ಕೀರ್ತನೆ
א [ಆಲೆಫ್]
2 ಆತನು ಕೊಡೋ ಎಚ್ಚರಿಕೆಗಳನ್ನ* ಯಾರು ಪಾಲಿಸ್ತಾರೋ,+
ಪೂರ್ಣಹೃದಯದಿಂದ ಆತನಿಗಾಗಿ ಯಾರು ಹುಡುಕ್ತಾರೋ ಅವರು ಖುಷಿಯಿಂದ ಇರ್ತಾರೆ.+
3 ಅವರು ಯಾವ ಕೆಟ್ಟಕೆಲಸವನ್ನೂ ರೂಢಿ ಮಾಡ್ಕೊಳ್ಳಲ್ಲ,
ಅವರು ಆತನ ದಾರಿಯಲ್ಲಿ ನಡೀತಾರೆ.+
4 ನಿನ್ನ ಅಪ್ಪಣೆಗಳನ್ನ ಶ್ರದ್ಧೆಯಿಂದ ಪಾಲಿಸಬೇಕಂತ
ನೀನು ಆಜ್ಞೆ ಕೊಟ್ಟಿದ್ದೀಯ.+
5 ನಿನ್ನ ನಿಯಮಗಳನ್ನ ಅನುಸರಿಸ್ತಾ ಇರೋ ಹಾಗೆ
ನನ್ನ ಮನಸ್ಸು ಯಾವಾಗ್ಲೂ ದೃಢವಾಗಿರಬೇಕು ಅನ್ನೋದೇ ನನ್ನಾಸೆ!+
6 ಹೀಗೆ ನಾನು ನಿನ್ನ ಎಲ್ಲ ಆಜ್ಞೆಗಳ ಬಗ್ಗೆ ಯೋಚಿಸ್ತಾ ಇದ್ರೆ,
ನನಗೆ ಅವಮಾನ ಆಗಲ್ಲ.+
7 ನಿನ್ನ ನೀತಿ ನ್ಯಾಯ ತೀರ್ಪುಗಳ ಬಗ್ಗೆ ಕಲಿಯೋವಾಗ
ನಾನು ನಿನ್ನನ್ನ ಪ್ರಾಮಾಣಿಕ ಹೃದಯದಿಂದ ಹೊಗಳ್ತೀನಿ.
8 ನಾನು ನಿನ್ನ ನಿಯಮಗಳನ್ನ ಪಾಲಿಸ್ತೀನಿ.
ನೀನು ನನ್ನನ್ನ ಪೂರ್ತಿ ಬಿಟ್ಟುಬಿಡಬೇಡ.
ב [ಬೆತ್]
9 ಯುವಕರು ತಮ್ಮ ನಡತೆನ ಹೇಗೆ ಶುದ್ಧವಾಗಿ ಇಟ್ಕೊಬಹುದು?
ನಿನ್ನ ವಾಕ್ಯದ ಪ್ರಕಾರ ನಡೆದು ತಮ್ಮನ್ನ ಕಾಪಾಡ್ಕೊಳ್ಳೋ ಮೂಲಕನೇ ಅಲ್ವಾ.+
10 ನನ್ನ ಪೂರ್ಣಹೃದಯದಿಂದ ನಾನು ನಿನ್ನನ್ನ ಹುಡುಕ್ತೀನಿ.
ನಿನ್ನ ಆಜ್ಞೆಗಳಿಂದ ದೂರ ಆಗಿ ತಪ್ಪುದಾರಿ ಹಿಡಿಯೋಕೆ ನನ್ನನ್ನ ಬಿಡಬೇಡ.+
12 ಯೆಹೋವನೇ, ನಿನಗೆ ಹೊಗಳಿಕೆ ಆಗಲಿ.
ನಿನ್ನ ನಿಯಮಗಳನ್ನ ನನಗೆ ಕಲಿಸು.
13 ನೀನು ಹೇಳಿರೋ ಪ್ರತಿಯೊಂದು ತೀರ್ಪುಗಳನ್ನ
ನನ್ನ ತುಟಿಗಳಿಂದ ಎಲ್ರಿಗೂ ಹೇಳ್ತೀನಿ.
14 ನೀನು ನನಗೆ ನೆನಪಿಸೋಕೆ ಹೇಳೋ ಮಾತುಗಳು
ಬೇರೆ ಅಮೂಲ್ಯ ವಸ್ತುಗಳಿಗಿಂತ ತುಂಬ ಖುಷಿ ತರುತ್ತೆ.+
15 ನಿನ್ನ ಆಜ್ಞೆಗಳ ಬಗ್ಗೆ ನಾನು ತುಂಬ ಆಲೋಚಿಸ್ತೀನಿ*+
ನಾನು ಹೇಗೆ ಜೀವಿಸಿದ್ರೆ ನಿನಗೆ ಇಷ್ಟ ಆಗುತ್ತೆ ಅಂತ ನಾನು ಧ್ಯಾನಿಸ್ತೀನಿ.+
16 ನಿನ್ನ ನಿಯಮಗಳು ನಂಗೆ ತುಂಬ ಇಷ್ಟ.
ನಾನು ನಿನ್ನ ವಾಕ್ಯವನ್ನ ಮರಿಯಲ್ಲ.+
ג [ಗಿಮೆಲ್]
17 ನಿನ್ನ ಸೇವಕನಾದ ನಾನು ಜೀವಂತವಾಗಿದ್ದು ನಿನ್ನ ವಾಕ್ಯ ಪಾಲಿಸೋಕೆ,
ನನ್ನ ಜೊತೆ ದಯೆಯಿಂದ ನಡ್ಕೊ.+
18 ನಿನ್ನ ನಿಯಮ ಪುಸ್ತಕದಲ್ಲಿರೋ ಅದ್ಭುತ ವಿಷ್ಯಗಳನ್ನ
ಸ್ಪಷ್ಟವಾಗಿ ನೋಡೋಕೆ ಆಗೋ ತರ ನನ್ನ ಕಣ್ಣುಗಳನ್ನ ತೆಗಿ.
19 ನಾನು ಬೇರೆ ದೇಶದಲ್ಲಿರೋ ಪರದೇಶಿ ತರ ಇದ್ದೀನಿ.+
ನನ್ನಿಂದ ನಿನ್ನ ಆಜ್ಞೆಗಳನ್ನ ಮುಚ್ಚಿಡಬೇಡ.
20 ನಾನು ಯಾವಾಗ್ಲೂ ನಿನ್ನ ತೀರ್ಪಿಗಾಗಿ ಹಾತೊರಿತಾ ಇರ್ತಿನಿ,
ಅದರ ಗುಂಗು ನನ್ನನ್ನ ನುಂಗಿಹಾಕ್ತಿದೆ.
21 ನೀನು ಗರ್ವಿಷ್ಠರನ್ನ,
ನಿನ್ನ ಆಜ್ಞೆಗಳಿಂದ ದೂರಹೋಗಿರೋ ಶಾಪಗ್ರಸ್ತರನ್ನ ಗದರಿಸ್ತೀಯ.+
22 ಅವಮಾನ, ಅಣಕಿಸೋ ಮಾತನ್ನ ನನ್ನಿಂದ ದೂರಮಾಡು,*
ಯಾಕಂದ್ರೆ ನೀನು ನನಗೆ ನೆನಪಿಸಿದ್ದನ್ನೆಲ್ಲ ನಾನು ಪಾಲಿಸಿದ್ದೀನಿ.
23 ನಾಯಕರು ಒಟ್ಟಾಗಿ ಕೂತು, ನನ್ನ ವಿರುದ್ಧ ಮಾತಾಡ್ತಿರೋವಾಗ್ಲೂ,
ನಿನ್ನ ಸೇವಕನಾದ ನಾನು ನಿನ್ನ ನಿಯಮಗಳ ಬಗ್ಗೆ ಚೆನ್ನಾಗಿ ಆಲೋಚಿಸ್ತೀನಿ.*
ד [ಡಾಲತ್]
25 ನಾನು ಧೂಳಿನಲ್ಲಿ ಮುಖ ಕೆಳಗೆ ಮಾಡ್ಕೊಂಡು ಬಿದ್ದಿದ್ದೀನಿ.+
ನಿನ್ನ ಮಾತಿನ ಪ್ರಕಾರ ನನ್ನ ಪ್ರಾಣವನ್ನ ಕಾಪಾಡು.+
26 ನಾನು ಏನೆಲ್ಲ ಮಾಡ್ತೀನಿ ಅಂತ ನಿಂಗೆ ಹೇಳ್ದೆ, ನೀನು ನನಗೆ ಉತ್ರ ಕೊಟ್ಟೆ.
ನಿನ್ನ ನಿಯಮಗಳನ್ನ ನನಗೆ ಕಲಿಸು.+
28 ದುಃಖದಿಂದ ನನಗೆ ನಿದ್ದೆನೇ ಬರ್ತಿಲ್ಲ.
ನೀನು ಮಾತು ಕೊಟ್ಟ ಹಾಗೆ ನನ್ನನ್ನ ಬಲಪಡಿಸು.
29 ಮೋಸದ ದಾರಿಯನ್ನ ನನ್ನಿಂದ ದೂರ ಮಾಡು,+
ನಿನ್ನ ನಿಯಮ ಪುಸ್ತಕವನ್ನ ಕಲಿಸಿ ಕೃಪೆ ತೋರಿಸು.
30 ನಾನು ನಂಬಿಗಸ್ತಿಕೆಯ ದಾರಿ ಆರಿಸ್ಕೊಂಡೆ.+
ನಿನ್ನ ತೀರ್ಪುಗಳು ಸರಿಯಾಗೇ ಇವೆ ಅಂತ ನಾನು ತಿಳ್ಕೊಂಡೆ.
31 ನಿನ್ನ ಎಚ್ಚರಿಕೆಗಳನ್ನ ತಬ್ಬಿಕೊಳ್ತೀನಿ.+
ಯೆಹೋವ, ನನಗೆ ನಿರಾಸೆ ಆಗದ ಹಾಗೆ ನೋಡ್ಕೊ.*+
32 ನಾನು ನಿನ್ನ ಆಜ್ಞೆಗಳ ದಾರಿಯಲ್ಲಿ ತುಂಬ ಆಸೆಪಟ್ಟು ನಡೀತೀನಿ*
ಯಾಕಂದ್ರೆ ನೀನು ನನ್ನ ಹೃದಯದಲ್ಲಿ ಅದಕ್ಕಾಗಿ ಒಂದು ಮನೆ ಮಾಡಿದ್ದೀಯ.*
ה [ಹೆ]
34 ನಿನ್ನ ನಿಯಮ ಪುಸ್ತಕವನ್ನ ಪಾಲಿಸೋಕೆ,
ಅದರ ಪ್ರಕಾರ ಪೂರ್ಣಹೃದಯದಿಂದ ನಡಿಯೋಕೆ
ನನಗೆ ಬುದ್ಧಿ ಕೊಡು.
36 ನನ್ನ ಹೃದಯ ಸ್ವಾರ್ಥ ಲಾಭದ ಕಡೆಗಲ್ಲ,+
ನಿನ್ನ ಎಚ್ಚರಿಕೆಗಳ ಕಡೆ ವಾಲೋ ತರ ಮಾಡು.
37 ಅಯೋಗ್ಯ ವಿಷ್ಯಗಳನ್ನ ನೋಡದ ಹಾಗೆ ನನ್ನ ದೃಷ್ಟಿಯನ್ನ ಪಕ್ಕಕ್ಕೆ ತಿರುಗಿಸು,+
ನಾನು ಜೀವಂತವಾಗಿರೋ ಹಾಗೆ ನಿನ್ನ ದಾರಿಗಳಲ್ಲಿ ನನ್ನನ್ನ ನಡಿಸು.
39 ನಾನು ಭಯಪಡೋ ಅಣಕಿಸೋ ಮಾತುಗಳನ್ನ ನನ್ನಿಂದ ದೂರಮಾಡು,
ಯಾಕಂದ್ರೆ ನಿನ್ನ ತೀರ್ಪುಗಳು ಅತ್ಯುತ್ತಮ.+
40 ನಿನ್ನ ಆಜ್ಞೆಗಳಿಗಾಗಿ ನಾನು ಹೇಗೆ ಹಾತೊರಿತೀನಿ ಅಂತ ನೋಡು.
ನಿನ್ನ ನೀತಿಯಿಂದಾಗಿ ನನ್ನ ಪ್ರಾಣವನ್ನ ಕಾಪಾಡು.
ו [ವಾವ್]
42 ಆಗ ನಾನು ನನ್ನನ್ನ ಕೆಣಕೋರಿಗೆ ಉತ್ರ ಕೊಡ್ತೀನಿ,
ಯಾಕಂದ್ರೆ ನಾನು ನಿನ್ನ ಮಾತಲ್ಲಿ ಭರವಸೆ ಇಟ್ಟಿದ್ದೀನಿ.
43 ನನ್ನ ಬಾಯಿಂದ ಸತ್ಯದ ಮಾತುಗಳನ್ನ ಪೂರ್ತಿಯಾಗಿ ತೆಗಿದುಬಿಡಬೇಡ,
ಯಾಕಂದ್ರೆ ನಾನು ನಿನ್ನ ತೀರ್ಪಲ್ಲಿ ನಿರೀಕ್ಷೆ ಇಟ್ಟಿದ್ದೀನಿ.*
44 ನಾನು ನಿನ್ನ ನಿಯಮ ಪುಸ್ತಕವನ್ನ ಯಾವಾಗ್ಲೂ ಪಾಲಿಸ್ತೀನಿ,
ಸದಾಕಾಲಕ್ಕೂ ಅದ್ರ ಪ್ರಕಾರ ನಡಿತೀನಿ.+
47 ನನಗೆ ನಿನ್ನ ಆಜ್ಞೆಗಳು ಅಚ್ಚುಮೆಚ್ಚು,
ಹೌದು, ಅವಂದ್ರೆ ನನಗೆ ತುಂಬ ಇಷ್ಟ.+
ನಾನು ನಿನ್ನ ನಿಯಮಗಳ ಬಗ್ಗೆ ಚೆನ್ನಾಗಿ ಆಲೋಚಿಸ್ತೀನಿ.+
ז [ಜಯಿನ್]
49 ನಿನ್ನ ಸೇವಕನಾದ ನನಗೆ ಕೊಟ್ಟ ಮಾತನ್ನ ನೆನಪಿಸ್ಕೊ,
ಅದ್ರಿಂದ ನೀನು ನನಗೆ ನಿರೀಕ್ಷೆ ಕೊಟ್ಟೆ.*
50 ಕಷ್ಟಕಾರ್ಪಣ್ಯಗಳಲ್ಲಿ ಅದೇ ನನ್ನನ್ನ ಸಂತೈಸುತ್ತೆ,+
ಯಾಕಂದ್ರೆ ನಿನ್ನ ಮಾತಿಂದಾನೇ ನಾನಿನ್ನೂ ಜೀವಂತವಾಗಿ ಇರೋದು.
52 ಯೆಹೋವನೇ, ಹಳೇ ಕಾಲದಲ್ಲಿ ನೀನು ಕೊಟ್ಟ ತೀರ್ಪುಗಳನ್ನೂ ನಾನು ನೆನಪಿಸಿಕೊಳ್ತೀನಿ,+
ಅದ್ರಿಂದ ನನಗೆ ನೆಮ್ಮದಿ ಸಿಗುತ್ತೆ.+
53 ನಿನ್ನ ನಿಯಮ ಪುಸ್ತಕವನ್ನ ತೊರೆದುಬಿಟ್ಟಿರೋ ಕೆಟ್ಟವರನ್ನ ನೋಡಿ
ನಾನು ತುಂಬ ಕೋಪದಿಂದ ಕುದೀತಾ ಇದ್ದೀನಿ.+
54 ನಾನು ಎಲ್ಲೇ ಇದ್ರೂ*
ನಿನ್ನ ನಿಯಮಗಳು ನನಗೆ ಮಧುರ ಗೀತೆಗಳು.
55 ಯೆಹೋವನೇ, ನಿನ್ನ ನಿಯಮ ಪುಸ್ತಕವನ್ನ ಪಾಲಿಸಬೇಕಂತ
ರಾತ್ರಿ ಹೊತ್ತಲ್ಲಿ ನಾನು ನಿನ್ನ ಹೆಸ್ರನ್ನ ನೆನಪಿಸ್ಕೊಳ್ತೀನಿ.+
56 ನಾನು ನಿನ್ನ ಆಜ್ಞೆಗಳನ್ನ ಪಾಲಿಸೋದ್ರಿಂದ
ಇದು ನನಗೆ ರೂಢಿ ಆಗಿಬಿಟ್ಟಿದೆ.
ח [ಹೆತ್]
57 ಯೆಹೋವನೇ, ನೀನೇ ನನ್ನ ಆಸ್ತಿ.+
ನಾನು ನಿನ್ನ ಮಾತುಗಳನ್ನ ಪಾಲಿಸ್ತೀನಿ ಅಂತ ಮಾತು ಕೊಟ್ಟಿದ್ದೀನಿ.+
59 ನಾನು ನನ್ನ ದಾರಿಗಳನ್ನ ಚೆನ್ನಾಗಿ ಪರೀಕ್ಷೆ ಮಾಡ್ತೀನಿ,
ಆಗ ನಿನ್ನ ಎಚ್ಚರಿಕೆಗಳ ಕಡೆ ನನ್ನ ಪಾದವನ್ನ ತಿರುಗಿಸೋಕೆ ಆಗುತ್ತೆ.+
60 ನಾನು ನಿನ್ನ ಆಜ್ಞೆಗಳನ್ನ
ತಕ್ಷಣ ಪಾಲಿಸ್ತೀನಿ, ತಡಮಾಡಲ್ಲ.+
62 ನಿನ್ನ ನೀತಿಯ ತೀರ್ಪುಗಳಿಗಾಗಿ
ನಾನು ಮಧ್ಯರಾತ್ರಿ ಎದ್ದು ನಿನಗೆ ಧನ್ಯವಾದ ಹೇಳ್ತೀನಿ.+
64 ಯೆಹೋವ, ನಿನ್ನ ಶಾಶ್ವತ ಪ್ರೀತಿ ಇಡೀ ಭೂಮಿಯನ್ನ ತುಂಬಿಕೊಳ್ಳುತ್ತೆ.+
ನಿನ್ನ ನಿಯಮಗಳನ್ನ ನನಗೆ ಕಲಿಸು.
ט [ಟೆತ್]
65 ಯೆಹೋವನೇ, ನೀನು ಮಾತು ಕೊಟ್ಟ ಹಾಗೆ
ನಿನ್ನ ಸೇವಕನಾದ ನನಗೆ ಒಳ್ಳೇದನ್ನೇ ಮಾಡಿದೆ.
67 ಗೊತ್ತಿಲ್ಲದೆ ಪಾಪಮಾಡಿ ನಾನು ಕಷ್ಟಪಟ್ಟೆ,
ಆದ್ರೆ ಈಗ ನಾನು ನಿನ್ನ ಮಾತುಗಳನ್ನ ಪಾಲಿಸ್ತಿದ್ದೀನಿ.+
68 ನೀನು ಒಳ್ಳೆಯವನು,+ ನೀನು ಮಾಡೋದೆಲ್ಲ ಒಳ್ಳೇದೇ.
ನಿನ್ನ ನಿಯಮಗಳನ್ನು ನನಗೆ ಕಲಿಸು.+
69 ಗರ್ವಿಷ್ಠರು ನನ್ನ ಬಗ್ಗೆ ಸುಳ್ಳು ಹೇಳಿ ನನ್ನ ಹೆಸ್ರಿಗೆ ಮಸಿ ಬಳಿದಿದ್ದಾರೆ,
ಆದ್ರೂ ನಾನು ನನ್ನ ಪೂರ್ಣ ಹೃದಯದಿಂದ ನಿನ್ನ ಆಜ್ಞೆಗಳನ್ನ ಪಾಲಿಸ್ತೀನಿ.
י [ಯೋದ್]
73 ನಿನ್ನ ಕೈಗಳು ನನ್ನನ್ನ ಮಾಡಿದ್ವು, ನನ್ನನ್ನ ಸೃಷ್ಟಿಸಿದ್ವು.
ನಿನ್ನ ಆಜ್ಞೆಗಳನ್ನ ಕಲಿತುಕೊಳ್ಳೋಕೆ,
ನನಗೆ ಬುದ್ಧಿ ಕೊಡು.+
75 ಯೆಹೋವ, ನಿನ್ನ ತೀರ್ಪುಗಳಲ್ಲಿ ನೀತಿ ಇದೆ+ ಅಂತ,
ನನ್ನನ್ನ ಶಿಕ್ಷಿಸೋ ಮೂಲಕ ನೀನು ನಿನ್ನ ನಂಬಿಗಸ್ತಿಕೆಯನ್ನ ತೋರಿಸಿದ್ದೀಯ ಅಂತ ನಂಗೊತ್ತು.+
ಆದ್ರೆ ನಾನು ನಿನ್ನ ಆಜ್ಞೆಗಳ ಬಗ್ಗೆ ಚೆನ್ನಾಗಿ ಆಲೋಚಿಸ್ತೀನಿ.+
79 ನಿನಗೆ ಭಯಪಡೋರು,
ನಿನ್ನ ಎಚ್ಚರಿಕೆಗಳ ಬಗ್ಗೆ ತಿಳ್ಕೊಂಡಿರೋರು,
ನನ್ನ ಹತ್ರ ವಾಪಸ್ ಬರಲಿ.
כ [ಕಾಫ್]
81 ನೀನು ಕೊಡೋ ರಕ್ಷಣೆಗಾಗಿ ನಾನು ಹಾತೊರಿತಾ ಇದ್ದೀನಿ,+
ಯಾಕಂದ್ರೆ ನಿನ್ನ ವಾಕ್ಯನೇ ನನ್ನ ನಿರೀಕ್ಷೆ.
84 ನನಗೆ ಹಿಂಸೆ ಕೊಡ್ತಾ ಇರೋರಿಗೆ ನೀನು ಯಾವಾಗ ಶಿಕ್ಷೆ ಕೊಡ್ತೀಯಾ?
ನಿನ್ನ ಸೇವಕನಾದ ನಾನು ಇನ್ನೆಷ್ಟು ದಿನ ಕಾಯಬೇಕು?+
85 ನಿನ್ನ ನಿಯಮ ಪುಸ್ತಕವನ್ನ ಮೀರಿ ನಡಿಯೋ ದುರಹಂಕಾರಿಗಳು,
ನನಗೆ ಗುಂಡಿ ತೋಡ್ತಾರೆ.
86 ನಿನ್ನ ಆಜ್ಞೆಗಳಲ್ಲಿ ಭರವಸೆ ಇಡಬಹುದು.
ಸುಮ್ಮಸುಮ್ಮನೇ ಜನ್ರು ನನಗೆ ಕಿರುಕುಳ ಕೊಡ್ತಾರೆ, ನನಗೆ ಸಹಾಯಮಾಡು!+
87 ಅವರು ನನ್ನನ್ನ ಭೂಮಿಯಿಂದ ಬೇರು ಸಮೇತ ಕಿತ್ತುಹಾಕಿದ್ರೂ,
ನಾನು ನಿನ್ನ ಅಪ್ಪಣೆಗಳನ್ನ ಬಿಟ್ಟುಬಿಡಲಿಲ್ಲ.
88 ನಿನ್ನ ಎಚ್ಚರಿಕೆಗಳನ್ನ ನಾನು ಪಾಲಿಸೋಕೆ ಆಗೋ ಹಾಗೆ,
ನಿನ್ನ ಶಾಶ್ವತ ಪ್ರೀತಿಯಿಂದ ನನ್ನ ಪ್ರಾಣವನ್ನ ಕಾಪಾಡು.
ל [ಲಾಮೆದ್]
90 ನಿನ್ನ ನಂಬಿಗಸ್ತಿಕೆ ತಲತಲಾಂತರಗಳ ತನಕ ಇರುತ್ತೆ.+
ನೀನು ಭೂಮಿಯನ್ನ ಸ್ಥಿರವಾಗಿ ಸ್ಥಾಪಿಸಿದ್ದೀಯ, ಹಾಗಾಗಿ ಅದು ಇವತ್ತೂ ಕದಲದೆ ನಿಂತಿದೆ.+
91 ನಿನ್ನ ತೀರ್ಪಿಂದಾಗಿ ನೀನು ಸೃಷ್ಟಿ ಮಾಡಿದ್ದೆಲ್ಲ ಹಾಗೇ ಇವೆ,
ಯಾಕಂದ್ರೆ ಅವೆಲ್ಲ ನಿನ್ನ ಸೇವೆ ಮಾಡುತ್ತವೆ.
93 ನಾನು ನಿನ್ನ ಆಜ್ಞೆಗಳನ್ನ ಯಾವತ್ತೂ ಮರಿಯಲ್ಲ,
ಯಾಕಂದ್ರೆ ನೀನು ನನ್ನನ್ನ ಜೀವಂತವಾಗಿ ಇಟ್ಟಿರೋದು ಅವುಗಳಿಂದಾನೇ.+
95 ಕೆಟ್ಟವರು ನನ್ನನ್ನ ನಾಶಮಾಡೋಕೆ ಕಾಯ್ತಾ ಇದ್ದಾರೆ,
ಆದ್ರೆ ನನ್ನ ಸಂಪೂರ್ಣ ಗಮನ ನಿನ್ನ ಎಚ್ಚರಿಕೆಗಳ ಮೇಲಿದೆ.
מ [ಮೆಮ್]
97 ನಾನು ನಿನ್ನ ನಿಯಮಗಳನ್ನ ಎಷ್ಟು ಪ್ರೀತಿಸ್ತೀನಿ ಅಂತ ನೋಡು!+
ಇಡೀ ದಿನ ನಾನು ಅದ್ರ ಬಗ್ಗೆ ತುಂಬ ಆಲೋಚಿಸ್ತೀನಿ.+
98 ನಿನ್ನ ಆಜ್ಞೆಗಳಿಂದಾಗಿ ನಾನು ನನ್ನ ವಿರೋಧಿಗಳಿಗಿಂತ ಹೆಚ್ಚು ವಿವೇಕಿ ಆಗಿದ್ದೀನಿ,+
ಯಾಕಂದ್ರೆ ನಿನ್ನ ಆಜ್ಞೆಗಳು ಯಾವಾಗ್ಲೂ ನನ್ನ ಜೊತೆ ಇರುತ್ತೆ.
99 ನನ್ನ ಶಿಕ್ಷಕರಿಗಿಂತ ನನಗೆ ಜಾಸ್ತಿ ತಿಳುವಳಿಕೆ* ಇದೆ,+
ಯಾಕಂದ್ರೆ ನಿನ್ನ ಎಚ್ಚರಿಕೆಗಳ ಬಗ್ಗೆ ನಾನು ಚೆನ್ನಾಗಿ ಆಲೋಚಿಸ್ತೀನಿ.
100 ವಯಸ್ಸಾದವರಿಗಿಂತ ಬುದ್ಧಿವಂತನಾಗಿ ನಾನು ನಡ್ಕೊತೀನಿ,
ಯಾಕಂದ್ರೆ ನಾನು ನಿನ್ನ ಆಜ್ಞೆಗಳನ್ನ ಪಾಲಿಸ್ತೀನಿ.
101 ನಿನ್ನ ವಾಕ್ಯ ಪಾಲಿಸಬೇಕಂತ,
ನಾನು ಯಾವ ಕೆಟ್ಟ ದಾರಿಯಲ್ಲೂ ನಡಿಯಲ್ಲ.+
102 ನಿನ್ನ ತೀರ್ಪುಗಳಿಂದ ದೂರ ಹೋಗಲ್ಲ,
ಯಾಕಂದ್ರೆ ನೀನೇ ನನಗೆ ಕಲಿಸಿದ್ದೀಯ.
104 ನಿನ್ನ ಆಜ್ಞೆಗಳಿಂದಾಗಿ ನಾನು ಬುದ್ಧಿವಂತನಾಗಿ ನಡ್ಕೊತೀನಿ.+
ಅದಕ್ಕೇ ಕೆಟ್ಟ ದಾರಿಯನ್ನ ದ್ವೇಷಿಸ್ತೀನಿ.+
נ [ನೂನ್]
106 ನಿನ್ನ ನೀತಿಯ ತೀರ್ಪುಗಳನ್ನ ಒಪ್ಕೊಳ್ತೀನಿ,
ಅವನ್ನ ಪಾಲಿಸ್ತೀನಿ ಅಂತ ನಾನು ಮಾತುಕೊಟ್ಟಿದ್ದೀನಿ.
107 ನಾನು ತುಂಬ ಕಷ್ಟಪಟ್ಟಿದ್ದೀನಿ.+
ಯೆಹೋವ, ಕೊಟ್ಟ ಮಾತಿನ ಹಾಗೆ ನನ್ನ ಪ್ರಾಣ ಕಾಪಾಡು.+
109 ನನ್ನ ಜೀವಾನ ನಾನು ಯಾವಾಗ್ಲೂ ಕೈಯಲ್ಲೇ ಹಿಡ್ಕೊಂಡಿರ್ತಿನಿ,*
ಆದ್ರೂ ನಾನು ನಿನ್ನ ನಿಯಮಗಳನ್ನ ಮರೆತಿಲ್ಲ.+
111 ನಿನ್ನ ಎಚ್ಚರಿಕೆಗಳನ್ನ ನಾನು ನನ್ನ ಶಾಶ್ವತ ಸೊತ್ತಾಗಿ* ಮಾಡ್ಕೊಂಡಿದ್ದೀನಿ,
ಯಾಕಂದ್ರೆ ಅದ್ರಿಂದ ನನ್ನ ಮನಸ್ಸಿಗೆ ಖುಷಿ ಆಗುತ್ತೆ.+
112 ನಿನ್ನ ನಿಯಮಗಳನ್ನ ಜೀವನಪರ್ಯಂತ ಅನುಸರಿಸಬೇಕಂತ,
ಕೊನೇ ಉಸಿರು ಇರೋ ತನಕ ಪಾಲಿಸಬೇಕಂತ,
ನಾನು ದೃಢನಿಶ್ಚಯ ಮಾಡಿದ್ದೀನಿ.*
ס [ಸಾಮೆಕ್]
115 ಕೆಟ್ಟವರೇ, ನಾನು ನನ್ನ ದೇವರ ಆಜ್ಞೆಗಳನ್ನ ಪಾಲಿಸಬೇಕು,
ನನ್ನಿಂದ ದೂರ ಇರಿ.+
116 ನಾನು ಜೀವಿಸ್ತಾ ಇರೋ ಹಾಗೆ,
ನೀನು ಕೊಟ್ಟ ಮಾತಿನ ಪ್ರಕಾರ ನನಗೆ ಆಸರೆಯಾಗು,+
118 ನಿನ್ನ ನಿಯಮಗಳನ್ನ ಬಿಟ್ಟು ಅಡ್ಡದಾರಿ ಹಿಡಿದಿರೋ ಜನ್ರನ್ನ ಬಿಟ್ಟುಬಿಡು,+
ಯಾಕಂದ್ರೆ ಅವರು ಸುಳ್ಳುಗಾರರು, ಮೋಸಗಾರರು ಆಗಿದ್ದಾರೆ.
119 ಕೆಲಸಕ್ಕೆ ಬಾರದ ಹೊಲಸನ್ನ ಎಸಿಯೋ ಹಾಗೆ ನೀನು ಭೂಮಿಯಲ್ಲಿರೋ ಎಲ್ಲ ಕೆಟ್ಟವರನ್ನ ಎಸೆದುಬಿಡ್ತೀಯ.+
ಅದಕ್ಕೇ ನಿನ್ನ ಎಚ್ಚರಿಕೆಗಳು ಅಂದ್ರೆ ನನಗಿಷ್ಟ.
120 ನಿನ್ನ ಭಯದಿಂದ ನನ್ನ ಶರೀರ ನಡುಗುತ್ತೆ,
ನಿನ್ನ ತೀರ್ಪುಗಳ ಬಗ್ಗೆ ನಾನು ಹೆದರ್ತೀನಿ.
ע [ಅಯಿನ್]
121 ನಾನು ನ್ಯಾಯನೀತಿಯಿಂದ ನಡ್ಕೊಂಡಿದ್ದೀನಿ.
ನನ್ನ ಮೇಲೆ ದಬ್ಬಾಳಿಕೆ ಮಾಡೋ ಕೈಗೆ ನನ್ನನ್ನ ಒಪ್ಪಿಸಬೇಡ!
122 ನಿನ್ನ ಸೇವಕನಾದ ನನಗೆ ಸುಖನೆಮ್ಮದಿ ಇರುತ್ತೆ ಅಂತ ಭರವಸೆಕೊಡು,
ಗರ್ವಿಷ್ಠರು ನನ್ನ ಮೇಲೆ ದಬ್ಬಾಳಿಕೆ ಮಾಡದ ಹಾಗೆ ನೋಡ್ಕೊ.
123 ನೀನು ಕೊಡೋ ರಕ್ಷಣೆಗಾಗಿ, ನಿನ್ನ ನೀತಿಯ ಮಾತಿಗಾಗಿ* ಕಾದುಕಾದು ನನ್ನ ಕಣ್ಣುಗಳು ಸೋತುಹೋಗಿವೆ.+
125 ನಾನು ನಿನ್ನ ಸೇವಕ,
ನಿನ್ನ ಎಚ್ಚರಿಕೆಗಳನ್ನ ತಿಳ್ಕೊಳ್ಳೋಕೆ ನನಗೆ ಬುದ್ಧಿ ಕೊಡು.+
126 ಯೆಹೋವ, ನೀನು ಹೆಜ್ಜೆ ತಗೊಳ್ಳೋ ಸಮ್ಯ ಬಂದಿದೆ,+
ಯಾಕಂದ್ರೆ ಅವರು ನಿನ್ನ ನಿಯಮಗಳನ್ನ ಮೀರಿ ನಡೆದಿದ್ದಾರೆ.
128 ಅದಕ್ಕೇ ನಾನು ನಿನ್ನ ಎಲ್ಲ ಮಾರ್ಗದರ್ಶನಗಳನ್ನ* ಸರಿ ಅಂತ ಒಪ್ಕೊತೀನಿ.+
ಎಲ್ಲ ತಪ್ಪು ದಾರಿಗಳನ್ನ ನಾನು ದ್ವೇಷಿಸ್ತೀನಿ.+
פ [ಪೇ]
129 ನಿನ್ನ ಎಚ್ಚರಿಕೆಗಳು ಅದ್ಭುತ,
ಹಾಗಾಗೇ ನಾನು ಅವುಗಳನ್ನ ಪಾಲಿಸ್ತೀನಿ.
131 ನಾನು ನನ್ನ ಬಾಯನ್ನ ಅಗಲವಾಗಿ ತೆಗೆದು ನಿಟ್ಟುಸಿರು* ಬಿಟ್ಟೆ,
ಯಾಕಂದ್ರೆ ನಾನು ನಿನ್ನ ಆಜ್ಞೆಗಳಿಗಾಗಿ ಹಾತೊರಿತಾ ಇದ್ದೀನಿ.+
132 ನಿನ್ನ ಹೆಸ್ರನ್ನ ಪ್ರೀತಿಸೋರ+ ಜೊತೆ ಹೇಗೆ ನಡ್ಕೊಬೇಕು ಅಂತ ನಿನ್ನ ನಿಯಮ ಇದೆಯೋ
ಅದೇ ತರ ನನ್ನ ಕಡೆ ತಿರುಗಿ, ನನ್ನ ಮೇಲೆ ದಯೆ ತೋರಿಸು.+
134 ದಬ್ಬಾಳಿಕೆ ಮಾಡೋರಿಂದ ನನ್ನನ್ನ ಬಿಡಿಸು,
ಆಗ ನಾನು ನಿನ್ನ ಅಪ್ಪಣೆಗಳನ್ನ ಪಾಲಿಸ್ತೀನಿ.
136 ನನ್ನ ಕಣ್ಣಿಂದ ಕಣ್ಣೀರ ಧಾರೆ ಹರೀತಿದೆ.
ಯಾಕಂದ್ರೆ ಜನ್ರು ನಿನ್ನ ನಿಯಮಗಳನ್ನ ಪಾಲಿಸ್ತಿಲ್ಲ.+
צ [ಸಾದೆ]
138 ನಿನ್ನ ಎಚ್ಚರಿಕೆಗಳಲ್ಲಿ ನೀತಿ ಇದೆ,
ಅವುಗಳನ್ನ ಪೂರ್ತಿ ನಂಬಬಹುದು.
139 ನಿನ್ನ ಮೇಲೆ ನನಗಿರೋ ಭಕ್ತಿ ನನ್ನೊಳಗೆ ಬೆಂಕಿ ತರ ಹೊತ್ತಿ ಉರೀತಿದೆ,+
ಯಾಕಂದ್ರೆ ನನ್ನ ಶತ್ರುಗಳು ನಿನ್ನ ಮಾತನ್ನ ಮರೆತು ಹೋಗಿದ್ದಾರೆ.
143 ಕಷ್ಟಕಾರ್ಪಣ್ಯಗಳು ನನ್ನ ಮೇಲೆ ಬಂದ್ರೂ,
ನಾನು ನಿನ್ನ ಆಜ್ಞೆಗಳನ್ನ ಪ್ರೀತಿಸ್ತೀನಿ.
144 ನಿನ್ನ ಎಚ್ಚರಿಕೆಗಳಲ್ಲಿ ಯಾವಾಗ್ಲೂ ನೀತಿ ಇರುತ್ತೆ,
ನಾನು ಜೀವಿಸ್ತಾ ಇರೋಕೆ ನನಗೆ ಬುದ್ಧಿ ಕೊಡು.+
ק [ಕೊಫ್]
145 ಯೆಹೋವನೇ, ಪೂರ್ಣಹೃದಯದಿಂದ ನಾನು ನಿನಗೆ ಪ್ರಾರ್ಥಿಸ್ತೀನಿ. ನನಗೆ ಉತ್ರಕೊಡು.
ನಿನ್ನ ನಿಯಮಗಳನ್ನ ನಾನು ಪಾಲಿಸ್ತೀನಿ.
146 ನಾನು ನಿನಗೆ ಮೊರೆ ಇಡ್ತೀನಿ, ನನ್ನನ್ನ ಕಾಪಾಡು!
ನಿನ್ನ ಎಚ್ಚರಿಕೆಗಳನ್ನ ನಾನು ಪಾಲಿಸ್ತೀನಿ.
149 ನಿನ್ನ ಶಾಶ್ವತ ಪ್ರೀತಿಯ ಕಾರಣ ನನ್ನ ಧ್ವನಿಯನ್ನ ಕೇಳಿಸ್ಕೊ.+
ಯೆಹೋವನೇ, ನಿನ್ನ ನ್ಯಾಯದ ಪ್ರಕಾರ ನನ್ನ ಪ್ರಾಣವನ್ನ ಕಾಪಾಡು.
150 ನಾಚಿಕೆಗೆಟ್ಟ ನಡತೆಯವರು* ನನ್ನ ಹತ್ರ ಬರ್ತಿದ್ದಾರೆ,
ಅವರು ನಿನ್ನ ನಿಯಮಗಳಿಂದ ತುಂಬ ದೂರದಲ್ಲಿ ಇದ್ದಾರೆ.
152 ನಿನ್ನ ಎಚ್ಚರಿಕೆಗಳ ಬಗ್ಗೆ ನಾನು ತುಂಬ ಹಿಂದೆನೇ ಕಲಿತ್ಕೊಂಡೆ,
ಅವುಗಳನ್ನ ನೀನು ಶಾಶ್ವತವಾಗಿ ಸ್ಥಾಪಿಸಿದ್ದೀಯ.+
ר [ರೆಶ್]
153 ನನ್ನ ಕಷ್ಟಗಳನ್ನ ನೋಡಿ ನನ್ನನ್ನ ಕಾಪಾಡು,+
ಯಾಕಂದ್ರೆ ನಾನು ನಿನ್ನ ನಿಯಮಗಳನ್ನ ಮರೆತಿಲ್ಲ.
154 ನನ್ನ ಪರ ವಾದಿಸಿ ನನ್ನನ್ನ ರಕ್ಷಿಸು,+
ನೀನು ಮಾತು ಕೊಟ್ಟ ಹಾಗೆ ನನ್ನ ಪ್ರಾಣವನ್ನ ಕಾಪಾಡು.
155 ರಕ್ಷಣೆ ಕೆಟ್ಟವರಿಂದ ತುಂಬ ದೂರದಲ್ಲಿದೆ,
ಯಾಕಂದ್ರೆ ಅವರು ನಿನ್ನ ನಿಯಮಗಳಿಗಾಗಿ ಹುಡುಕಲಿಲ್ಲ.+
156 ಯೆಹೋವನೇ, ನಿನ್ನ ಕರುಣೆ ತುಂಬ ಶ್ರೇಷ್ಠ.+
ನಿನ್ನ ನ್ಯಾಯಕ್ಕೆ ತಕ್ಕ ಹಾಗೆ ನನ್ನ ಪ್ರಾಣನ ಕಾಪಾಡು.
157 ನನ್ನ ಮೇಲೆ ದಬ್ಬಾಳಿಕೆ ಮಾಡೋರು, ನನ್ನ ಶತ್ರುಗಳು ತುಂಬ ಜನ ಇದ್ರೂ,+
ನಿನ್ನ ಎಚ್ಚರಿಕೆಗಳನ್ನ ಬಿಟ್ಟು ನಾನು ಕದಲಲ್ಲ.
158 ನಂಬಿಕೆ ದ್ರೋಹಿಗಳನ್ನ ನೋಡಿ ನನಗೆ ಅಸಹ್ಯ ಆಗುತ್ತೆ,
ಯಾಕಂದ್ರೆ ಅವರು ನಿನ್ನ ಮಾತನ್ನ ಪಾಲಿಸಲ್ಲ.+
159 ನಿನ್ನ ಆಜ್ಞೆಗಳನ್ನ ನಾನು ಎಷ್ಟು ಪ್ರೀತಿಸ್ತೀನಿ ಅಂತ ನೋಡು!
ಯೆಹೋವನೇ, ನಿನ್ನ ಶಾಶ್ವತ ಪ್ರೀತಿಯಿಂದಾಗಿ ನನ್ನ ಪ್ರಾಣವನ್ನ ಕಾಪಾಡು.+
ש [ಸಿನ್] ಅಥವಾ [ಶಿನ್]
162 ಸಿಕ್ಕಾಪಟ್ಟೆ ಕೊಳ್ಳೆ ಹೊಡೆದವನ ತರ,
ನಾನು ನಿನ್ನ ಮಾತುಗಳಲ್ಲಿ ಖುಷಿಪಡ್ತೀನಿ.+
163 ಸುಳ್ಳನ್ನ ನಾನು ದ್ವೇಷಿಸ್ತೀನಿ, ಅಸಹ್ಯವಾಗಿ ನೋಡ್ತೀನಿ.+
ನಿನ್ನ ನಿಯಮಗಳನ್ನ ಪ್ರೀತಿಸ್ತೀನಿ.+
164 ನಿನ್ನ ನೀತಿಯ ತೀರ್ಪುಗಳ ಕಾರಣ
ದಿನಕ್ಕೆ ಏಳು ಸಲ ನಾನು ನಿನ್ನನ್ನ ಹೊಗಳ್ತೀನಿ.
166 ಯೆಹೋವನೇ, ನೀನು ಹೇಗೆ ರಕ್ಷಿಸ್ತೀಯ ಅಂತ ನಾನು ಆಸೆಯಿಂದ ಎದುರುನೋಡ್ತಿದ್ದೀನಿ,
ನಾನು ನಿನ್ನ ಆಜ್ಞೆಗಳನ್ನು ಪಾಲಿಸ್ತೀನಿ.
168 ನಾನು ನಿನ್ನ ಆಜ್ಞೆಗಳನ್ನ, ನಿನ್ನ ಎಚ್ಚರಿಕೆಗಳನ್ನ ಪಾಲಿಸ್ತೀನಿ.
ನಾನು ಮಾಡೋದೆಲ್ಲ ನಿಂಗೊತ್ತು.+
ת [ಟಾವ್]
169 ಯೆಹೋವ, ಸಹಾಯಕ್ಕಾಗಿ ನಾನಿಡೋ ಮೊರೆ ನಿನಗೆ ಮುಟ್ಟಲಿ.+
ನಿನ್ನ ಮಾತಿನ ಪ್ರಕಾರ ನನಗೆ ಬುದ್ಧಿ ಕೊಡು.+
170 ನಿನ್ನ ಕೃಪೆಗಾಗಿ ನಾನು ಮಾಡೋ ಬಿನ್ನಹ ನಿನ್ನ ಸನ್ನಿಧಿಗೆ ಸೇರಲಿ.
ನೀನು ಮಾತು ಕೊಟ್ಟ ಹಾಗೆ ನನ್ನನ್ನ ರಕ್ಷಿಸು.
171 ನನ್ನ ತುಟಿಗಳಿಂದ ನಿನ್ನ ಸ್ತುತಿ ತುಂಬಿ ಹರೀಲಿ,+
ಯಾಕಂದ್ರೆ ನೀನು ನನಗೆ ನಿನ್ನ ನಿಯಮಗಳನ್ನ ಕಲಿಸಿದ್ದೀಯ.
172 ನಿನ್ನ ಮಾತುಗಳ ಬಗ್ಗೆ ನನ್ನ ನಾಲಿಗೆ ಹಾಡಲಿ,+
ಯಾಕಂದ್ರೆ ನಿನ್ನ ಆಜ್ಞೆಗಳೆಲ್ಲ ನೀತಿಯಿಂದ ತುಂಬಿವೆ.
173 ನಿನ್ನ ಆಜ್ಞೆಗಳನ್ನ ಪಾಲಿಸಬೇಕು ಅಂತ ನಾನು ತೀರ್ಮಾನ ಮಾಡಿರೋದ್ರಿಂದ+
ನನಗೆ ಸಹಾಯಮಾಡೋಕೆ ನಿನ್ನ ಕೈ ಯಾವಾಗ್ಲೂ ಸಿದ್ಧವಾಗಿರಲಿ.+
174 ಯೆಹೋವ, ನೀನು ಕೊಡೋ ರಕ್ಷಣೆಗಾಗಿ ನಾನು ಹಾತೊರಿತಾ ಇದ್ದೀನಿ,
ನನಗೆ ನಿನ್ನ ನಿಯಮಗಳಂದ್ರೆ ತುಂಬ ಪ್ರೀತಿ.+
175 ನಾನು ನಿನ್ನನ್ನ ಹೊಗಳೋಕೆ ಆಗೋ ಹಾಗೆ ನನ್ನ ಪ್ರಾಣವನ್ನ ಕಾಪಾಡು,+
ನಿನ್ನ ತೀರ್ಪುಗಳು ನನಗೆ ಸಹಾಯಮಾಡಲಿ.
176 ನಾನು ಕಳೆದು ಹೋಗಿರೋ ಕುರಿ ತರ ಇದ್ದೀನಿ.+ ಈ ನಿನ್ನ ಸೇವಕನನ್ನ ಹುಡುಕು.
ಯಾಕಂದ್ರೆ ನಾನು ನಿನ್ನ ಆಜ್ಞೆಗಳನ್ನ ಮರೆತಿಲ್ಲ.+