ಜ್ಞಾನೋಕ್ತಿ
2 ಅಹಂಕಾರ ಬಂದ್ರೆ ಅದ್ರ ಹಿಂದೆ ಅವಮಾನನೂ ಬರುತ್ತೆ.+
ಆದ್ರೆ ವಿನಮ್ರರ ಹತ್ರ ವಿವೇಕ ಇರುತ್ತೆ.+
4 ದೇವರ ಕೋಪದ ದಿನದಲ್ಲಿ ಆಸ್ತಿ-ಐಶ್ವರ್ಯಕ್ಕೆ ಮೂರು ಕಾಸಿನ ಬೆಲೆ ಇರಲ್ಲ,+
ಆದ್ರೆ ನೀತಿ ಒಬ್ಬ ಮನುಷ್ಯನನ್ನ ಸಾವಿಂದ ಕಾಪಾಡುತ್ತೆ.+
5 ತಪ್ಪು ಮಾಡದವನು ನೀತಿಯಿಂದ ನಡ್ಕೊಂಡ್ರೆ ಅವನ ದಾರಿ ನೆಟ್ಟಗೆ ಇರುತ್ತೆ,
ಆದ್ರೆ ಕೆಟ್ಟವನು ಮಾಡೋ ಕೆಟ್ಟ ಕೆಲಸಗಳು ಅವನನ್ನೇ ಬೀಳಿಸುತ್ತೆ.+
7 ಕೆಟ್ಟವನು ತೀರಿ ಹೋಗುವಾಗ ಅವನ ಆಸೆಗಳೆಲ್ಲ ನುಚ್ಚುನೂರಾಗುತ್ತೆ,
ಸ್ವಂತ ಶಕ್ತಿ ಮೇಲೆ ಅವನಿಟ್ಟ ನಂಬಿಕೆ ಮಣ್ಣುಪಾಲಾಗುತ್ತೆ.+
10 ನೀತಿವಂತರಲ್ಲಿರೋ ಒಳ್ಳೆತನದಿಂದ ಇಡೀ ಪಟ್ಟಣಕ್ಕೆ ಖುಷಿ ಆಗುತ್ತೆ,
ಕೆಟ್ಟವರು ನಾಶ ಆದಾಗ ಜನ ಕುಣಿದು ಕುಪ್ಪಳಿಸ್ತಾರೆ.+
11 ನೀತಿವಂತನಿಗೆ ಆಶೀರ್ವಾದ ಸಿಕ್ಕಿದಾಗ ಪಟ್ಟಣಕ್ಕೆ ಒಳ್ಳೇ ಹೆಸ್ರು ಬರುತ್ತೆ,+
ಕೆಟ್ಟವನ ಮಾತುಗಳು ಪಟ್ಟಣವನ್ನ ನಾಶ ಮಾಡುತ್ತೆ.+
13 ಚಾಡಿ ಹೇಳಿ ಹೆಸ್ರು ಹಾಳು ಮಾಡುವವನು ಗುಟ್ಟನ್ನ ರಟ್ಟು ಮಾಡ್ತಾನೆ,+
ನಂಬಿಗಸ್ತ ವ್ಯಕ್ತಿ ಗುಟ್ಟನ್ನ ಗುಟ್ಟಾಗೇ ಇಡ್ತಾನೆ.
15 ಅಪರಿಚಿತನ ಸಾಲಕ್ಕೆ ಜಾಮೀನು ಕೊಟ್ರೆ ಕಷ್ಟ ಪಡ್ತಾ ಇರಬೇಕಾಗುತ್ತೆ,+
ಕೈಕುಲುಕಿ ಮಾತು ಕೊಡೋಕೆ ಆತುರಪಡದವನು ಕಷ್ಟದಿಂದ ತಪ್ಪಿಸ್ಕೊಳ್ತಾನೆ.
19 ನೀತಿಯ ಪಕ್ಷದಲ್ಲೇ ನಿಲ್ಲುವವನಿಗೆ ಜೀವ,+
ಕೆಟ್ಟ ವಿಷ್ಯಗಳ ಹಿಂದೆ ಹೋಗುವವನಿಗೆ ಸಾವು.
20 ಹೃದಯದಲ್ಲಿ ಕಪಟ ಇರುವವ್ರನ್ನ ನೋಡಿದ್ರೆ ಯೆಹೋವನಿಗೆ ಅಸಹ್ಯ,+
ತಪ್ಪು ಮಾಡದೆ ನಡಿಯುವವರನ್ನ ನೋಡಿದ್ರೆ ಆತನಿಗೆ ಸಂತೋಷ.+
22 ವಿವೇಕವನ್ನ ತಳ್ಳಿಹಾಕೋ ಸುಂದರಿ
ಹಂದಿ ಮೂಗಿಗೆ ಹಾಕಿರೋ ಮೂಗುತಿ.
23 ನೀತಿವಂತರ ಆಸೆ ಒಳ್ಳೇದಕ್ಕೆ ನಡಿಸುತ್ತೆ,+
ಆದ್ರೆ ಕೆಟ್ಟವ್ರ ಆಸೆ ಕೋಪಕ್ಕೆ ದಾರಿ ಮಾಡುತ್ತೆ.
26 ಜನ್ರಿಗೆ ಧಾನ್ಯ ಮಾರೋಕೆ ಒಪ್ಪದವನಿಗೆ ಶಾಪ ಸಿಗುತ್ತೆ.
ಆದ್ರೆ ಅದನ್ನ ಮಾರುವವನಿಗೆ ಆಶೀರ್ವಾದ ಸಿಗುತ್ತೆ.
27 ಒಳ್ಳೇದನ್ನ ಮಾಡೋಕೆ ಶ್ರದ್ಧೆಯಿಂದ ಪ್ರಯತ್ನಿಸುವವನಿಗೆ ದಯೆ ಸಿಗುತ್ತೆ.+
ಕೆಟ್ಟದು ಮಾಡೋಕೆ ತುದಿಗಾಲಲ್ಲಿ ನಿಲ್ಲುವವನಿಗೆ ಕೆಟ್ಟದೇ ಆಗುತ್ತೆ.+