ಕೊಲೊಸ್ಸೆಯವರಿಗೆ ಬರೆದ ಪತ್ರ
3 ಆದ್ರೆ ಕ್ರಿಸ್ತನ ಜೊತೆ ದೇವರು ನಿಮಗೂ ಮತ್ತೆ ಜೀವ ಕೊಟ್ಟಿದ್ದಾನಲ್ಲಾ.+ ಹಾಗಾಗಿ ಸ್ವರ್ಗದ ವಿಷ್ಯಗಳಿಗಾಗಿ ಶ್ರಮಪಡಿ. ಅಲ್ಲಿ ಕ್ರಿಸ್ತನು ದೇವರ ಬಲಗಡೆ ಕೂತಿದ್ದಾನೆ.+ 2 ಭೂಮಿ ಮೇಲಿರೋ ವಿಷ್ಯಗಳ ಮೇಲಲ್ಲ,+ ಸ್ವರ್ಗದ ವಿಷ್ಯಗಳ ಮೇಲೆ ನೀವು ಮನಸ್ಸಿಡಿ.+ 3 ಯಾಕಂದ್ರೆ ನೀವು ಸತ್ತಿದ್ರಿ, ಈಗ ನಿಮ್ಮ ಜೀವ ದೇವರ ಇಷ್ಟದ ಪ್ರಕಾರ ಕ್ರಿಸ್ತನ ಹತ್ರ ಜೋಪಾನವಾಗಿದೆ. 4 ನಮ್ಮ ಜೀವವಾಗಿರೋ ಕ್ರಿಸ್ತ+ ರಾಜನಾಗಿ ಬರುವಾಗ ನೀವೂ ಆತನ ಜೊತೆ ರಾಜರಾಗಿ ಆತನ ಮಹಿಮೆಯಲ್ಲಿ ಪಾಲು ತಗೊಳ್ತೀರ.+
5 ಹಾಗಾಗಿ ಲೈಂಗಿಕ ಅನೈತಿಕತೆ,* ಅಶುದ್ಧತೆ, ಹತೋಟಿ ಇಲ್ಲದ ಕಾಮದಾಸೆ,+ ಕೆಟ್ಟದು ಮಾಡೋ ಅತಿಯಾಸೆ ಮತ್ತು ಮೂರ್ತಿಪೂಜೆ ಆಗಿರೋ ದುರಾಸೆ ಇಂಥ ಆಸೆಗಳನ್ನ ಹುಟ್ಟಿಸೋ ನಿಮ್ಮ ದೇಹದ ಅಂಗಗಳನ್ನ ಸಾಯಿಸಿ.+ 6 ಇದನ್ನೆಲ್ಲ ಮಾಡುವವ್ರ ಮೇಲೆ ದೇವರ ಕೋಪ ಬರುತ್ತೆ. 7 ಒಂದು ಕಾಲದಲ್ಲಿ ನೀವೂ ಅಂಥ ವಿಷ್ಯಗಳನ್ನೇ ಮಾಡ್ತಿದ್ರಿ.+ 8 ಆದ್ರೆ ಈಗ ಕ್ರೋಧ, ಕೋಪ, ಕೆಟ್ಟತನ,+ ಬೈಗುಳಗಳನ್ನ+ ಪೂರ್ತಿ ಬಿಟ್ಟುಬಿಡಿ. ನಿಮ್ಮ ಬಾಯಲ್ಲಿ ಕೆಟ್ಟ ಮಾತು+ ಬರಲೇ ಬಾರದು. 9 ಒಬ್ರಿಗೊಬ್ರು ಸುಳ್ಳು ಹೇಳಬೇಡಿ.+ ಹಳೇ ವ್ಯಕ್ತಿತ್ವವನ್ನ ಬಟ್ಟೆ ತರ ತೆಗೆದುಹಾಕಿ,+ ಹಿಂದೆ ಮಾಡ್ತಿದ್ದ ವಿಷ್ಯಗಳನ್ನ ಬಿಟ್ಟುಬಿಡಿ. 10 ದೇವರು ಕೊಡೋ ಹೊಸ ವ್ಯಕ್ತಿತ್ವ ಹಾಕ್ಕೊಳ್ಳಿ.+ ಇದನ್ನ ದೇವರು ತನ್ನ ಸ್ವರೂಪದಲ್ಲಿ ಸೃಷ್ಟಿ ಮಾಡಿದ್ದಾನೆ. ನಿಮ್ಮ ವ್ಯಕ್ತಿತ್ವ ದೇವರ ಸ್ವರೂಪದ ತರ+ ಬದ್ಲಾಗೋಕೆ ಆತನ ಸರಿಯಾದ ಜ್ಞಾನಕ್ಕೆ ತಕ್ಕ ಹಾಗೆ ಅದನ್ನ ಹೊಸದು ಮಾಡ್ತಾ ಇರಿ. 11 ಈ ಹೊಸ ವ್ಯಕ್ತಿತ್ವಕ್ಕೆ ಗ್ರೀಕ, ಯೆಹೂದ್ಯ, ಸುನ್ನತಿ ಆದವ, ಸುನ್ನತಿ ಆಗಿಲ್ಲದವ, ವಿದೇಶೀ, ಕಾಡು ಮನುಷ್ಯ,* ದಾಸ, ಸ್ವತಂತ್ರ ವ್ಯಕ್ತಿ ಅನ್ನೋ ಭೇದ ಇಲ್ಲ. ಕ್ರಿಸ್ತನು ಎಲ್ಲದ್ರಲ್ಲೂ ಎಲ್ಲವೂ ಆಗಿದ್ದಾನೆ.+
12 ದೇವರು ನಿಮ್ಮನ್ನ ಆರಿಸಿದ್ರಿಂದ,+ ನೀವು ಪವಿತ್ರರೂ ಪ್ರಿಯ ಮಕ್ಕಳೂ ಆಗಿರೋದ್ರಿಂದ ಕೋಮಲ ಮಮತೆ, ಅನುಕಂಪ,+ ದಯೆ, ದೀನತೆ,*+ ಸೌಮ್ಯತೆ+ ಮತ್ತು ತಾಳ್ಮೆಯನ್ನ+ ಬಟ್ಟೆ ತರ ಹಾಕ್ಕೊಳ್ಳಿ. 13 ಬೇರೆಯವರು ತಪ್ಪು ಮಾಡಿದ್ರೂ+ ಒಬ್ರನ್ನೊಬ್ರು ಸಹಿಸ್ಕೊಳ್ತಾ ಇರಿ. ಮನಸ್ಸಲ್ಲಿ ಏನೂ ಇಟ್ಕೊಳ್ಳದೆ ಒಬ್ರನ್ನೊಬ್ರು ಉದಾರವಾಗಿ ಕ್ಷಮಿಸ್ತಾ ಇರಿ.+ ಯೆಹೋವ* ನಿಮ್ಮನ್ನ ಉದಾರವಾಗಿ ಕ್ಷಮಿಸಿದ ತರಾನೇ ನೀವೂ ಕ್ಷಮಿಸಿ.+ 14 ಇದ್ರ ಜೊತೆ ಪ್ರೀತಿಯನ್ನ ಹಾಕ್ಕೊಳ್ಳಿ,+ ಯಾಕಂದ್ರೆ ಎಲ್ರನ್ನೂ ಒಂದು ಮಾಡೋದು ಈ ಪ್ರೀತಿನೇ.+
15 ಕ್ರಿಸ್ತ ಕೊಡೋ ಶಾಂತಿ ನಿಮ್ಮ ಹೃದಯವನ್ನ ಆಳೋಕೆ ಬಿಟ್ಕೊಡಿ.+ ಯಾಕಂದ್ರೆ ನೀವೆಲ್ರೂ ಒಂದೇ ದೇಹ. ನೀವೆಲ್ರೂ ಶಾಂತಿಯಿಂದ ಇರಬೇಕು ಅಂತಾನೇ ದೇವರು ಕರೆದಿದ್ದಾನೆ. ನೀವು ಆ ಸಹಾಯವನ್ನ ಎಷ್ಟು ನೆನಪಿಸ್ಕೊಳ್ತೀರ ಅಂತ ತೋರಿಸಿ. 16 ಕ್ರಿಸ್ತ ಕಲಿಸಿದ ವಿಷ್ಯಗಳೆಲ್ಲ ನಿಮ್ಮ ಹೃದಯದ ತುಂಬ ತುಂಬಿರಲಿ. ಆಗ ವಿವೇಕಿಗಳಾಗ್ತೀರ. ಕೀರ್ತನೆಗಳನ್ನ ಹಾಡ್ತಾ, ದೇವರನ್ನ ಹೊಗಳ್ತಾ, ಧನ್ಯವಾದ ಹೇಳ್ತಾ* ಆರಾಧನಾ ಗೀತೆಗಳನ್ನ ಹಾಡ್ತಾ ಯಾವಾಗ್ಲೂ ಒಬ್ರಿಗೊಬ್ರು ಕಲಿಸಿ, ಪ್ರೋತ್ಸಾಹಿಸಿ.*+ ಅಷ್ಟೇ ಅಲ್ಲ ಯೆಹೋವನಿಗಾಗಿ* ಮನಸಾರೆ* ಗೀತೆಗಳನ್ನ ಹಾಡಿ.+ 17 ನೀವು ಏನೇ ಹೇಳಿದ್ರೂ ಏನೇ ಮಾಡಿದ್ರೂ ಎಲ್ಲವನ್ನ ಪ್ರಭು ಯೇಸು ಹೆಸ್ರಲ್ಲಿ ಮಾಡಿ, ಆತನ ಮೂಲಕ ತಂದೆಯಾದ ದೇವರಿಗೆ ಧನ್ಯವಾದ ಹೇಳಿ.+
18 ಹೆಂಡತಿಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿ.+ ಒಡೆಯ ನಿಮ್ಮಿಂದ ಇದನ್ನೇ ಕೇಳೋದು. 19 ಗಂಡಂದಿರೇ, ನಿಮ್ಮ ಹೆಂಡತಿಯರನ್ನ ಪ್ರೀತಿಸ್ತಾ ಇರಿ.+ ಅವ್ರ ಮೇಲೆ ಕೆಂಡ ಕಾರಬೇಡಿ.*+ 20 ಮಕ್ಕಳೇ, ಎಲ್ಲ ವಿಷ್ಯದಲ್ಲಿ ನಿಮ್ಮ ಅಪ್ಪಅಮ್ಮನ ಮಾತು ಕೇಳಿ.+ ನೀವು ಹೀಗೆ ಮಾಡಿದ್ರೆ ಒಡೆಯನಿಗೆ ಖುಷಿ ಆಗುತ್ತೆ. 21 ಅಪ್ಪಂದಿರೇ, ನಿಮ್ಮ ಮಕ್ಕಳಿಗೆ ಕೋಪ ಬರೋ ಹಾಗೆ ಮಾಡಬೇಡಿ.*+ ಹಾಗೆ ಮಾಡಿದ್ರೆ ಅವ್ರ ಮನಸ್ಸು ಒಡೆದುಹೋಗುತ್ತೆ.* 22 ದಾಸರೇ, ಯಾವಾಗ್ಲೂ ನಿಮ್ಮ ಯಜಮಾನರ ಮಾತು ಕೇಳಿ.+ ಮನುಷ್ಯರನ್ನ ಮೆಚ್ಚಿಸಬೇಕಂತ ಅವರು ನೋಡುವಾಗ ಮಾತ್ರ ಕೆಲಸ ಮಾಡ್ದೆ, ಯೆಹೋವನಿಗೆ* ಭಯಪಟ್ಟು ಪ್ರಾಮಾಣಿಕವಾಗಿ ಕೆಲಸಮಾಡಿ. 23 ನೀವು ಏನೇ ಮಾಡಿದ್ರೂ ಅದನ್ನ ಮನುಷ್ಯರಿಗಾಗಿ ಅಲ್ಲ, ಯೆಹೋವನಿಗಾಗಿ* ಅಂತ ಪೂರ್ಣ ಮನಸ್ಸಿಂದ ಮಾಡಿ.+ 24 ಯಾಕಂದ್ರೆ ನೀವು ಯೆಹೋವನಿಂದಾನೇ* ಆಸ್ತಿಯನ್ನ ಬಹುಮಾನವಾಗಿ ಪಡ್ಕೊಳ್ತೀರ ಅಂತ ನಿಮಗೆ ಗೊತ್ತಲ್ವಾ.+ ಯಜಮಾನ ಆಗಿರೋ ಕ್ರಿಸ್ತನಿಗೆ ದಾಸರಾಗಿ ಆತನ ಸೇವೆಮಾಡಿ. 25 ತಪ್ಪು ಮಾಡಿದವನಿಗೆ ಶಿಕ್ಷೆ ಸಿಕ್ಕೇ ಸಿಗುತ್ತೆ.+ ಇದ್ರಲ್ಲಿ ಯಾವ ಭೇದಭಾವನೂ ಇಲ್ಲ.+