ರೋಮನ್ನರಿಗೆ ಬರೆದ ಪತ್ರ
12 ಸಹೋದರರೇ, ದೇವರು ನಿಮಗೆ ಕನಿಕರ ತೋರಿಸಿರೋದ್ರಿಂದ ನಾನು ನಿಮ್ಮ ಹತ್ರ ಬೇಡ್ಕೊಳ್ಳೋದು ಏನಂದ್ರೆ, ನೀವು ನಿಮ್ಮ ದೇಹಗಳನ್ನ+ ಜೀವಂತವಾದ, ಪವಿತ್ರವಾದ+ ಮತ್ತು ದೇವರು ಮೆಚ್ಚೋ ಬಲಿಯಾಗಿ ಕೊಡಿ. ನಿಮ್ಮ ಯೋಚನಾ ಸಾಮರ್ಥ್ಯವನ್ನ+ ಬಳಸಿ ಪವಿತ್ರ ಸೇವೆ ಸಲ್ಲಿಸಿ. 2 ಇನ್ಮುಂದೆ ಈ ಲೋಕ* ನಿಮ್ಮನ್ನ ರೂಪಿಸೋಕೆ ಬಿಡಬೇಡಿ. ಬದಲಿಗೆ ದೇವರು ನಿಮ್ಮ ಯೋಚಿಸೋ ವಿಧಾನವನ್ನ* ಬದಲಾಯಿಸೋಕೆ ಬಿಟ್ಟುಕೊಡಿ.+ ಆಗ ದೇವರು ಇಷ್ಟಪಡೋ ವಿಷ್ಯಗಳು ಯಾವಾಗ್ಲೂ ಒಳ್ಳೇದಾಗಿ, ಪರಿಪೂರ್ಣವಾಗಿ, ಸರಿಯಾಗಿ ಇರುತ್ತೆ ಅಂತ ಪರೀಕ್ಷಿಸಿ ಅರ್ಥ ಮಾಡ್ಕೊಳ್ತೀರ.+
3 ದೇವರು ನನಗೆ ಅಪಾರ ಕೃಪೆ ತೋರಿಸಿದ್ರಿಂದ ನಾನು ನಿಮ್ಮೆಲ್ಲರಿಗೆ ಹೇಳೋದು ಏನಂದ್ರೆ, ನೀವು ನಿಮ್ಮನ್ನೇ ಮೇಲೆ ಏರಿಸ್ಕೊಬೇಡಿ.+ ಪ್ರತಿಯೊಬ್ಬನಿಗೂ ನಂಬಿಕೆಯನ್ನ ಕೊಟ್ಟಿದ್ದು* ದೇವರೇ ಅಲ್ವಾ?+ ಅದನ್ನ ಮನಸ್ಸಲ್ಲಿಟ್ಟು ನಿಮ್ಮ ಬಗ್ಗೆ ನೀವು ಸರಿಯಾದ ಭಾವನೆ ಇಟ್ಕೊಳ್ಳಿ. 4 ಒಂದು ದೇಹದಲ್ಲಿ ತುಂಬ ಅಂಗಗಳಿದ್ರೂ+ ಆ ಎಲ್ಲ ಅಂಗಗಳು ಒಂದೇ ಕೆಲಸ ಮಾಡಲ್ಲ. 5 ಅದೇ ತರ ನಾವು ತುಂಬ ಜನ ಇದ್ರೂ ಕ್ರಿಸ್ತನ ಜೊತೆ ಒಂದಾಗಿರೋದ್ರಿಂದ ಒಂದೇ ದೇಹ ಆಗಿದ್ದೀವಿ. ನಾವು ಒಬ್ಬೊಬ್ರೂ ಒಂದಕ್ಕೊಂದು ಜೋಡಿಸಿರೋ ಅಂಗಗಳಾಗಿದ್ದೀವಿ.+ 6 ದೇವರು ನಮಗೆ ತೋರಿಸಿರೋ ಅಪಾರ ಕೃಪೆಯಿಂದ ನಾವು ಬೇರೆಬೇರೆ ಸಾಮರ್ಥ್ಯಗಳನ್ನ* ಪಡ್ಕೊಂಡಿದ್ದೀವಿ.+ ಭವಿಷ್ಯ ಹೇಳೋ ಸಾಮರ್ಥ್ಯ ಇದ್ರೆ ನಮ್ಮಲ್ಲಿರೋ ನಂಬಿಕೆಗೆ ತಕ್ಕ ಹಾಗೆ ಭವಿಷ್ಯ ಹೇಳೋಣ, 7 ಸೇವೆ ಮಾಡೋ ಸಾಮರ್ಥ್ಯ ಇದ್ರೆ ಚೆನ್ನಾಗಿ ಸೇವೆ ಮಾಡೋಣ. ಕಲಿಸೋ ಸಾಮರ್ಥ್ಯ ಇದ್ರೆ ಚೆನ್ನಾಗಿ ಕಲಿಸೋಣ.+ 8 ಪ್ರೋತ್ಸಾಹ ಕೊಡೋ* ಸಾಮರ್ಥ್ಯ ಇದ್ರೆ ಪ್ರೋತ್ಸಾಹಿಸೋಣ.*+ ಹಂಚೋ* ಸಾಮರ್ಥ್ಯ ಇದ್ರೆ ಧಾರಾಳವಾಗಿ ಹಂಚೋಣ.+ ಮೇಲ್ವಿಚಾರಣೆ ಮಾಡೋ* ಸಾಮರ್ಥ್ಯ ಇರುವವನು ಅದನ್ನ ಶ್ರದ್ಧೆಯಿಂದ ಮಾಡ್ಲಿ.+ ಕರುಣೆ ತೋರಿಸೋ ಸಾಮರ್ಥ್ಯ ಇರುವವನು ಖುಷಿಖುಷಿಯಿಂದ ಕರುಣೆ ತೋರಿಸ್ಲಿ.+
9 ಪ್ರೀತಿ ತೋರಿಸೋ ಹಾಗೆ ನಾಟಕ ಮಾಡಬೇಡಿ,+ ನಿಜವಾದ ಪ್ರೀತಿ ತೋರಿಸಿ. ಕೆಟ್ಟದನ್ನ ಅಸಹ್ಯವಾಗಿ ನೋಡಿ,+ ಒಳ್ಳೇದನ್ನ ಪ್ರೀತಿಸಿ.* 10 ಒಡಹುಟ್ಟಿದವರ ತರ ಒಬ್ರಿಗೊಬ್ರು ಪ್ರೀತಿ, ಕೋಮಲ ಮಮತೆ ತೋರಿಸಿ. ಗೌರವ ತೋರಿಸೋದ್ರಲ್ಲಿ ಒಬ್ರಿಗಿಂತ ಒಬ್ರು ಮುಂದೆ ಬನ್ನಿ.*+ 11 ಶ್ರಮಪಟ್ಟು* ಕೆಲಸ ಮಾಡಿ, ಸೋಮಾರಿಯಾಗಿ ಇರಬೇಡಿ.*+ ಪವಿತ್ರಶಕ್ತಿ ನಿಮ್ಮಲ್ಲಿ ಹುರುಪು ತುಂಬ್ಲಿ.+ ಯೆಹೋವನಿಗೆ* ದಾಸರಾಗಿ ಸೇವೆಮಾಡಿ.+ 12 ನಿರೀಕ್ಷೆ ಇರೋದ್ರಿಂದ ಖುಷಿಪಡಿ. ಕಷ್ಟದಲ್ಲಿ ಇರುವಾಗ ಸಹಿಸ್ಕೊಳ್ಳಿ.+ ಪಟ್ಟುಬಿಡದೆ ಪ್ರಾರ್ಥನೆ ಮಾಡಿ.+ 13 ಪವಿತ್ರ ಜನ್ರ ಅಗತ್ಯಕ್ಕೆ ತಕ್ಕ ಹಾಗೆ ನಿಮ್ಮ ಹತ್ರ ಇರೋದನ್ನ ಹಂಚ್ಕೊಳ್ಳಿ.+ ಅತಿಥಿಸತ್ಕಾರ ತೋರಿಸೋಕೆ ಅವಕಾಶಗಳನ್ನ ಹುಡುಕಿ.+ 14 ನಿಮಗೆ ಹಿಂಸೆ ಕೊಡುವವ್ರಿಗೆ ಆಶೀರ್ವಾದ ಮಾಡಿ.+ ಶಾಪ ಹಾಕಬೇಡಿ, ಆಶೀರ್ವದಿಸಿ.+ 15 ಖುಷಿಯಾಗಿ ಇರುವವ್ರ ಜೊತೆ ಖುಷಿಪಡಿ, ಅಳುವವ್ರ ಜೊತೆ ಅಳಿ. 16 ನಿಮ್ಮ ಬಗ್ಗೆ ನೀವು ಹೇಗೆ ಯೋಚಿಸ್ತಿರೋ ಅದೇ ತರ ಬೇರೆಯವ್ರ ಬಗ್ಗೆನೂ ಯೋಚಿಸಿ. ಅಹಂಕಾರದ ಮನೋಭಾವ ಬೆಳೆಸ್ಕೊಬೇಡಿ, ದೀನ ಮನಸ್ಸು ಇರಲಿ.+ ಎಲ್ರಿಗಿಂತ ನೀವೇ ಬುದ್ಧಿವಂತ್ರು* ಅಂತ ನೆನಸಬೇಡಿ.+
17 ಯಾರಾದ್ರೂ ನಿಮಗೆ ಕೆಟ್ಟದು ಮಾಡಿದ್ರೆ ನೀವೂ ಅವ್ರಿಗೆ ಕೆಟ್ಟದು ಮಾಡಬೇಡಿ.+ ಎಲ್ಲರ ದೃಷ್ಟಿಯಲ್ಲಿ ಯಾವುದು ಸರಿಯಾಗಿದ್ಯೋ ಅದನ್ನ ಮನಸ್ಸಿಗೆ ತಗೊಂಡು ಅದನ್ನೇ ಮಾಡಿ. 18 ಸಾಧ್ಯವಾದ್ರೆ ಎಲ್ರ ಜೊತೆ ಶಾಂತಿಯಿಂದ ಇರೋಕೆ ನಿಮ್ಮಿಂದ ಆಗೋದನ್ನೆಲ್ಲ ಮಾಡಿ.+ 19 ಪ್ರಿಯರೇ, ಸೇಡು ತೀರಿಸಬೇಡಿ. ದೇವರು ತನ್ನ ಕೋಪ ತೋರಿಸೋಕೆ ಬಿಟ್ಟುಬಿಡಿ.+ “‘ಸೇಡು ತೀರಿಸೋದು ನನ್ನ ಕೆಲಸ, ನಾನೇ ಸರಿಯಾದ ಪ್ರತಿಫಲ ಕೊಡ್ತೀನಿ’ ಅಂತ ಯೆಹೋವ* ಹೇಳ್ತಾನೆ” ಅಂತ ಬರೆದಿದೆ.+ 20 ಆದ್ರೆ “ನಿನ್ನ ಶತ್ರು ಹಸಿದಿದ್ರೆ ಅವನಿಗೆ ಊಟ ಕೊಡು. ಬಾಯಾರಿಕೆ ಆಗಿದ್ರೆ ಕುಡಿಯೋಕೆ ನೀರು ಕೊಡು. ಆಗ ಅವನಿಗೆ ಆಶ್ಚರ್ಯವಾಗಿ, ಅವನ ಕಲ್ಲುಮನಸ್ಸು ಕರಗಿ ಮೃದು ಆಗುತ್ತೆ.”*+ 21 ಕೆಟ್ಟದು ನಿನ್ನನ್ನ ಗೆಲ್ಲೋಕೆ ಬಿಡಬೇಡ, ಒಳ್ಳೇದ್ರಿಂದ ಕೆಟ್ಟದನ್ನ ಜಯಿಸ್ತಾ ಇರು.+