಟ್ಟವರು ತಮ್ಮ ಕತ್ತಿಗಳನ್ನ ಹಿಡ್ಕೊಂಡಿದ್ದಾರೆ, ಬಿಲ್ಲುಗಳನ್ನ ಬಾಗಿಸಿದ್ದಾರೆ.
15 ಆದ್ರೆ ಅವ್ರ ಕತ್ತಿ ಅವ್ರ ಹೃದಯವನ್ನೇ ಸೀಳಿಬಿಡುತ್ತೆ,+
ಅವ್ರ ಬಿಲ್ಲುಗಳು ಮುರಿದು ಹೋಗುತ್ತೆ.
ט [ಟೆತ್]
16 ಕೆಟ್ಟವರಿಗಿರೋ ಸಮೃದ್ಧಿಗಿಂತ,
ನೀತಿವಂತರಿಗಿರೋ ಬಡತನವೇ ಮೇಲು.+
17 ಯಾಕಂದ್ರೆ ಕೆಟ್ಟವರ ತೋಳು ಮುರಿದು ಹೋಗುತ್ತೆ,
ಆದ್ರೆ ನೀತಿವಂತರಿಗೆ ಯೆಹೋವ ಸಹಾಯಮಾಡ್ತಾನೆ.
י [ಯೋದ್]
19 ವಿಪತ್ತು ಬಂದಾಗ ಅವ್ರಿಗೆ ಅವಮಾನ ಆಗಲ್ಲ,
ಬರಗಾಲ ಬಂದಾಗ ಅವ್ರ ಹತ್ರ ಸಾಕಷ್ಟು ಊಟ ಇರುತ್ತೆ.
כ [ಕಾಫ್]
20 ಆದ್ರೆ ಕೆಟ್ಟವರು ಅಳಿದುಹೋಗ್ತಾರೆ,+
ಚೆನ್ನಾಗಿ ಬೆಳಿದಿರೋ ಹುಲ್ಲುಗಾವಲು ನಾಶ ಆಗೋ ತರ ಯೆಹೋವನ ಶತ್ರುಗಳು ನಾಶವಾಗ್ತಾರೆ,
ಅವರು ಹೊಗೆ ತರ ಕಾಣಿಸದ ಹಾಗೆ ಹೋಗ್ತಾರೆ.
ל [ಲಾಮೆದ್]
22 ದೇವರಿಂದ ಆಶೀರ್ವಾದ ಪಡಿಯೋರಿಗೆ ಭೂಮಿ ಆಸ್ತಿಯಾಗಿ ಸಿಗುತ್ತೆ,
ಆತನು ಯಾರಿಗೆ ಶಾಪ ಕೊಡ್ತಾನೋ ಅವರು ನಾಶವಾಗಿ ಹೋಗ್ತಾರೆ.+
מ [ಮೆಮ್]
נ [ನೂನ್]
25 ನಾನು ಚಿಕ್ಕವನಾಗಿದ್ದೆ, ಈಗ ಮುದುಕನಾಗಿದ್ದೀನಿ.
ಆದ್ರೂ ಇಲ್ಲಿ ತನಕ ದೇವರು ನೀತಿವಂತನ ಕೈಬಿಟ್ಟಿರೋದನ್ನಾಗಲಿ,+
ನೀತಿವಂತನ ಮಕ್ಕಳು ಊಟಕ್ಕಾಗಿ ಭಿಕ್ಷೆ ಬೇಡೋದನ್ನಾಗಲಿ ನಾನು ನೋಡಿಲ್ಲ.+
26 ನೀತಿವಂತ ಉದಾರವಾಗಿ ಕೊಡ್ತಾನೆ,+
ಅವನ ಮಕ್ಕಳು ದೇವರ ಆಶೀರ್ವಾದ ಪಡೀತಾರೆ.
ס [ಸಾಮೆಕ್]
27 ಕೆಟ್ಟದ್ದನ್ನ ಬಿಟ್ಟು ಒಳ್ಳೇದನ್ನೇ ಮಾಡು,+
ಆಗ ನೀನು ಸದಾಕಾಲ ಇರ್ತಿಯ.
ע [ಅಯಿನ್]
פ [ಪೇ]
30 ನೀತಿವಂತನ ಬಾಯಿ* ವಿವೇಕವನ್ನ ಹೇಳುತ್ತೆ.
ಅವನ ನಾಲಿಗೆ ನ್ಯಾಯದ ಬಗ್ಗೆ ಮಾತಾಡುತ್ತೆ.+
צ [ಸಾದೆ]
32 ನೀತಿವಂತನನ್ನ ಕೊಲ್ಲೋಕೆ,
ಕೆಟ್ಟವನು ಗಮನಿಸ್ತಾ ಇರ್ತಾನೆ.
33 ಆದ್ರೆ ಯೆಹೋವ ನೀತಿವಂತನನ್ನ ತೊರೆದುಬಿಡಲ್ಲ, ಕೆಟ್ಟವನ ಕೈಗೆ ಅವನನ್ನ ಒಪ್ಪಿಸಲ್ಲ.+
ತೀರ್ಪು ಮಾಡೋವಾಗ ಅವನನ್ನ ಅಪರಾಧಿ ಅನ್ನಲ್ಲ.+
ק [ಕೊಫ್]
34 ಯೆಹೋವನಲ್ಲಿ ನಿರೀಕ್ಷೆ ಇಡು, ಆತನ ದಾರಿಯಲ್ಲಿ ನಡಿ,
ನೀನು ಭೂಮಿಯನ್ನ ಆಸ್ತಿಯಾಗಿ ಪಡ್ಕೊಳ್ಳೋ ತರ ಆತನು ನಿನ್ನನ್ನ ಮೇಲೆ ಎತ್ತುತ್ತಾನೆ.
ಕೆಟ್ಟವರು ನಾಶವಾಗಿ ಹೋಗೋದನ್ನ+ ನೀನು ಕಣ್ಣಾರೆ ನೋಡ್ತೀಯ.+
ר [ರೆಶ್]
35 ಕ್ರೂರಿಯನ್ನ, ಕೆಟ್ಟವನನ್ನ ನಾನು ನೋಡಿದ್ದೀನಿ,
ಅವನು ಸ್ವಂತ ನೆಲದಲ್ಲೇ ಬೇರುಬಿಟ್ಟು ಚೆನ್ನಾಗಿ ಬೆಳೆದಿರೋ ಮರದ ತರ ಇದ್ದಾನೆ.+
36 ಆದ್ರೆ ಅವನು ಇದ್ದಕ್ಕಿದ್ದ ಹಾಗೆ ಸತ್ತುಹೋದ, ಅಳಿದುಹೋದ.+
ನಾನು ಅವನನ್ನ ಹುಡುಕಿದ್ರೂ ಸಿಗಲಿಲ್ಲ.+
ש [ಶಿನ್]
38 ಆದ್ರೆ ಅಪರಾಧಿಗಳೆಲ್ಲ ನಾಶ ಆಗ್ತಾರೆ,
ಕೆಟ್ಟವ್ರಿಗೆ ಭವಿಷ್ಯನೇ ಇಲ್ಲ.+
ת [ಟಾವ್]
40 ಯೆಹೋವ ಅವ್ರಿಗೆ ಸಹಾಯ ಮಾಡ್ತಾನೆ, ಅವ್ರನ್ನ ಕಾಪಾಡ್ತಾನೆ.+
ಅವರು ಆತನನ್ನ ಆಶ್ರಯಿಸಿರೋದ್ರಿಂದ,
ಆತನು ಅವ್ರನ್ನ ಕೆಟ್ಟವರ ಕೈಯಿಂದ ಬಿಡಿಸಿ ಕಾಪಾಡ್ತಾನೆ.+