ಯೆಶಾಯ
2 ಆತನ ಮೇಲೆ ಯೆಹೋವನ ಪವಿತ್ರಶಕ್ತಿ ನೆಲೆಸುತ್ತೆ,+
ಹಾಗಾಗಿ ಆತನು ವಿವೇಕಿ ಆಗಿರ್ತಾನೆ+ ಮತ್ತು ಆತನಿಗೆ ಅಪಾರ ತಿಳುವಳಿಕೆ ಇರುತ್ತೆ,
ಆತನು ಒಳ್ಳೇ ಸಲಹೆ ಕೊಡ್ತಾನೆ ಮತ್ತು ಶಕ್ತಿಶಾಲಿ ಆಗಿರ್ತಾನೆ,+
ಆತನಲ್ಲಿ ಅಪಾರ ಜ್ಞಾನ ಇರುತ್ತೆ ಮತ್ತು ಯೆಹೋವನ ಕಡೆ ತುಂಬ ಗೌರವ ಇರುತ್ತೆ.
3 ಆತನು ಯೆಹೋವನ ಭಯದಲ್ಲಿ ಖುಷಿಪಡ್ತಾನೆ,+
ಆತನು ಕಣ್ಣಿಗೆ ಕಂಡಿದ್ದನ್ನ ಆಧಾರವಾಗಿ ಇಟ್ಕೊಂಡು ನ್ಯಾಯತೀರಿಸಲ್ಲ,
ಕಿವಿಗೆ ಬಿದ್ದ ಮಾತುಗಳ ಪ್ರಕಾರ ಖಂಡಿಸಲ್ಲ.+
4 ಆತನು ದೀನರಿಗೆ ಪಕ್ಷಪಾತಮಾಡದೆ* ನ್ಯಾಯತೀರಿಸ್ತಾನೆ,
ಭೂಮಿ ಮೇಲಿರೋ ಸೌಮ್ಯ ಸ್ವಭಾವದವರ ಪರವಾಗಿ ಜನ್ರನ್ನ ನೀತಿನಿಷ್ಠೆಯಿಂದ ಖಂಡಿಸ್ತಾನೆ.
6 ತೋಳ ಕುರಿಮರಿಯ ಜೊತೆ ವಾಸಿಸುತ್ತೆ,+
ಚಿರತೆ ಎಳೇ ಆಡಿನ ಜೊತೆ ಮಲಗುತ್ತೆ,
ಕರು, ಸಿಂಹ* ಮತ್ತು ಕೊಬ್ಬಿದ ಪ್ರಾಣಿ ಎಲ್ಲಾ ಒಟ್ಟಿಗೆ ಇರುತ್ತೆ,*+
ಇವೆಲ್ಲವುಗಳನ್ನ ಒಬ್ಬ ಚಿಕ್ಕ ಹುಡುಗ ಮುಂದೆ ನಿಂತು ನಡಿಸ್ತಾನೆ.
7 ಹಸು ಮತ್ತು ಕರಡಿ ಒಟ್ಟಿಗೆ ಮೇಯುತ್ತೆ,
ಅವುಗಳ ಮರಿಗಳು ಒಟ್ಟಿಗೆ ಮಲುಗುತ್ತೆ.
ಸಿಂಹ ಹೋರಿ ತರ ಹುಲ್ಲು ತಿನ್ನುತ್ತೆ.+
8 ಹಾಲು ಕುಡಿಯೋ ಮಗು ನಾಗರಹಾವಿನ ಹುತ್ತದ ಮೇಲೆ ಆಟ ಆಡುತ್ತೆ,
ಎದೆಹಾಲು ಬಿಟ್ಟಿರೋ ಮಗು ವಿಷಸರ್ಪದ ಹುತ್ತಕ್ಕೆ ಕೈಹಾಕುತ್ತೆ.
9 ನನ್ನ ಇಡೀ ಪವಿತ್ರ ಬೆಟ್ಟದಲ್ಲಿ
ಅವು ಯಾವ ಹಾನಿನೂ ಮಾಡಲ್ಲ,+ ಯಾವುದನ್ನೂ ಹಾಳುಮಾಡಲ್ಲ,+
ಯಾಕಂದ್ರೆ ಸಮುದ್ರ ನೀರಿಂದ ತುಂಬಿರೋ ತರ,
ಭೂಮಿ ಯೆಹೋವನ ಜ್ಞಾನದಿಂದ ತುಂಬಿಕೊಳ್ಳುತ್ತೆ.+
10 ಆ ದಿನ ಇಷಯನ ಬೇರು+ ಜನಾಂಗಗಳಿಗೆ ಒಂದು ಧ್ವಜದ ತರ* ಎದ್ದುನಿಲ್ಲುತ್ತೆ,+
ಜನಾಂಗಗಳ ಜನ್ರು ಮಾರ್ಗದರ್ಶನಕ್ಕಾಗಿ ಆತನ ಹತ್ರ ಬರ್ತಾರೆ,*+
ಆತನ ನಿವಾಸ* ಮಹಿಮೆಯಿಂದ ತುಂಬುತ್ತೆ.
11 ಆ ದಿನ ಯೆಹೋವ ಮತ್ತೊಮ್ಮೆ ತನ್ನ ಕೈ ಚಾಚ್ತಾನೆ. ಉಳಿದಿರೋ ತನ್ನ ಜನ್ರನ್ನ ವಾಪಸ್ ಕರ್ಕೊಂಡು ಬರ್ತಾನೆ. ಆತನು ಅವ್ರನ್ನ ಅಶ್ಶೂರ್,+ ಈಜಿಪ್ಟ್,+ ಪತ್ರೋಸ್,+ ಕೂಷ್,+ ಏಲಾಮ್,+ ಶಿನಾರ್,* ಹಾಮಾತ್ ಅನ್ನೋ ಸ್ಥಳಗಳಿಂದ ಮತ್ತು ಸಮುದ್ರದ ದ್ವೀಪಗಳಿಂದ ಒಟ್ಟುಗೂಡಿಸ್ತಾನೆ.+ 12 ಆತನು ಜನಾಂಗಗಳಿಗಾಗಿ ಒಂದು ಧ್ವಜವನ್ನ* ಎತ್ತಿ ನಿಲ್ಲಿಸಿ ಚೆದರಿ ಹೋಗಿರೋ ಇಸ್ರಾಯೇಲ್ ಜನ್ರನ್ನ ಒಟ್ಟುಗೂಡಿಸ್ತಾನೆ.+ ಅಷ್ಟೇ ಅಲ್ಲ ಭೂಮಿಯ ನಾಲ್ಕೂ ಮೂಲೆಗಳಿಗೆ ಚೆದರಿಹೋಗಿರೋ ಯೆಹೂದದ ಜನ್ರನ್ನ ಒಟ್ಟುಗೂಡಿಸ್ತಾನೆ.+
ಎಫ್ರಾಯೀಮ್ ಯೆಹೂದದ ಮೇಲೆ ಹೊಟ್ಟೆಕಿಚ್ಚು ಪಡಲ್ಲ,
ಯೆಹೂದ ಎಫ್ರಾಯೀಮಿನ ಮೇಲೆ ದ್ವೇಷವನ್ನ ಇಟ್ಕೊಳ್ಳಲ್ಲ.+
14 ಅವರು ಪಶ್ಚಿಮದಲ್ಲಿರೋ ಫಿಲಿಷ್ಟಿಯರ ಇಳಿಜಾರು ಪ್ರದೇಶಗಳ* ಮೇಲೆ ಹಠಾತ್ತನೆ ಆಕ್ರಮಣ ಮಾಡ್ತಾರೆ,
ಅವರಿಬ್ರೂ ಪೂರ್ವದಲ್ಲಿರೋ ಜನ್ರನ್ನ ಕೊಳ್ಳೆಹೊಡಿತಾರೆ.
ಸುಡೋ ಉಸಿರಿಂದ ರಭಸವಾಗಿ ಹರಿಯೋ ಏಳು ಪ್ರವಾಹಗಳನ್ನ ಹೊಡಿತಾನೆ,
ಜನ ಕೆರಗಳನ್ನ ಹಾಕೊಂಡು ಅದನ್ನ ದಾಟೋ ತರ ಮಾಡ್ತಾನೆ.